ರಕ್ತದ ಬಣ್ಣಕ್ಕೆ ತಿರುಗಿದ ನದಿಯ ನೀರು..!

ರಕ್ತದ ಬಣ್ಣಕ್ಕೆ ತಿರುಗಿದ ನದಿಯ ನೀರು..!

ಮಾಸ್ಕೋ: ರಷ್ಯಾದ ಇಸ್ಕಿಟಿಮ್ಕಾ ನದಿಯ ನೀರು ಈಗ ಕಡು ಕೆಂಪು ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರು ಮನೆಗಳನ್ನು ಖಾಲಿ ಮಾಡಿ ಬೇರೆ ಸ್ಥಳಗಳಿಗೆ ತೆರಳಿದ್ದಾರೆ. ಯಾವ ಕಾರಣದಿಂದಾಗಿ ಈ ನದಿಯ ಬಣ್ಣ ಬದಲಾಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ. ನೀರಿನ ಬಣ್ಣ ರಕ್ತದಂತೆ ಕೆಂಪಾಗಿದ್ದು ಪ್ರಾಣಿ ಪಕ್ಷಿಗಳು ನದಿಯ ಬಳಿಗೆ ಹೋಗಲು ಹೆದರುತ್ತಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. 

ಇದಕ್ಕಿಂತ ಮೊದಲೂ ಸಹ ಇದ್ದಕ್ಕಿದ್ದಂತೆ ಹಲವು ನದಿಗಳ ಬಣ್ಣ ಬದಲಾಗಿದ್ದವು. ಈ ಸಾಲಿಗೆ ಈಗ ಇಸ್ಕಿಟಿಮ್ಕಾ ನದಿಯೂ ಸೇರಿದೆ. ಆದರೆ ನೀರಿನ ಬಣ್ಣ ಬದಲಾವಣೆಗೆ ಏನು ಕಾರಣ ಎಂಬ ಬಗ್ಗೆ ತಿಳಿದುಬಂದಿಲ್ಲ. ಇನ್ನು ಈ ನದಿಯು ಕೈಗಾರಿಕೆಗಳಿರುವ ಪ್ರದೇಶಕ್ಕೆ ಹತ್ತಿರವಾಗಿದ್ದು, ಹೆಚ್ಚು ಪ್ರಮಾಣದ ಕೆಮಿಕಲ್ ನೀರಿನಲ್ಲಿ ಸೇರಿರುವುದರಿಂದ ಬಣ್ಣ ಬದಲಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಯಾವ ಪ್ರಾಣಿಗಳೂ ನದಿಯ ಬಳಿ ಸುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮೊದಲೂ ರಷ್ಯಾದಲ್ಲಿ ನದಿಯೊಂದಕ್ಕೆ ಕೆಮಿಕಲ್ ಸೇರಿದ್ದ ಪರಿಣಾಮ ನೀರಿನ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿತ್ತು. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author