ಮಾಸ್ಕ್ ಕುರಿತು ನೀವು ತಿಳಿದಿರಬೇಕಾದ ವಿಷಯಗಳು

 

ಮಾಸ್ಕ್ಕುರಿತು ನೀವು ತಿಳಿದಿರಬೇಕಾದ ವಿಷಯಗಳು

mask up indiasource and pic credit: Times of India

ಪ್ರಪಂಚದಾದ್ಯಂತ ಕೊರೋನಾ ಸೋಂಕು ತೀವ್ರವಾಗಿ ಹರಡಲು ಆರಂಭವಾದಾಗಿನಿಂದಲೂ ಎಲ್ಲೆಡೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಧರಿಸುವುದರಿಂದ ಸೋಂಕಿನ ಅಪಾಯ ಬಹುತೇಕ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಭಾರತದಲ್ಲಿಯೂ ಫೇಸ್ ಮಾಸ್ಕ್ ಧರಿಸುವುದನ್ನು  ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನೀವು ಮನೆಯಿಂದ ಹೊರಗೆ ಹೋಗಲು ಬಯಸುತ್ತಿದ್ದರೆ ಫೇಸ್ ಮಾಸ್ಕ್ ಧರಿಸಿಯೇ ಹೊರಗೆ ಹೋಗಬೇಕು.

wear masksource and pic credit: https://cen.acs.org

ಕೋವಿಡ್-19 ಸೋಂಕು ಆರಂಭವಾದಾಗಿನಿಂದಲೂ ಮಾಸ್ಕ್‍ ಗಳಿಗೆ ಬೇಡಿಕೆ ಇನ್ನಿಲ್ಲದೆ ಹೆಚ್ಚಿದೆ. ಆರಂಭದಲ್ಲಿ ಎಲ್ಲರೂ ಸರ್ಜಿಕಲ್ ಮಾಸ್ಕ್‍ ಗಳನ್ನೇ ಬಳಸುತ್ತಿದ್ದರು. ಆ ನಂತರ ಇನ್ನಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಸಲುವಾಗಿ N95 ಮಾಸ್ಕ್‍ ಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ. ಮಾಸ್ಕ್‍ ಕೊಳ್ಳಲು ಸಾಧ್ಯವಿಲ್ಲದವರು ಕರವಸ್ತ್ರ, ಶಾಲ್‍ ಗಳನ್ನು ಮುಖಕ್ಕೆ ಕಟ್ಟಿಕೊಳ್ಳುತ್ತಿದ್ದಾರೆ. ಜೀವಭಯದಿಂದ, ಸರ್ಕಾರ ಮಾಸ್ಕ್‍ ಕಡ್ಡಾಯಗೊಳಿಸಿದೆ, ಧರಿಸದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎನ್ನುವ ಭಯದಿಂದ ಎಲ್ಲರೂ ಮಾಸ್ಕ್‍ ಏನೋ ಧರಿಸುತ್ತಾರೆ. ಆದರೆ ನೀವು ಮಾಸ್ಕ್ ಬಗ್ಗೆ ತಿಳಿದಿರದ ಹಲವು ವಿಷಯಗಳಿವೆ.

ಮಾಸ್ಕ್ ಮತ್ತು ಅಂತರ distancesource and pic credit: https://www.insurancejournal.com

 

 

ಸಾರ್ವಜನಿಕ ಪ್ರದೇಶಗಳಲ್ಲಿ ಜನಜಂಗುಳಿ ಇರುವಲ್ಲಿ ನೀವು ಓಡಾಡುತ್ತಿದ್ದರೆ, ನೀವು ಕಡ್ಡಾಯವಾಗಿಮಾಸ್ಕ್ ಧರಿಸಬೇಕು.ಧರಿಸಿದ್ದರೂ ಬೇರೊಬ್ಬ ವ್ಯಕ್ತಿಯಿಂದ ಕನಿಷ್ಠ ಐದು ಅಡಿ ದೂರದಲ್ಲಿರಬೇಕು. ಎರಡನೇ ಅಲೆಯಲ್ಲಿ ಹಬ್ಬುತ್ತಿರುವ ಮ್ಯುಟೆಂಟ್ ವೈರಸ್, ವ್ಯಕ್ತಿಯು ಕೆಮ್ಮುವಾಗ, ಸೀನುವಾಗ, ಉಗುಳುವಾಗ ಕಣಗಳ ಮೂಲಕ ಹೊರಬಂದು ಗಾಳಿಯಲ್ಲಿ ಹಬ್ಬುತ್ತದೆ. ನೆಲಕ್ಕೆ ಬಿದ್ದರೆ ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆದರೆ ಗಾಳಿಯಲ್ಲಿ ಹೋಗುವಾಗ ಉಸಿರಾಟದ ಮೂಲಕ ನಮ್ಮ ದೇಹವನ್ನು ಪ್ರವೇಶಿಬಹುದು. ಹೀಗಾಗಿ ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಪಾಡಿಕೊಳ್ಳುವುದು ಮುಖ್ಯ.

ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಾಗುವ ಮಾಸ್ಕ್

wear masksource and pic credit: https://www.cumanagement.com

ಮೆಡಿಕಲ್ ಅಥವಾ ಸರ್ಜಿಕಲ್ ಮಾಸ್ಕ್‍ ಮೂಗು ಮತ್ತು ಬಾಯಿಯ ಸುತ್ತ ಸಡಿಲವಾಗಿ ಹೊಂದಿಕೊಳ್ಳುತ್ತದೆ. ತೆಳು ಪದರದಂತಿರುವ ಈ ಮಾಸ್ಕ್‍ ಧರಿಸಲು ಕಂಫರ್ಟೆಬಲ್. ಆದರೆ ಆರೋಗ್ಯದ ದೃಷ್ಟಿಯಿಂದ ಅಷ್ಟು ಉತ್ತಮವಲ್ಲ. ಮೆಡಿಕಲ್ ಮಾಸ್ಕ್‍ ಗಾಳಿಯಲ್ಲಿ ಇರಬಹುದಾದ ಮಯ್ಕ್ರಾನ್ ಗಾತ್ರದ ಕಿರುಕೆಡುಕು ಕಣಗಳನ್ನು ಸೋಸುವ ಅಳವನ್ನು ಹೊಂದಿರುವುದಿಲ್ಲ. ಹಾಗಾಗಿ, ಇದನ್ನು ತೊಟ್ಟುಕೊಂಡವರು ಉಸಿರನ್ನು ಎಳೆದುಕೊಂಡಾಗ, ಗಾಳಿಯಲ್ಲಿ ಇರಬಹುದಾದ ಕಣಗಳು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸಬಹುದು.

sarjical masksource and pic credit: https://science.thewire.in

ಸರ್ಜಿಕಲ್ ಮಾಸ್ಕ್ಮೂಗು ಮತ್ತು ಬಾಯಿಯಿಂದ ಬರುವಎಂಜಲು, ಉಸಿರಿನ-ತೇವದಂತ ಹನಿಗಳು ಸುತ್ತ ಮುತ್ತಲಿನ ಮಂದಿಗೆ ತಗುಲದಂತೆ ತಡೆಯುತ್ತದೆ. ಆದರೆ, ವೈರಸ್‍ ನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಅಲ್ಲದೆ,ಇದು ಯೂಸ್ ಆಂಡ್ ಥ್ರೋ ಮಾಸ್ಕ್. ಹಾಗಾಗಿ ಒಂದು ಸಾರಿ ಬಳಸಿ ಮತ್ತೊಂದು ಸಾರಿ ಬಳಸಕೂಡದು. 

N95 ಮಾಸ್ಕ್n95 masksource and pic credit: https://www.businessinsider.in

ಇದನ್ನು ಸರಿಯಾಗಿ ಬಳಸಿದಲ್ಲಿ, ಗಾಳಿಯಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳು ಸೇರಿದಂತೆ, ಶೇಕಡಾ95%ರಷ್ಟು ಇದು ಕಿರುಕಣಗಳನ್ನು ಸೋಸುವ ಶಕ್ತಿ ಹೋಂದಿದೆ. 0.3 ಮಯ್ಕ್ರಾನ್ನಷ್ಟು ಸಣ್ಣ ಪ್ರಮಾಣದ ಕಣಗಳನ್ನು ಸಹ ಈ ಮಾಸ್ಕ್‍ ತಡೆಯುತ್ತದೆ. ಈ ಹಿಂದೆ ಈ N95 ಮಾಸ್ಕ್‍ ನ್ನು ಮರುಬಳಸಬಾರದೆಂಬ ನಿಯಮವಿತ್ತು.  ಆದರೆ ಹೆಚ್ಚುತ್ತಿರುವ ಕೋವಿಡ್‍-19 ಸೋಂಕಿನಿಂದಾಗಿ ಮಾಸ್ಕ್‍ ಗಳ ಕೊರತೆ ಉಂಟಾಗುತ್ತಿರುವುದರಿಂದ ಇಂಥಹಾ ಮಾಸ್ಕ್‍ ಗಳ ಮರುಬಳಕೆಗೆ ಅನುಮತಿ ನೀಡಲಾಗಿದೆ

n95 masksource and pic credit: google.com

ಆದರೆ ಒಂದುವೇಳೆ ನೀವೂ ಕೂಡ ಈ ರೀತಿಯ ಮಾಸ್ಕ್ ಗಳನ್ನು ಬಳಸುತ್ತಿದ್ದರೆ, ಅವುಗಳನ್ನು ಹೆಚ್ಚು ಹೊತ್ತು ಧರಿಸಬೇಡಿ. ಯಾಕೆಂದರೆ ಅವು ಹೆಚ್ಚು ಟೈಟಾಗಿ ಮುಖಕ್ಕೆ ಕೂರುವುದರಿಂದ ಉಸಿರಾಡಲು ಕಷ್ಟವಾದಂತೆ ಅನುಭವವಾಗುತ್ತದೆ, ಹೀಗಾಗಿಓಡಾಡುವಾಗ ಅಥವಾ  ವಾಯುವಿಹಾರ ಮಾಡುತ್ತಿರುವಾಗ N95 ಮಾಸ್ಕ್ ಗಳನ್ನು ತೆಗೆದು ಇಡಿ.  ಬದಲಿಗೆ ಮನೆಯಲ್ಲಿಯೇ ತಯಾರಿಸಲಾಗಿರುವ ಮಾಸ್ಕ್ ಗಳು ಹೆಚ್ಚು ಉತ್ತಮವಾಗಿರುತ್ತವೆ. ಏಕೆಂದರೆ ಅವುಗಳಿಂದ ಉಸಿರಾಟದ ತೊಂದರೆ ಉಂಟಾಗುವುದಿಲ್ಲ. 

ಮಾಸ್ಕ್ ಹೇಗೆ ಬಳಸಬೇಕು..?

wear masksource and pic credit: https://www.hackensackmeridianhealth.org

ಮಾಸ್ಕ್ ಬಳಸಿದ ಕೂಡಲೇ ಯಾವ ವೈರಸ್ಕೂಡಾ ನಂಗೇನೂ ಮಾಡಲು ಸಾಧ್ಯವಿಲ್ಲ. ಮಾಸ್ಕ್ ಧರಿಸುವಾಗ, ಧರಿಸಿದ ನಂತರ ಸರಿಯಾದ ಕ್ರಮವನ್ನು ಪಾಲಿಸಬೇಕಾಗದ ಅಗತ್ಯವಿದೆ. ಮಾಸ್ಕ್ ಧರಿಸುವ ಮುನ್ನ ಸೋಪು ನೀರಿನಿಂದ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಮೂಗು, ಬಾಯಿ ಸಂಪೂರ್ಣವಾಗಿ ಮುಚ್ಚುವಂತೆ ಮಾಸ್ಕ್ನ್ನು ಧರಿಸಬೇಕು. ಸೆಖೆಯ ಅನುಭವವಾಗುತ್ತಿದೆ, ಗಾಳಿ ಬರುತ್ತಿಲ್ಲ ಎಂದು ಮಾಸ್ಕ್ನ್ನು ಮೂಗಿನಿಂದ ಕೆಳಗಿಳಿಸಬಾರದು.remove masksource and pic credit: https://www.abmp.com

ಮುಸುಕನ್ನು ಪದೇದೇ ಕೈಯಿಂದ ಮುಟ್ಟಬಾರದು. ಹಾಗೇನಾದರೂ ಸರಿಪಡಿಸಿಕೊಳ್ಳಲುಮಾಸ್ಕ್ ಮುಟ್ಟಿದ್ದೇ ಆದರೆ, ಕೈಯನ್ನು ಸೋಪು ನೀರು ಹಾಕಿ ತೊಳೆದುಕೊಳ್ಳಬೇಕು. ಮುಸುಕು ತೇವವಾದ ಅನುಭವವಾದಕೂಡಲೇ, ಅದನ್ನು ತೆಗೆದು ಬೇರೆ ಮಾಸ್ಕ್‍ ನ್ನು ತೊಡಬೇಕು. ಮಾಸ್ಕ್ ನ್ನು ತೆಗೆಯುವಾಗ ಮುಂದಿನ ಬಾಗವನ್ನು ಮುಟ್ಟದೇ ಹಿಂದಿನಿಂದ ತೆಗೆಯಬೇಕು. ತೆಗೆದ ಕೂಡಲೇ ಕೈ ಅನ್ನು ಸೋಪು ನೀರಿನಿಂದ ತೊಳೆದುಕೊಳ್ಳಬೇಕು.ಒಂದೇ ಬಳಕೆಗೆಂದು ತಯಾರಿಸಲಾದ ಮುಸುಕನ್ನು ಒಂದಕ್ಕಿಂತ ಹೆಚ್ಚಿನ ಸಲ ಬಳಸುವಂತಿಲ್ಲ.

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author