ಬಿರುಬೇಸಿಗೆಯಲ್ಲಿ ಬಾಡದಿರಲಿ ಸುಂದರ ತ್ವಚೆ
ಬೇಸಿಗೆಯ ಪ್ರಾರಂಭದಲ್ಲೇ ಬಿಸಿಲಿನ ಪ್ರಭಾವ ಜೋರಾಗಿದೆ. ಸುಡುಬಿಸಿಲಿಗೆ ಚರ್ಮ ಕಪ್ಪಾಗುವುದು, ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಮೊಡವೆಗಳ ಕಿರಿಕಿರಿ ಸೇರಿದಂತೆ ಹಲವು ಸಮಸ್ಯೆಗಳು ಸಾಮಾನ್ಯ. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಕೆಲವೊಂದು ಸುಲಭ ವಿಧಾನಗಳನ್ನು ಹೇಗೆ ಅನುಸರಿಸಬೇಕು ಎಂಬ ಬಗ್ಗೆ ಒಂದಷ್ಟು ಸಲಹೆಗಳು ಇಲ್ಲಿವೆ.
ಸ್ವಚ್ಛತೆಯೆಡೆಗೆ ಗಮನವಿರಲಿ
ಬೇಸಿಗೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ಮರೆಯದಿರಿ. ಆಗಾಗ ಮುಖ ತೊಳೆಯುತ್ತಿರಿ. ಉತ್ತಮಗುಣಮಟ್ಟದ ಉತ್ಪನ್ನಗಳನ್ನು ಬಳಸಿ. ನೀವು ಬಳಸುವ ಉತ್ಪನ್ನಗಳು ಕಡಿಮೆ ಗುಣಮಟ್ಟದಿಂದ ಕೂಡಿದ್ದಲ್ಲಿ ಮೊಡವೆ, ಅಲರ್ಜಿ ಸೇರಿದಂತೆ ಇತರೆ ಚರ್ಮ ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ನೀವು ಬಳಸುವ ಟವೆಲ್, ಕಾಸ್ಮೆಟಿಕ್ ಬ್ರಶ್ ಗಳನ್ನು ಶುಚಿಗೊಳಿಸಿ ಬಳಸಿ.
ಸನ್ ಬರ್ನ್
ಬೇಸಿಗೆಗಾಲದಲ್ಲಿ ಹಲವರಿಗೆ ಇದು ಸಾಮಾನ್ಯ ಸಮಸ್ಯೆ. ಇನ್ನು ಹೊರಗಡೆ ಕೆಲಸ ಮಾಡುವವರಂತೂ ಸನ್ ಟ್ಯಾನ್ ನಿಂದ ಪಾರಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಬಿಸಿಲಿಗೆ ಹೋಗುವ ಮುನ್ನ ಸನ್ ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯಬೇಡಿ. ಎಲ್ಲೇ ಹೋದರು ಸನ್ ಸ್ಕ್ರೀನ್ ಲೋಷನ್ ತೆಗೆದುಕೊಂಡು ಹೋಗಿ ಪ್ರತಿ 5ಗಂಟೆಗಳಿಗೊಮ್ಮೆ ಹಚ್ಚುತ್ತಿರಿ. ಇದರಿಂದ ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ನಿಯಂತ್ರಿಸಬಹುದು.
ಎಣ್ಣೆಯುಕ್ತ ಮಾಯಿಶ್ಚರೈಸರ್ ಗಳ ಬಳಕೆ ನಿಯಂತ್ರಿಸಿ
ಹೆಚ್ಚು ಎಣ್ಣೆಯುಕ್ತ ಲೋಷನ್ ಗಳನ್ನು ಬಳಸಬೇಡಿ. ಸನ್ ಟ್ಯಾನ್ ನಿಂದ ಪಾರಾಗಲು ನೀವು ಬಳಸುವ ಮಾಯಿಶ್ಚರೈಸರ್ ಗಳಲ್ಲಿ ಎಣ್ಣೆಯಂಶ ಎಷ್ಟಿದೆ ಎಂಬುದನ್ನು ಗಮನಿಸಿ. ಏಕೆಂದರೆ ಬೇಸಿಗೆಯಲ್ಲಿ ಬೆವರು ಸರ್ವೇ ಸಾಮಾನ್ಯ ಇದರ ಜೊತೆಗೆ ಎಣ್ಣೆಯಂಶ ಹೆಚ್ಚಿರುವ ಮಾಯಿಶ್ಚರೈಸರ್ ಬಳಸುವುದರಿಂದ ಬೆವರು ಹೆಚ್ಚಾಗಿ, ಜಿಡ್ಡು ಚರ್ಮದಲ್ಲಿ ಹಾಗೇ ಉಳಿಯುತ್ತದೆ. ಇದರಿಂದ ಮೊಡವೆಗಳು ಹಾಗೂ ಇತರೆ ಚರ್ಮ ಸಂಬಂಧಿ ಸಮಸ್ಯೆಳ ಸಾಧ್ಯತೆ ಹೆಚ್ಚಿರುತ್ತದೆ.
ನಿರ್ಜಲೀಕರಣ
ಬೇಸಿಗೆಯ ಸಮಯದಲ್ಲಿ ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗಲು ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ನಿಮ್ಮ ಆಹಾರದಲ್ಲಿ ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ನಿಯಮಿತವಾಗಿ ಸೇವಿಸಿ. ಹೆಚ್ಚು ನೀರು ಹಾಗೂ ಜ್ಯೂಸ್ ಸೇವಿಸುವುದರಿಂದ ತ್ವಚೆಯ ಆರೋಗ್ಯದ ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅಷ್ಟೇ ಅಲ್ಲದೆ ಮೊಡವೆಗಳನ್ನು ನಿಯಂತ್ರಿಸಬಹುದು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
You must be logged in to post a comment.