ಮಹಾಶಿವರಾತ್ರಿಯ ಜಾಗರಣೆ ಮಹತ್ವ..

ಮಹಾಶಿವರಾತ್ರಿಯ ಜಾಗರಣೆ ಮಹತ್ವ..

ಮಹಾಶಿವರಾತ್ರಿ ಹಬ್ಬ ಎಂದರೆ ಮೊದಲು ನೆನಪಾಗೋದು ಉಪವಾಸ ಮತ್ತು ಜಾಗರಣೆ. ಹಬ್ಬದಂದು ಜಾಗರಣೆ ಏಕೆ ಮಾಡಬೇಕು, ಜಾಗರಣೆ ಮಾಡಲು ಕಾರಣವೇನು, ಇದರ ಮಹತ್ವವೇನು ಅನ್ನೋದನ್ನ ತಿಳಿಯೋಣ.

ಮಾಘಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಸೃಷ್ಟಿ, ಸ್ಥಿತಿ, ಲಯಗಳ ಕಾರಣಕರ್ತ ಶಿವನನ್ನು ಪೂಜಿಸಿ ಆರಾಧಿಸಲಾಗುತ್ತದೆ. ಇಡೀ ರಾತ್ರಿ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಅಷ್ಟೇ ಅಲ್ಲ ಭಕ್ತರೆಲ್ಲರೂ ಇಡೀ ರಾತ್ರಿ ಜಾಗರಣೆಯಿದ್ದು ಶಿವನನ್ನು ಆರಾಧಿಸುತ್ತಾರೆ.

ಜಾಗರಣೆ ಎಂದರೆ ಜಾಗೃತಿ: ರಾತ್ರಿ ಎಂಬುದು ತಮೋಗುಣದ ಪ್ರತೀಕವಾಗಿದೆ. ಆಲಸ್ಯ ನಿದ್ರೆ, ಅಹಂಕಾರ ಅಜ್ಞಾನಗಳ ದ್ಯೋತಕ ನಿಶೆ. ರಾತ್ರಿವೇಳೆ ನಿದ್ರಿಸದೆ ಜಾಗೃತರಾಗಿರಬೇಕು ಎಂದರೆ ಎಲ್ಲಾ ವಿಷಯಗಳಿಂದಲೂ ಜಾಗೃತರಾಗಿರಬೇಕು ಎಂಬಂರ್ಥ.

ಅಜ್ಞಾನದ ಸಂಕೇತ: ರಾತ್ರಿ ಅಜ್ಞಾನದ ಸಂಕೇತ. ರಾತ್ರಿವೇಳೆ ನಿದ್ರಿಸದೆ ಎಚ್ಚರದಿಂದ ಇರುವುದು ಜ್ಞಾನದೆಡೆಗೆ ಹೋಗುವ ಸಂಕೇತವಾಗಿದೆ. ಹೀಗಾಗಿ ಶಿವರಾತ್ರಿಯದಿನದಂದು ರಾತ್ರಿವೇಳೆ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೋಗುವುದು ಎಂದು ಹೇಳಲಾಗುತ್ತದೆ.

ಮನಸ್ಸು ನಿಯಂತ್ರಣದಲ್ಲಿರಬೇಕು: ಇನ್ನು ಇತ್ತೀಚೆಗೆ ಹೆಚ್ಚು ಜನ ಜಾಗರಣೆಯಿರುತ್ತಾರೆ. ಆದರೆ ಕೆಲವರು ರಾತ್ರಿವೇಳೆ ಮೋಜು-ಮಸ್ತಿಯಲ್ಲಿ ತೊಡಗಿರುತ್ತಾರೆ. ಶಿವರಾತ್ರಿಯಂದು ಜಾಗರಣೆಯಿದ್ದಾಗ ಶಿವನ ಆರಾಧನೆ ಮಾಡಬೇಕಾಗುತ್ತದೆ. ಧ್ಯಾನದ ಮುಖಾಂತರ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಿವನೆಡೆಗೆ ಸಾಗಬೇಕು.

ಶಿವಪಾರ್ವತಿ ವಿವಾಹವಾದ ದಿನ: ಶಿವನಿಗೂ ಪಾರ್ವತಿಗೂ ಮಧ್ಯರಾತ್ರಿಯಂದು ವಿವಾಹವಾಗುತ್ತದೆ. ದಿನದಂದು ಮೂರು ಲೋಕಗಳೂ ಜಾಗರಣೆ ಮಾಡಿರುತ್ತವೆ. ಅಲ್ಲದೆ ವರ್ಷವಿಡೀ ನಮ್ಮನ್ನು ಕಾಯುವ ಶಿವನನ್ನು ಒಂದು ದಿನವಾದರೂ ನಾವು ಕಾಯಬೇಕು ಎಂಬ ನಂಬಿಕೆಯಿದೆ.

ಭಕ್ತಿ ಭಾವದಿಂದ ಸ್ವಾಗತ: ಶಿವರಾತ್ರಿಯಂದು ಭೂ ಲೋಕಕ್ಕೆ ಆಗಮಿಸುವ ಶಿವಪಾರ್ವತಿಯನ್ನು ಭಕ್ತಿ ಭಾವದಿಂದ ಸ್ವಾಗತಿಸಿ, ಆರಾಧಿಸುವ ಸಲುವಾಗಿ ಜಗವೆಲ್ಲ ನಿದ್ರಿಸದೆ ಶಿವನ ಆರಾಧನೆಯಲ್ಲಿ ತಲ್ಲೀನರಾಗಿರುತ್ತಾರೆ.


ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author