ಭೂಲೋಕದಲ್ಲಿ ಶಿವ ವಾಸಿಸುವ ಸ್ಥಳ ಕೇದಾರನಾಥ..!

ಭೂಲೋಕದಲ್ಲಿ ಶಿವ ವಾಸಿಸುವ ಸ್ಥಳ ಕೇದಾರನಾಥ..!

ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ದೇವಾಲಯವೇ ಕೇದಾರನಾಥ. ಶಿವನ ವಾಸಸ್ಥಾನವೂ ಆಗಿರುವ, ಉತ್ತರಾಖಂಡ್ ನಾಲ್ಕು ಧಾಮಗಳಲ್ಲಿ ಒಂದಾದ ದೇವಾಲಯದ ಬಾಗಿಲನ್ನು ಪ್ರತಿವರ್ಷ ಅಕ್ಷಯ ತೃತೀಯದಂದು ತೆರೆಯಲಾಗುತ್ತದೆ. ನೈಸರ್ಗಿಕವಾಗಿಯೇ ಅಲೌಕಿಕ ದೃಶ್ಯಗಳಿಂದ ಕೂಡಿರುವ ದೇವಾಲಯ, ಪವಾಡಗಳು ಹಾಗೂ ಅನೇಕ ಪೌರಾಣಿಕ ಕಥೆಗಳನ್ನು ಒಳಗೊಂಡಿದೆ.

6 ತಿಂಗಳು ಬಾಗಲು ಮುಚ್ಚಿದ್ರೂ ಉರಿಯುತ್ತಲೇ ಇರುತ್ತೆ ದೀಪ!: ಕೇದಾರನಾಥ ದೇವಾಲಯದ ಬಾಗಿಲನ್ನು ಮುಚ್ಚುವಾಗ ಒಂದು ದೀಪವನ್ನು ಬೆಳಗಲಾಗುತ್ತದೆ. ಆರು ತಿಂಗಳ ನಂತರ ಬಾಗಿಲನ್ನು ತೆರೆದಾಗಲೂ, ದೀಪವು ಉರಿಯುತ್ತಲೇ ಇರುತ್ತದೆ. ವರ್ಷದಲ್ಲಿ ಆರು ತಿಂಗಳು ಮುಚ್ಚಲ್ಪಡುವ ದೇವಾಲಯದಲ್ಲಿ ದೇವತೆಗಳು ಬಂದು, ತಮ್ಮ ದೇವರಾದ ಶಿವನನ್ನು ಪೂಜಿಸಿ, ದೀಪವನ್ನು ಬೆಳಗುತ್ತಾರೆ ಎಂಬ ನಂಬಿಕೆ ಇದೆ. ದೇವಾಲಯದ ಬಾಗಿಲನ್ನು ತೆರೆಯುವಾಗ ದೀಪವನ್ನು ನೋಡಿದರೆ ಪುಣ್ಯಪ್ರಾಪ್ತಿಯಾಗುವುದೆಂಬ ನಂಬಿಕೆ ಶಿವಭಕ್ತರದ್ದು.

ಕೈಲಾಸ ಪರ್ವತದ ನಂತರ ಕೇದಾರನಾಥವನ್ನು ಶಿವನ ಎರಡನೇ ವಾಸಸ್ಥಾನವೆಂದು ಕರೆಯಲಾಗುತ್ತದೆ. ಸ್ಥಳದ ಮಹತ್ವದ ಕುರಿತು ಪುರಾಣಗಳಲ್ಲೂ ಶಿವನ ಎರಡನೇ ವಾಸಸ್ಥಾನವೆಂಬ ಉಲ್ಲೇಖವಿದೆ. ಶಿವಪುರಾಣದಲ್ಲೂ ಸ್ಥಳದ ಮಹಿಮಹಿಮೆಯನ್ನು ಉಲ್ಲೇಖಿಸಲಾಗಿದ್ದು, ಇಲ್ಲಿ ಸಾವನ್ನು ಪಡೆಯುವ ಭಕ್ತರು ನೇರವಾಗಿ ಮೋಕ್ಷದ ಬಾಗಿಲು ಪ್ರವೇಶಿಸುತ್ತಾರೆಂದೂ, ಶಿವಲೋಕದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆಂದೂ ಹೇಳಲಾಗುತ್ತದೆ.

ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡುವರು ಬಂದಿದ್ದು ಇದೇ ಕ್ಷೇತ್ರಕ್ಕೆ: ಶಿವನ ದ್ವಾದಶ ಜ್ಯೋತಿಲಿರ್ಂಗಗಳಲ್ಲಿ ಪಾಂಡವರು ಮೊದಲು ಕಂಡ ಜ್ಯೋತಿಲಿರ್ಂಗವೆಂದರೆ ಕೇದಾರನಾಥ ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ. ಮಹಾಭಾರತ ಯುದ್ಧದ ಬಳಿಕ ತಮ್ಮ ಪಾಪವನ್ನು ತೊಡೆದುಹಾಕಲು ಶಿವನನ್ನು ಅರಸುತ್ತಾ ಕೇದಾರನಾಥ ತಲುಪಿದರೆಂದು ಹೇಳಲಾಗುತ್ತದೆ.

ಪೌರಾಣಿಕ ಹಿನ್ನಲೆಯಂತೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಕೊಂದು ಪಾಂಡವರು ತಮ್ಮ ಪಾಪ ಪರಿಹಾರಕ್ಕಾಗಿ ಈಶ್ವರನ ದರ್ಶನ ಪಡೆಯಲು ವಾರಣಾಸಿ ಕ್ಷೇತ್ರಕ್ಕೆ ಬರುತ್ತಾರೆ. ಅವರನ್ನು ಪರೀಕ್ಷಿಸಲು ಶಿವ ಗುಪ್ತ ಕಾಶಿಗೆ ನಂತರ ಕೇದಾರಕ್ಕೆ ಬರುತ್ತಾನೆ.

ಇದನ್ನು ಅರಿತ ಪಾಂಡವರೂ ಕೇದಾರಕ್ಕೆ ಬರುತ್ತಾರೆ. ಶಿವನು ಅವರಿಗೆ ಕಾಣದಂತೆ ಎತ್ತಿನ ರೂಪ ತಾಳಿ ಮೇಯುತ್ತಿರುತ್ತಾನೆ. ಇದನ್ನು ಗ್ರಹಿಸಿದ ಭೀಮನು ಶಿವನ ದರ್ಶನ ಪಡೆದೇ ತೀರುವ ಛಲದಿಂದ ಎರಡು ಪರ್ವತಗಳ ನಡುವೆ ಒಂದೊಂದು ಕಾಲಿಟ್ಟು ಹಸುಗಳು ಹೋಗುವ ದಾರಿಯಲ್ಲಿ ನಿಂತು ಬಿಡುತ್ತಾನೆ. ಎಲ್ಲಾ ಜಾನುವಾರುಗಳು ಅವನ ಕಾಲಿನಡಿ ನುಸುಳಿ ಹೋಗುತ್ತವೆ. ಆದರೆ ಒಂದು ಎತ್ತು ಮಾತ್ರ ಹಾಗೇ ಹೋಗದೆ ನಿಂತು ಬಿಡುತ್ತದೆ.

ಇದನ್ನು ಗಮನಿಸಿದ ಭೀಮ ಈತನೇ ಶಂಕರನೆಂದು ಖಚಿತವಾಗಿ ತಿಳಿದು ಅದನ್ನು ಹಿಡಿಯುತ್ತಾನೆ. ತಪ್ಪಿಸಿಕೊಳ್ಳುವ ಸಲುವಾಗಿ ಎತ್ತು ನೆಲದಲ್ಲಿ ಇಳಿದು ಬಿಡುತ್ತದೆ. ಆಗ ಎತ್ತಿನ ಡುಬ್ಬ ಮಾತ್ರ ಕೈಗೆ ಸಿಕ್ಕಿ ಅದನ್ನೇ ಹಿಡಿದು ಮೇಲಕ್ಕೆತ್ತುತ್ತಾನೆ. ಎತ್ತಿನ ಡುಬ್ಬ ಮಾತ್ರ ಕೇದಾರನಾಥದಲ್ಲಿ ಉಳಿದು ಬಿಡುತ್ತದೆ.

ಶಿರೋ ಭಾಗ ರುದ್ರನಾಥ, ಮುಂಡ ಮಧ್ಯಮ ಮಹೇಶ್ವರದಲ್ಲಿ, ತೋಳುಗಳು ತುಂಗಾನಾಥದಲ್ಲಿ, ಹಾಗೂ ದೇಹದ ಉಳಿದ ಭಾಗ ನೇಪಾಳದ ಪಶುಪತಿನಾಥ ಮತ್ತು ಕರೈಶ್ವರದಲ್ಲಿ ಹಂಚಿ ಹೋಗುತ್ತದೆ. ಪ್ರಸನ್ನನಾದ ಶಿವ ಪ್ರತ್ಯಕ್ಷನಾಗಿ ಪಾಂಡವರನ್ನು ಆಶೀರ್ವದಿಸುತ್ತಾನೆ.

ಶಿವನು ಸ್ಥಳದಲ್ಲಿ ಎತ್ತಿನ ರೂಪದಲ್ಲಿ ಕಾಣಿಸಿಕೊಂಡಿದ್ದರಿಂದ, ಪಾಂಡವರು ಶಿವಲಿಂಗ ರೂಪದಲ್ಲಿ ನೆಲೆಸಬೇಕೆಂದು ಬೇಡಿಕೊಳ್ಳುತ್ತಾರೆ. ಆಗ ಅಲ್ಲಿ ಶಿವನು ಭೂ-ಶಿವಲಿಂಗವಾಗಿ, ಎತ್ತಿನ ಬೆನ್ನಿನ ಆಕಾರದಲ್ಲಿ ಶಿವಲಿಂಗ ರೂಪದಲ್ಲಿ ನೆಲೆಯಾಗುತ್ತಾನೆ.

ನಂತರ ಪಾಂಡವರ ವಂಶಸ್ಥ ಜನಮೇಜಯ ಇಲ್ಲಿನ ಕೇದಾರನಾಥ ದೇವಾಲಯದ ಶಿಲಾನ್ಯಾಸ ಮಾಡಿದನೆಂದೂ, ಇದಾದ ನಂತರ ಎಂಟನೇ ಶತಮಾನದಲ್ಲಿ ಆದಿಗುರು ಶಂಕರಾಚಾರ್ಯರು ದೇವಾಲಯವನ್ನು ನವೀಕರಿಸಿದರು. ಹೀಗೆ ಶಿವನನ್ನು ಇಲ್ಲಿ ಅನಾದಿಕಾಲದಿಂದಲೂ ಪೂಜಿಸಿಕೊಂಡು ಬರಲಾಗುತ್ತಿದೆ.

ದೇವಾಲಯದ ಗರ್ಭಗುಡಿಯ ಹೊರಭಾಗದಲ್ಲಿ ದ್ರೌಪದೀ ಸಮೇತ ಐವರು ಪಾಂಡವರ ವಿಗ್ರಹವನ್ನೂ ಸ್ಥಾಪಿಸಲಾಗಿದೆ. ಜ್ಯೋತಿಲಿರ್ಂಗ ಕ್ಷೇತ್ರವನ್ನು ಕತ್ಯೂರಿ ಶೈಲಿಯಲ್ಲಿ ನಿರ್ಮಿಸಲಾಗಿದೆ. ಕೇದಾರನಾಥಕ್ಕೆ ಭೇಟಿ ನೀಡದೇ ಬದ್ರೀನಾಥ್ ದರ್ಶನವು ಅಪೂರ್ಣವೆಂದು ಪರಿಗಣಿಸಲಾಗಿದೆ. ಕೇದಾರನಾಥ ಲಿಂಗ ದರ್ಶನ ಮಾಡದೇ ಚಾರ್ಧಾಮ್ ಯಾತ್ರೆಯೂ ಅಪೂರ್ಣವೆಂದು ಹೇಳಲಾಗುತ್ತದೆ.

ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ದೇವಸ್ಥಾನದ ಹಿಂದೆಯೇ ಶಂಕರರ ಸಮಾಧಿ ಮಂದಿರವಿದೆ.

ಗೌರಿಕುಂಡವು ಸಮುದ್ರಮಟ್ಟದಿಂದ 6500 ಅಡಿ ಎತ್ತರದಲ್ಲಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳಲ್ಲೊಂದಾದ ಏಕೋರಾಮಾರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ.

ಕೇದಾರನಾಥ ಎನ್ನುವ ಹೆಸರು ಬಂದಿದ್ದು ಹೇಗೆ?: ಕೇದಾರಖಂಡ್ ದಂತಕಥೆಯ ಪ್ರಕಾರ ಶಿವನು ನರ-ನಾರಾಯಣನ ಕೋರಿಕೆಯ ಮೇರೆಗೆ ಕೇದಾರಖಂಡದಲ್ಲಿ ನೆಲೆಸುವೆನೆಂದು ವರದಾನವನ್ನು ನೀಡುತ್ತಾನೆ. ಸಮಯದಲ್ಲಿ ಇಲ್ಲಿ ಕೇದಾರನೆಂಬ ಧಾರ್ಮಿಕ ನೀತಿಯುಳ್ಳ ರಾಜನು ಆಳ್ವಿಕೆ ನಡೆಸುತ್ತಿದ್ದನು. ರಾಜನ ಹೆಸರಿನಂತೆ ಪ್ರದೇಶವನ್ನು ಕೇದಾರಖಂಡ್ ಎಂದು ಕರೆಯಲಾಗುತ್ತಿತ್ತು. ರಾಜ ಕೇದಾರನು ಅಪ್ರತಿಮ ಶಿವಭಕ್ತನಾಗಿದ್ದನು.

ರಾಜನ ಪ್ರಾರ್ಥನೆಯಂತೆ ಕೇದಾರಖಂಡವನ್ನು ರಕ್ಷಿಸಲು ಶಿವನು ಒಪ್ಪಿಕೊಂಡನು. ಹೀಗಾಗಿ ಇಲ್ಲಿ ನೆಲೆಯಾದ ಶಿವನನ್ನು ಕೇದಾರನಾಥನೆಂದು ಕರೆಯಲಾಗುತ್ತದೆ.

ಸ್ಕಂದ ಪುರಾಣದಲ್ಲೂ ಕೇದಾರನಾಥದ ಬಗ್ಗೆ ಉಲ್ಲೇಖವಿರುವುದನ್ನು ಕಾಣಬಹುದು. ಅಸುರರ ಮೇಲೆ ಅಸಮಾಧಾನಗೊಂಡ ದೇವತೆಗಳು ಇಲ್ಲಿ ಶಿವನನ್ನು ಪೂಜಿಸಿದರು. ಎತ್ತಿನ ರೂಪದಲ್ಲಿ ಪ್ರತ್ಯಕ್ಷಗೊಂಡ ಶಿವನು 'ಕೆ-ದಾರ್ಯಾಮಿ' ಎಂದು ಕೇಳಿದನು. ಅಂದರೆ ಯಾರನ್ನು ತರಿದು ಹಾಕಬೇಕೆಂದು ಕೇಳಿದನು. ನಂತರ ಶಿವನು ತನ್ನ ಕೊಂಬು ಹಾಗೂ ಗೊರಸಿನಿಂದಲೇ ರಾಕ್ಷಸರನ್ನು ಸದೆಬಡಿದು, ಮಂದಾಕಿನಿ ನದಿಯಲ್ಲಿ ಎಸೆಯಲಾರಂಭಿಸಿದನು. ಶಿವನು 'ಕೇ-ದರ್ಯಾಮಿ' ಎಂದು ಹೇಳಿದುದರಿಂದ ಸ್ಥಳವನ್ನು ಕೇದಾರನಾಥವೆಂದು ಕರೆಯಲಾಯಿತು.

2013ರಲ್ಲಿ ಇಲ್ಲಿ ಸಂಭವಿಸಿದ ಭೀಕರ ಪ್ರವಾಹವು ಸುತ್ತಮುತ್ತಲಿನ ಪ್ರದೇಶವನ್ನು ಧ್ವಂಸ ಮಾಡಿತ್ತು. ಇಲ್ಲಿನ ಅನೇಕ ದೇವಾಲಯಗಳು ನಾಶವಾದವು ಆದರೆ. ಕೇದಾರನಾಥ ದೇವಾಲಯಕ್ಕೆ ಒಂದಿಂಚೂ ಹಾನಿಯಾಗಿರಲಿಲ್ಲ. ಕಾರಣವನ್ನು ನೋಡಿದಾಗ ದೇವಾಲಯದ ಬದಿಯಲ್ಲಿ ಉರುಳಿದ್ದ ಬೃಹತ್ ಬಂಡೆಯೊಂದು ದೇವಾಲಯವನ್ನು ಪ್ರವಾಹದಿಂದ ರಕ್ಷಿಸಿತ್ತು. ಅಂದಿನಿಂದ ಕಲ್ಲನ್ನು ಭಕ್ತರು ದೇವಶಿಲೆಯೆಂದು ಕರೆಯಲು ಆರಂಭಿಸಿದರು.

 

ಕೇದಾರನಾಥ ಪ್ರಯಾಣವು ಹರಿದ್ವಾರ ಅಥವಾ ಹೃಷಿಕೇಶದಿಂದ ಆರಂಭವಾಗುತ್ತದೆ. ಹರಿದ್ವಾರದಿಂದ ಸೋನ್ಪ್ರಯಾಗಕ್ಕೆ 235 ಕಿ.ಮೀ ಮತ್ತು ಸೋನ್ ಪ್ರಯಾಗದಿಂದ ಗೌರೀಕುಂಡ್ಗೆ 5 ಕಿ.ಮೀ ವರೆಗೆ ರಸ್ತೆಯ ಮೂಲಕ ಪ್ರಯಾಣಿಸಬಹುದು. ಅಲ್ಲಿಂದ ನಂತರ 16. ಕಿ.ಮೀ ದೂರವನ್ನು ನಡಿಗೆಯ ಮೂಲಕ ಕ್ರಮಿಸಬೇಕು. ಇಲ್ಲವಾದರೆ ಡೋಲಿ ಅಥವಾ ಕುದುರೆಯ ಮೇಲೆ ಪ್ರಯಾಣಿಸಿ, ಕೇದಾರನಾಥವನ್ನು ತಲುಪಬಹುದು.

ಇಷ್ಟೆಲ್ಲಾ ಮಹತ್ವವಿರುವ ಕೇದಾರನಾಥನ ದರ್ಶನವನ್ನು ಜೀವನದಲ್ಲಿ ಒಮ್ಮೆಯಾದರೂ ಎಲ್ಲರೂ ಪಡೆಯಲೇಬೇಕು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author