ಭಾರತದಲ್ಲಿ ಜುಲೈ ತಿಂಗಳ ವರೆಗೆ ಕೋವಿಡ್‍-19 ಲಸಿಕೆಯ ಕೊರತೆ

adar poonawalla about vaccineImage source and credits : https://www.financialexpress.com

ನವದೆಹಲಿ: ದೇಶಾದ್ಯಂತ ಕೋವಿಡ್‍-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿಯೇ ಎಲ್ಲೆಡೆ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡುತ್ತಿದೆ. ಆದರೆ, ಲಸಿಕಾ ಅಭಿಯಾನದ ಮೂರನೇ ಹಂತ ಅಂದರೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸುವ ಅಭಿಯಾನಕ್ಕೆ ಸ್ಪಲ್ಪಮಟ್ಟಿನ ಹಿನ್ನಡೆಯಾಗಿದೆ. ವಿವಿಧ ರಾಜ್ಯಗಳಲ್ಲಿ ಲಸಿಕೆಯ ಸಂಗ್ರಹವಿಲ್ಲದ ಕಾರಣ ಈ ಅಭಿಯಾನವನ್ನು ಆರಂಭಿಸಿಲ್ಲ. ಈ ಮಧ್ಯೆ, ದೇಶದಲ್ಲಿ ಲಸಿಕೆಯ ಕೊರತೆಯಿದ್ದು, ಜುಲೈ ತನಕ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಸೆರಂ ಇನ್ಸಿಟಿಟ್ಯೂಟ್‌ನ ಮುಖ್ಯಸ್ಥ ಆಧಾರ್ ಪೂನಾವಾಲ ಅವರು ಜುಲೈ ತನಕ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಜುಲೈನಲ್ಲಿ ತಿಂಗಳ ಬಳಿಕ ಪ್ರತಿ ತಿಂಗಳು 100 ಮಿಲಿಯನ್ ಡೋಸ್ ಲಸಿಕೆಯನ್ನು ಉತ್ಪಾದನೆ ಮಾಡಲಾಗುತ್ತದೆ ಎಂದು ಆಧಾರ್ ಪೂನಾವಾಲ ತಿಳಿಸಿದ್ದಾರೆ.

ಮೇ 1ರಂದು ಆಧಾರ್ ಪೂನಾವಾಲ ಅವರು ಟ್ವೀಟ್ ಮಾಡಿ, ಅಧಿಕ ಪ್ರಮಾಣದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದರು. ಮೇ.1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಅನ್ನೋ ಅಭಿಯಾನದ ನಂತರ ದೇಶದಲ್ಲಿ ಕೋವಿಡ್ ಲಸಿಕೆಯ ಕೊರತೆ ಕಂಡು ಬರುತ್ತಿದೆ.

covid shield adar poonawallaImage source and credits : https://www.financialexpress.com

 

Enjoyed this article? Stay informed by joining our newsletter!

Comments

You must be logged in to post a comment.

About Author