ಮನೆ ಮುಂದೆ ತುಳಸಿ ನೆಡಲು ವೈಜ್ಞಾನಿಕ ಕಾರಣ..

ಮನೆ ಮುಂದೆ ತುಳಸಿ ನೆಡಲು ವೈಜ್ಞಾನಿಕ ಕಾರಣ..

ಗಿಡಮೂಲಿಕೆಗಳ ರಾಣಿ ಎಂದೇ ಕರೆಯಲ್ಪಡುವ ತುಳಸಿಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷಸ್ಥಾನವಿದೆ.ಪ್ರತಿಯೊಬ್ಬ ಹಿಂದೂಗಳ ಮನೆಮುಂದೆಯೂ ದೈವೀ ಸ್ವರೂಪಿಯಾದ ತುಳಸಿ ಗಿಡ ಇದ್ದೇ ಇರುತ್ತದೆ.ಮನೆ ಮುಂದೆ ಈ ತುಳಸಿ ಗಿಡವನ್ನು ನೆಡಲು ವೈಜ್ಞಾನಿಕ ಕಾರಣಗಳೂ ಇವೆ.

 

ಹಿಂದೂಗಳು ಪಾಲಿಸುವ ಒಂದೊಂದು ಆಚರಣೆಯೂ ಹಲವು ವೈಜ್ಞಾನಿಕ ಕಾರಣಗಳನ್ನು ಹೊಂದಿರುತ್ತದೆ. ಕೆಲವರಿಗೆ ಕೆಲವೊಂದು ಆಚರಣೆಗಳ ಬಗ್ಗೆ ಸರಿಯಾದ ಮಾಹಿತಿ ಕೊರತೆ ಇರುತ್ತದೆ. ಆದರೆ ಒಂದೊಂದು ಆಚರಣೆಯ ಹಿಂದಿರು ವವೈಜ್ಞಾನಿಕ ಕಾರಣ ತಿಳಿದರೆ ಆಚರಣೆಯ ಮಹತ್ವ ಅರಿವಾಗುತ್ತದೆ.

 

ಪ್ರತಿಯೊಬ್ಬ ಹಿಂದೂಗಳ ಮನೆ ಮುಂದೆಯೂ ತುಳಸೀ ಗಿಡ ಇದ್ದೇ ಇರುತ್ತದೆ. ಗಿಡಕ್ಕೆ ನಿಯಮ ಬದ್ಧವಾಗಿ ಪೂಜೆಪುನಸ್ಕಾರಗಳನ್ನೂ ಮಾಡಲಾಗುತ್ತದೆ. ಈ ತುಳಸಿ ಗಿಡವನ್ನು ಮನೆ ಮುಂದೆ ನೆಡಲು ವೈಜ್ಞಾನಿಕ ಕಾರಣಗಳು ಹಲವಾರಿ.

ದೈವೀಸ್ವರೂಪ: ಅದ್ಭುತ ಔಷಧೀಯ ಗುಣಗಳನ್ನು ಹೊಂದಿರುವ ತುಳಸಿಗಿಡ ಧಾರ್ಮಿಕವಾಗಿಯೂ ಮಹತ್ವ ಪಡೆದಿದ್ದು ವೈಜ್ಞಾನಿಕವಾಗಿ ವೈದ್ಯಕೀಯ ಶಾಸ್ತ್ರದಲ್ಲೂ ಪಮುಖಪಾತ್ರ ವಹಿಸುತ್ತದೆ. ಅನಾರೋಗ್ಯದ ಸಮಯದಲ್ಲಿ ಈ ತುಳಸಿ ಗಿಡವನ್ನು ಬಳಸಲಾಗುತ್ತದೆ. ನಿಯಮಿತವಾಗಿ ತುಳಸಿಯನ್ನು ಸೇವಿಸುತ್ತಾಬಂದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ, ದೀರ್ಘಾಯುಷ್ಯ ಹೊಂದುತ್ತಾರೆ ಎಂದು ಹೇಳಲಾಗುತ್ತದೆ. ನೆಗಡಿ, ತಲೆನೋವು ಸೇರಿದಂತೆ ಹಲವು ರೀತಿಯ ಉದರ ಸಮಸ್ಯೆಗಳಿಗೆ ತುಳಸಿಯನ್ನು ಮನೆಮದ್ದಿನ ರೂಪದಲ್ಲಿ ಬಳಸಲಾಗುತ್ತದೆ

ಧನಾತ್ಮಕಶಕ್ತಿ: ತುಳಸಿ ಗಿಡ ವಿರುವ ಪ್ರದೇಶಧ ನಾತ್ಮಕತೆಯಿಂದ ಕೂಡಿರುತ್ತದೆ. ಅಷ್ಟೇ ಅಲ್ಲ ಈ ಸ್ಥಳ ಏಕಾಗ್ರತೆಯನ್ನು ಪ್ರೇರೇಪಿಸುತ್ತದೆತುಳಸಿ ಗಿಡದ ಸುತ್ತಮುತ್ತಲಿನಗಾಳಿಯಲ್ಲೂ ಔಷಧೀಯ ಗುಣಗಳಿರುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ. ಹಾಗಾಗಿ ತುಳಸಿ ಗಿಡಕ್ಕೆ ಪ್ರದಕ್ಷಿಣೆ ಹಾಕುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು. ತುಳಸಿಯ ಪರಿಮಳ ಇದ್ದಲ್ಲಿ ಸೊಳ್ಳೆಗಳು ಹಾಗೂ ಇತರ ಕ್ರಿಮಿಕೀಟಗಳು ಕಡಿಮೆ ಸುಳಿಯುತ್ತವೆ.

ಕ್ರಿಮಿನಾಶಕ: ತುಳಸಿ ಗಿಡವನ್ನು ಮನೆಯ ಪರಿಸರದಲ್ಲಿ ನೆಟ್ಟರೆ ವಾತಾವರಣದಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಹೀರುವ ಮೂಲಕ ವಾತಾವರಣಕ್ಕೆ ಧನಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಜೊತೆಗೆ ಇದು ಕ್ರಿಮಿನಾಶಕ ಗುಣ ಹೊಂದಿದ್ದು ಸೊಳ್ಳೆ ಮತ್ತು ಇತರ ಕೀಟಗಳ ಪ್ರವೇಶ ತಡೆಯುತ್ತದೆ. ಅಷ್ಟೇ ಅಲ್ಲ ಹಾವು, ಚೇಳು ಮುಂತಾದ ಕೀಟಗಳು ಕಚ್ಚಿದಾಗ ತುಳಸಿಯ ಬೇರು ಮತ್ತು ಎಲೆಯನ್ನು ಔಷಧಿಯನ್ನಾಗಿ ಬಳಸಲಾಗುತ್ತದೆ. ಇದರಿಂದ ವಿಷದ ಪ್ರಭಾವ ತಗ್ಗುತ್ತದೆ ಎನ್ನಲಾಗುತ್ತದೆ.

ಆರೋಗ್ಯಕ್ಕೆತುಳಸಿಯಪ್ರಯೋಜನ : ಅಜೀರ್ಣ ಸಮಸ್ಯೆಗೆ ತುಳಸಿ ಎಲೆಯ ರಸ ಉತ್ತಮ. ಬಾಯಿಂದ ದುರ್ವಾಸನೆ ಹೋಗ ಲಾಡಿಸಲು ಇದನ್ನು ದಿನ ನಿತ್ಯ ಮುಂಜಾನೆ ಅಗೆದು ಸೇವಿಸಬೇಕು. ತುಳಸಿ ರಸದ ನಿಯಮಿತ ಸೇವನೆಯಿಂದ ರಕ್ತ ದೊತ್ತಡ ಕ್ಯಾನ್ಸರ್ಮಧುಮೇಹದ ಸಮಸ್ಯೆ ಹತೋಟಿಗೆ ಬರುತ್ತದೆ. ಶೀತ ದಂತಹ ಆರೋಗ್ಯ ಸಮಸ್ಯೆ ನಿವಾರಣೆಗೆ ತುಳಸಿ ಎಲೆ ಉಪಯುಕ್ತ.

ಅಡ್ಡಪರಿಣಾಮವಿಲ್ಲ: ತುಳಸಿ ಕೇವಲ ಸೂರ್ಯನ ಬೆಳಕಿನಲ್ಲಿ ಮಾತ್ರವಲ್ಲದೆ ದೀಪದ ಬೆಳಕಿನಲ್ಲಿ ಕೂಡಾ ಆಮ್ಲ ಜನಕ ತಯಾರಿಸುವ ಗುಣ ಹೊಂದಿದೆ. ಇದು ವಾತಾವರಣದಲ್ಲಿ ಧನಾತ್ಮಕಶಕ್ತಿ ಸಂಚಯಕ್ಕೆ ಕಾರಣ ಆಗುತ್ತದೆ. ಅಲ್ಲದೆ ಶುದ್ಧ ಆಯುರ್ವೇದ ಮಾರ್ಗದಲ್ಲಿ ಅನಾರೋಗ್ಯ ನಿವಾರಣೆ ಮಾಡುವದರಿಂದ ಆರೋಗ್ಯದ ಮೇಲೆಅಡ್ಡ ಪರಿಣಾಮ ಬೀರುವುದಿಲ್ಲ. ಆದರೆ ಅವಶ್ಯಕತೆ ಮೀರಿದ ತುಳಸಿ ಸೇವನೆ ಮೆದುಳಿಗೆ ಸಮಸ್ಯೆತರುತ್ತದೆ.

ನಿಮಗೆ ಈಮಾಹಿತಿ ಇಷ್ಟ ಆಗಿದ್ದರೆ ಲೈಕ್ಮಾಡಿ.. ಶೇರ್ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈಕೆಳಗಿನ ಲಿಂಕ್ಕ್ಲಿ ಕ್ಮಾಡಿ.. ನಮ್ಮನ್ನ ಫಾಲೋಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author