ಮತ್ಸ್ಯ ಮಾನವರು ನಿಜವಾಗ್ಲೂ ಇದ್ದಾರಾ..? ಅವರು ಸಾಗರ ಗರ್ಭದಲ್ಲಿ ಅಡಗಿದ್ದಾರಾ..?

ಮತ್ಸ್ಯ ಮಾನವರು ನಿಜವಾಗ್ಲೂ ಇದ್ದಾರಾ..?   ಅವರು ಸಾಗರ ಗರ್ಭದಲ್ಲಿ ಅಡಗಿದ್ದಾರಾ..?

ಮತ್ಸ್ಯ ಮಾನವ ಕಲ್ಪನೆ ಭಾರತೀಯರಿಗೆ ಹೊಸದಲ್ಲ. ಅಷ್ಟಾದಶ ಪುರಾಣಗಳಲ್ಲಿ ಮತ್ಸ್ಯ ಪುರಾಣವೂ ಒಂದಾಗಿದೆ. ವಿಷ್ಣುವಿನ ದಶಾವತಾರಗಳಲ್ಲಿ ಮತ್ಸ್ಯಾವತಾರ ಮೊದಲನೇಯದು. ಇದೇ ರೀತಿ ಮತ್ಸ್ಯ ಕನ್ಯೆಯ ಬಗ್ಗೆ ನಮ್ಮ ಜಾನಪದ ಕತೆಗಳಲ್ಲಿ, ಪುರಾಣಗಳಲ್ಲಿ ಉಲ್ಲೇಖವಿದೆ. ಜಗತ್ತಿನ ವಿವಿಧ ಭಾಗಗಳಲ್ಲೂ ಈ ರೀತಿಯ ಕತೆಗಳು ಜನಜನಿತವಾಗಿವೆ.

ಆಧುನಿಕ ಯುಗದಲ್ಲೂ ಇದರ ಬಗ್ಗೆ ಆಗಾಗ್ಗೆ ಚರ್ಚೆ ಆಗುತ್ತಿರುತ್ವೆ.  ಕೆಲವರು ಮತ್ಸ್ಯ ಮಾನವರು ಇದ್ದಾರೆ ಎಂದು ಅಭಿಪ್ರಾಯಪಟ್ಟರೆ ಕೆಲವರು ಅದರ ಅಸ್ತಿತ್ವವೇ ಇಲ್ಲ ಎಂದು ಅಲ್ಲಗಳೆಯುತ್ತಾರೆ. ಆದರೆ ಅಲ್ಲಲ್ಲಿ ಈ ಮತ್ಸ್ಯ ಮಾನವರನ್ನು ಹೋಲುವ ಪ್ರಾಣಿಗಳನ್ನ ನೋಡಿದ್ದಾಗಿ ಕೆಲವರು ಹೇಳಿದ್ದಾರೆ.

image source: Animal planet

 

ಸಮುದ್ರ ದಡದಲ್ಲಿ ಮಲಗಿತ್ತು ವಿಚಿತ್ರ ಪ್ರಾಣಿ..!

2004ರಲ್ಲಿ  ವಾಷಿಂಗ್ಟನ್‍ನಲ್ಲಿ ನಡೆದ ಘಟನೆ ಅದು. ಸಮುದ್ರ ತಟದಲ್ಲಿ ಇಬ್ಬರು ಮಕ್ಕಳು ಆಟ ಆಡುತ್ತಿದ್ದರು. ಹಾಗೆ ಆಟ ಆಡುವಾಗ ಯಾವುದೋ ವಿಚಿತ್ರ ಪ್ರಾಣಿಯನ್ನ ಅಲ್ಲಿ ನೋಡ್ತಾರೆ. ಆಗ ಅವರಿಬ್ಬರೂ ಅದನ್ನ ಮುಟ್ಟಲು ಹೋಗ್ತಾರೆ. ಆ ಪ್ರಾಣಿ ಇವರಿಬ್ಬರನ್ನ ನೋಡಿ ಜೋರಾಗಿ ಅರಚುತ್ತೆ. ಇದರಿಂದ ಭಯಗೊಂಡ ಮಕ್ಕಳು ಓಡಿಹೋಗಿ ಪೊಲೀಸರಿಗೆ ವಿಷಯ ತಿಳಿಸ್ತಾರೆ. ಪೊಲೀಸರು ಬರೋ ವೇಳೆಗೆ ಆ ವಿಚಿತ್ರ ಪ್ರಾಣಿ ಅಲ್ಲಿರಲಿಲ್ಲ.

ನಂತ್ರ ಇದೇ ವರ್ಷ ವಾಷಿಂಗ್ಟನ್ ಸಮುದ್ರ ತಟದಲ್ಲಿ ತಿಮಿಂಗಿಲಗಳು ಗುಂಪಾಗಿ ಬಂದು ಸಾವನ್ನಪ್ಪಿದವು. ಇವು ಯಾಕೆ ಹೀಗೆ ಸಾವನ್ನಪ್ಪಿದವು ಅನ್ನೋ ಪ್ರಶ್ನೆ ಎಲ್ಲರನ್ನ ಕಾಡೋಕೆ ಶುರುವಾಯ್ತು. ಅದಕ್ಕಾಗಿ ಸಂಶೋಧನಾ ತಂಡವೊಂದನ್ನ ರಚಿಸಲಾಯ್ತು. ಈ ವಿಷಯವನ್ನ ಬೆನ್ನತ್ತಿದ ಸಂಶೋಧಕರಿಗೆ ವಿಚಿತ್ರ ಕುರುಹು ಸಿಕ್ತು. 

ಅವರಿಗೆ ತಿಮಿಂಗಿಲಗಳ ಶರೀರದಿಂದ ರಕ್ತ ಹೊರ ಬರುತ್ತಿರೋದು ಕಂಡು ಬಂತು. ಈ ವೇಲ್‍ಗಳು ಸಮುದ್ರ ತಳದಲ್ಲಿ ಸಾಕಷ್ಟು ಬಳಲಿ ಹೊರಬಂದು ಬಿದ್ದಿವೆ ಅನ್ನೋದು ಅವರಿಗೆ ತಿಳಿಯಿತು. ಅವುಗಳ ಸಾವಿಗೆ ಕಾರಣವೇನು ಅನ್ನೋದನ್ನ ತಿಳಿದುಕೊಳ್ಳೋ ಸಲುವಾಗಿ ಸ್ಯಾಂಪಲ್ ಸಂಗ್ರಹಿಸಿದರು. 

image source: Animal planet

 

ತಿಮಿಂಗಿಲಗಳ ಸಾವಿಗೆ ಈ ಪ್ರಾಣಿಗಳೇ ಕಾರಣ..!

ಸಾಗರ ತಳದ ಶಬ್ಧವನ್ನ ರೆಕಾರ್ಡ್ ಮಾಡಿ ಪರೀಕ್ಷೆಗೆ ಒಳಪಡಿಸಿದರು. ಆ ಸೌಂಡ್ ರೆಕಾರ್ಡ್‍ನಲ್ಲಿ ವಿಚಿತ್ರ ಪ್ರಾಣಿಯೊಂದು ಅರಚುತ್ತಿರುವಂತೆ ಭಾಸವಾಯ್ತು. ಈ ಸಂಶೋಧನೆ ನಡೆಯುತ್ತಿದ್ದ ಸಮಯದಲ್ಲೇ ಅಮೆರಿಕಾದ ಕೆಲ ಸಮುದ್ರ ತೀರಗಳಲ್ಲಿ ವೇಲ್‍ಗಳು ಗುಂಪಾಗಿ ಹೊರಬಂದು ಸಾವನ್ನಪ್ಪಿದವು. ಆಸ್ಟ್ರೇಲಿಯಾದಲ್ಲೂ ಇದೇ ರೀತಿ ಘಟನೆ ಜರುಗಿತು. ಆದ್ರೆ ಈ ಬಾರಿ ವೇಲ್ಸ್ ದೇಹಕ್ಕೆ ಮೊನಚಾದ ಆಯುಧಗಳು ಚುಚ್ಚಿಕೊಂಡಿರುವುದು ಕಂಡು ಬಂತು. ಹಾಗೆಯೇ ಒಂದು ತಿಮಿಂಗಿಲದ ಬಾಯಲ್ಲಿ ಯಾವುದೋ ಪ್ರಾಣಿಯ ದೇಹದ ತುಂಡೊಂದು ಸಿಲುಕಿತ್ತು. ಆ ದೇಹದ ಅವಶೇಷವನ್ನ ಲ್ಯಾಬ್‍ಗೆ ತಂದು ಅದ್ರ ಡಿಎನ್‍ಎ ಪರೀಕ್ಷೆಗೆ ಒಳಪಡಿಸಿದ್ರು. ಅದನ್ನು ಪರೀಕ್ಷಿಸಿದ ಮೇಲೆ ಸೌಂಡ್ ರೆಕಾರ್ಡ್‍ನಲ್ಲಿ ಅರಚಿದ ಶಬ್ಧ ಇದೇ ಪ್ರಾಣಿಯದ್ದು ಇರಬಹುದು ಎಂಬ ನಿರ್ಣಯಕ್ಕೆ ಬಂದರು. ತಾವು ಇದುವರೆಗೂ ಕಂಡಿರದ ಜೀವಿ ಇದಾಗಿದೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ ಆ ಪ್ರಾಣಿಯ ಅನಾಟಮಿಯ ಮಾದರಿಯನ್ನು ರಚಿಸಿದರು. 

ಈ ಪ್ರಾಣಿಗಳು ವಿಕಸನ ಹಂತದಲ್ಲಿ ಎರಡು ಕಾಲುಗಳ ಮೇಲೆ ನಡೆಯುತ್ತಿದ್ದವು ಎಂದು ಊಹಿಸಿದರು. ಜೊತೆಗೆ ಆ ಜೀವಿಗೆ ಮನುಷ್ಯನಂತೆ ಕೈಗಳು ಇರೋದು ಖಚಿತವಾಯ್ತು. ಯಾಕೆಂದರೆ ತಿಮಿಂಗಿಲದ ಬಾಯಲ್ಲಿ ಸಿಕ್ಕಿದ ಅವಶೇಷದಲ್ಲಿ ಆಯುಧದ ಹಿಡಿ ಇತ್ತು. ಜೊತೆಗೆ ಅದರ ದೇಹ ಹೊಕ್ಕಿದ್ದ ಕತ್ತಿಗೆ ಹಿಡಿ ಇರಲಿಲ್ಲ. ಆ ಹಿಡಿ ಮತ್ತು ಕತ್ತಿಯನ್ನ ಮ್ಯಾಚ್ ಮಾಡಿದಾಗ ಅಲ್ಲಿ ಹೊಂದಾಣಿಕೆ ಕಂಡು ಬಂತು. 

ಆ ಸಂಶೋಧಕರು ಈ ವಿಚಿತ್ರ ಪ್ರಾಣಿಯನ್ನ ಮನುಷ್ಯನ ಪುರಾತನ ರೂಪವೆಂದೇ ಭಾವಿಸಿದರು. ಇದರ ತಲೆಬುರುಡೆಯ ರಚನೆಯನ್ನ ಗಮನಿಸಿದ ಮೇಲೆ ಅವರ ನಿಲುವು ಇನ್ನಷ್ಟು ಗಟ್ಟಿಯಾಯ್ತು. ಯಾಕೆಂದರೆ ಶಬ್ಧ ಮತ್ತು ವಾಸನೆಯನ್ನು ಗುರುತಿಸೋ ಮೆದುಳಿನ ಭಾಗ, ಮನುಷ್ಯನ ಮೆದುಳಿನ ರೀತಿ ಮುಂದಕ್ಕೆ ಚಾಚಿರೋದು ಕಂಡು ಬಂತು.

image source blogs.loc.govfolklife

 

ನಮ್ಮ ಪೂರ್ವಜರಿಗೆ ಈ ಪ್ರಾಣಿಗಳ ಬಗ್ಗೆ ತಿಳಿದಿತ್ತಾ..?

ಸಮುದ್ರ ತಟದಲ್ಲಿ ಜೀವಿಸುತ್ತಾ ನಂತ್ರ ಜಲಚರವಾಗಿ ಮಾರ್ಪಟ್ಟ ಈ ಪ್ರಾಣಿಗಳ ಬಗ್ಗೆ ನಮ್ಮ ಪೂರ್ವಜರಿಗೆ ತಿಳಿದಿರಬಹುದು. ಹಾಗಾಗಿಯೇ ಈ ಮತ್ಸ್ಯ ಮಾನವ ಕತೆಗಳು ಹುಟ್ಟಿಕೊಂಡಿರಬಹುದು. 

ಈ ಕಲ್ಪನೆಯನ್ನು ಬೆನ್ನತ್ತಿರುವ ಸಂಶೋಧಕರು ಮರ್ಮೈಡ್ ಸಿದ್ದಾಂತವನ್ನು ಹೊರಹಾಕಿದ್ದಾರೆ. ಅವರ ಪ್ರಕಾರ ಈ ಮರ್ಮೈಡ್‍ಗಳು ಸಾಗರ ತಳದಲ್ಲಿ ಜೀವಿಸುತ್ತವೆ. ಅಲ್ಲಿ ಇವುಗಳಿಗೆ ಶತೃಗಳು ಹೆಚ್ಚಾಗಿದ್ದು, ಕೆಲವೊಂದು ಮರ್ಮೈಡ್‍ಗಳು ಗುಂಪಿನ ಹೊರಗಿದ್ದುಕೊಂಡು ಗುಂಪಿನ ರಕ್ಷಣೆ ಮಾಡುತ್ವೆ. ತನ್ನ ಗುಂಪಿಗೆ ಅಪಾಯ ಸಂಭವಿಸುವ ಸಂದರ್ಭದಲ್ಲಿ, ಅವು ತಾವು ಬಲಿಯಾಗಿ ಗುಂಪನ್ನ ರಕ್ಷಣೆ ಮಾಡುತ್ತವೆ.

ಇವು ಚಿಕ್ಕ ಮೀನುಗಳನ್ನ ಬೇಟೆ ಆಡುತ್ತವೆ. ಬೇಟೆ ಆಡುವುದರ ಜೊತೆಗೆ ಆಹಾರ ಶೇಖರಣೆ ಮಾಡಿ ಮುಂದಿನ ದಿನಗಳಿಗೆ ಕೂಡಿಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವು ನಾವಿಕರು ಇವುಗಳನ್ನ ನೋಡಿದ್ದಾಗಿ ಹೇಳಿಕೆ ನೀಡುತ್ತಾರೆ ಆದರೆ ಇದಕ್ಕೆ ಸೂಕ್ತ ಸಾಕ್ಷಿಗಳು ಇರುವುದಿಲ್ಲ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author