ಬಂಗಾರದ ಕಣಿಜದ ಪಕ್ಕದಲ್ಲೇ ಇದೆ ಬಂಗಾರು ತಿರುಪತಿ ಈ ಭೂಮಿ ಮೇಲೆ ಎಷ್ಟು ತಿರುಪತಿಗಳಿಗೆ ಗೊತ್ತಾ?

 

 ಬಂಗಾರದ ಕಣಿಜದ ಪಕ್ಕದಲ್ಲೇ ಇದೆ ಬಂಗಾರು ತಿರುಪತಿ

ಈ ಭೂಮಿ ಮೇಲೆ ಎಷ್ಟು ತಿರುಪತಿಗಳಿಗೆ ಗೊತ್ತಾ? 

Bangaru Tirupati temple entranceImage credits : Mapio.net

ತಿರುಪತಿ ಗಿರಿವಾಸ ಶ್ರೀವೆಂಕಟೇಶ.... ಎಂಬ ಗೀತೆಯನ್ನು ಕೇಳಿದ್ದೀರಲ್ಲವೇ. ತಿರುಪತಿಯಲ್ಲಿ ನೆಲೆಸಿರುವ ಶ್ರೀನಿವಾಸ, ವೆಂಕಟೇಶ, ವೆಂಕಟೇಶ್ವರ, ಗೋವಿಂದ ಎಂಬೆಲ್ಲಾ ಹೆಸರಿನಿಂದ ಭಕ್ತರನ್ನು ಹರಸಲು ತಿರುಮಲೆಯ ಮೇಲೆ ನೆಲೆ ನಿಂತಿದ್ದಾನೆ... 

 

ಆದರೆ ಎಲ್ಲರಿಗೂ ತಿರುಪತಿಗೆ ಹೋಗಿ ಗೋವಿಂದನ ದರ್ಶನ ಪಡೆಯುವುದು ಸಾಧ್ಯವಿಲ್ಲದ ಮಾತು. ಹೀಗಾಗೇ ಶ್ರೀನಿವಾಸದೇವರು ನಾನಾ ಪುಣ್ಯಕ್ಷೇತ್ರಗಳಲ್ಲಿ ನೆಲೆ ನಿಂತಿದ್ದಾನೆ ಎನ್ನುತ್ತದೆ ಪುರಾಣ. ಬ್ರಹ್ಮಾನಂದ ಪುರಾಣದ ರೀತ್ಯ ಇರುವುದು ಒಂದೇ ಒಂದು ತಿರುಪತಿಯಲ್ಲ. ಭರತವರ್ಷದಲ್ಲಿ 108 ತಿರುಪತಿಗಳಿವೆ. 

 

ಇಂಥ 108 ತಿರುಪತಿಗಳಲ್ಲಿ ಬಂಗಾರು ತಿರುಪತಿ ಎಂದು ಖ್ಯಾತವಾದ ಗುಟ್ಟಹಳ್ಳಿಯೂ ಒಂದು. ಕೋಲಾರ ಜಿಲ್ಲೆಯ ಕೆ.ಜಿ.ಎಫ್.ಗೆ ಸನಿಹದಲ್ಲಿರುವ ಗುಟ್ಟಹಳ್ಳಿಯ ಬೆಟ್ಟದ ಮೇಲೆ ಶ್ರೀನಿವಾಸ ನೆಲೆಸಿದ್ದಾನೆ ಹಾಗು ಭಕ್ತರನ್ನು ಹರಸುತ್ತಿದ್ದಾನೆ. ಬಂಗಾದ ಕಣಿಜದ ಪಕ್ಕದಲ್ಲೇ ಇರುವ ಈ ಕ್ಷೇತ್ರಕ್ಕೆ ಬಂಗಾರು ತಿರುಪತಿ ಎಂಬ ಹೆಸರು ಬಂದಿದೆ.

 

ಈ ಕ್ಷೇತ್ರದಲ್ಲಿ ಶ್ರೀನಿವಾಸದೇವರು ಒಂದು ಬೆಟ್ಟದಲ್ಲಿ ನೆಲೆಸಿದರೆ, ಲಕ್ಷ್ಮೀ ಹಾಗು ಪದ್ಮಾವತಿಯರು ಮತ್ತೊಂದು ಬೆಟ್ಟದಲ್ಲಿ ನೆಲೆಸಿದ್ದಾರೆ. ಈ ಕ್ಷೇತ್ರದಲ್ಲಿ ಭೃಗು ಮಹರ್ಷಿಗಳು ತಪವನ್ನಾಚರಿಸಿದರು ಎನ್ನುತ್ತದೆ ಇತಿಹಾಸ. ಇಲ್ಲಿರುವ ಬಾಲಾಜಿಯ ಮೂರ್ತಿ ಮನೋಹರವಾಗಿದ್ದು, ಇಲ್ಲಿ ವೆಂಕಟರಮಣ ಏಕಾಂತ ಶ್ರೀನಿವಾಸ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಿದ್ದಾನೆ. 

 

ವಿಷ್ಣು ಭೂಮಿಗೆ ಬಂದಿದ್ದೇಕೆ? 

Lord VishnuImage Credits : News Unique

ಚಿತ್ರಭೃಗು ಮಹರ್ಷಿ ಅಹಂಕಾರದಿಂದ ನಾರಾಯಣನ ವಕ್ಷಸ್ಥಳಕ್ಕೆ ಒದ್ದಾಗ, ಕುಪಿತಗೊಂಡ ಲಕ್ಷ್ಮೀ ಕರವೀರಪುರಕ್ಕೆ ಹೋಗಿ ನೆಲೆಸುತ್ತಾಳೆ. ಲಕ್ಷ್ಮಿಯನ್ನು ಹುಡುಕುತ್ತಾ ಭೂಮಿಗೆ ಬಂದ ವಿಷ್ಣು, ಶ್ರೀನಿವಾಸನಾಗುತ್ತಾನೆ. ತ್ರೇತಾಯುಗದಲ್ಲಿ ರಾಮನಾಗಿದ್ದಾಗ, ವೇದಾವತಿಗೆ ಕೊಟ್ಟ ವರವನ್ನು ಈಡೇರಿಸಲು ಪದ್ಮಾವತಿಯನ್ನು ವರಿಸುತ್ತಾನೆ.

 

ನವದಂಪತಿಗಳು ಶೇಷಾಚಲದಲ್ಲಿ ವಿಹರಿಸುತ್ತಿದ್ದಾಗ, ಅಲ್ಲಿಗೆ ಬಂದ ಲಕ್ಷ್ಮೀ - ಪದ್ಮಾವತಿಯರ ನಡುವೆ ಕಲಹವೇರ್ಪಡುತ್ತದೆ. ಆಗ ಏನೂ ಮಾತನಾಡದೆ ನಿಂತ ವಿಷ್ಣುವನ್ನು ಲಕ್ಷ್ಮೀ ಏಕೆ ಕಲ್ಲಾಗಿ ನಿಂತಿದ್ದೀರಿ ಎನ್ನಲು ಶ್ರೀನಿವಾಸ ಶೇಷಾಚಲದಲ್ಲಿ ಕಲ್ಲಾಗಿ ನಿಲ್ಲುತ್ತಾನೆ. ಹೀಗೆ ನೆಲೆನಿಂತ ಬಂಗಾರದ ನಿಕ್ಷೇಪದಿಂದ ಕೂಡಿದ ಶೇಷಾಚಲವೇ ತಿರುಪತಿ, ಅದುವೇ ಬಂಗಾರು ತಿರುಪತಿ ಎಂಬುದು ಭಕ್ತರ ನಂಬಿಕೆ.

 

6 ರಂಧ್ರಗಳಿರುವ ಕಿಂಡಿಯಲ್ಲಿ ಕಾಣುತ್ತಾನೆ ಶ್ರೀನಿವಾಸ 

Bangaru tirupati kolarImage Credits : amp.trell.co

ಇಲ್ಲಿ ನೆಲೆನಿಂತಿರುವ ಶ್ರೀನಿವಾಸ ದೇವರನ್ನು ಉಡುಪಿಯ ಶ್ರೀಕೃಷ್ಣನನ್ನು ಕನಕನ ಕಿಂಡಿಯಲ್ಲಿ ನೋಡುವಂತೆ 6 ರಂಧ್ರಗಳಿರುವ ಕಿಂಡಿಯಲ್ಲಿ ನೋಡಬೇಕು. ವೆಂಕಟೇಶನನ್ನು ಹೀಗೆ ನೋಡುವುದಕ್ಕೆ ನೇತ್ರ ದರ್ಶನ ಎಂದೂ ಹೆಸರುಂಟು. 

 

ಪ್ರತಿವರ್ಷ ಮಾಘ ಮಾಸದಲ್ಲಿ ಈ ಕ್ಷೇತ್ರದಲ್ಲಿ 9 ದಿನಗಳ ಕಾಲ ಬ್ರಹ್ಮೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸಾವಿರಾರು ಭಕ್ತರಿಗೆ ತಿರುಮಲದಲ್ಲಿರುವ ಶ್ರೀನಿವಾಸನೇ ಮನೆ ದೇವರಾದರೂ, ಅವರೆಲ್ಲರೂ ಶ್ರೀನಿವಾಸನ ದರ್ಶನಕ್ಕೆ ಬಂಗಾರು ತಿರುಪತಿಗೆ ಬರುತ್ತಾರೆ. 

 

ಇಲ್ಲಿಯೇ ಆಹಾರ ಸಿದ್ಧಪಡಿಸಿ, ದೇವರ ಹೆಸರಿನಲ್ಲಿ ನೈವೇಧ್ಯ ಮಾಡಿ, ಆನಂತರ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಜೊತೆಗೆ ಅಲ್ಲಿ ಬಂದಿರುವ ಇತರ ಭಕ್ತರಿಗೂ ಆನದಾನ ರೀತಿ ಪ್ರಸಾದ ಹಂಚುತ್ತಾರೆ. 

 

ತಿರುಮದಲ್ಲಿ ನಡೆಯುವ ರೀತಿಯಲ್ಲೇ ಇಲ್ಲಿನ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಆಚರಿಸಲಾಗುತ್ತದೆ. ಇಲ್ಲಿಯೂ ಎಲ್ಲಾ ವಯಸ್ಸಿನ ಭಕ್ತರು ತಮ್ಮ ಮುಡಿಕೊಟ್ಟು ಹರಕೆ ತೀರಿಸುತ್ತಾರೆ. 

temple pond bangaru tirupatiImage credits : citykemp.com

ಶ್ರಾವಣ ಮಾಸಗಳಂದು ಬರುವ ಶನಿವಾರಗಳಂದು ಇಲ್ಲಿ ಜಾತ್ರಾ ಮಹೋತ್ಸವಗಳು ನಡೆಯುತ್ತವೆ. ಶುಕ್ರವಾರ ರಾತ್ರಿ ಇಲ್ಲಿನ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯುತ್ತದೆ, ಅಂದೇ ರಾತ್ರಿ ಶ್ರೀನಿವಾಸ ಕಲ್ಯಾಣ ಸೇರಿ ಪರಮಾತ್ಮನ ಕುರಿತಾದ ಹಲವು ನಾಟಕಗಳು ನಡೆಯುತ್ತವೆ. ಶನಿವಾರ ಭಕ್ತರು ಆಗಮಿಸಿ, ಇಲ್ಲಿ ಕಲ್ಯಾಣೋತ್ಸವ ಕೈಂಕರ್ಯಗಳನ್ನು ಕೈಗೊಳ್ಳುವ ಪದ್ಧತಿ ಇದೆ. 

 

ಈ ಕ್ಷೇತ್ರದಲ್ಲಿ ವಿವಾಹ ಕಾರ್ಯಕ್ರಮಗಳು ನಡೆಯುತ್ತವೆ. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಅಂದರೆ ಟಿಟಿಡಿ ಅವರೇ ಕಲ್ಯಾಣ ಮಂಟಪಗಳನ್ನು ನಿರ್ಮಿಸಿದ್ದಾರೆ. ಈ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಸ್ಥಳೀಯ ರಾಜಕೀಯ ನಾಯಕರಾದ ಎಂ.ಪಿ.ಕೃಷ್ಣಪ್ಪ. 

 

ಬೆಟ್ಟದ ಮೇಲಿರುವ ಶ್ರೀನಿವಾಸದೇವರ ಕಾಣಲು ಮೆಟ್ಟಿಲುಗಳನ್ನೇರಿ ಹೋಗಬೇಕು. ಮಾರ್ಗದಲ್ಲಿ ಗಣಪತಿ, ಆಂಜನೇಯನ ದರ್ಶನ ಪಡೆದು ಸಾಗಿದರೆ ಬೆಟ್ಟದ ಮೇಲೆ ಶ್ರೀನಿವಾಸನ ಕಾಣಬಹುದು. ಬೆಟ್ಟದ ದೇವಾಲಯದಲ್ಲಿ ಸುಂದರವಾದ ಗರುಡನ ಮೂರ್ತಿ ಗಮನಸೆಳೆಯುತ್ತದೆ. 

 

ಅಲ್ಲಿಂದ ಇಳಿದು ಬಂದು ಎದುರು ಇರುವ ಮತ್ತೊಂದು ಬೆಟ್ಟವನ್ನೇರಿದರೆ ಅಲ್ಲಿ ತಾಯಿ ಶ್ರೀಲಕ್ಷ್ಮೀ ಹಾಗೂ ಪದ್ಮಾವತಿಯರ ದರ್ಶನ ಭಾಗ್ಯ ಲಭ್ಯವಾಗುತ್ತದೆ. 

 

108 ತಿರುಪತಿಗಳಲ್ಲಿ ಒಂದಾದ ಬಂಗಾರು ತಿರುಪತಿ ಬೆಂಗಳೂರಿಗೆ ಬಹಳ ಸಮೀಪವಿದ್ದು, ತಲುಪುವುದು ಸುಲಭ. ಈ ಕ್ಷೇತ್ರಕ್ಕೆ ನೀವೂ ಭೇಟಿ ನೀಡಿ. 

 

ನಿಮಗೆಮಾಹಿತಿಇಷ್ಟಆಗಿದ್ದರೆಲೈಕ್ಮಾಡಿ.. ಶೇರ್ಮಾಡಿ.. ನಿಮ್ಮಅನಿಸಿಕೆಗಳನ್ನುಕಮೆಂಟ್ಮೂಲಕತಿಳಿಸಿ..

ಇನ್ನಷ್ಟುಮಾಹಿತಿಗಾಗಿಕೆಳಗಿನಲಿಂಕ್ಕ್ಲಿಕ್ಮಾಡಿನಮ್ಮನ್ನಫಾಲೋಮಾಡಿ..

Subscribe to Planet Tv Kannada
https://www.youtube.com/Planet Tv Kannada

Follow us on Facebook
https://www.facebook.com/Planettvkannada

Follow us on Twitter
https://twitter.com/Planettvkannada

Follow us on Instagram
https://www.instagram.com/planettvkannada

Follow us on Pinterest
https://www.pinterest.com/Planettvkannada

Follow us on Koo app
https://www.kooapp.com/planettvkannada

Follow us on share chat
https://sharechat.com/planettvkannada

Join us on Telegram
https://t.me/planettvkannada

Follow us on Tumblr
https://www.tumblr.com/planet-tv-kannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author