ಮೇ.26.2021ರ ಚಂದ್ರಗ್ರಹಣ ಯಾವ ರಾಶಿಯವರಿಗೆ ಶುಭ..? ಯಾವ ರಾಶಿಯವರಿಗೆ ಅಶುಭ..?

ಮೇ.26.2021ರ ಚಂದ್ರಗ್ರಹಣ ಯಾವ ರಾಶಿಯವರಿಗೆ ಶುಭ..ಯಾವ ರಾಶಿಯವರಿಗೆ ಅಶುಭ..?

ಮೇ,262021ರಂದು ವರ್ಷದ ಮೊದಲ ಚಂದ್ರಗ್ರಹಣ ನಡೆಯಲಿದೆ. ಜ್ಯೋತಿಷ್ಯದಲ್ಲಿ ಗ್ರಹಣದ ಕುರಿತಾಗಿ ಹಲವಾರು ಲೆಕ್ಕಾಚಾರಗಳನ್ನು ಹಾಕಲಾಗುತ್ತದೆ.. ಗ್ರಹಣದ ಪ್ರಭಾವ ದೇಶದ ಮೇಲೆ, ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗುತ್ತದೆ. ವೈದಿಕ ಶಾಸ್ತ್ರ ಹೇಳುವಂತೆ ಪ್ರತಿ ಗ್ರಹಣವೂ ಪ್ರತಿ ರಾಶಿಯ ಮೇಲೆ ಒಳ್ಳೆಯದು ಅಥವಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಕೆಲ ರಾಶಿಯ ಮೇಲೆ ಗ್ರಹಣದ ಪ್ರಭಾವ ಒಳ್ಳೆಯದಿದ್ದರೆ, ಇನ್ನು ಕೆಲವು ರಾಶಿಯ ಮೇಲೆ ಅದು ಕೆಟ್ಟ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ವಿಶ್ವಾಸ ಇರುವವರು ಇವುಗಳನ್ನು ಬಲವಾಗಿ ನಂಬುತ್ತಾರೆ.

zodiac signssource and pic credit: https://hashtaggedpodcast.com

ಸೂಪರ್ ಮೂನ್‍ನಿಂದ ಗ್ರಹಗತಿ ಬದಲಾವಣೆಗೆ ಅನುಸಾರವಾಗಿ ದೇಶಗಳಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಆರ್ಥಿಕ ಸಮಸ್ಯೆ, ಚಂಡಮಾರುತ ಸಮಸ್ಯೆ, ರೋಗ-ರುಜಿನಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ. ಅದರಂತೆಯೇ ಈ ಕೆಂಪು ಚಂದ್ರಗ್ರಹಣದಿಂದ ಕೆಲವು ರಾಶಿಯವರಿಗೆ ಶುಭವಾದರೆ, ಇನ್ನು ಕೆಲವರಿಗೆ ಅಶುಭವಾಗುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಯಾವ ರಾಶಿಯ ಮೇಲೆ ಮೇ.26.2021ರ ಚಂದ್ರಗ್ರಹಣ ಯಾವ ರೀತಿಯಾಗಿ ಪ್ರಭಾವ ಬೀರುತ್ತದೆ ಎಂದು ತಿಳಿಯೋಣ..

ಮೇಷ ರಾಶಿ

ariessource and pic credit: https://vocal.media

ಮೇಷ ರಾಶಿಯವರಿಗೆ ಈ ಗ್ರಹಣ ತಮ್ಮ ಸಾಮರ್ಥ್ಯದ ಅರಿವು ಮೂಡಿಸುತ್ತದೆ. ನಮ್ಮಿಂದ ಏನೂ ಸಾಧ್ಯವಿಲ್ಲ ಎನ್ನುವವರಿಗೆ ಹೊಸತನ್ನೇನಾದರೂ ಮಾಡುವ ಛಲ ನೀಡುತ್ತದೆ. ಉತ್ಸಾಹ ಒದಗಿಸುತ್ತದೆ. ನಿಮ್ಮಿಂದ ಯಾವುದೇ ಕೆಲಸವೂ ಅಸಾಧ್ಯವಲ್ಲ ಎಂಬ ಭಾವನೆಯನ್ನು ಈ ಚಂದ್ರ ಗ್ರಹಣ ಹೋಗಲಾಡಿಸುತ್ತದೆ. ಹೀಗಾಗಿ ನಾಳೆ ಮೇಷ ರಾಶಿಯವರು ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡಿ. ನಿಮ್ಮ ಮನಸ್ಸಲ್ಲಿರುವ ಯೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಿ.

ವೃಷಭ ರಾಶಿ

taurassource and pic credit: https://www.deccanherald.com

ವೃಷಭ ರಾಶಿಯವರ ವೈವಾಹಿಕ ಜೀವನದಲ್ಲಿ ಈ ಗ್ರಹಣದಿಂದ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಆರ್ಥಿಕ ಸಮಸ್ಯೆ ತಲೆದೋರುವ ಸಾಧ್ಯತೆಯೂ ಅಧಿಕವಾಗಿದೆ. ಹೀಗಿದ್ದೂ ಈ ರಾಶಿಯವರು ಎಲ್ಲಾ ಸಮಸ್ಯೆಗಳನ್ನು ದಾಟಿ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಾರೆ. ಈ ರಾಶಿಯವರು ಹನುಮಾನ್ ಚಾಲೀಸ್ ಪಠಿಸುವುದು ಉತ್ತಮ.

ಮಿಥುನ ರಾಶಿ

gemini
source and pic credit: https://stylecaster.com

ಮಿಥುನ ರಾಶಿಯವರಿಗೆ ಈ ಗ್ರಹಣ ಪ್ರಯೋಜನಕಾರಿಯಾಗಿದೆ. ಗ್ರಹಣದ ಬಳಿಕ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಿ, ಆತ್ಮವಿಶ್ವಾಸ ಹೆಚ್ಚುವುದು. ಕೆಲವೊಂದು ಅನಿರೀಕ್ಷಿತ ಘಟನೆಗಳು ಸಂಭವಿಸುವ ಸಾಧ್ಯತೆಯೂ ಇದೆ. ಹೀಗಾಗಿ ಈ ರಾಶಿಯವರು ಚಂದ್ರಬೀಜ ಮಂತ್ರವನ್ನು ಪಠಿಸಿ. ಜತೆಗೆ ಮಹಾ ಮೃತ್ಯುಂಜಯ ಮಂತ್ರವನ್ನು ಹೇಳಲು ಮರೆಯದಿರಿ.

ಕರ್ಕ ರಾಶಿ

karka rashisource and pic credit: https://stylecaster.com

ಈ ರಾಶಿಯವರಿಗೆ ಗ್ರಹಣದಿಂದ ಅನಾರೋಗ್ಯ ಕಾಡುವ ಸಾಧ್ಯತೆಯಿದೆ. ಹೀಗಾಗಿ ಆರೋಗ್ಯ ಸಂಬಂಧಿತ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ. ಸದಾಶಿವನ ಪೂಜೆ ಮಾಡಿ. ಬಡವರಿಗೆ ಅಕ್ಕಿಯನ್ನು ದಾನ ಮಾಡಿ. ಕರ್ಕ ರಾಶಿಯವರಿಗೆ ಉದ್ಯಮ, ವ್ಯವಹಾರದಲ್ಲಿ ಒಳ್ಳೆಯ ಫಲಿತಾಂಶ ಸಿಗುವುದು.

ಸಿಂಹ ರಾಶಿ

leo zodiacsource and pic credit: planet guide

ಸಿಂಹ ರಾಶಿಯವರಿಗೆ ಸ್ವಲ್ಪ ಆರ್ಥಿಕ ನಷ್ಟ ಉಂಟಾದರೂ ನಂತರ ವ್ಯವಹಾರದಲ್ಲಿ ಯಶಸ್ಸು ಬರುವುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ಬದಲಾವಣೆ ಮಾಡಲು ಹೋಗಬೇಡಿ. ಪ್ರೀತಿಯ ವಿಷಯದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು. ಈ ರಾಶಿಯವರು ಶ್ರೀ ಆದಿತ್ಯ ಹೃದಯಂ ಸ್ತೋತ್ರ ಪಠಿಸಿ. ಗೋಧಿಯನ್ನು ದಾನ ಮಾಡಿ.

ಕನ್ಯಾ ರಾಶಿ

virgosource and pic credit: https://astrokapoor.com

ಕನ್ಯಾರಾಶಿಯವರಿಗೆ ಈ ಗ್ರಹಣದಿಂದ ಅದೃಷ್ಟ ಕೂಡಿಬರಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಲಭಿಸುತ್ತಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ಸಮಸ್ಯೆಗಳು ಕಂಡು ಬಂದರೂ ನೀವು ಹೆದರಿ ಓಡಿಹೋಗುವ ಬದಲು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ. ಭಾವುಕ ಸನ್ನಿವೇಶಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರಬಹುದು. ಈ ರಾಶಿಯವರಲ್ಲಿ ಕೆಲವೊಬ್ಬರಿಗೆ ಹಣಕಾಸಿನ ಸಮಸ್ಯೆಯೂ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ವಿಷ್ಣುವಿನ ಪೂಜೆಯನ್ನು ಮಾಡುವುದು ಉತ್ತಮ.

ತುಲಾ ರಾಶಿ

librasource and pic credit: https://blog.prepscholar.com

ತುಲಾ ರಾಶಿಯ ಪ್ರೇಮಿಗಳಿಗೆ ಒಳ್ಳೆಯ ಸಮಯ. ಅನಾರೋಗ್ಯ ಕಾಡುವ ಸಾಧ್ಯತೆಯಿದೆ. ಹಣಕಾಸಿನ ಸಮಸ್ಯೆ ಕಂಡುಬರಬಹುದು. ಹಣದ ಹೂಡಿಕೆ ಮಾಡುವುದು ಅಥವಾ ಸಾಲ ನೀಡುವುದು ಮಾಡಬೇಡಿ. ಶ್ರೀ ಸೂಕ್ತವನ್ನು ಓದಿ. ಬಡವರಿಗೆ ಆಹಾರವನ್ನು ದಾನ ಮಾಡಿ.

ವೃಶ್ಚಿಕ ರಾಶಿ

scorpiosource and pic credit: India tv

ವೃಶ್ಚಿಕ ರಾಶಿಯವರ ಜೀವನದಲ್ಲಿ ಈ ಗ್ರಹಣದಿಂದ ಮಹತ್ತರ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ನೀವು ಹಳೆಯ ವಿಷಯಗಳಿಂದ ಹೊರಬಂದು ಹೊಸ ವಿಷಯಗಳತ್ತ ಗಮನಹರಿಸುವಿರಿ. ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಡೆ ಗಮನಹರಿಸಿ. ಆರ್ಥಿಕ ನಷ್ಟದ ಸಾಧ್ಯತೆ ಇದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನಿಯಮಿತವಾಗಿ ಧ್ಯಾನ ಮಾಡಿ. ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ. ಹನುಮಾನ್ ಮಂತ್ರ ಜಪಿಸಿ.

ಧನು ರಾಶಿ

sagittariussource and pic credit: google.com

ಧನು ರಾಶಿಯವರಿಗೆ ನಿದ್ರಾಹೀನತೆ ಅಥವಾ ಆರೋಗ್ಯ ಸಂಬಂಧಿತ ಸಮಸ್ಯೆ ಕಾಡಬಹುದು ಆರ್ಥಿಕ ನಷ್ಟದ ಸಾಧ್ಯತೆಯೂ ಇದೆ. ಪ್ರೀತಿಯ ವಿಷಯದಲ್ಲಿ ದ್ವಂದಗಳು ಉಂಟಾಗಲಿದ್ದು, ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು. ಈ ರಾಶಿಯವರು ಶ್ರೀ ಸೂಕ್ತವನ್ನು ಪಠಿಸಿ, ಆಧ್ಯಾತ್ಮಿಕ ಪುಸ್ತಕಗಳನ್ನು ದಾನ ಮಾಡಿದರೆ ಒಳ್ಳೆಯದು.

ಮಕರ ರಾಶಿ

capricornsource and pic credit: flickonclick

ಈ ರಾಶಿಯವರಿಗೆ ಅನಿರೀಕ್ಷಿತ ಪ್ರೀತಿ ಸಿಗುವುದು. ಆರ್ಥಿಕವಾಗಿ ಪರಿಸ್ಥಿತಿ ಸುಧಾರಿಸಿ, ಯಶಸ್ಸು ಲಭಿಸುವುದು, ಸಂಬಂಧದಲ್ಲಿ ಕೆಲ ಸಮಸ್ಯೆಗಳು ಉಂಟಾಗಬಹುದು. ತಾಳ್ಮೆಯಿಂದ ಇರಿ, ಧ್ಯಾನ ಮಾಡಿ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಹನುಮಾನ್‍ ನ್ನು ಭಜಿಸಿ.

ಕುಂಭ ರಾಶಿ

Aquariussource and pic credit: https://www.almanac.com

ವ್ಯವಹಾರ, ಉದ್ಯಮದಲ್ಲಿ ಏರಿಳಿತ ಕಂಡು ಬರಬಹುದು. ಕೆಲಸದ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು. ಆರೋಗ್ಯವನ್ನು ಜೋಪಾನವಾಗಿ ನೋಡಿಕೊಳ್ಳಿ. ದೂರ ಪ್ರಯಾಣ ಮಾಡಬೇಡಿ.  ಕುಟುಂಬ ಸದಸ್ಯರು, ಸ್ನೇಹಿತರಿಂದ ಕೆಲಸದ ಬಗ್ಗೆ ಸಿಗುವ ಪ್ರಶಂಸೆ ನಿಮಗೆ ಪಾಸಿಟಿವ್ ಎನರ್ಜಿ ತಂದುಕೊಡುತ್ತದೆ.ಕೆಲಸದಲ್ಲಿ ಮತ್ತಷ್ಟು ಪರಿಶ್ರಮ ವಹಿಸಿ ಕೆಲಸ ಮಾಡಿ ಯಶಸ್ಸು ಗಳಿಸುತ್ತೀರಿ.


ಮೀನ ರಾಶಿ

Piscessource and pic credit: https://www.deccanherald.com

ಪ್ರತಿ ಬಾರಿ ಪರಿಸ್ಥಿತಿಯನ್ನು ಎದುರಿಸಲಾಗದೆ ಅಸಹಾಯಕರಾಗುವ ನೀವು ಹೆಚ್ಚು ಮಾನಸಿಕವಾಗಿ ಹೆಚ್ಚು ಬಲಿಷ್ಠರಾಗುವಿರಿ. ಧೈರ್ಯದಿಂದ ಸಮಸ್ಯೆಯನ್ನು ಎದುರಿಸುವಿರಿ. ಸಮಸ್ಯೆಗಳಿಂದ ದೂರ ಹೋಗುವ ಬದಲು ಪರಿಸ್ಥಿತಿಯನ್ನು ನಿಭಾಯಿಸುವಿರಿ. ಈ ರಾಶಿಯವರು ತಾಯಿ ಮತ್ತು ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ವಿಷ್ಣು ಸಹಸ್ರನಾಮವನ್ನು ಪಠಿಸಿ ಮತ್ತು ಕಡಲೆಯನ್ನು ದಾನ ಮಾಡಿ.

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author