ಬಿಗ್ ಬಾಸ್ ಮನೆಯಿಂದ ನಿರ್ಮಲಾ ಔಟ್..

ಬಿಗ್ ಬಾಸ್ ಮನೆಯಿಂದ ನಿರ್ಮಲಾ ಔಟ್..

ದೊಡ್ಮನೆ ಮಂದಿಯ ಜೊತೆ ಸೇರದೆ ಒಂಟಿಯಾಗಿರುತ್ತಿದ್ದ ನಿರ್ಮಲಾ ಚೆನ್ನಪ್ಪ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಶೋ ಸೀಸನ್ ಎಂಟರ ಎರಡನೇ ವಾರದಲ್ಲಿ ರಂಗಭೂಮಿ ಕಲಾವಿದೆ ನಿರ್ಮಲಾ ಚೆನ್ನಪ್ಪ ಶೋನಿಂದ ಹೊರಬಿದ್ದಿದ್ದಾರೆ. ಎರಡನೇ ವಾರದಲ್ಲಿ ನಿರ್ಮಲಾ ಚೆನ್ನಪ್ಪಾ, ವಿಶ್ವನಾಥ್, ಗೀತಾ, ಪ್ರಶಾಂತ್ ಸಂಬರಗಿ, ಚಂದ್ರಕಲಾ, ನಾಮಿನೇಟ್ ಆಗಿದ್ದರು. ಆದರೆ ನಿರ್ಮಲಾ ಚೆನ್ನಪ್ಪ ಅವರಿಗೆ ಹೆಚ್ಚಿನ ಮತ ಸಿಗದೆ ಬಿಗ್ ಬಾಸ್ ನಿಂದ ಹೊರಬಂದಿದ್ದಾರೆ.

ಯಾರೊಂದಿಗೂ ಬೆರೆಯುವುದಿಲ್ಲ..!

ನಿರ್ಮಲಾ ಚೆನ್ನಪ್ಪ ಯಾರೊಂದಿಗೂ ಬೆರೆಯುತ್ತಿಲ್ಲ, ಎಲ್ಲರೊಂದಿಗೂ ಕುಳಿತು ಊಟ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಇತರೆ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಷ್ಟೇ ಅಲ್ಲದೆ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸದೇ, ಸದಾ ಕ್ಯಾಮೆರಾ ಮುಂದೆ ಕಾಲ ಕಳೆಯುತ್ತಾರೆ, ತಮ್ಮನ್ನ ಹೆಚ್ಚು ಗುರುತಿಸಿಕೊಳ್ಳಲು ಒಬ್ಬೊಬ್ಬರೆ ಮಾತನಾಡುತ್ತಾರೆ, ಕೆಲವೊಮ್ಮೆ ಅತಿಯಾಗಿ ನಟಿಸುತ್ತಾರೆ ಎಂದು ಬಿಗ್ ಬಾಸ್ ಮನೆಯ  ಇತರೆ ಸದಸ್ಯರು ಆರೋಪಿಸಿದ್ದರು.

ಯಾರು ಟ್ರೂ, ಯಾರು ಫೇಕ್..?

ಭಾನುವಾರ ಕಿಚ್ಚ ಸುದೀಪ್ ಅವರು ನಿಮ್ಮ ಪ್ರಕಾರ ಯಾರು ಟ್ರೂ, ಯಾರು ಫೇಕ್ ಎಂಬುದನ್ನ ತಿಳಿಸಬೇಕು ಎಂದು ಬಿಗ್ ಬಾಸ್ ಮನೆಯ ಸದಸ್ಯರಿಗೆ ಕೇಳಿದಾಗ ಹೆಚ್ಚು ಮಂದಿ ನಿರ್ಮಲ ಫೇಕ್ ಎಂಬ ಅಭಿಪ್ರಯಾವನ್ನು ಮಂಡಿಸಿದ್ದರು. ಜೊತೆಗೆ ನಿರ್ಮಲಾರನ್ನು ಉಳಿಸಲು ಕಡಿಮೆ ಓಟ್ ಬಂದಿದ್ದರಿಂದ. ನಾಮಿನೇಟ್ ಆಗಿದ್ದ ಇತರೆ ಸದಸ್ಯರು ಸೇಫ್ ಆಗಿ ನಿರ್ಮಲಾ ಎಲಿಮಿನೇಟ್ ಆಗಿದ್ದಾರೆ.

ಸಂಬರಗಿ ನೇರ ನಾಮಿನೇಟ್

ಇನ್ನು ನಿರ್ಮಲಾ ಮನೆಯಿಂದ ಹೊರ ಬರುವಾಗ ಬಿಗ್ ಬಾಸ್ ನಿರ್ಮಲಾ ಅವರಿಗೆ ನೀವು ಈ ವಾರ ಯಾರನ್ನಾದರು ನೇರವಾಗಿ ನಾಮಿನೇಟ್ ಮಾಡಬೇಕು ಎಂದು ಹೇಳಿದಾಗ, ನಿರ್ಮಲಾ ಅವರು ಯಾವ ಸದಸ್ಯರ ಹೆಸರನ್ನು ಹೇಳಲಿಲ್ಲ. ಮನೆಯಿಂದ ಹೋಗುವಾಗ ಯಾರನ್ನಾದರು ಉಳಿಸುತ್ತೇನೆ, ನಾಮಿನೇಟ್ ಮಾಡಲು ಇಚ್ಚಿಸುವುದಿಲ್ಲ ಎಂದರು. ಬಿಗ್ ಬಾಸ್ ನಿರ್ಮಲಾ ನಿರ್ಣಯವನ್ನು ನಿರಾಕರಿಸಿದರು. ಅಷ್ಟೇ ಅಲ್ಲ ನಿರ್ಮಲಾ ಫೇಕ್ ಎಂದು ಸೂಚಿಸಿದ್ದ ಪ್ರಶಾಂತ್ ಸಂಬರಿಗಿ ಅವರನ್ನು ಈ ವಾರ ನೇರವಾಗಿ ನಾಮಿನೇಟ್ ಆಗಿದ್ದಾರೆ ಎಂದು ಘೋಷಿಸಿದರು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author