ಮಹಾಶಿವರಾತ್ರಿ ಆಚರಣೆಯ ಹಿನ್ನೆಲೆ

ಮಹಾಶಿವರಾತ್ರಿ ಆಚರಣೆಯ ಹಿನ್ನೆಲೆ

ಭಾರತೀಯರು ಆಚರಿಸುವ ಹಲವು ಹಬ್ಬಗಳಲ್ಲಿ ಮಹಾಶಿವರಾತ್ರಿಯೂ ಒಂದು. ಹಿಂದೂಗಳು ಆಚರಿಸುವ ಪ್ರತಿ ಹಬ್ಬವೂ ಒಂದೊಂದು ವಿಶೇಷತೆ ಹಾಗೂ ವಿಶೇಷ ಹಿನ್ನೆಲೆಯನ್ನು ಒಳಗೊಂಡಿದೆ. ಅದೇ ರೀತಿ ಮಹಾ ಶಿವರಾತ್ರಿಯ ಹಬ್ಬದಂದು ಉಪವಾಸವಿದ್ದು, ರಾತ್ರಿಯೆಲ್ಲಾ ಜಾಗರಣೆ ಮೂಲಕ ಶಿವನನ್ನು ಆರಾಧಿಸಲು ಪುರಾಣಗಳಲ್ಲಿ ಅನೇಕ ದಂತಕತೆಗಳಿವೆ  ಇವೆ.

ಹಿಂದೂ ಸಂಪ್ರದಾಯದಲ್ಲಿ ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದಿನಪೂರ್ತಿ ಉಪವಾಸವಿದ್ದು, ರಾತ್ರಿಯಿಡೀ ಜಾಗರಣೆ ಇರುವ ಮೂಲಕ ಶಿವನನ್ನು ಆರಾಧಿಸಿ ಪರಶಿವನ ಅನುಗ್ರಹ ಪಡೆಯಲಾಗುತ್ತದೆ.

ಭೂ ಸಂಚಾರ: ಶಿವರಾತ್ರಿಯ ಸಮಯದಲ್ಲಿ ಶಿವನು ಪಾರ್ವತಿಯೊಂದಿಗೆ ಭೂ ಸಂಚಾರಕ್ಕೆ ಬರುತ್ತಾನೆ. ಸಂಚಾರದ ವೇಳೆ ಎಲ್ಲಾ ಲಿಂಗಗಳು, ಸ್ಥಾವರ ಜಂಗಮಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ರಾತ್ರಿ ವೇಳೆ ಶಿವ ಪಾರ್ವತಿ ಭೂ ಲೋಕದ ಸಂಚರಿಸುವಾಗ ಯಾರು ತನ್ನನ್ನು ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಶಿವನೇ ತಿಳಿಸಿದ್ದಾನೆ ಎಂಬ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ.

ಶಿವರಾತ್ರಿಯಂದು ಶುಭ್ರ ಆಕಾಶ: ಮಹಾಶಿವರಾತ್ರಿಯಂದು ಅಂದರೆ ಹಬ್ಬದ ರಾತ್ರಿ ವೇಳೆಯಲ್ಲಿ ಆಕಾಶ ಶುಭ್ರವಾಗಿರುತ್ತದೆ. ಮೋಡಗಳಿಲ್ಲದ ಆಕಾಶ ಹಾಗೆಯೇ ಮಂಗಳಕರನಾದ ಚಂದ್ರನು ಸ್ಪೂರ್ತಿ ಹುಟ್ಟಿಸುವಂತಿದ್ದು, ಸಂವೇಧನಾಶೀಲ ವಾತಾವರಣವಿರುತ್ತದೆ. ಸಮಯ ಶಿವನ ಪೂಜೆಗೆ ಉತ್ತಮ ಕಾಲವಾಗಿದ್ದು, ವೇಳೆಯಲ್ಲಿ ಶಿವನನ್ನು ಆರಾಧಿಸಿದರೆ ಭಕ್ತರು ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ಶಿವನ ಪ್ರಿಯವಾದ ದಿನ: ಮಹಾಶಿವರಾತ್ರಿಯಂದು ಬ್ರಹ್ಮ-ವಿಷ್ಣು ಆಂದಿಯಾಗಿ ಪ್ರತಿಯೊಬ್ಬರೂ ಶಿವನನ್ನು ಪೂಜಿಸಿದ್ದು, ಎಲ್ಲರೂ ಶಿವನ ಕೃಪಕಟಾಕ್ಷಹೊಂದಲು ಪೂಜಾಕೈಂಕರ್ಯಗಳನ್ನು ಕೈಗೊಳ್ಳುತ್ತಾರೆ. ಸ್ವತಃ ಶಿವನೇ ಶಿವರಾತ್ರಿ ತನಗೆ ಪ್ರಿಯವಾದ ದಿನವೆಂದು ಹೇಳಿರುವುದಾಗಿ ಕತೆಗಳಿವೆ.

ಆಲಾಹಲ ಸೇವಿಸಿದ ಮಹಾದೇವ: ದೇವತೆಗಳು ರಾಕ್ಷಸರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡುವಾಗ ಪ್ರಾರಂಭದಲ್ಲಿ ಆಲಾಹಲ ಉತ್ಪತ್ತಿಯಾಗುತ್ತದೆ. ಸಂದರ್ಭದಲ್ಲಿ ದೇವತೆಗಳು ಹಾಗೂ ಅಸುರರು ಯಾರೂ ಸಹ ಆಲಾಹಲವನ್ನು ಸೇವಿಸಲು ಮುಂದಾಗುವುದಿಲ್ಲ. ಆಲಾಹಲವು ಇಡೀ ಭೂ ಮಂಡಲವನ್ನೇ ನಾಶಮಾಡಬಲ್ಲ ಸಾಮಥ್ರ್ಯ ಹೊಂದಿತ್ತು. ಭೂ ಮಂಡಲವನವನ್ನು ರಕ್ಷಿಸುವುದಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ಪರಶಿವನು ಸ್ವತಃ ತಾನೇ ಪ್ರಾರಂಭದಲ್ಲಿ ಬಂದ ಆಲಾಹಲವನ್ನು ಸೇವಿಸುತ್ತಾನೆ. ಇದೇ ಸಮಯದಲ್ಲಿ ಪಾರ್ವತಿಯು ಆಲಾಹಲ ಶಿವನ ಹೊಟ್ಟೆ ಸೇರದಂತೆ ಗಂಟಲನ್ನು ಬಿಹಿಡಿಯುತ್ತಾಳೆ.

ರಾತ್ರಿಯಿಡೀ ಭಜನೆ: ಆಲಾಹಲ ಶಿವನ ಉದರ ಸೇರದಂತೆ ಪಾರ್ವತಿ ತಡೆಯುತ್ತಾಳೆ. ಆದರೆ ಆಲಾಹಲ ಸೇವಿಸಿದ ನಂತರ ನಿದ್ರಿಸಿದಲ್ಲಿ ವಿಷವು ದೇಹಕ್ಕೆ ಬೇಗನೆ ಹರಡುತ್ತದೆ. ಆದ್ದರಿಂದ ಶಿವನನ್ನು ಎಚ್ಚರದಿಂದ ಇರಿಸಲು ಎಲ್ಲಾ ದೇವತೆಗಳು ರಾತ್ರಿಯಿಡೀ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರದಿಂದ ಇರಿಸುತ್ತಾರೆ. ಪವಿತ್ರದಿನವನ್ನೇ ಶಿವರಾತ್ರಿಯಾಗಿ ಆಚರಿಸಲಾಗುತ್ತದೆ.

ಶಿವರಾತ್ರಿಯ ಆಚರಣೆ ಹಿಂದಿರುವ ಹಲವು ಕಾರಣಗಳು: ಶಿವ ಹಾಗೂ ಪಾರ್ವತಿ ವಿವಾಹವಾದ ದಿನವನ್ನು ಶಿವರಾತ್ರಿಯಾಗಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಶಿವನು ಮೊಟ್ಟಮೊದಲ ಬಾರಿಗೆ ತಾಂಡವ ನೃತ್ಯ ಮಾಡಿದ ದಿನವನ್ನೇ ಮಾಹಾ ಶಿವರಾತ್ರಿ ಎಂದೂ ಹೇಳಲಾಗುತ್ತದೆ. ಇನ್ನು ಶಿವನು ಮೊದಲಬಾರಿಗೆ ಲಿಂಗಾವತಾರ ತಾಳಿದ ದಿನನ್ನೇ ಶಿವರಾತ್ರಿಯಾಗಿ ಆಚರಿಸಿ, ದಿನ ಶಿವ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.


ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

 ► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author