ಭಾರತದ ಮೊತ್ತ ಮೊದಲ ದೇವಿಯ ದೇವಾಲಯ ಯಾವುದು..? ಅದು ಎಲ್ಲಿದೆ ಗೊತ್ತಾ..?

ಭಾರತದ ಮೊತ್ತ ಮೊದಲ ದೇವಿಯ ದೇವಾಲಯ ಯಾವುದು..? ಅದು ಎಲ್ಲಿದೆ ಗೊತ್ತಾ..?

first devi temple in india is mundeshwari in biharImage Credits : Kaimur.nic.in

ವಿಶ್ವದಲ್ಲೇ ಶ್ರೀಮಂತ ಪರಂಪರೆಗೆ ಅತ್ಯಂತ ಹೆಸರುವಾಸಿಯಾದ ದೇಶವೆಂದರೆ ಅದು ಭಾರತ. ಭಿನ್ನ-ವಿಭಿನ್ನ ದೇವರು, ದೇವಾಲಯಗಳಿಂದಲೇ ಹಿಂದೂ ಸಂಸ್ಕೃತಿ, ಭಾರತ ವಿಶ್ವದೆಲ್ಲೆಡೆ ಪ್ರಸಿದ್ಧಿ ಹೊಂದಿದೆ. ಯಾವುದೇ ಕಾರ್ಯ ಮಾಡುವಾಗಲೂ ದೇವರನ್ನು ಪೂಜಿಸುವುದು, ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಭಾರತೀಯರ ಸಂಪ್ರದಾಯ. ಇಷ್ಟಾರ್ಥ ಈಡೇರಿಕೆಗೆ ದೇವಾಲಯಗಳಿಗೆ ಹರಕೆ ಸಲ್ಲಿಸುವ ಆಚರಣೆಯನ್ನೂ ಭಾರತದಲ್ಲಿ ನೋಡಬಹುದು. ಭಾರತೀಯರ ಪ್ರತಿ ಬೆಳಗೂ ದೇವರ ಪೂಜೆಯಿಂದಲೇ ಆರಂಭಗೊಂಡಿರುತ್ತದೆ. ವ್ರತ, ಭಜನೆ, ಪೂಜೆ, ಸಂಕೀರ್ತನೆಗಳಿಲ್ಲದೆ ಭಾರತೀಯರ ದಿನಗಳಿಲ್ಲ. ದೇವರ ಹೆಸರಿನಲ್ಲಿ ಉತ್ಸವ, ಆಚರಣೆಗಳು ವಿಜೃಂಭಣೆಯಿಂದ ನಡೆಯುತ್ತವೆ.

 

ಭಾರತದ ದೇವರು, ದೇವಾಲಯಗಳಿಗೆ ಶತ ಶತಮಾನಗಳ ಇತಿಹಾಸವಿದೆ. ಪುರಾತನ ಕಾಲದಲ್ಲಿ ಜನರು ಮೊದಲು ಶಿವಲಿಂಗಗಳ ಪೂಜೆಗಳನ್ನು ಮಾಡುತ್ತಿದ್ದರು. ಆ ಬಳಿಕ ಇತರ ದೇವತಾ ಮೂರ್ತಿಗಳನ್ನು ಪೂಜಿಸಲು ಆರಂಭಿಸಿದರು. ಹಾಗೆಯೇ ಗಣೇಶ, ಕೃಷ್ಣ. ವಿಷ್ಣು, ಇತರ ದೇವಾಲಯಗಳು ಉಗಮವಾದವು. ದೇವಿಯ ದೇವಾಲಯಗಳು ಹಲವೆಡೆ ನಿರ್ಮಿಸಲ್ಪಟ್ಟವು. ಸದ್ಯ ಭಾರತದ ವಿವಿಧ ರಾಜ್ಯಗಳಲ್ಲಿ ಮೂಲೆ ಮೂಲೆಯಲ್ಲಿ ಅಸಂಖ್ಯಾತ ದೇವಿಯ ದೇವಾಲಯಗಳಿವೆ. ದೇವಿಯ ಹಲವು ಅವತಾರಗಳ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಆದರೆ, ಮೊಟ್ಟ ಮೊದಲ ದೇವಿಗೆ ದೇವಾಲಯ ಎಲ್ಲಿ ನಿರ್ಮಾಣ ಮಾಡಿದರು ? ಆ ದೇವಾಲಯ ಯಾವುದು ಎಂಬುದು ನಿಮಗೆ ಗೊತ್ತಾ..? ಆ ಬಗ್ಗೆ ಇಲ್ಲಿದೆ ಮಾಹಿತಿ.

 

ಭಾರತದ ಮೊತ್ತ ಮೊದಲ ದೇವಿಯ ದೇವಾಲಯ

first devi temple in india is mundeshwari in biharImage Credits : Kaimur.nic.in

ಭಾರತದ ಮೊತ್ತ ಮೊದಲ ದೇವಿಯ ದೇವಾಲಯ ಇರುವುದು ಬಿಹಾರ ರಾಜ್ಯದ ಕೈಮೂರ್ ಜಿಲ್ಲೆಯ ಕೌರಾದ ಮುಂಡೇಶ್ವರಿ ಬೆಟ್ಟದ ಮೇಲೆ. ಮುಂಡೇಶ್ವರಿ ದೇವಿ ದೇವಾಲಯವೆಂದೂ ಅದನ್ನು ಕರೆಯುತ್ತಾರೆ. ಜಗತ್ತಿನಲ್ಲಿಯೇ ಇದೊಂದು ಅತ್ಯಂತ ಪವಿತ್ರವಾದ, ಪುರಾತನವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ದೇವಿ ಮುಂಡೇಶ್ವರಿ ಹಾಗೂ ಚತುರ್ಮುಖ ಶಿವನನ್ನು ಆರಾಧಿಸಲಾಗುತ್ತಿದೆ. ದಿನವೊಂದಕ್ಕೆ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ. 

 

ಭಾರತದ ಅತ್ಯಂತ ಪುರಾತನ ಹಿಂದೂ ದೇವಾಲಯವಾದ ಮುಂಡೇಶ್ವರಿ ದೇಗುಲವು ಬಿಹಾರ್ ಧಾರ್ಮಿಕ ಟ್ರಸ್ಟ್ ಮಂಡಳಿಯು ಎಎಸ್ಐ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. 1915ರಿಂದಲೂ ಈ ಮಂಡಳಿಯ ನೇತೃತ್ವದಲ್ಲೇ ಮುಂಡೇಶ್ವರಿ ದೇವಾಲಯವನ್ನು ಸಂರಕ್ಷಿಸಲಾಗಿದೆ. ಹೀಗಿದ್ದೂ ಗಾಳಿ-ಮಳೆಗೆ ಮುಂಡೇಶ್ವರಿ ದೇವಾಲಯದ ಗೋಪುರ ಸ್ಪಲ್ಪಮಟ್ಟಿಗೆ ಹಾನಿಗೊಂಡಿದ್ದು, ನವೀಕರಣಗೊಳಿಸುವ ಸಂದರ್ಭದಲ್ಲಿ ಪರ್ಯಾಯವಾಗಿ ಮೇಲುಹಾಸೊಂದನ್ನು ನಿರ್ಮಿಸಲಾಗಿದೆ. 

 

ಪೌರಾಣಿಕ ಹಿನ್ನಲೆ

mundeshwari templeImage credits : native planet

ಅತ್ಯಂತ ಪುರಾತನವಾದ ಈ ಮುಂಡೇಶ್ವರಿ ದೇವಾಲಯಕ್ಕೆ ಪೌರಾಣಿಕ ಹಿನ್ನಲೆಯೂ ಇದೆ. ಪುರಾಣಗಳ ಪ್ರಕಾರ ಹಿಂದೆ ಚಂಡ-ಮುಂಡರೆಂಬ ಇಬ್ಬರು ರಾಕ್ಷಸರಿದ್ದರು. ಮಹಿಷಾಸುರನ ಸೋದರರಾಗಿರುವ ಇವರು ಪ್ರಜೆಗಳಿಗೆ ವಿನಾಕಾರಣ ಕಿರುಕುಳ ಕೊಡುತ್ತಿದ್ದರು. ದುರ್ಗಾ ಮಾತೆಯನ್ನು ಪೂಜಿಸುವುದರಿಂದ ನಮಗೆ ಇನ್ನಷ್ಟು ಶಕ್ತಿ ಲಭಿಸುತ್ತದೆ ಎಂದು ರಾಕ್ಷಸ ಮುಂಡ ಮುಂಡೇಶ್ವರಿ ಭವಾನಿ ದೇವಸ್ಥಾನವನ್ನೂ ಚಂಡ, ಚೈನಪುರದ ಮಧುರಾನ ಬೆಟ್ಟದ ಮೇಲೆ ಚಂಡೇಶ್ವರಿ ದೇವಸ್ಥಾನವನ್ನೂ ನಿರ್ಮಿಸುತ್ತಾನೆ.

 

ಮುಂಡೇಶ್ವರಿ ದೇವಾಲಯದ ವಿಶೇಷತೆ

first devi temple in india is mundeshwari in biharImage Credit : Native Planet

ಮುಂಡೇಶ್ವರಿ ದೇವಿ ದೇವಾಲಯವು ಮುಂಡೇಶ್ವರಿ ಬೆಟ್ಟದ ಮೇಲೆ ಇದೆ. ಇದು ಸುಮಾರು 608 ಅಡಿ ಅಂದರೆ 185 ಮೀ ಎತ್ತರದಲ್ಲಿದೆ. ಬೆಟ್ಟದ ಮೇಲೆ ಆನೇಕ ಪುರಾತತ್ತ್ವ ಶಾಸ್ತ್ರದ ಅವಶೇಷಗಳನ್ನು ಕಾಣಬಹುದಾಗಿದೆ. ದೇವಾಲಯದಲ್ಲಿ ದೇವಿಯು ದುರ್ಗಾ ಸ್ವರೂಪಿಯಾಗಿದ್ದು, 10 ಕೈಗಳನ್ನು ಹೊಂದಿರುವ ವಿಗ್ರಹವಿದೆ. ಸಿಂಹದ ಮೇಲೆ ಕುಳಿತಿರುವ ದೇವಿ, ಮಹಿಷಾಸುರ ಮರ್ದಿನಿ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಈ ದೇವಾಲಯದ ವಿಶೇಷವೆಂದರೆ, ಇಲ್ಲಿರುವ ಮಹಾಶಿವನು ಕೂಡಾ 4 ಮುಖಗಳನ್ನು ಹೊಂದಿದ್ದಾನೆ. ಅಪರೂಪದ ಅಷ್ಟಭುಜಾಕೃತಿ ಯೋಜನೆಯಲ್ಲಿ ಈ ದೇವಾಲಯವನ್ನು ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. 

 

ನಾಗಾರಾ ಶೈಲಿಯ ವಾಸ್ತು ಶಿಲ್ಪದ ದೇವಾಲಯ

first devi temple in india is mundeshwari in biharImage Credits : Native Planet

ಭಾರತದ ಅತ್ಯಂತ ಪುರಾತನವಾದ ಹಿಂದೂ ದೇವಾಲಯವಾದ ಈ ಅದ್ಭುತ ದೇವಾಲಯವು ಬಿಹಾರದ ನಾಗಾರಾ ಎಂಬ ಶೈಲಿಯ ವಾಸ್ತು ಶಿಲ್ಪವನ್ನು ಹೊಂದಿದೆ. ದೇವಾಲಯದ ಪ್ರವೇಶ ದ್ವಾರದಲ್ಲಿ ದ್ವಾರಪಾಲಕರು, ಗಂಗಾ, ಯಮುನ ಮತ್ತು ಅನೇಕ ಇತರ ದೇವತಾ ಮೂರ್ತಿಗಳನ್ನು ಕೆತ್ತಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಮುಖ್ಯ ದೇವತೆಯಾಗಿ ಮುಂಡೇಶ್ವರಿ ಮತ್ತು ಚರ್ತುಮುಖ ಶಿವಲಿಂಗವಿದೆ. ದೇವಾಲಯದ ನಾಲ್ಕು ಭಾಗಗಳಲ್ಲಿಯೂ ಬಾಗಿಲುಗಳು ಹಾಗು ಕಿಟಕಿಗಳನ್ನು ಕಾಣಬಹುದಾಗಿದೆ.  ದೇವಾಲಯದ ಒಳಾಂಗಣದಲ್ಲಿರುವ ಕುಸುರಿ ಕೆತ್ತನೆ ಕೆಲಸಗಳು ಅತ್ಯದ್ಭುತವಾಗಿವೆ. ಇಲ್ಲಿನ ಮತ್ತೊಂದು ವಿಶೇಷವೆನೆಂದರೆ ವಿಭಿನ್ನ ವಿನ್ಯಾಸದ 2 ಕಲ್ಲಿನ ಪಾತ್ರೆಗಳನ್ನು ಇಲ್ಲಿ ಕಾಣಬಹುದಾಗಿದೆ.

 

ಈ ದೇವಾಲಯದಲ್ಲಿ ಇತರ ದೇವತಾ ಮೂರ್ತಿಗಳನ್ನು ಸಹ ಕಾಣಬಹುದಾಗಿದೆ. ಗಣೇಶ, ಸೂರ್ಯ, ವಿಷ್ಣು ದೇವರ ದೇವತಾ ಮೂರ್ತಿಗಳನ್ನು ಈ ದೇವಾಲಯದಲ್ಲಿ ಆರಾಧಿಸಲಾಗುತ್ತದೆ. ದೇವಾಲಯದಲ್ಲಿ ಪ್ರತಿ ವರ್ಷವೂ ರಾಮನವಮಿ, ಶಿವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ನವರಾತ್ರಿಯ ಸಮಯದಲ್ಲಿಯಂತು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಈ ಬಿಹಾರದ ಮುಂಡೇಶ್ವರಿ ದೇವಾಲಯಕ್ಕೆ ಪಾಟ್ನಾ, ಗಯಾ ಅಥವಾ ವಾರಾಣಾಸಿಯಿಂದ ರಸ್ತೆಯ ಮೂಲಕ ತಲುಪಬಹುದಾಗಿದೆ.

 

ಬಿಹಾರದ ಮೊಹಾನಿಯ-ಭಬುವಾ ರೋಡ್ ರೈಲ್ವೆ ನಿಲ್ದಾಣ ಅತ್ಯಂತ ಸಮೀಪದ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಕೇವಲ 22 ಕಿ.ಮೀ ದೂರದಲ್ಲಿ ಮಹಿಮನ್ವಿತ ಮುಂಡೇಶ್ವರಿ ದೇವಾಲಯವಿದೆ. ವಿಮಾನ ಮಾರ್ಗದ ಮೂಲಕ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇವಾಲಯದಿಂದ ಸುಮಾರು 103 ಕಿ.ಮೀ ದೂರದಲ್ಲಿದೆ. ಹಲವಾರು ಕಡೆಗಳಿಂದ ವಿಮಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಮುಖ್ಯವಾಗಿ ದೆಹಲಿ, ಮುಂಬೈ ಮತ್ತು ಕೊಲ್ಕತ್ತಾದಿಂದ ದಿನನಿತ್ಯ ವಿಮಾನಗಳು ಇಲ್ಲಿ ಲಭ್ಯವಿದೆ. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author