ಯೇಸು ಕ್ರಿಸ್ತ ಪುನರುತ್ಥಾನ ಹೊಂದಿದ ದಿನವೇ ಈಸ್ಟರ್..

ಜನರೊಂದಿಗೆ ಜೀವಿಸಲು ಏಸು ಮರಳಿ ಬಂದ ದಿನವೇ ಈಸ್ಟರ್..

ಕ್ರೈಸ್ತ ಧರ್ಮದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ಈಸ್ಟರ್ ಸಹ ಒಂದು. ಗುಡ್ ಫ್ರೈಡೆ ನಂತರ ಬರುವ ಈಸ್ಟರ್ ಅನ್ನು ಕ್ರೈಸ್ತರು ಚರ್ಚ್ ಗಳಲ್ಲಿ ಪ್ರಾರ್ಥನೆ ಮಾಡುವ ಮೂಲಕ ಅನೇಕ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ. 

ರೋಮನ್ನರು ಯೇಸುವನ್ನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಈಸ್ಟರ್  ಬರುತ್ತದೆ. ಶುಕ್ರವಾರ (ಗುಡ್ ಫ್ರೈಡೆ)ದಂದು ಯೇಸುವನ್ನು ಶಿಲುಬೆಗೇರಿಸಲಾಗುತ್ತದೆ. ಅನ್ಯಾಯದ ತೀರ್ಪಿಗೆ ಒಳಗಾಗಿ ಶಿಲುಬೆಯಲ್ಲಿ ಘೋರವಾದ ಮರಣವನ್ನು ಹೊಂದಿದ ಯೇಸು ಕ್ರಿಸ್ತ, ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವವನ್ನು ತೋರ್ಪಡಿಸಿದರು ಎಂಬುದರ ಸಂಭ್ರಮದ ಆಚರಣೆಯೇ ಈಸ್ಟರ್. ಯೇಸು ಕ್ರಿಸ್ತ ನಮಗಾಗಿ ಮತ್ತೆ ಬಂದಿದ್ದಾನೆ ಎನ್ನುವ ನಂಬಿಕೆ ಕ್ರೈಸ್ಥ ಧರ್ಮೀಯರಲ್ಲಿದೆ.  ಹೀಗಾಗಿ ಇದು ಅತ್ಯಂತ ಮಹತ್ವ ಪಡೆದಿದೆ.

ಈಸ್ಟರ್ ಎಂದರೆ ಹೊಸ ಭರವಸೆಯ ಹಬ್ಬ. ಭಾನುವಾರದಂದು ಬರುವ ‘ಈಸ್ಟರ್’ ಗಾಗಿ ಶನಿವಾರ ರಾತ್ರಿಯಿಂದಲೇ ಚರ್ಚ್ ಗಳಲ್ಲಿ ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ. ‘ಪಾಸ್ಕಾ’ ಜಾಗರಣೆಯಲ್ಲಿ ಭಾಗವಹಿಸುವುದರೊಂದಿಗೆ ಕ್ರೈಸ್ತರು ಭಾನುವಾರ ಈಸ್ಟರ್ ಹಬ್ಬವನ್ನು ಸಂತಸ, ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ. 

ಏನಿದು 40 ದಿನಗಳ ಉಪವಾಸ: ಏಸು ತಮ್ಮ ಪ್ರವಚನ ಮತ್ತು ಬೋಧನೆಗಳನ್ನು ನೀಡುವ ಮುನ್ನ 40 ದಿನಗಳ ಕಾಲ ಅರಣ್ಯದಲ್ಲಿ ಪ್ರಾರ್ಥನೆ ಮಾಡುತ್ತಾ ಉಪವಾಸ ಮಾಡಿದ್ದರ ಸಂಕೇತವಾಗಿ, ಭಕ್ತರು ಸಹ 40 ದಿನಗಳ ಕಾಲ ಉಪವಾಸ ಮಾಡುತ್ತಾರೆ. 

ಫೆಬ್ರವರಿ ತಿಂಗಳ ಎರಡನೇ ವಾರದಿಂದ ಆರಂಭವಾಗುವ  40 ದಿನಗಳ ತಪಸ್ಸು, ಪ್ರಾರ್ಥನೆ, ಧಾನ-ಧರ್ಮ, ತ್ಯಾಗ, ಉಪವಾಸ  ದೇಹ ದಂಡನೆಯ ವ್ರತ ಈಸ್ಟರ್ ಹಬ್ಬದ ಮೂಲಕ ಮುಕ್ತಾಯಗೊಳ್ಳುತ್ತದೆ. ಪ್ರತಿ ವರ್ಷವೂ  ಈಸ್ವರ್ ದಿನಾಂಕಗಳಲ್ಲಿ ಬದಲಾವಣೆ ಯಾಗುತ್ತಿರುತ್ತದೆ. ಕ್ರಿಶ್ಚಿಯನ್ನರು 40 ದಿನಗಳ ಉಪವಾಸದ ದಿನಗಳು ಆರಂಭದ ದಿನದಿಂದ ಲೆಕ್ಕಚಾರದ ಮೂಲಕವೇ ಈಸ್ವರ್ ಹಬ್ಬವನ್ನು ಆಚರಿಸುತ್ತಾರೆ.

ಶುಕ್ರವಾರದಂದು (ಗುಡ್ ಫ್ರೈಡೆ)  ಯೇಸು ಕ್ರಿಸ್ತ ಶಿಲುಬೆಯಲ್ಲಿ ಪ್ರಾಣ ಬಿಡುವ ದಿನದ ಅಂಗವಾಗಿ ವಿಶೇಷ ಪೂಜಾ ವಿಧಿಗಳನ್ನು ಚರ್ಚ್ ಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಶನಿವಾರ ಯೇಸು ಮತ್ತೇ ಮನು ಕುಲದ ಉದ್ಧಾರಕ್ಕಾಗಿ ಪುನರುತ್ಥಾನವಾಗುವ ದಿನವಾಗಿ ಆಚರಿಸಲಾಗುತ್ತದೆ. 

ಉಡುಗೊರೆಯಾಗಿ ಈಸ್ಟರ್ ಎಗ್: ಇನ್ನು ಈ ಸಮಯದಲ್ಲಿ ಕ್ರೈಸ್ಥರು ಉಡುಗೊರೆಗಳಾಗಿ ಅಲಂಕಾರಿಕ ಮೊಟ್ಟೆಗಳನ್ನು ನೀಡುತ್ತಾರೆ. ಆದರೆ ಇವು ತಿನ್ನುವ ಮೊಟ್ಟೆಗಳಲ್ಲ. ಮೊಟ್ಟೆಯಾಕಾರದಲ್ಲಿ ತಯಾರಿಸಿದ ಡಬ್ಬಿಗಳಲ್ಲಿ ಚಾಕ್ಲೇಟ್, ಕುಕೀಸ್ ಗಳನ್ನು ಇಟ್ಟು ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲಾಗುತ್ತದೆ. ಇನ್ನು ಇತ್ತೀಚೆಗಂತೂ ಇವುಗಳಿಗೆ ಬಾರಿ ಡಿಮಾಂಡ್ ಇದ್ದು ಚಾಕೊಲೇಟ್ ನಲ್ಲಿಯೇ ಮೊಟ್ಟೆಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

► Follow us on Reddit
https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author