ಯಂಗ್ ಆಗಿ ಕಾಣಬೇಕೆ..ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ ನೋಡಿ..!

ಯಂಗ್ ಆಗಿ ಕಾಣಬೇಕೆ..ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ ನೋಡಿ..!

look youngsource and pic credit: https://www.rd.com

ಸೆಲೆಬ್ರಿಟಿಗಳನ್ನು ನೋಡಿರಬಹುದು 50 ಕಳೆದರೂ ಇನ್ನು 25ರ ಯುವಕ-ಯುವತಿಯರಂತೆ ಮಿಂಚುತ್ತಿರುತ್ತಾರೆ. ನೋಡುವವರು ಅವರಿಗೇನು ಕೈ, ಕಾಲಿಗೊಂದು ಸ್ಪೆಷಲಿಸ್ಟ್ ಡಾಕ್ಟರ್ಸ್ ಇರ್ತಾರೆ, ಮೇಕಪ್ ಮ್ಯಾನ್‍ ಇರ್ತಾರೆ ಎನ್ನುತ್ತಾರೆ. ಆದರೆ, ಇದು ನಿಜವಾದರೂ ಕೂಡಾ ಸೌಂದರ್ಯದ ವಿಷಯದಲ್ಲಿ ಕೆಲವೊಂದು ಶಿಸ್ತು ರೂಢಿಸಿಕೊಂಡರೆ ನೀವೂ ಕೂಡ ಯೌವನ ಕಳೆಗುಂದದಂತೆ ನಿಮ್ಮ ಸೌಂದರ್ಯದ ರಕ್ಷಣೆ ಮಾಡಬಹುದು.

ತರಕಾರಿ, ಹಣ್ಣು ಹೆಚ್ಚು ಸೇವಿಸಿ

vegetablehttps://www.foodnavigator.com

ಯಂಗ್ ಕಾಣಿಸುವುದರಲ್ಲಿ, ವಯಸ್ಸಾದಂತೆ ಕಾಣಿಸುವುದರಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಜಂಕ್ ಫುಡ್, ಬೇಕರಿ ಐಟಮ್ ಗಳನ್ನು ಹೆಚ್ಚು ಸೇವಿಸುವುದರಿಂದ ಮುಖದ ಕಾಂತಿ ಬೇಗನೇ ಕಳೆಗುಂದುತ್ತದೆ. ಇದರ ಬದಲು ತರಕಾರಿ, ಹಣ್ಣುಗಳ ಸೇವನೆಯನ್ನು ಹೆಚ್ಚು ಮಾಡುವುದು ಉತ್ತಮ. ಹಸಿ, ಸೊಪ್ಪು ತರಕಾರಿ, ಹಣ್ಣುಗಳಲ್ಲಿ ಹೆಚ್ಚು ಪ್ರೊಟೀನ್ ಇರುವುದರಿಂದ ಇದು ಚರ್ಮ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.ಹಣ್ಣುಗಳಲ್ಲಿ ದ್ರಾಕ್ಷಿ ಹಣ್ಣು ಸೇವಿಸುವುದು ಅತ್ಯುತ್ತಮ. ಇದು ಚರ್ಮಕ್ಕೆ ಹೆಚ್ಚು ಗ್ಲೋ ಕೊಡುತ್ತದೆ.

ಸಕ್ಕರೆ ಬದಲು ಬೆಲ್ಲ ಬಳಸಿ

sugarsource and pic credit: https://www.rd.com

ಬೇಗ ವಯಸ್ಸಾದಂತೆ ಕಾಣಲು ಸಕ್ಕರೆ ಸೇವನೆಯೂ ಒಂದು ಮುಖ್ಯ ಕಾರಣ. ಸಕ್ಕರೆಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದಷ್ಟೂ ಮುಖದಲ್ಲಿ ನೆರಿಗೆ ಬೇಗನೆ ಬೀಳುವುದು ಎಂಬುವುದು ನೆನಪಿರಲಿ.ಸಕ್ಕರೆ ಬಳಸಿ ಮಾಡುವ ಸ್ವೀಟ್ಸ್, ಕೇಕ್ಸ್, ಪದಾರ್ಥಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ. ಜ್ಯೂಸ್‌ಗೆ ಸಕ್ಕರೆ ಹಾಕದೆ ಕುಡಿಯಿರಿ, ಟೀ, ಕಾಫಿಗೂ ಸಕ್ಕರೆ ಕಡಿಮೆ ಮಾಡಿ, ಸಕ್ಕರೆ ಬದಲಿಗೆ ಬೆಲ್ಲ ಬಳಸುವುದು ಒಳ್ಳೆಯದು.ಆಹಾರದಲ್ಲಿ ಹೆಚ್ಚು ಉಪ್ಪು ಬಳಸುವುದನ್ನೂ ಆದಷ್ಟು ಕಡಿಮೆ ಮಾಡಬೇಕು.

ಬಿಸಿಲಿನಲ್ಲಿ ತ್ವಚೆಯ ರಕ್ಷಣೆ ಮಾಡಿ

sun and skin
source and pic credit: https://www.allure.com

ಬಿಸಿಲಿನಲ್ಲಿ ಹೆಚ್ಚು ಓಡಾಡಿದರೆ ಮುಖದ ಹೊಳಪು ,ಮಾಯವಾಗಿ ವಯಸ್ಸಾದಂತೆ ಕಾಣುತ್ತದೆ. ಅಧಿಕ ಬಿಸಿಲಿನಲ್ಲಿ ಓಡಾಡಿದರೆ ನೆರಿಗೆ ಬೇಗನೆ ಬೀಳುವುದು. ಹೀಗಾಗಿ ಬಿಸಿಲಿನಲ್ಲಿ ಹೋಗುವಾಗ ಶಾಲ್‍ ಅಥವಾ ಕೊಡೆ ಹಿಡಿದು ಓಡಾಡುವುದು ಒಳ್ಳೆಯದು. ಅಥವಾ ಸನ್‌ಸ್ಕ್ರೀನ್‌ ಲೋಷನ್ ಬಳಸಿದ ಮಾತ್ರವಷ್ಟೇ ಬಿಸಿಲಿನಲ್ಲಿ ಓಡಾಡಿ.

ಬಿಸಿನೀರಿನ ಸ್ನಾನ ಉತ್ತಮವಲ್ಲ

hot water showersource and pic credit: https://www.lifeberrys.com

ಕೆಲವರಿಗೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ಈ ಅಭ್ಯಾಸ ತ್ವಚೆಗೆ ಒಳ್ಳೆಯದಲ್ಲ. ಬಿಸಿ ನೀರಿನ ಸ್ನಾನ ತ್ವಚೆಯಲ್ಲಿನ ಮಾಯಿಶ್ಚರೈಸರ್ ತೆಗೆದು, ತ್ವಚೆಯನ್ನು ಡ್ರೈಯಾಗಿಸುತ್ತದೆ.ಮೇಕಪ್ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ. ಮೇಕಪ್ ನಲ್ಲಿರುವ ಕೆಮಿಕಲ್ ಅಂಶ ಮುಖದ ತ್ವಚೆಯನ್ನು ಹಾಳು ಮಾಡುತ್ತದೆ.

ಹೆಚ್ಚು ನೀರು ಕುಡಿಯಿರಿ

drink more watersource and pic credit: https://www.rd.com

ತ್ವಚೆಯ ರಕ್ಷಣೆಗೆ ಹೆಚ್ಚು ನೀರು ಕುಡಿಯುವುದು ಮುಖ್ಯ. ಆರೋಗ್ಯಯುತವಾದ ಚರ್ಮ ನಿಮ್ಮದಾಗಲು ಹೆಚ್ಚೆಚ್ಚು ನೀರು ಕುಡಿಯಿರಿ. ನೀರು ಕಡಿಮೆ ಕುಡಿದಷ್ಟೂ ಚರ್ಮ ಕಳೆಗುಂದಿದಂತೆ ಕಾಣುತ್ತದೆ. ನೀರು ಹೆಚ್ಚು ಕುಡಿಯುವುದರಿಂದ ಜಂಕ್‍ ಫುಡ್ ಹೆಚ್ಚು ತಿನ್ನಲು ಸಾಧ್ಯವಾಗುವುದಿಲ್ಲ. ಹೀಗಾಗಿ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ.

ಸರಿಯಾಗಿ ನಿದ್ದೆ ಮಾಡಿ

sleepsource and pic credit: https://www.inc.com/kevin-daum

ಉತ್ತಮ ಆರೋಗ್ಯಕ್ಕೆ 7-8 ಗಂಟೆಗಳಷ್ಟು ನಿದ್ದೆ ಮಾಡಬೇಕು. ಸೌಂದರ್ಯಕ್ಕೂ ಇದೇ ಟಿಪ್ಸ್ ಅಪ್ಲೈ ಆಗುತ್ತದೆ. ನಿದ್ದೆ ಕಡಿಮೆಯಾದರೆ ಮುಖದಲ್ಲಿ ಒತ್ತಡ, ಅಸಹನೆ ಹೆಚ್ಚಾಗಿ ವಯಸ್ಸಾದಂತೆ ಕಾಣಿಸುತ್ತದೆ. ಹೀಗಾಗಿ ಚೆನ್ನಾಗಿ ನಿದ್ದೆ ಮಾಡಿ. ಮನಸ್ಸಿಗೆ ಹೆಚ್ಚು ಒತ್ತಡ ತೆಗೆದುಕೊಳ್ಳದಿರುವುದು ಸಹ ಮುಖ್ಯ. ಮಾನಸಿಕವಾಗಿ ಹೆಚ್ಚು ಒತ್ತಡ ಆದಂತೆಲ್ಲಾ ಇದು ನಮ್ಮ ಚರ್ಮದ ಮೇಲೆ ಪ್ರಭಾವ ಬೀರುತ್ತದೆ, ಸಣ್ಣ ವಯಸ್ಸಿನವರಾಗಿದ್ದರೂ ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ.

alchohalsource and pic credit: https://www.rd.com

ಇದಲ್ಲದೆ ದೇಹದ ಫಿಟ್‍ನೆಸ್ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಇದಕ್ಕಾಗಿ ಯೋಗ, ಪ್ರಾಣಾಯಾಮದ ಅಭ್ಯಾಸಗಳನ್ನು ಹೆಚ್ಚು ರೂಢಿಸಿಕೊಳ್ಳಿ. ಆರೋಗ್ಯಯುತವಾದ ಆಹಾರ ಸೇವಿಸುವುದನ್ನು ಮರೆಯಬೇಡಿ. ಮದ್ಯಪಾನ, ಧೂಮಪಾನದಿಂದ ದೂರವಿರಿ. ಇದು ನಿಮ್ಮ ಆಯಸ್ಸು ಕಡಿಮೆ ಮಾಡುವುದು ಮಾತ್ರವಲ್ಲದೆ, ಚರ್ಮವನ್ನೂ ಹಾಳುಗೆಡಹುತ್ತದೆ. ವಯಸ್ಸಾದಂತೆ ಕೂದಲಿನ ಆರೈಕೆಯನ್ನು ಮಾಡಲು ಮರೆಯದಿರಿ. ಚರ್ಮದ ಆರೋಗ್ಯಕ್ಕೆ ಮನೆಮದ್ದುಗಳನ್ನು ಮಾತ್ರ ಬಳಸಿ. ಈ ಎಲ್ಲಾ ಟಿಪ್ಸ್ ಗಳನ್ನು ಪಾಲಿಸಿದರೆ ನೀವು ಯಾವಾಗಲೂ ಯಂಗ್ ಆಗಿ ಕಾಣುವುದು ಖಂಡಿತ.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author