ಮಗುವಿನ ಮನಸನ್ನು ಪೂಜಿಸುವ ಸ್ಥಳವಿದು! ಶೃಂಖಲಾ ದೇವಿಯನ್ನು ಶಕ್ತಿ ದೇವತೆ ಎಂದೇಕೆ ಕರೆಯುತ್ತಾರೆ?

ಮಗುವಿನ ಮನಸನ್ನು ಪೂಜಿಸುವ ಸ್ಥಳವಿದು!

        ಶೃಂಖಲಾ ದೇವಿಯನ್ನು ಶಕ್ತಿ ದೇವತೆ ಎಂದೇಕೆ ಕರೆಯುತ್ತಾರೆ? 

Shrikala Devi west BengalImage Credits : Pinterest

ಶೃಂಖಲಾ ದೇವಿಯ ದೇಗುಲ ಒಂದು ಹಿಂದು ದೇಗುಲವಾಗಿದ್ದು, ಇಲ್ಲಿ ಸತಿ ದೇವಿಯನ್ನು ಪೂಜಿಸಲಾಗುತ್ತದೆ.

 

ದಕ್ಷ ಯಜ್ಞದಿಂದ ಸತಿಯನ್ನು ಕಳೆದುಕೊಂಡ ಶಿವನು, ಆಕೆಯ ದೇಹವನ್ನು ಹೊತ್ತು ತಾಂಢವವಾಡುವಾಗ ಲೋಕದ ಹಿತಕ್ಕಾಗಿ ವಿಷ್ಣುವು ಸುದರ್ಶನ ಚಕ್ರ ಪ್ರಯೋಗಿಸಿ ಸತಿಯ ದೇಹವನ್ನು ತುಂಡರಿಸಿದಾಗ, ಸತಿಯ ಹೊಟ್ಟೆ ಭಾಗ ಬಿದ್ದಿದ್ದು ಬಂಗಾಳದ ಹೂಗ್ಲಿ ಜಿಲ್ಲೆಯ ಪಾಂಡುವಾದಲ್ಲಿ.  

 

ಇಲ್ಲೀಗ ಯಾವುದೇ ದೇವಾಲಯವಿಲ್ಲ. ಆದರೆ ದೇವಾಲಯದ ಕುರುಹುಗಳನ್ನು ಇಲ್ಲಿನ ಮಿನಾರ್ ಬಳಿ ಇರುವ ಬಾರಿ ಮಸೀದಿ ಹತ್ತಿರ ನೋಡಬಹುದು. ೫೧ ಶಕ್ತಿಪೀಠ, ೧೮ ಮಹಾಶಕ್ತಿ ಪೀಠಗಳಲ್ಲಿ ಇದೂ ಕೂಡ ಒಂದಾಗಿದ್ದು, ಹಿಂದೂ ಧರ್ಮದ ಅತ್ಯಂತ ಪುಣ್ಯ ಕ್ಷೇತ್ರವೆನಿಸಿದೆ. 

 

ಇಲ್ಲಿದ್ದ ಶೃಂಖಲಾ ದೇವಿಯ ದೇವಾಲಯವನ್ನು ಮುಸ್ಲಿಂ ಆಕ್ರಮಣಕಾರನೊಬ್ಬನು ನಾಶಗೊಳಿಸಿ, ಇಲ್ಲಿ ಮಿನಾರ್ (ಸ್ತಂಭಗೋಪುರ) ಒಂದನ್ನು ಕಟ್ಟಿದನು. ಈ ಸ್ಥಳವು ಈಗ ಭಾರತೀಯ ಪುರಾತತ್ವ ಇಲಾಖೆಯ ಆಡಳಿತದಲ್ಲಿದೆ. ಈ ದೇಗುಲದ ಹತ್ತಿರದಲ್ಲೇ ಮತ್ತೊಂದು ದೇವಿಯ ದೇವಾಲಯವಿದ್ದು, ಅದು ಹನ್ಸೇಶ್ವರಿ ದೇವಿಯ ದೇಗುಲ ಎಂದು ಸ್ಥಳೀಯರು ಹೇಳುತ್ತಾರೆ. 

Shrikala Devi west BengalImage Credits : http://hindutemples-india.blogspot.com/

ಶೃಂಖಲಾ ಎಂದರೆ ಏನು ಗೊತ್ತಾ? 

 

ಆದಿ ಶಂಕರಾಚಾರ್ಯರು ರಚಿಸಿರುವ ಮಹಾಶಕ್ತಿ ಪೀಠಗಳ ಕುರಿತಾದ ಶ್ಲೋಕದಲ್ಲಿ `ಪ್ರದ್ಯುಮ್ನೆ ಶೃಂಖಲಾ' ಎಂದು ಉಲ್ಲೇಖಿಸಲಾಗಿದೆ. ಇಲ್ಲಿರುವ ಶಕ್ತಿ ಪೀಠವನ್ನು ಭವತಾರಿಣಿ ಶಕ್ತಿಪೀಠ ಎಂದು ಕರೆಯಲಾಗುತ್ತದೆ. ಶೃಂಖಲಾ ಎನ್ನುವುದು ೨ ಅರ್ಥಗಳಿಂದ ಕೂಡಿದೆ. ಮೊದಲನೇಯದ್ದು ಬಂಧಿಸಿಡಲು ಬಳಸುವ ದಾರ ಇಲ್ಲವೇ ಸರಪಳಿ. ಮತ್ತೊಂದು ಪ್ರಸವದ ಬಳಿಕ ಮಹಿಳೆಯರು ಹೊಟ್ಟೆಗೆ ಬಿಗಿಯಾಗಿ ಬಿಗಿಯುವ ಬಟ್ಟೆ. 

 

ಮೊದಲನೇ ಅರ್ಥದ ಪ್ರಕಾರ, ದೇವಿಯ ಬಂಧಿಸಿದ ರೂಪದಲ್ಲಿದ್ದಾಳೆ. ದೇವಿಯು ಕೇವಲ ಶಿವನಿಗೆ ಬಂಧಿಯಾಗಲು ಮಾತ್ರ ಸಾಧ್ಯ. ಭಕ್ತರೊಂದಿಗಿನ ಎಲ್ಲಾ ಬಂಧನವನ್ನು ದೇವಿಯು ಕಳೆಯುತ್ತಾಳೆ ಎಂದರ್ಥ.

 

೨ನೇ ಅರ್ಥದ ಪ್ರಕಾರ, ದೇವಿಯು ಪ್ರಸವದ ನಂತರದ ಹಂತದಲ್ಲಿದ್ದಾಳೆ. ಈ ರೂಪದಲ್ಲಿ ಆಕೆಯು ಇಡೀ ಜಗತ್ತನ್ನು ತನ್ನ ಮಗುವಾಗಿ ಕಾಣುತ್ತಾಳೆ. ಭಕ್ತರು ತಮ್ಮನ್ನು ತಾವು ದೇವಿಯ ಪುತ್ರ ಇಲ್ಲವೇ ಪುತ್ರಿ ಎಂದು ಭಾವಿಸಿ, ಸಂಪೂರ್ಣವಾಗಿ ಶರಣಾಗತರಾಗುತ್ತಾರೆ. 

 

ದೇವಿಯನ್ನು ಪೂಜಿಸಲು, ಆರಾಧಿಸಲು, ಆಕೆಯನ್ನು ಒಲಿಸಿಕೊಳ್ಳಲು ಮಗುವಿನ ಮನಸು ಇರಬೇಕು. ಈಗಷ್ಟೇ ಹುಟ್ಟಿದ ಮಗುವಿಗೆ ಹೇಗೆ ಹೊರ ಪ್ರಪಂಚದ ಯಾವುದೇ ಅರಿವಿರುವುದಿಲ್ಲವೋ, ಯಾವ ಬಂಧನವಿರುವುದಿಲ್ಲವೋ, ಯಾವುದೇ ಲೌಕಿಕ ಆಸೆಗಳು ಇರುವುದಿಲ್ಲವೋ, ಅದೇ ರೀತಿಯಾಗಿ ಮಗುವಿನ ಮನಸಿನಂತೆ ತಿಳಿಯಾಗಿ, ಯಾವುದೇ ಕಲ್ಮಶವಿಲ್ಲದೆ ಶೃಂಖಲಾ ದೇವಿಯಲ್ಲಿ ಶರಣಾಗತರಾಗಬೇಕು ಎನ್ನುತ್ತದೆ ಪುರಾಣ. 

Shrikala Devi west BengalImage Credits : http://hindutemples-india.blogspot.com/

ದೇವಿ ಪೀಠ ಇರುವ ಸ್ಥಳದ ಬಗ್ಗೆ ಇದೆ ಗೊಂದಲ!

 

ಶೃಂಖಲಾ ಶಕ್ತಿ ಪೀಠವೂ ಆದಿನಾಥ್ ಕ್ಷೇತದ ಗಂಗಾ ಸಾಗರದಲ್ಲಿದೆ ಎಂದು ಕೆಲವರು ಹೇಳಿದರೆ, ಕರ್ನಾಟಕದ ಶೃಂಗೇರಿ ಬಳಿ ಇರುವುದೇ ಶೃಂಖಲಾ ಪೀಠ, ದೇವಿಯ ಆಜ್ಞೆಯಂತೆ ಋಷ್ಯ ಶೃಂಗ ಮಹರ್ಷಿಗಳು ಇಲ್ಲಿ ಸ್ಥಾಪನೆ ಮಾಡಿದ್ದರು ಎನ್ನಲಾಗುತ್ತದೆ. 

 

ಕೆಲವರು ಗುಜರಾತ್‌ನ ಚೋಟಿಲಾದಲ್ಲಿದೆ ಶೃಂಖಲಾ ಶಕ್ತಿ ಪೀಠ ಎನ್ನುತ್ತಾರೆ. ಆದರೆ ಬಹುತೇಕರು ಬಂಗಾಳದ ಪಾಂಡುವಾದಲ್ಲಿರುವುದೇ ಶೃಂಖಲಾ ಶಕ್ತಿ ಪೀಠ ಎಂದು ನಂಬುತ್ತಾರೆ. ಇದಕ್ಕೆ ಪುಷ್ಠಿ ನೀಡುವಂತೆ ಆದಿ ಶಂಕರರ ಶ್ಲೋಕವು, ಪೀಠ ಇಲ್ಲಿಯೇ ಇದೆ ಎಂದು ಸೂಚಿಸುತ್ತದೆ. 

Shrikala devi west bengalImage Credits : http://hindutemples-india.blogspot.com/

ಮೇಲಾ ತಾಲಾದಲ್ಲಿ ಹಿಂದೂ-ಮುಸ್ಲಿಮರು!

 

ಪ್ರತಿ ವರ್ಷ ಮಾಘ ಮಾಸದಲ್ಲಿ ಸುಮಾರು ೩೦ ದಿನಗಳ ಕಾಲ `ಮೇಲಾ ತಾಲಾ' ಎಂಬ ಹೆಸರಿನ ಉತ್ಸವವನ್ನು ಮಿನಾರ್‌ನ ಆವರಣದಲ್ಲಿ ಆಚರಿಸಲಾಗುತ್ತದೆ, ಇದರಲ್ಲಿ ಸ್ಥಳೀಯ ಹಿಂದೂ ಮತ್ತು ಮುಸ್ಲಿಮರು ಭಾಗವಹಿಸುತ್ತಾರೆ. 

 

ಮತ್ತೊಂದು ಕುತೂಹಲಕಾರಿ ಸಂಗತಿಯೆAದರೆ, ಮೊದಲೇ ಉಲ್ಲೇಖಿಸಿದ ಹಾಗೆ ಪಾಂಡುವಾ ಬಳಿ ಹಂಸೇಶ್ವರಿ ಮಾತಾ ದೇವಾಲಯವಿದೆ. ಕೆಲವರು ಆ ದೇಗುಲವನ್ನೂ  ಶಕ್ತಿ ಪೀಠ ಎಂದು ಪರಿಗಣಿಸುತ್ತಾರೆ. ಕೆಲವರು ಹಂಸೇಶ್ವರಿ ದೇಗುಲವೇ ಶೃಂಖಲಾ ದೇವಿಯ ದೇಗುಲ ಎನ್ನುವುದೂ ಉಂಟು. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

Subscribe to Planet Tv Kannada
https://www.youtube.com/Planet Tv Kannada

Follow us on Facebook
https://www.facebook.com/Planettvkannada

Follow us on Twitter
https://twitter.com/Planettvkannada

Follow us on Instagram
https://www.instagram.com/planettvkannada

Follow us on Pinterest
https://www.pinterest.com/Planettvkannada

Follow us on Koo app
https://www.kooapp.com/planettvkannada

Follow us on share chat
https://sharechat.com/planettvkannada

Join us on Telegram
https://t.me/planettvkannada

Follow us on Tumblr
https://www.tumblr.com/planet-tv-kannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author