ಭೂತ, ಪ್ರೇತಗಳಿಗೆ ಗೇಟ್ ಪಾಸ್ ಕೊಡೋ ಬಾಲಾಜಿ! `ಮೆಹಂದಿಪುರ ಬಾಲಾಜಿ', ಇದು ಹನುಮನ ದೇಗುಲ!
Image Credits : Instafeed.org
ನಿಮಗೆ ಭೂತ, ಪ್ರೇತ, ಪಿಶಾಚಿ, ದುಷ್ಟ ಶಕ್ತಿಗಳಲ್ಲಿ ನಂಬಿಕೆ ಇಲ್ಲವೇ? ಹಾಗಿದ್ದರೆ ನೀವು ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಬೇಕು. ಈ ದೇಗುಲಕ್ಕೆ ಕಾಲಿಟ್ಟರೆ ನಿಮಗೆ ಖಂಡಿತವಾಗಲೂ ಯಾವುದೋ `ಹಾರರ್' ಸಿನಿಮಾಕ್ಕೆ ಬಂದಂತೆ ಅನುಭವವಾಗುತ್ತದೆ. ಭೂತ, ಪ್ರೇತ, ಪಿಶಾಚಿ, ದುಷ್ಟ ಶಕ್ತಿಗಳನ್ನು ಬಿಡಿಸುವ, ಅವುಗಳಿಂದ ಆಗುತ್ತಿರುವ ಸಮಸ್ಯೆಗಳಿಂದ ಮುಕ್ತಿ ಕೊಡಿಸುವ ದೇಗುವಿದು.
ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿದೆ ಈ ಮೆಹೆಂದಿಪುರ ಬಾಲಾಜಿ ಮಂದಿರ. ಸಾಮಾನ್ಯವಾಗಿ ವೆಂಕಟೇಶ್ವರ/ಶ್ರೀನಿವಾಸನನ್ನು ಬಾಲಾಜಿ ಎಂದು ಕರೆಯುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಬಾಲಾಜಿ ಎಂದರೆ ಹನುಮಂತ.
ಈ ದೇವಾಲಯದ ಮುಖ್ಯ ದೈವ ಹನುಮ. ಬಾಲ ಹನುಮನಾಗಿ ಇಲ್ಲಿ ಪೂಜಿಸುವುದರಿಂದ `ಬಾಲಾಜಿ' ಎಂದು ಕರೆಯುತ್ತಾರೆ. ಈ ದೇವಾಲಯದ ವಿಶಿಷ್ಟತೆಯೆಂದರೆ, ಇಲ್ಲಿ ಮಾಡುವ ದುಷ್ಟಶಕ್ತಿಗಳ ಉಚ್ಛಾಟನೆ. ಇಷ್ಟು ಮಾತ್ರವಲ್ಲದೇ ಇಲ್ಲಿಗೆ ಬಂದ ಭಕ್ತರ ಕಷ್ಟಗಳನ್ನು ನಿವಾರಿಸಿ ಬೇಡಿದ್ದೆಲ್ಲವನ್ನೂ ಈಡೇರಿಸುವವನು ಇಲ್ಲಿನ ಬಾಲಾಜಿ. ಈ ದೇವಾಲಯದ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
Image Credits: Tentaran.com
ದೇಗುಲದಲ್ಲಿದ್ದಾರೆ ಮೂರು ದೇವರುಗಳು
ಇಲ್ಲಿನ ದೇಗುಲದಲ್ಲಿ ಒಟ್ಟು ಮೂರು ದೇವರುಗಳನ್ನು ಪೂಜಿಸಲಾಗುತ್ತದೆ. ಹನುಮಾನ್, ಭೈರವ ಹಾಗೂ ಪ್ರೇತ ರಾಜ. ಎಲ್ಲಾ ಮೂರು ದೇವತೆಗಳು ಭೂತ, ದುಷ್ಟ ಶಕ್ತಿಗಳನ್ನು ಹೋಗಲಾಡಿಸುವವರು ಎಂದು ನಂಬಲಾಗಿದೆ.
ಇಲ್ಲಿನ ವಿಗ್ರಹಗಳ ಸ್ವಯಂಭು. ಈ ದೇಗುಲದಲ್ಲಿ ಸದಾ ಸಾವಿರಾರು ಭಕ್ತರು ಇದ್ದೇ ಇರುತ್ತಾರೆ. ದೇಗುಲಗಳನ್ನು ಪ್ರವೇಶಿಸಿದಾಗ ಸಾಮಾನ್ಯವಾಗಿ ಗಂಟೆಯ ನಾದ ಕೇಳಿಸುತ್ತದೆ. ಆದರೆ ಈ ಬಾಲಾಜಿ ದೇಗುಲಕ್ಕೆ ಭೇಟಿ ನೀಡಿದಾಗ ನಿಮಗೆ ಕೇಳಿಸುವುದು ಜನರ ಕಿರುಚಾಟ, ಚೀರಾಟ ಮಾತ್ರ.
ನಿಮ್ಮ ಹೃದಯ ಗಟ್ಟಿ ಇಲ್ಲದಿದ್ದರೆ ನೀವು ಈ ದೇಗುಲಕ್ಕೆ ಭೇಟಿ ನೀಡುವ ಮೊದಲು ಯೋಚಿಸುವುದು ಒಳ್ಳೆಯದು. ಕಾರಣ, ಇಲ್ಲಿಗೆ ಪ್ರವೇಶಿಸುತ್ತಿದ್ದಂತೆ ನಾಕಾರಾತ್ಮಕ ಅಂಶಗಳು ನಿಮ್ಮ ಸುತ್ತಲು ಸುತ್ತುತ್ತಿವೆ ಎಂದು ಭಾಸವಾಗುತ್ತದೆ.
ತಲೆ ಬಡಿದುಕೊಂಡ್ರೂ ಏನಾಗಲ್ಲ,
ಬಿಸಿ ಬೀರು ಬಿದ್ರೂ ನೋವಾಗಲ್ಲ!
ಈ ದೇಗುಲದಲ್ಲಿ ಒಟ್ಟು ೪ ಕೋಣೆಗಳಿವೆ. ಮೊದಲೆರಡು ಹನುಮಾನ್ ಹಾಗೂ ಭೈರವ ದೇವನ ವಿಗ್ರಹಗಳನ್ನು ಹೊಂದಿವೆ. ಕೊನೆ ಕೋಣೆಯೂ ಭಯಾನಕ ದೃಶ್ಯಗಳಿಂದ ಕೂಡಿರಲಿದೆ. ಇಲ್ಲಿ ಭೂತ, ಪ್ರೇತ, ಪಿಶಾಚಿಗಳು ಮೆಟ್ಟಿಕೊಂಡ ಜನರು ತಮ್ಮ ತಲೆ ಚಚ್ಚಿಕೊಳ್ಳುತ್ತಿರುತ್ತಾರೆ. ಎಷ್ಟೋ ಮಂದಿ ತಮ್ಮ ಮೈ ಮೇಲೆ ಸುಡು ಬಿಸಿ ನೀರನ್ನು ಸುರಿದುಕೊಳ್ಳುತ್ತಿರುತ್ತಾರೆ. ಆದರೆ ಅವರಲ್ಲಿ ಯಾವುದೇ ನೋವು ಕಾಣಿಸುವುದಿಲ್ಲ.
ಮತ್ತಷ್ಟು ಜನರನ್ನು ದೊಡ್ಡ ಸರಪಳಿಗಳಲ್ಲಿ ಕಟ್ಟಿಹಾಕಲಾಗಿರುತ್ತದೆ. ದೇಗುಲದ ಅರ್ಚಕರು ಕೆಲವರನ್ನು ಹೊಡೆಯುತ್ತಿರುತ್ತಾರೆ. ಈ ಪ್ರದೇಶವು ನಿಮ್ಮ ಮೈನವಿರೇಳಿಸುತ್ತದೆ ಹಾಗೂ ಸುರಕ್ಷಿತವಾಗಿ ವಾಪಸ್ ಹೋದರೆ ಸಾಕು ಎನಿಸುವಂತೆ ಮಾಡಿಬಿಡುತ್ತದೆ.
Image Credits : Astrolika.com
ಈ ದೇಗುಲದಲ್ಲಿ ಪ್ರಸಾದವೇ ಇಲ್ಲ!
ಸಾಮಾನ್ಯವಾಗಿ ದೇವಾಲಯಗಳಲ್ಲಿ ಪ್ರಸಾದ ವಿನಿಯೋಗ ಮಾಡುತ್ತಾರೆ. ಆದರೆ ಈ ದೇಗುಲದಲ್ಲಿ ಪ್ರಸಾದವೇ ಇಲ್ಲ. ದೇಗುಲದ ಹೊರಗಿರುವ ಅಂಗಡಿಗಳಲ್ಲಿ ಕಪ್ಪು ಉಂಡೆಗಳನ್ನು ಮಾರುತ್ತಿರುತ್ತಾರೆ. ಆ ಉಂಡುಗಳನ್ನು ಕೊಂಡು, ಐದು ಬಾರಿ ನಿಮ್ಮ ದೇಹದ ಸುತ್ತ ನೀವಾಳಿಸಿ, ಅದನ್ನು ಅಲ್ಲಿಯೇ ಉರಿಯುತ್ತಿರುವ ಬೆಂಕಿಗೆ ಹಾಕಬೇಕು. ಆ ಮೂಲಕ ನಿಮ್ಮ ಕಷ್ಟಗಳನ್ನು ಪರಿಹರಿಸುವಂತೆ ಹನುಮಂತನಲ್ಲಿ ಬೇಡಿಕೊಳ್ಳಬೇಕು.
ಈ ದೇಗುಲದಲ್ಲಿ ಮಾತನಾಡುವಂತಿಲ್ಲ!
ಮೆಹಂದಿಪುರ ಬಾಲಾಜಿ ಮಂದಿರಕ್ಕೆ ಭೇಟಿ ನೀಡುವ ಮೊದಲು ಹಾಗೂ ಭೇಟಿ ನೀಡಿದ ಬಳಿಕ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ದೇಗುಲದಲ್ಲಿ ಯಾರನ್ನೂ ಮುಟ್ಟುವಂತಿಲ್ಲ. ಯಾರನ್ನೂ ಮಾತನಾಡಿಸುವಂತಿಲ್ಲ. ಏಕೆಂದರೆ ಇಲ್ಲಿಗೆ ಬಂದಿರುವ ಯಾರಲಾದರೂ ಭೂತ, ಪ್ರೇತ, ಪಿಶಾಚಿಗಳು ಮೆಟ್ಟಿಕೊಂಡಿರಬಹುದು.
ಈ ದೇಗುಲಕ್ಕೆ ಬರುವ ಒಂದು ವಾರ ಮೊದಲೇ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮೊಟ್ಟೆ ಹಾಗೂ ಮದ್ಯವನ್ನು ತ್ಯಜಿಸಬೇಕು. ಇವು ಹೆಚ್ಚಾಗಿ ನಕಾರಾತ್ಮಕ ಅಂಶಗಳನ್ನು ಹೊಂದಿವೆ ಎನ್ನುವ ನಂಬಿಕೆ.
ಈ ಹಳ್ಳಿಗೆ ಪ್ರವೇಶಿಸಿದ ಕೂಡಲೇ ತಿನ್ನುವುದು ಅಥವಾ ಕುಡಿಯುವುದು ಸೂಕ್ತವಲ್ಲ. ತಮ್ಮ ಮನೆಗಳಿಗೆ ಹೊರಡುವಾಗ, ಪ್ರಸಾದ ಅಥವಾ ತಿನ್ನಬಹುದಾದ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು. ನೀರಿನ ಬಾಟಲಿಗಳು, ಆಹಾರ ಪ್ಯಾಕೆಟ್‌ಗಳನ್ನು ಸಂಪೂರ್ಣವಾಗಿ ಖಾಲಿ ಮಾಡಬೇಕು. ಅಷ್ಟೇ ಅಲ್ಲ, ದೇಗುಲದಿಂದ ಹೊರಬಂದ ಬಳಿಕ ಹಿಂದೆ ತಿರುಗಿ ನೋಡದೆ ಹೊರಟು ಬಿಡಬೇಕು. ಹಿಂದಿರುಗಿ ನೋಡಿದರೆ ಭೂತ, ಪ್ರೇತಕ್ಕೆ ನೀವು ಆಹ್ವಾನ ಕೊಡಬಹುದು ಎನ್ನುವ ನಂಬಿಕೆ ಇದೆ.
ಮೆಹಂದಿಪುರ ಬಾಲಾಜಿ ದೇವಾಲಯವು ಅಂತಾರಾಷ್ಟ್ರೀಯ ಜನಪ್ರಿಯತೆಯನ್ನೂ ಪಡೆದಿದೆ. ಇಲ್ಲಿ ಮಾಡಲಾಗುವಂತಹ ಚಿಕಿತ್ಸೆ ಮತ್ತು ದುಷ್ಟಶಕ್ತಿಗಳ ಭೂತೋಚ್ಚಾಟನೆಗಾಗಿ ಹೆಚ್ಚು ಬೇಡಿಕೆಯಿರುವ ತಾಣವಾಗಿ, ಪ್ರಪಂಚದಾದ್ಯAತ ಪ್ರಸಿದ್ಧವಾಗಿದೆ. ವರ್ಷವಿಡೀ ಈ ದೇವಾಲಯದಲ್ಲಿ ದುಷ್ಟಶಕ್ತಿಗಳ ಭೂತೋಚ್ಚಾಟನೆ ನಡೆಯುತ್ತದೆ.
೨೦೧೩ ರಲ್ಲಿ, ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ದೆಹಲಿಯ ಏಮ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಮನೋವೈದ್ಯರ ತಂಡ, ದೇವಾಲಯದ ಚಟುವಟಿಕೆಗಳನ್ನು ವಿವರವಾಗಿ ಮೌಲ್ಯಮಾಪನ ಮಾಡಲು ಸಂಶೋಧನಾ ಅಧ್ಯಯನವನ್ನು ಕೂಡಾ ಆರಂಭಿಸಿತ್ತು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
You must be logged in to post a comment.