ಮೋರಿಸ್, ಸ್ಟೋಕ್ಸ್ ಬದಲಿಸ್ತಾರಾ ರಾಜಸ್ಥಾನದ ಲಕ್?

ಮೋರಿಸ್, ಸ್ಟೋಕ್ಸ್ ಬದಲಿಸ್ತಾರಾ ರಾಜಸ್ಥಾನದ ಲಕ್?

ಬರೋಬ್ಬರಿ 16.25 ಕೋಟಿ ರು. ಖರ್ಚು ಮಾಡಿ ಆಲ್ರೌಂಡರ್ ಕ್ರಿಸ್ ಮೋರಿಸ್‍ರನ್ನು ರಾಜಸ್ಥಾನ ಖರೀದಿಸಿದೆ. ಈ ಹಿಂದೆ ದುಬಾರಿ ಮೊತ್ತಕ್ಕೆ ಖರೀದಿಸಿದ್ದ ಬೆನ್ ಸ್ಟೋಕ್ಸ್ ಆಗೊಮ್ಮೆ ಈಗೊಮ್ಮೆ ಅಬ್ಬರಿಸಿದ್ದನ್ನು ಬಿಟ್ಟರೆ ಸ್ಥಿರ ಪ್ರದರ್ಶನ ತೋರಿಲ್ಲ. ಈ ಇಬ್ಬರು ದುಬಾರಿ ಆಲ್ರೌಂಡರ್ ಗಳ ಮೇಲೆ ಕ್ರಿಕೆಟ್ ಅಭಿಮಾನಿಗಳು ಈ ಬಾರಿ ಕಣ್ಣಿಟ್ಟಿದ್ದಾರೆ. 

ಸ್ಟ್ರೆಂಥ್: ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ರಾಜಸ್ಥಾನ ರಾಯಲ್ಸ್ ಈ ವರ್ಷ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಸಂಜು ಸ್ಯಾಮ್ಸನ್ ತಂಡವನ್ನು ಮುನ್ನಡೆಸಲಿದ್ದು, ಜೋಸ್ ಬಟ್ಲರ್, ಸ್ಟೋಕ್ಸ್, ಮೋರಿಸ್, ತೆವಾಟಿಯಾರಂತಹ ಘಟಾನುಘಟಿ ಆಟಗಾರರನ್ನು ತಂಡ ಹೊಂದಿದೆ. ಬ್ಯಾಟಿಂಗ್ ವಿಭಾಗದಲ್ಲಿ ರಾಯಲ್ಸ್ ಅತ್ಯಂತ ಬಲಿಷ್ಠವಾಗಿ ತೋರುತ್ತಿದೆ. ತಂಡದಿಂದ ದೊಡ್ಡ ಮೊತ್ತಗಳನ್ನು ನಿರೀಕ್ಷಿಸಬಹುದು. 

ವೀಕ್‍ನೆಸ್ : ವೇಗಿ ಜೋಫ್ರಾ ಆರ್ಚರ್ ಈ ಆವೃತ್ತಿಯಲ್ಲಿ ಆಡುವುದು ಅನುಮಾನ. ಇದು ತಂಡಕ್ಕೆ ಹಿನ್ನಡೆ ಉಂಟು ಮಾಡಲಿದೆ. ಜೊತೆಗೆ ಸ್ಯಾಮ್ಸನ್‍ಗೆ ನಾಯಕತ್ವದ ಅನುಭವ ಕಡಿಮೆ. ಅಲ್ಲದೇ ಬಹಳ ಆತುರದ ಆಟಗಾರ. ಹೀಗಾಗಿ ಸ್ಟೋಕ್ಸ್ ಹಾಗೂ ಮೋರಿಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಟಾಪ್ ಕ್ಲಾಸ್ ಆಟ ಆಡಬೇಕಿದೆ. ಮೋರಿಸ್ ಪದೇ ಪದೇ ಗಾಯಗೊಳ್ಳುವ ಆಟಗಾರ. ಇದು ಸಹ ರಾಯಲ್ಸ್ ಬಲ ಕುಗ್ಗಿಸಬಹುದು. 

ಬಲಿಷ್ಠ ಪ್ಲೇಯಿಂಗ್ ಇಲೆವೆನ್ : ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಮನನ್ ವೋಹ್ರಾ, ಸಂಜು ಸ್ಯಾಮ್ಸನ್, ಲಿಯಾಮ್ ಲಿವಿಂಗ್‍ಸ್ಟೋನ್, ಶಿವಂ ದುಬೆ, ಕ್ರಿಸ್ ಮೋರಿಸ್, ರಾಹುಲ್ ತೆವಾಟಿಯಾ, ಶ್ರೇಯಸ್ ಗೋಪಾಲ್, ರಿಯಾನ್ ಪರಾಗ್, ಜಯದೇವ್ ಉನಾದ್ಕತ್. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author