ಬುದ್ಧ ಜಯಂತಿಯನ್ನು ಯಾಕೆ ಆಚರಿಸುತ್ತಾರೆ..? ಇಲ್ಲಿದೆ ಮಾಹಿತಿ..

ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿಯ ಮಹತ್ವ ತಿಳಿದಿದೆಯಾ..?

ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧನ ಜನ್ಮದಿನವನ್ನು ಪ್ರತಿ ವರ್ಷ ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿ ಎಂದು ಆಚರಿಸಲಾಗುತ್ತದೆ. ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದೆನಿಸಿರುವ ಬುದ್ಧ ಪೂರ್ಣಿಮಾವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ನೇಪಾಳದ ಶಾಲೆಗಳಲ್ಲಿ ಗುರು ಪೂರ್ಣಿಮೆಯನ್ನು ದೊಡ್ಡ ಹಬ್ಬವಾಗಿ ಆಚರಿಸುತ್ತಾರೆ.

ಈ ದಿನ ಬೌದ್ಧ ಧರ್ಮೀಯರಿಗೆ ಮಾತ್ರವಲ್ಲದೇ ಹಿಂದೂಗಳಿಗೂ ಕೂಡಾ ಧಾರ್ಮಿಕವಾಗಿ ಪವಿತ್ರವಾದ ದಿನವಾಗಿದೆ. ಹಿಂದೂ ಧರ್ಮೀಯರು ಕೂಡಾ ಈ ದಿನವನ್ನು ಅತ್ಯಂತ ಶುಭವೆಂದು ಪರಿಗಣಿಸುತ್ತಾರೆ.  ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ತಿಂಗಳಲ್ಲಿ (ಏಪ್ರಿಲ್ / ಮೇ) ಹುಣ್ಣಿಮೆಯ ದಿನದಂದು ಬುದ್ಧ ಪೂರ್ಣಿಮಾ ಬರುತ್ತದೆ.

ಗೌತಮ ಬುದ್ಧನು ಕ್ರಿ.ಪೂ 563ರಲ್ಲಿ ಜನಿಸಿದನು. ಈ ದಿನ ಬುದ್ಧನು ಜ್ಞಾನೋದಯವನ್ನು ಪಡೆದ ದಿನವೂ ಹೌದು ಹಾಗೂ ವಿಮೋಚನೆಯನ್ನು ಪಡೆದ ದಿನವೂ ಹೌದು. ಹಾಗಾಗಿ ಈ ದಿನ ಅತ್ಯಂತ ಮಹತ್ವವನ್ನು ಪಡೆದಿದೆ.

ವಿಸ್ತಾರವಾಗಿ ಹೇಳುವುದಾದರೆ ರಾಜಕುಮಾರ ಸಿದ್ಧಾರ್ಥ ವೈಶಾಖ ತಿಂಗಳ ಹುಣ್ಣಿಮೆಯ ದಿನದಂದು ಲುಂಬಿನಿಯಲ್ಲಿ ಜನಿಸುತ್ತಾನೆ. ಆರು ವರ್ಷಗಳ ನಂತರ, ವೈಶಾಖ ತಿಂಗಳಹುಣ್ಣಿಮೆಯ ದಿನದಂದು ಬೋಧಿ ಮರದ ನೆರಳಿನಲ್ಲಿ ಜ್ಞಾನೋದಯವನ್ನು ಪಡೆದು, ಬೋಧ್ ಗಯಾದಲ್ಲಿ ಗೌತಮ್ ಬುದ್ಧನಾಗಿ ಪರಿವರ್ತನೆಯಾಗುತ್ತಾನೆ. ಹಾಗೂ  ಎಂಭತ್ತು ವರ್ಷದವನಾಗಿದ್ದಾಗ, ಕುಸಿನಾರದಲ್ಲಿ, ವೈಶಾಖ ತಿಂಗಳ ಹುಣ್ಣಿಮೆಯ ದಿನದಂದು ನಿರ್ವಾಣ ಹೊಂದುತ್ತಾನೆ.

ಇಡೀ ಜಗತ್ತಿಗೆ ಶಾಂತಿ- ಸಹಬಾಳ್ವೆ, ಸಾಮರಸ್ಯದ ಸಂದೇಶ ಸಾರಿ, ಪ್ರೀತಿ-ಕರುಣೆ ಹಾಗೂ ವಿಶ್ವಾಸದ ಮಹತ್ವ ತಿಳಿಸಿದ ಬುದ್ಧ ಜಯಂತಿ ಅಥವಾ ಬುದ್ಧ ಪೂರ್ಣಿಮೆಯನ್ನು  ಶ್ರೀಲಂಕಾ  ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ,ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಆದರೆ ಒಂದೊಂದು ಪ್ರದೇಶಲ್ಲಿ ಒಂದೊಂದು ರೀತಿಯ ಆಚರಣೆಗಳು ಪ್ರಚಲಿತದಲ್ಲಿವೆ. ಈ ದಿನದಂದು ಮಾಂಸಾಹಾರವನ್ನು ತ್ಯಜಿಸಲಾಗುತ್ತದೆ. ಕೆಲವೊಂದು ಕಡೆ ಬಿಳಿ ಬಣ್ಣದ ಉಡುಪುಗಳನ್ನು ಧರಿಸುತ್ತಾರೆ. ಬೌದ್ಧ ಸ್ಥೂಪಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ ಸೌರಮಾನ ವರ್ಷದ ವೈಶಾಖ ತಿಂಗಳನ್ನು ಧಾರ್ಮಿಕ ಮಾಸವೆಂದು ಕರೆಯಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ಬುದ್ಧ ಪೌರ್ಣಿಮೆಯಂದು ಅಂದರೆ ವೈಶಾಖ ತಿಂಗಳ ಹುಣ್ಣಿಮೆಯಂದು ತಾಯಿ ಲಕ್ಷ್ಮೀದೇವಿಯು ಅಶ್ವತ್ಥ ವೃಕ್ಷದಲ್ಲಿ ನೆಲೆಸುತ್ತಾಳೆ. ಆದ್ದರಿಂದ ಈ ದಿನ ಅಶ್ವತ್ಥ ಮರವನ್ನು ಪೂಜಿಸಿದರೆ ಲಕ್ಷ್ಮೀದೇವಿಯ ಅನುಗ್ರಹವು ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author