ಭಾರತದಲ್ಲೇ ಕಾರ್ನಿವಲ್ ನಡೆಯುವ ಏಕೈಕ ಸ್ಥಳ ಗೋವಾ..

ಕಣ್ಣುಕೋರೈಸುವ ಕಾರ್ನಿವಲ್ ವೀಕ್ಷಿಸಬೇಕಾ..? ಹಾಗಾದ್ರೆ ಗೋವಕ್ಕೆ ಭೇಟಿ ನೀಡಿ..

ಗೋವಾ ಎಂದಕೂಡ್ಲೆ ನೆನಪಾಗೋದೆ ಸಮುದ್ರ ತೀರದ ಸುಂದರ ದೃಶ್ಯಗಳು. ಗೋವಾದ ಸುಂದರವಾದ ಪ್ರವಾಸಿ ತಾಣಗಳು ಸದಾ ಜನಜಂಗುಳಿಯಿಂದ ಕೂಡಿರುತ್ತವೆ. ಎಷ್ಟೋ ಜನ ಇಲ್ಲಿಗೆ ಅನೇಕ ಬಾರಿ ಪ್ರವಾಸಕ್ಕೆ ಹೋಗಿ ಬಂದಿರುತ್ತಾರೆ. ಆದರೆ ಪ್ರತಿ ವರ್ಷ ಗೋವಾದಲ್ಲಿ ನಡೆಯುವ ಕಾರ್ನಿವಲ್ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲಿ. 

ಪ್ರತಿವರ್ಷ ಅದ್ಧೂರಿಯಾಗಿ, ವೈಭವದಿಂದ ನಡೆಯುವ ಗೋವಾ ಕಾರ್ನೀವಲ್ ಏಷ್ಯಾದ ಕೆಲವೇ ಕಾರ್ನೀವಲ್ ಗಳಲ್ಲಿ ಒಂದಾಗಿದೆ ಮತ್ತು ಭಾರತದ ಏಕೈಕ ಕಾರ್ನೀವಲ್ ಆಚರಣೆಯಾಗಿದೆ.  ಗೋವಾ ಕಾರ್ನೀವಲ್ ಅನ್ನು ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್ ತಿಂಗಳುಗಳಲ್ಲಿ ನಾಲ್ಕು ದಿನಗಳಕಾಲ  ಆಚರಿಸಲಾಗುತ್ತದೆ. 

ಕಾರ್ನಿವಲ್ ಆಚರಣೆಗಾಗಿ ತಿಂಗಳುಗಳ ಮೊದಲೇ ತಯಾರಿ ಶುರುವಾಗುತ್ತದೆ. ಗೋವಾದ ಬೀದಿಗಳನ್ನು ವರ್ಣಮಯವಾಗಿ, ಬಣ್ಣ ಬಣ್ಣದ ಲೈಟ್ ಗಳಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ. ಸಂಗೀತ, ನೃತ್ಯ ಪ್ರದರ್ಶನಗಳ ಮೂಲಕ ಪ್ರವಾಸಿಗರು ಸ್ಥಳೀಯರು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಾರೆ. ಈ ಆಚರಣೆಯು ಪ್ರವಾಸಿಗರನ್ನು ಹೆಚ್ಚು ಆಕರ್ಶಿಸುತ್ತದೆ ಅಷ್ಟೇ ಅಲ್ಲದೆ, ಕಾರ್ನಿವಲ್ ಸಮಯದಲ್ಲಿ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.

ಇತಿಹಾಸ: ಗೋವಾ ಕಾರ್ನೀವಲ್ 500 ವರ್ಷಗಳ ಇತಿಹಾಸವನ್ನು ಹೊಂದಿದೆ   ಎನ್ನಲಾಗುತ್ತದೆ. ಇದು ಕ್ರಿಶ್ಚಿಯನ್ ಧರ್ಮದ ಕ್ಯಾಥೋಲಿಕ್ ಪಂಗಡದವರ ಆಚರಣೆಯಾಗಿದ್ದು, ಗೋವಾ ಪೋರ್ಚುಗೀಸರ ವಸಾಹತು ಪ್ರದೇಶವಾಗಿದ್ದಾಗಿನಿಂದಲೂ ಈ ಆಚರಣೆ ಇದೆ ಎನ್ನಲಾಗಿದೆ. ಈ ಆಚರಣೆಯಲ್ಲಿ ಪೋರ್ಚುಗೀಸ್ ಪರಂಪರೆಯ ಕೆಲವು ಕುರುಹಹುಗಳನ್ನೂ ಕಾಣಬಹುದಾಗಿದೆ. ಇದು ಕ್ಯಾಥೋಲಿಕರ ಆಚರಣೆಯಾದರೂ ಸ್ಥಳೀಯ ಸಂಸ್ಕøತಿ-ಸಂಪ್ರದಾಯಗಳೊಂದಿಗೆ ಬೆರೆತು ಹೋಗಿದೆ.

ಗೋವಾದ ವ್ಯಾಪರಿಗಳಿಗೆ ಹೋಟೆಲ್ ಉದ್ಯಮಿಗಳಿಗೆ ಕಾರ್ನಿವಲ್ ಆಚರಣೆ ಆದಾಯದ ಮೂಲವಾಗಿರುತ್ತದೆ. ಈ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಆಗಮಿಸವ ಪ್ರವಾಸಿಗರು, ಭಾರದ ತರಹೇವಾರಿ ಖಾದ್ಯಗಳನ್ನು ಸವಿಯಬಹುದಾಗಿ. ಅನೇಕ ಅಪರೂಪದ ಕರಕುಶಲ ವಸ್ತುಗಳನ್ನು, ಆಕರ್ಶಕ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಈ ಸಂದರ್ಭದಲ್ಲಿ ಗೋವಾ, ಹಾಗೂ ಭಾರತದ ವಿವಿಧ ರೀತಿಯ ರುಚಿಕರವಾದ ಖಾದ್ಯಗಳನ್ನು ಸವಿಯಬಹುದಾಗಿದೆ. 

ಆಚರಣೆ ಹೇಗೆ: ಈ ಸಂದರ್ಭದಲ್ಲಿ ಗೋವಾದ ಪ್ರಮುಖ ನಗರಗಳ ಬೀದಿಗಳನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ. ಅನೇಕ ರೀತಿಯ ವೇಷ-ಭೂಷಣಗಳನ್ನು ತೊಟ್ಟು, ಅಬ್ಬರದ ಸಂಗೀತದೊಂದಿಗೆ ನೃತ್ಯ ಮಾಡುತ್ತ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಇವರ ವರ್ಣರಂಜಿತ, ವೇಷ ಭೂಷಣಗಳು ನೋಡುಗರನ್ನು ಆಕರ್ಶಿಸುತ್ತವೆ. ಅಷ್ಟೇ ಅಲ್ಲ ಅಲ್ಲಲ್ಲಿ ವೇದಿಕೆಗಳನ್ನು ನಿರ್ಮಿಸಿ ನಾಟಕ, ಸಂಗೀತ, ನೃತ್ಯ ಪ್ರದರ್ಶನ ಮಾಡಲಾಗುತ್ತದೆ. ಹಲವು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಹಿರಿಯರು ಕಿರಿಯರೆನ್ನದೆ ಎಲ್ಲರೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತಸ ಹಂಚಿಕೊಳ್ಳುತ್ತಾರೆ. 

ತಿನ್ನಿರಿ-ಕುಡಿಯಿರಿ-ಸಂತೋಷವಾಗಿರಿ ಎಂಬ ಮಾತುಗಳಂತೆ ಕೆಲವೊಮ್ಮೆ ತಡರಾತ್ರಿಯವರೆಗೂ ಪಾರ್ಟಿಮಾಡುತ್ತಾ ಹಲವರು ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಈ ಸಂದರ್ಭದಲ್ಲಿ ಹೋಳಿ ಆಚರಣೆಯಂತೆ ಸ್ನೇಹಿತರಿಗೆ ಬಣ್ಣ ಎರಚುತ್ತಾ, ಸಂತಸಪಡಿಸುವ ಸಣ್ಣ ಸಣ್ಣ ಸ್ಪರ್ದೆಗಳಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಕಾರ್ನಿವಲ್ ನ ಕೊನೆಯ ದಿನದಂದು  ಕೆಂಪು ಟಾಪ್ಸ್ ಮತ್ತು ಕಪ್ಪು ಸ್ಕರ್ಟ್ ಧರಿಸಿದ ಮಹಿಳೆಯರು, ಕೆಂಪು ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ಪುರುಷರು. ಸಂಗೀತ ತಂಡಗಳೊಂದಿಗೆ ಮೆರವಣಿಗೆಯಲ್ಲಿ ನೃತ್ಯ ಮಾಡುವ ಮೂಲಕ ನಾಲ್ಕು ದಿನಗಳ ಕಾರ್ನಿವಲ್ ಆಚರಣೆಯನ್ನ ಅಂತ್ಯಗೊಳಿಸುತ್ತಾರೆ.

ಇನ್ನು ಕಾರ್ನಿವಲ್ ವೇಳೆಯಲ್ಲಿ ಪ್ರವಾಸಿಗರ ದಂಡೇ ಹರಿದು ಬರುವುದರಿಂದ ಸುರಕ್ಷತೆಗಾಗಿ, ಗೋವಾ ಪೊಲೀಸರು ನಗರಗಳಾದ್ಯಂತ ಬಿಗಿ ಬಂದೋಬಸ್ತ್ ಮಾಡಿರುತ್ತಾರೆ. ಡ್ರೋನ್ಗಳು, ಮೆಟಲ್ ಡಿಟೆಕ್ಟರ್ಗಳು, ಸಿಸಿಟಿವಿಗಳನ್ನು ಅಳವಡಿಸಲಾಗಿರುತ್ತದೆ. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಎಲ್ಲಾ ಕಡೆ ಪೊಲೀಸರು ನಿಯೋಜನೆಗೊಂಡಿರುತ್ತಾರೆ. 

ಕಾರ್ನಿವಲ್ ನಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಕಾರ್ನಿವಲ್ ನ ಕಾರ್ಯಕ್ರಮಗಳಲ್ಲಿ ನೀವೂ ಭಾಗವಹಿಸಬಹುದು, ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಗೋವಾಗೆ ಹೋಗುವ ಯೋಜನೆ ಇದ್ದರೆ ಹಾಗೂ ಈಗಾಗಲೇ ಗೋವಾಗೆ ಭೇಟಿ ನೀಡಿದ್ದರೆ, ಮತ್ತೊಮ್ಮೆ ಗೋವಾಗೆ ಹೋಗುವ ಪ್ಲಾನ್ ಇದ್ದರೆ ಕಾರ್ನಿವಲ್ ಸಮಯದಲ್ಲಿ ಪ್ರವಾಸ ಪ್ಲಾನ್ ಮಾಡಬಹದು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author