ಮನೆಯೊಳಗೆ ಶಂಖವಿದ್ದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

 

ಮನೆಯೊಳಗೆ ಶಂಖವಿದ್ದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ಹಿಂದೂ ಧರ್ಮದಲ್ಲಿ ಶಂಖಕ್ಕೆ ಮಹತ್ವವಾದ ಸ್ಥಾನವಿದೆ. ಶಂಖವನ್ನು ಶುಭ, ಸಕಾರಾತ್ಮಕತೆಯ ಸಂಕೇತ ಎಂದೇ ಪರಿಗಣಿಸಲಾಗುತ್ತದೆ. ಅದರಲ್ಲೂ ದೇವರ ಪೂಜೆಯಲ್ಲಿ ಶಂಖ ಪ್ರಮುಖ ಸ್ಥಾನ ಪಡೆದಿದೆ. ಪೂಜೆಯ ಸಂದರ್ಭದಲ್ಲಿ ಶಂಖ ಊದುವುದು ವಾಡಿಕೆಯಲ್ಲಿದೆ. ಶಂಖದಿಂದ ಹೊರಡುವ ಶಬ್ಧ ಮನೆಯಲ್ಲಿ ಸಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.ನೆಯಲ್ಲಿ ಶಂಖ ಇದ್ದರೆ ಸುಖ, ಸಮೃದ್ಧಿ, ಸಂತೋಷ ನೆಲೆಸುತ್ತದೆ ಎಂಬ ನಂಬಿಕೆ ಇದೆ. 

shankh for poojasource and pic credit: google.com

ವೇದ ಶಾಸ್ತ್ರಗಳ ಕಾಲದಿಂದಲೂ ಶಂಖ ಮಹತ್ವದ ಸ್ಥಾನವನ್ನು ಪಡೆದುಕೊಂಡು ಬಂದಿದೆ. ವಿಷ್ಣುವಿನ ಆಯುಧವಾಗಿರುವ ಇದನ್ನು ಪೂಜಾ ಕೋಣೆಯಲ್ಲಿ ಪೂಜಿಸುವುದರಿಂದಇದರಿಂದ ಹೊರಬರುವ ಸದ್ದು ಮನೆಯಲ್ಲಿನ ಋಣಾತ್ಮಕ ಅಂಶವನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.ಪೂಜೆಯ ಸಮಯದಲ್ಲಿ ಹಬ್ಬ ಹರಿದಿನಗಳಂದು ಶಂಖವನ್ನು ಊದುವುದು ಮಂಗಳಕರ ಎಂದು ಭಾವಿಸಲಾಗಿದೆ.ಬಹುತೇಕ ಮನೆಯಲ್ಲಿ ಶಂಖ ಇದ್ದೇ ಇರುತ್ತದೆ. ಸಮುದ್ರದ ಯಾವುದಾದರೂ ಒಂದು ವಸ್ತು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆಎಂದು ನಂಬಲಾಗಿದೆ.

shankh in poojasource and pic credit: https://www.makaan.com

ಪೌರಾಣಿಕ ಹಿನ್ನಲೆ

 

ವಿಷ್ಣು ಒಂದು ಕೈಯಲ್ಲಿ ಶಂಖ ಮತ್ತೊಂದು ಕೈಯಲ್ಲಿ ಚಕ್ರ ಹಿಡಿದಿರುವುದು ಎಲ್ಲರಿಗೂ ಗೊತ್ತಿದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ ಶಂಖ ಊದುವ ಮೂಲಕ ಪ್ರಪಂಚದಲ್ಲಿರುವ ನಕಾರಾತ್ಮಕತೆಯನ್ನು ಭಗವಾನ್‌ ವಿಷ್ಣು ನಾಶಪಡಿಸುತ್ತಿದ್ದನು ಎಂಬ ನಂಬಿಕೆಯಿತ್ತು. ಜಗತ್ತಿನ ಅಂಧಕಾರನ್ನು ನಿವಾರಿಸಲು ವಿಷ್ಣು ಭಗವಾನ್‍ ಹಲವಾರು ಅವತಾರಗಳನ್ನು ಎತ್ತಿದ್ದಾರೆ. ಆದರೆ ಪ್ರತಿಯೊಂದು ಅವತಾರದಲ್ಲಿ ಕೂಡಾ ವಿಷ್ಣುವು ಶಂಖವನ್ನು ಆಯುಧವಾಗಿ ಬಳಸಿದ್ದಾರೆ. ಆದ್ದರಿಂದಲೇ ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಶಂಖಕ್ಕೆ ಪ್ರಧಾನ ಸ್ಥಾನವನ್ನು ನೀಡಲಾಗಿದೆ.

shankh for poojasource and pic credit: https://myrepublica.nagariknetwork.com

ಪುರಾಣವನ್ನು ಬದಿಗಿಟ್ಟು ವೈಜ್ಞಾನಿಕವಾಗಿ ಶಂಖದ ಮಹತ್ವವನ್ನು ನೋಡಿದರೆಆರೋಗ್ಯದ ದೃಷ್ಟಿಯಿಂದ ಸಹ ಶಂಖ ಒಳ್ಳೆಯದುಶಂಖವನ್ನು ಪ್ರತಿದಿನ ಊದುವುದರಿಂದ ಹೃದಯದ ಸಮಸ್ಯೆ ಕಡಿಮೆಯಾಗುತ್ತದೆಶಂಖದಲ್ಲಿ ಸುಣ್ಣದ ಅಂಶ ಸಹ ಒಳಗೊಂಡಿರುವುದರಿಂದ ಇದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಅಲ್ಲದೆಕಿವಿಯ ಬಳಿ ಶಂಖವನ್ನು ಇಟ್ಟಕೊಂಡರೆ ನಿಧಾನವಾಗಿ ಗುನುಗುತ್ತಿರುವ ಸಮುದ್ರದ ಅಲೆಯನದಿ ಹರಿಯುವ ಶಬ್ದವನ್ನು ಕೇಳಬಹುದು. ಇದು ವಾಸ್ತವವಾಗಿ ಭೂಮಿಯ ನೈಸರ್ಗಿಕ ಕಂಪನ ಅಥವಾ ಕಾಸ್ಮಿಕ್ ಶಕ್ತಿಯು ಶಂಖದ ಮೂಲಕ ಹೊರಹೊಮ್ಮಿ ವರ್ಧಿಸುತ್ತದೆ ಎಂದು ತಿಳಿದುಬಂದಿದೆ.

shankh in poojasource and pic credit: https://vedicfeed.com
ವಿವಿಧ ಪ್ರಕಾರದ ಶಂಖಗಳು

ಶಂಖದ ನೀರು ಸಹ ಪವಿತ್ರ ಎಣದು ನಂಬಲಾಗಿದೆ. ಅದರ ನೀರನ್ನು ಕುಡಿದು ತಲೆಗೆ ಪ್ರೋಕ್ಷಣೆ ಮಾಡುವುದರಿಂದ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಶಂಖ ಊದುವುದರಿಂದ ಧೈರ್ಯಭರವಸೆಇಚ್ಛಾಶಕ್ತಿ ಮುಂತಾದ ಸಕಾರಾತ್ಮಕ ಮಾನಸಿಕ ಕಂಪನಗಳನ್ನು ಹೆಚ್ಚಿಸುತ್ತದೆ ಎಂದ ನಂಬಲಾಗಿದೆ. ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಶಂಖಕ್ಕೂ ನಿರ್ದಿಷ್ಟ ಹೆಸರಿದೆ. ಶಂಖದಲ್ಲಿ ವಿವಿಧ ವಿನ್ಯಾಸ ಪ್ರಕಾರದ ಶಂಖಗಳಿವೆ.  ಇವುಗಳನ್ನು  ಪಾಂಚಜನ್ಯ,  ದೇವದುತ್ತ,  ಪೌಂಡ್ರಾ,  ಅನಂತವಿಜಯಸುಘೋಸಮಣಿಪುಷ್ಪಕ ಎನ್ನಲಾಗಿದೆ.

maha vishnusource and pic credit: https://vedicfeed.com

ವಿಷ್ಣುವಿನ ಶಂಖವನ್ನು ಪಾಂಚಜನ್ಯಎಂದು ಕರೆಯಲಾಗುತ್ತದೆಈ ಶಂಖದ ವಿಶೇಷತೆ ಕೆಟ್ಟದ್ದರ ಮೇಲೆ ಒಳ್ಳೆಯದೇ ಗೆಲ್ಲುತ್ತದೆ ಎಂಬುದಾಗಿದೆ. ಅರ್ಜುನನ ಶಂಖವನ್ನು ದೇವದುತ್ತಭೀಮನ ಶಂಖವನ್ನು ಪೌಂಡ್ರಾಯುಧಿಷ್ಠಿರನ ಶಂಖವನ್ನು ಅನಂತವಿಜಯ, ನಕುಲನ ಶಂಖವನ್ನು ಸುಘೋಸ ಮತ್ತು ಸಹದೇವನ ಶಂಖವನ್ನು ಮಣಿಪುಷ್ಪಕ ಎಂದು ಕರೆಯಲಾಗುತ್ತಿತ್ತುಯುದ್ಧ ಕಾಲದಲ್ಲಿ ಶಂಖವನ್ನು ಊದುವುದರ ಮೂಲಕ ನಾವು ಯುದ್ಧಕ್ಕೆ ಸಜ್ಜಾಗಿದ್ದೇವೆ ಎಂಬುದನ್ನು ಸೂಚಿಸುತ್ತಿದ್ದರು.

ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಹ ಶಂಖ ಪ್ರಮುಖ ಪಾತ್ರ ವಹಿಸಿದೆ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಓಜೋನ್ ಪದರದ ರಂಧ್ರವನ್ನು ಸಹ ಸರಿಮಾಡುವ ಶಕ್ತಿ ಶಂಖಕ್ಕಿದೆ ಎಂದು ಹೇಳಲಾಗುತ್ತದೆಆದ್ದರಿಂದಲೇ ಮನೆಯಲ್ಲಿ ಶಂಖವನ್ನು ಸಂಜೆಯ ಹೊತ್ತು ದೀಪ ಹಚ್ಚಿದ ನಂತರ ಮೂರು ಬಾರಿ ಊದುತ್ತಾರೆ. 

shankh for pooja

ಶಂಖವನ್ನು ಮನೆಯಲ್ಲಿ ಹೇಗೆ ಪೂಜಿಸಬೇಕು..?

 

ಹಿಂದೂ ಧರ್ಮದಲ್ಲಿ ಶಂಖಕ್ಕೆ ಪವಿತ್ರವಾದ ಸ್ಥಾನವಿರುವ ಕಾರಣಶಂಖವನ್ನು ಮನೆಯಲ್ಲಿಟ್ಟುಕೊಳ್ಳುವ ಮೊದಲು ಹಲವು ವಿಚಾರಗಳನ್ನು ಗಮನಿಸಿಕೊಳ್ಳಬೇಕುನೀವು ಶಂಖವನ್ನು ಮನೆಯಲ್ಲಿ ಪೂಜೆಗಾಗಿ ಬಳಸುತ್ತಿದ್ದಲ್ಲಿ ಗಂಗಾಜಲದಿಂದ ಅದನ್ನು ಶುದ್ಧೀಕರಿಸಬೇಕು ಮತ್ತು ಯಾವಾಗಲೂ ಅದನ್ನು ಪವಿತ್ರ ಬಟ್ಟೆಯ ಮೇಲೆ ಇರಿಸಬೇಕು. ದೇವರ ಮನೆಯಲ್ಲಿ ಅದನ್ನು ಎತ್ತರದ ಸ್ಥಳದಲ್ಲಿ ಇರಿಸಬೇಕು. ನೀವು ಶಂಖವನ್ನು ಮನೆಯಲ್ಲಿ ಊದಲು ಬಳಸುತ್ತಿದ್ದೀರಿ ಎಂದಾದಲ್ಲಿ ಅದಕ್ಕೆ ಯಾವುದೇ ಪವಿತ್ರ ಜಲದ ಅರ್ಪಣೆ ಮತ್ತು ಮಂತ್ರಗಳ ಪಠಣೆಯನ್ನು ಮಾಡಬಾರದು. ಅದನ್ನು ಹಳದಿ ಬಟ್ಟೆಯ ಮೇಲೆಯೇ ಇರಿಸಬೇಕು.

Enjoyed this article? Stay informed by joining our newsletter!

Comments

You must be logged in to post a comment.

About Author