ಮೋರೆಗಾಂವ್ ನ ಮಯೂರೇಶ್ವನ ಬಗ್ಗೆ ಗೊತ್ತಿದ್ಯಾ?

ಇಲ್ಲಿದೆ ಬ್ರಹ್ಮ ವಜ್ರಗಳಿಂದ ಪ್ರತಿಷ್ಠಾಪಿಸಿದ ಗಣೇಶನ ವಿಗ್ರಹ ..

ಮಹಾರಾಷ್ಟ್ರದ ಅಷ್ಟವಿನಾಯಕ ಕ್ಷೇತ್ರಗಳ ಪೈಕಿ ಮೊದಲನೇಯದ್ದು ಮೋರೆಗಾಂವ್ ನ ಮಯೂರೇಶ್ವರ. ಆ ದೇವಾಲಯದ ವಿಶೇಷತೆ ಏನು? ಇಲ್ಲಿ ಗಣಪತಿಗೆ ಯಾವೆಲ್ಲಾ ಪೂಜೆಗಳನ್ನು ಮಾಡಲಾಗುತ್ತೆ? ಇಲ್ಲಿದೆ ನೋಡಿ ವಿವರ.

ಪುಣೆ ಜಿಲ್ಲೆಯ ಬಾರಾಮತಿ ತಾಲ್ಲೂಕಿನ ಕೃಷ್ಣಾ ನದಿಯ ದಂಡೆಯಮೇಲೆ ಕಟ್ಟಿರುವ ಈ ದೇವಾಲಯ. ಪುರಾಣದ ಪ್ರಕಾರ ಗೌರಿ ಪುತ್ರನಾದ ಗಣಪತಿಯು ಮಯೂರ ವಾಹನವನ್ನೇರಿ ಈ ಸ್ಥಳಕ್ಕೆ ಬಂದು ಇಲ್ಲೇ ಸಿಂಧುರಾಸುರ ನೆಂಬ ರಾಕ್ಷಸನನ್ನು ಸಂಹಾರ ಮಾಡಿದ್ದಾನೆ.

ಪೌರಾಣಿಕ ಪ್ರಸಂಗಗಳ ಪ್ರಕಾರ ಸಿಂಧುರಾಸುರನು ಪದೇ ಪದೇ ಇಲ್ಲಿನ ಗಣೇಶ ವಿಗ್ರಹದ ಮೇಲೆ ದಾಳಿ ಮಾಡಲು, ಸ್ವತಃ ಬ್ರಹ್ಮನೇ ಆ ವಿಗ್ರಹವನ್ನು ಮತ್ತೆ ಮತ್ತೆ ಪ್ರತಿಷ್ಠಾಪಿಸುತ್ತಿದ್ದನಂತೆ. 

ಬ್ರಹ್ಮ ದೇವರಿಂದ ಪ್ರತಿಷ್ಠಿತವಾಗಿದ್ದ ಆ ವಿಗ್ರಹ ವಜ್ರ ಮುಂತಾದ ಹರಳುಗಳಿಂದ ಮಾಡಲಾಗಿತ್ತೆಂದು, ಪಾಂಡವರು ತಮ್ಮ ವನವಾಸ ಕಾಲದಲ್ಲಿ ಇಲ್ಲಿಗೆ ಭೇಟಿ ಇತ್ತು ಆ ವಿಗ್ರಹವನ್ನು ತಾಮ್ರದ ಹೊದಿಕೆಯಿಂದ ಸಂರಕ್ಷಿಸಿದ್ದರೆಂದು, ಈಗಿರುವ ಮೂಲ ವಿಗ್ರಹದ ಹಿಂದುಗಡೆ ಆ ವಿಗ್ರಹ ಸುರಕ್ಷಿತವಾಗಿ, ಈಗಲೂ ಇದೆಯೆಂದು ನಂಬಲಾಗಿದೆ.

ಗಣೇಶ ಮಂದಿರಗಳ ಎದುರಿಗೆ ಸಾಮಾನ್ಯವಾಗಿ ಮೂಷಿಕ ವಿಗ್ರಹಗಳನ್ನು ನೋಡಿರುತ್ತೇವೆ. ಆದರೆ ಇಲ್ಲಿನ ಗಣೇಶ ಮಂದಿರದ ಎದುರಿಗಿನ ನಂದಿ ವಿಗ್ರಹಕ್ಕೆ ಸೂಕ್ಷ್ಮ ಐತಿಹ್ಯವೇನು ಇಲ್ಲ. ಎಲ್ಲೋ ನಿರ್ಮಿಸುತ್ತಿದ್ದ ಶಿವ ದೇವಾಲಯಕ್ಕೆ ನಂದಿಯ ವಿಗ್ರಹವನ್ನು ಗಾಡಿಯಲ್ಲಿ ಕೊಂಡೊಯ್ಯುತ್ತಿರಲು ಆ ಗಾಡಿಯು ಈಗಿನ ದೇವಸ್ಥಾನದ ಮುಂದೆ ಮುರಿದು ಬಿದ್ದು ನಂದಿಯು ಕೆಳಗೆ ಬೀಳಲು, ಅನಂತರ ಅದನ್ನು ಯಾರಿಂದಲೂ ಕದಲಿಸಲು ಸಾಧ್ಯವಾಗದೆ ಅಲ್ಲೇ ಈಗಿರುವಂತೆಯೇ ನಂದಿ ವಿಗ್ರಹವನ್ನು ಬಿಟ್ಟು ಬಿಡಲಾಗಿದೆ. 

ದೇವಸ್ಥಾನದ ಮೇಲೆ ಪದೇ ಪದೇ ನಡೆಯುತ್ತಿದ ಮೊಘಲರ ಆಕ್ರಮಣವನ್ನು ಎದುರಿಸುವ ಸಲುವಾಗಿಯೇ ಈಗಿರುವ ಹಾಗೆ ಬಲಶಾಲಿಯಾದ ಹಾಗು ಎತ್ತರವಾದ ತಡೆಗೋಡೆಗಳನ್ನು ನಿರ್ಮಿಸಿರುವುದು. ಈಗಿನ ದೇವಳದ ನಿರ್ಮಾತೃಗಳು ಬೀದರ್ ಸುಲ್ತಾನರ ಆಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಘೋಳೆ ಎಂಬುವರು. ಸ್ಥಳೀಯ ಭಾಷೆಯಾದ ಮರಾಠಿಯಲ್ಲಿ ಮೋರ್ ಎಂದರೆ ನವಿಲು ಎಂದರ್ಥ. ಈ ಗ್ರಾಮವು ನವಿಲಿನ ಆಕಾರದಲ್ಲಿರುವುದರಿಂದಲೂ ಮತ್ತು ಹಿಂದೊಮ್ಮೆ ಈ ಸ್ಥಳದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗಿದ್ದರಿಂದಲೂ ಈ ಗ್ರಾಮಕ್ಕೆ ಮೋರೆಗಾಂವ್ ಎಂಬ ಹೆಸರು ಬಂದಿರಬಹುದೆಂದು ಊಹಿಸಲಾಗಿದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author