ಮಹಾಮಾರಿ ಕೊರೋನಾ ದೇವಿಗಾಗಿ ಇಲ್ಲಿದೆ ದೇವಾಲಯ..! ಅರ್ಚಕರಿಂದ ನಿತ್ಯವೂ ನಡೆಯುತ್ತೆ ಪೂಜೆ..!

ತಮಿಳುನಾಡಿನಲ್ಲಿ ಕೊರೋನಾ ದೇವಿ ದೇವಾಲಯ ನಿರ್ಮಾಣ..!

corona templesource and pic credit: google.com

ವಿಶ್ವವೇ ಮಹಾಮಾರಿ ಕೊರೋನಾಗೆ ತತ್ತರಿಸಿ ಹೋಗಿದೆ. ಕಣ್ಣಿಗೆ ಕಾಣದ ಅಣುವೊಂದರಿಂದ ಲೋಕದ ಸಮಸ್ತ ಜನರೂ ಹೈರಾಣಾಗಿ ಹೋಗಿದ್ದಾರೆ. ದೇಶಾದ್ಯಂತ ಮಾರಕ ಕೊರೋನಾ ಸೋಂಕಿಗೆ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. ಅದೆಷ್ಟೋ ಮಂದಿ ತಮ್ಮ ಅಪ್ಪ-ಅಮ್ಮಂದಿರನ್ನು, ಕೆಲವರು ತಮ್ಮ ಮಕ್ಕಳನ್ನು, ಇನ್ನೂ ಹಲವರು ತಮ್ಮ ಕುಟುಂಬ ಸದಸ್ಯರನ್ನೆಲ್ಲಾ ಕಳೆದುಕೊಂಡಿದ್ದಾರೆ. ಹೀಗಿದ್ದೂ ಮಹಾಮಾರಿಯ ಆರ್ಭಟ ಮಾತ್ರ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ.

corona virussource and pic credit: https://coronavirusexplained.ukri.org

ದೂರದ ಚೀನಾದಲ್ಲಿ ಕಣ್ಣಿಗೆ ಕಾಣದ ವೈರಸ್ ಇದೆಯಂತೆ ಎಂದಾಗ ಎಲ್ಲರೂ ಅಷ್ಟು ತಲೆಕೆಡಿಸಿಕೊಂಡಿರಲ್ಲಿಲ್ಲಕಣ್ಣಿಗೆ ಕಾಣದ ಒಂದು ಸಣ್ಣ ಕ್ರಿಮಿ ನಮ್ಮನ್ನು ಏನುತಾನೇ ಮಾಡೀತು ಎಂದು ಹೀಗಳೆಯುತ್ತಿದ್ದರುಈಗ ಜನರುಕೊರೋನಾ ಎಂದರೆ ಅರ್ಧರಾತ್ರಿಯಲ್ಲೇ ಬೆಚ್ಚಿಬೀಳುವಂತಾಗಿದೆ. ಕಣ್ಣಿಗೆ ಕಾಣದ ಒಂದು ಪುಟ್ಟ ವೈರಸ್ ಮನುಷ್ಯನ ಆವಿಷ್ಕಾರವಿಜ್ಞಾನ-ತಂತ್ರಜ್ಞಾನಮಂಗಳ-ಅಂಗಳ ಎಲ್ಲವನ್ನೂ ಮೀರಿ ಬೃಹದಾಕಾರವಾಗಿ ಬೆಳೆದುಬಿಟ್ಟಿದೆ.

corona virus source and pic credit: https://coronavirusexplained.ukri.org

ಹೆಚ್ಚುತ್ತಿರುವ ಕೊರೋನಾ ಸೋಂಕಿನಿಂದ ಪಾರಾಗಲು ದೇಶಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿವೆ. ಹಲವೆಡೆ ಅರ್ಚಕರ ತಂಡ ಮಂತ್ರಗಳನ್ನು ಪಠಿಸಿ ಕೊರೋನಾದಿಂದ ಜನರನ್ನು ಮುಕ್ತಗೊಳಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಿದೆ. ಹೀಗಿರುವಾಗಲೇ ತಮಿಳುನಾಡಿನಲ್ಲಿ ಕೊರೋನಾದ ಹೆಸರಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಅಚ್ಚರಿಯಾದರೂ ಇದು ನಿಜ. ಕೊಯಮತ್ತೂರಿನಲ್ಲಿ ಕೊರೋನಾ ದೇವಿಯ ಹೆಸರಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

ಕೊರೋನಾ ದೇವಿಯ ದೇವಾಲಯ

corona templesource and pic credit:https://masalachaimedia.com

ಕಾಮಾಚಿಪುರಿ ಅಧೀನಂ ಪೀಠ ಕೊರೋನಾ ದೇವಿಗೆ ಮೀಸಲಾದ ದೇವಾಲಯವನ್ನು ನಿರ್ಮಿಸಿದ್ದುದೇವಾಲಯದಲ್ಲಿ 1.5 ಫೀಟ್ ಉದ್ದದ ಕಪ್ಪು ಬಣ್ಣದ ಕೊರೋನಾ ದೇವಿಯ ಪ್ರತಿಮೆಯನ್ನು ಸಹ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿನಿತ್ಯ ಪೂಜೆ ಸಲ್ಲಿಸಲು ಅರ್ಚಕರನ್ನೂ ಸಹ ನೇಮಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಸದ್ಯದಲ್ಲೇ ಮಹಾ ಯಾಗವೊಂದನ್ನು ನಡೆಸಲು ನಿರ್ಧರಿಸಿದ್ದು, ಇದಕ್ಕಾಗಿ 48 ದಿನಗಳ ವ್ರತವನ್ನು ನಡೆಸಲು ಮುಂದಾಗಿದೆ.

corona devi templesource and pic credit:https://masalachaimedia.com

ಕೊರೋನಾ ಎರಡನೇ ಅಲೆಯಿಂದ ದೇಶಾದ್ಯಂತ ಸಂಭವಿಸಿರುವಂತೆಯೇ ತಮಿಳುನಾಡಿನಲ್ಲಿಯೂ ಸಾಕಷ್ಟು ಸಾವು-ನೋವು ಸಂಭವಿಸಿದೆ. ಆಸ್ಪತ್ರೆ, ಆಕ್ಸಿಜನ್ ಇಲ್ಲದೆ ಹಲವಾರು ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರು, ವೈದ್ಯರು ಮಾನಸಿಕವಾಗಿ ಬಳಲಿ ಹೋಗಿದ್ದಾರೆ. ಹೀಗಾಗಿ ಈ ಸಂಕಷ್ಟದಿಂದ ಪಾರಾಗಲು ಕೊರೋನಾ ದೇವಿ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾಗಿ ಕಾಮಾಚಿಪುರಿ ಅಧೀನಂ ಪೀಠದ ಆಡಳಿತ ಮಂಡಳಿ ತಿಳಿಸಿದೆ. ಆದರೆ ಸದ್ಯ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಜನರು ಯಾರೂ ದೇವಾಲಯಕ್ಕೆ ಭೇಟಿ ನೀಡದಂತೆ ಆಡಳಿತ ಮಂಡಳಿ ಮನವಿ ಮಾಡಿದೆ.

ಪ್ಲೇಗ್‌ ಮಾರಿಯಮ್ಮ ದೇವಾಲಯ

mariyamma templesource and pic credit: https://www.google.com

ತಮಿಳುನಾಡಿನಲ್ಲಿ ರೋಗ ಹಾಗೂ ಸಾಂಕ್ರಾಮಿಕದ ಸಂದರ್ಭದಲ್ಲಿ ದೇವಿಯ ಆರಾದನೆಗೆ ದೇವಸ್ಥಾನಗಳನ್ನು ನಿರ್ಮಿಸುವುದು ಇದು ಹೊಸದೇನಲ್ಲ.ಈ ಮುನ್ನ ಪ್ಲೇಗ್‌ ಮಹಾಮಾರಿ ಕಾಣಿಸಿಕೊಂಡ ಸಂದರ್ಭದಲ್ಲಿ ಕೊಯಮತ್ತೂರಿನಲ್ಲಿ ಪ್ಲೇಗ್‌ ಮಾರಿಯಮ್ಮ ದೇವಾಲಯವನ್ನು ನಿರ್ಮಿಸಲಾಗಿತ್ತು. 1900ರ ದಶಕದಲ್ಲಿ ಪ್ಲೇಗ್ ಮಹಾಮಾರಿಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಪ್ಲೇಗ್‌ ಮಾರಿಯಮ್ಮ ದೇವಾಲಯವನ್ನುನಿರ್ಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು. ಸಾಂಕ್ರಾಮಿಕದ ಸಂದರ್ಭದಲ್ಲಿ ದೇವಿ ನಮ್ಮನ್ನು ರಕ್ಷಿಸುತ್ತಾಳೆ ಅನ್ನೋದು ಇಲ್ಲಿನ ಜನರ ನಂಬಿಕೆಯಾಗಿದೆ.

mariyamma templesource and pic credit:https://www.tripadvisor.in

ದಕ್ಷಿಣಭಾರತದಲ್ಲಿ ಕೊರೋನಾ ಹೆಸರಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ದೇವಾಲಯ ಇದಾಗಿದೆ. ಕಳೆದ ವರ್ಷ ಜೂನ್ ನಲ್ಲಿ ಕೇರಳದ ಕೊಲ್ಲಂನ ಕಡಕ್ಕಲ್‍ ನಲ್ಲಿ ಕೊರೋನಾಗಾಗಿ ದೇವಾಲಯವನ್ನು ನಿರ್ಮಾಣ ಮಾಡಿದ್ದರು. ಇಲ್ಲಿನ ಸ್ಥಳೀಯ ಅರ್ಚಕರೊಬ್ಬರು ತಮ್ಮ ಮನೆಯ ಸಮೀಪವೇ ಪ್ರತಿಮೆಯನ್ನು ಸ್ಥಾಪನೆ ಮಾಡಿ ಪೂಜೆ ಸಲ್ಲಿಸಿದ್ದರು. ಅದರಂತೆ ತಮಿಳುನಾಡಿವ ಕೊಯಮತ್ತೂರಿನಲ್ಲಿಯೂ ಕೊರೋನಾ ದೇವಿಯ ವಿಶೇಷ ದೇವಾಲಯ ನಿರ್ಮಾಣಗೊಂಡಿದೆ.

ರೋಗ ತಡೆಗಟ್ಟುವ ದೇವರು

ಸಾಂಕ್ರಾಮಿಕ ರೋಗಗಳನ್ನು ತೆಡಗಟ್ಟುವ ಸಲುವಾಗಿಯೇ ಭಾರತದ ಗ್ರಾಮಾಂತರ ಭಾಗಗಳಲ್ಲಿ ಹಲವು ದೇವತೆಗಳು ಅವತಾರ ಎತ್ತಿದ್ದವು ಎಂದು ತಿಳಿದುಬಂದಿದೆ. ಮಾರಕ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಜನರು ಇಂಥಹಾ ದೇವತೆಗಳ ಮೊರೆಹೋಗುತ್ತಿದ್ದರು. ಅವುಗಳನ್ನು ಪೂಜಿಸಿ, ಆರಾಧಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಲಕ್ನೋದ ಕಾರಾ ಎಂಬ ಹಳ್ಳಿಯಲ್ಲಿ ಶೀತಾಲದೇವಿ ಎಂಬ ದೇವಸ್ಥಾನವಿದ್ದು, ವರ್ಷಂಪ್ರತಿ ವಿಶೇಷ ಜಾತ್ರೆ ನಡೆಯುತ್ತದೆ. ಸಿಡುಬು ರೋಗಿನಿಂದ ಪಾರಾಗಲು ಜನರು ಶೀತಾಲದೇವಿಯನ್ನು ಪ್ರಾರ್ಥಿಸುತ್ತಿದ್ದರು.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author