ರಕ್ಷಾ ಬಂಧನ ಆಚರಣೆಯ ಹಿಂದಿವೆ ಹಲವು ಪೌರಾಣಿಕ ಹಿನ್ನೆಲೆ

ಸಹೋದರ ಸಹೋದರಿಯರ ಬಂಧ ಬಲಪಡಿಸುವ ರಾಖಿ ಹಬ್ಬದ ಮಹತ್ವ..!

ಸಹೋದರ ಸಹೋದರಿಯರ ಬಂಧ ಬಲಪಡಿಸುವ ರಾಖಿ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ರಕ್ಷಾಬಂಧನಕ್ಕೆ ಭಾರತದಲ್ಲಿ ಹೆಚ್ಚು ಮಹತ್ವವಿದೆ. ಸಹೋದರ - ಸಹೋದರಿಯರ ನಡುವಿನ ಪ್ರೀತಿಗೆ ಈ ದಿನ ಮೀಸಲಾಗಿದೆ.

ರಕ್ಷಾ ಬಂಧನ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಈ ದಿನದಂದು ಸಹೋದರಿಯು ತಮ್ಮ ಸಹೋದರರ ಹಣೆಗೆ ತಿಲಕವಿಟ್ಟು, ಕೈಗೆ ರಾಖಿ ಕಟ್ಟಿ, ಆರತಿ ಮಾಡಿ ಜೀವನ ಪೂರ್ತಿ ಸುಖ, ಶಾಂತಿಯಿಂದ ದೀರ್ಘಾಯುಷಿಯಾಗಿ ಬಾಳಲಿ ಎಂದು ಹಾರೈಸುತ್ತಾರೆ. ಇನ್ನು ಸಹೋದರರೂ ಸಹ ಎಂತಹ ಸಮಯದಲ್ಲೂ ಸಹೋದರಿಯನ್ನು ಕೈಬಿಡದೆ ಕಾಪಾಡುವುದಾಗಿ ಆಶೀರ್ವದಿಸುತ್ತಾರೆ. ಅಷ್ಟೇ ಅಲ್ಲದೆ ಸಹೋದರಿಯರಿಗೆ ಉಡುಗೊರೆ ನೀಡಿ ಸಂತಸ ಪಡಿಸುತ್ತಾರೆ.

ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದು, ರಕ್ಷಾ ಬಂಧನದ ಆಚರಣೆಯ ಹಿಂದೆಯೂ ಹಲವು ಪೌರಾಣಿಕ ಕಥೆಗಳಿವೆ. 

ವಿವಿಧ ಹೆಸರುಗಳಲ್ಲಿ ಆಚರಣೆ: ರಕ್ಷಾ ಬಂಧನವನ್ನು ಭಾರತದಾದ್ಯಂತ ವಿವಿಧ ಹೆಸರುಗಳಿಂದ, ವಿಶೇಷ ಆಚರಣೆಗಳ ಮೂಲಕ ಸಂಭ್ರಮಿಸಲಾಗುತ್ತದೆ. ಉತ್ತರ ಭಾರತದಲ್ಲಿ ರಾಖಿ ಪೂರ್ಣಿಮೆಯನ್ನು ಕಜರಿ ಪೂರ್ಣಿಮೆಯೆಂದು ಕರೆಯುತ್ತಾರೆ. ಈ ಸಮಯದಲ್ಲಿ ಗೋಧಿ ಮತ್ತು ಬಾರ್ಲಿಯನ್ನು ಬಿತ್ತಲಾಗುತ್ತದೆ. ಪಶ್ಚಿಮ ಭಾರತದಲ್ಲಿ ಇದನ್ನು ನಾರಿಯಲ್ ಪೂರ್ಣಿಮಾ ಎಂದು ಆಚರಿಸುತ್ತಾರೆ. ಇನ್ನು ದಕ್ಷಿಣ ಭಾರತದಲ್ಲಿ ಇದನ್ನು ಶ್ರಾವಣ ಪೌರ್ಣಮಿಯೆಂದು ಆಚರಿಸಲಾಗುತ್ತದೆ. 

ರಕ್ಷಾ ಬಂಧನಕ್ಕೆ ಪೌರಾಣಿಕೆ ಹಿನ್ನೆಲೆ:  ಒಮ್ಮೆ ಇಂದ್ರನ ಅಮರಾವತಿಯ ಮೇಲೆ ವ್ರತಾಸುರ ರಾಕ್ಷಸ ದಾಳಿ ಮಾಡಿದನಂತೆ. ಈ ಸಂದರ್ಭದಲ್ಲಿ ವ್ರತಾಸುರನ ಬಲವನ್ನು ಕಂಡು ಇಂದ್ರನ ಪತ್ನಿ ಶಚಿ ದೇವಿಯು ಸಹಾಯಕ್ಕಾಗಿ ವಿಷ್ಣುವಿನ ಮೊರೆ ಹೋಗುತ್ತಾಳೆ. ಆಗ ವಿಷ್ಣು ಶಚಿ ದೇವಿಗೆ ಒಂದು ಹತ್ತಿಯ ದಾರವನ್ನು ನೀಡಿ, ಅದನ್ನು ಇಂದ್ರನ ಕೈಗೆ ಕಟ್ಟುವಂತೆ ಹೇಳಿದನಂತೆ. ಆಗ ಶಚಿ ದೇವಿ ವಿಷ್ಣು ಹೇಳಿದಂತೆ ಆ ದಾರವನ್ನು ಇಂದ್ರನ ಕೈಗೆ ಕಟ್ಟಿದಾಗ, ಇಂದ್ರನು ಯುದ್ಧದಲ್ಲಿ ರಾಕ್ಷಸನನ್ನು ಸೋಲಿಸದನಂತೆ. ಅಂದಿನಿಂದ ಈ ದಾರವನ್ನು ಕಟ್ಟುವ ರಕ್ಷಾ ಬಂಧನ ಪರಿಕಲ್ಪನೆಯು ಆರಂಭವಾಯಿತು ಎನ್ನಾಗುತ್ತದೆ.

ಮತ್ತೊಂದು ಉಲ್ಲೇಖದ ಪ್ರಕಾರ ದೇವರು ಮತ್ತು ದಾನವರ ನಡುವೆ ಸುಮಾರು 12 ವರ್ಷಗಳ ಕಾಲ ನಿರಂತರವಾಗಿ ಯುದ್ಧ ನಡೆದು, ದೇವತೆಗಳ ರಾಜ ಇಂದ್ರನಿಗೆ ಸೋಲುಂಟಾಗಿ ಮೂರು ಲೋಕಗಳೂ ರಾಕ್ಷಸರ ಪಾಲಾಗುತ್ತದೆ. ಯುದ್ದದ ಸೋಲನ್ನು ಅರಗಿಸಿಕೊಳ್ಳದ ಇಂದ್ರ ತಮ್ಮ ಗುರುಗಳಾದ ಬೃಹಸ್ಪತಿಯವರ ಬಳಿಗೆ ಹೋಗಿ ಸಲಹೆ ಕೇಳಿದಾಗ, ಬೃಹಸ್ಪತಿ ಇಂದ್ರನಿಗೆ ರಕ್ಷಣೆ ನೀಡುವ ಕೆಲವು ಮಂತ್ರಗಳನ್ನು ಪಠಿಸುವಂತೆ ಸಲಹೆ ನೀಡಿದರು. ಇದೇ ಶ್ರಾವಣ ಮಾಸದ ಹುಣ್ಣಿಮೆಯಂದು  ಶಚಿ ಇಂದ್ರನ ಬಲಗೈ ಮಣಿಕಟ್ಟಿನ ಮೇಲೆ ಕಂಕಣ ಕಟ್ಟುತ್ತಾಳೆ. ಆ ಕಂಕಣದ ರಕ್ಷೆ ಮತ್ತು ಮಂತ್ರಗಳ ಅಶೀರ್ವಾದಿಂದ ಪುನಃ ದಾನವರ ಮೇಲೆ ದಂಡೆತ್ತಿ ಹೋದ ಇಂದ್ರ ತಾನು ಕಳೆದುಕೊಂಡಿದ್ದ ಎಲ್ಲಾ ರಾಜ್ಯಗಳನ್ನೂ ಮರಳಿ ಪಡೆಯುತ್ತಾನೆ.

ಮಹಾವಿಷ್ಣುವಿಗೆ ರಕ್ಷಾ ಬಂಧನ ಕಟ್ಟಿದ ಪಾರ್ವತಿ: ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಕಾಪಾಡುವುದಾಗಿ ಅಭಯವನ್ನಿತ್ತನಂತೆ.

ದ್ರೌಪದಿ ಹಾಗೂ ಶ್ರೀಕೃಷ್ಣನ ಅನುಬಂಧ: ತನ್ನ ಮಾವನಾದ ಶಿಶುಪಾಲನನ್ನು ಕೊಲ್ಲುಲು  ಸುದರ್ಶನ ಚಕ್ರ ಬಳಸಲು ಹೊರಟ ಕೃಷ್ಣನ ಕೈ ಬೆರಳಿಗೆ ಗಾಯವಾಗುತ್ತದೆ. ಆಗ  ದ್ರೌಪದಿ ತನ್ನ ಸೀರೆಯನ್ನೇ ಹರಿದು ಕೃಷ್ಣನ ಕೈಬೆರಳಿಗೆ ಕಟ್ಟುತ್ತಾಳೆ. ದ್ರೌಪದಿ ಕಟ್ಟಿದ ಸೀರೆಯ ತುಂಡನ್ನೇ ಕೃಷ್ಣ ರಕ್ಷೆ ಎಂದುಕೊಂಡು ಮುಂದೆ ಆಕೆಯ ರಕ್ಷಣೆಗೆ ಬದ್ಧನಾಗುತ್ತಾನೆ. ಅಷ್ಟೇ ಅಲ್ಲದೆ  ಪಾಂಡವರು ಪಗಡೆ ಆಟದಲ್ಲಿ ಸೋತು, ದ್ರೌಪದಿಯ ವಸ್ರ್ತಪಹರಣವಾಗುತ್ತಿದ್ದಾಗ, ಕೃಷ್ಣ ಅಕ್ಷಯ ಸೀರೆಯನ್ನು ದಯಪಾಲಿಸುತ್ತಾನೆ. 

ನಾರಿಯಲ್ ಪೂರ್ಣಿಮಾ: ವರುಣ ದೇವನನ್ನು ಓಲೈಸಿಕೊಳ್ಳುವ ಸಲುವಾಗಿಯೂ ರಕ್ಷಾ ಬಂಧನ ಆಚರಿಸಲಾಗುತ್ತದೆ. ನಾರಿಯಲ್ ಪೂರ್ಣಿಮಾ ಎಂದು ಕರೆಯುವ ಈ ದಿನದಂದು ಸಮುದ್ರ ದೇವ ಮತ್ತು ವರುಣ ದೇವನಿಗೆ ಮೀನುಗಾರರು ರಾಖಿ ಮತ್ತು ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಬಿರುಗಾಳಿ ಮತ್ತು ಭೀಕರ ಅಲೆಗಳಿಂದ ರಕ್ಷಿಸುವಂತೆ ಮೀನುಗಾರರು ಪ್ರಾರ್ಥಿಸುತ್ತಾರೆ.

ಐತಿಹಾಸಿಕ ಹಿನ್ನೆಲೆ

ಅಲೆಕ್ಸಾಂಡರ್ ಗೆ ಪ್ರಾಣ ಭಿಕ್ಷೆ: ಕ್ರಿ.ಶ. 326ರ ಸಮಯದಲ್ಲಿ ಅಲೆಕ್ಸಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡುತ್ತಿದ್ದಾಗ ಪೂರುವನಿಂದ ಸೋಲುವ ಪರಿಸ್ಥಿತಿ ಬರುತ್ತದೆ. ತನ್ನ ಪತಿಯ ಪ್ರಾಣವನ್ನು ಉಳಿಸಿಕೊಳ್ಳಲು ಅಲೆಕ್ಸಾಂಡರ್ ಪತ್ನಿ ರುಕ್ಸಾನಾ ರಕ್ಷಾದಾರವನ್ನು ಕಳುಹಿಸಿಕೊಡುತ್ತಾಳೆ. ಇದನ್ನು ಪ್ರೀತಿಯಿಂದ ಸ್ವೀಕರಿಸಿದ ಪೂರು ಅಲೆಕ್ಸಾಂಡರ್ ಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾನೆ. ಹೀಗೆ ರಕ್ಷಾಸೂತ್ರದಿಂದಾಗಿ ಅಲೆಕ್ಸಾಂಡರ್ ಗೆ ಪ್ರಾಣಭಿಕ್ಷೆ ದೊರೆಯುತ್ತದೆ.

ಹುಮಾಯುನ್ ಗೆ ರಾಖಿ: ಚಿತ್ತೂರಿನ ರಾಣಿ ಕರ್ಣಾವತಿ ಗುಜರಾತಿನ ಸುಲ್ತಾನರಿಂದ ತಮಗೆ ರಕ್ಷಣೆ ಬೇಕೆಂದು ಮೊಘಲ್ ದೊರೆ ಹುಮಾಯುನ್ ಗೆ ರಾಖಿ ಕಳಿಸುತ್ತಾಳೆ. ದುರಾದೃಷ್ಟವಾಷಾತ್ ಈ ಮನವಿ ಹುಮಾಯೂನನಿಗೆ ತಲುಪುವ ಮುನ್ನವೇ, ಬಹದ್ದೂರ್ ಶಾನ ಸೈನ್ಯ ಚಿತ್ತೂರನ್ನು ವಶಪಡಿಸಿಕೊಂಡದ್ದನ್ನು ಸಹಿಸದ ರಾಣಿ ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡುತ್ತಾಳೆ. ತನಗೆ ರಕ್ಷೆ ಕಳುಹಿಸಿದ ಸಹೋದರಿಯ ನೆನಪಿನಲ್ಲಿ ಬಹದ್ದೂರ್ ಶಾನ ಸೈನ್ಯವನ್ನು ಸೋಲಿಸಿದ ಹುಮಾಯೂನ್ ಕರ್ಣಾವತಿಯ ಮಗ ವಿಕ್ರಮಜೀತನನ್ನು ಪಟ್ಟಕ್ಕೇರಿಸುವ ಮೂಲಕ ರಕ್ಷೆಗೆ ಬದ್ಧನಾಗುತ್ತಾನೆ.

ಸೈನಿಕರಿಗೆ ರಾಖಿ : ಹಗಲು ರಾತ್ರಿಯೆನ್ನದೆ ದೇಶ ಕಾಯುತ್ತಿರುವ ಸೈನಿಕರಿಗೆ ಮಹಿಳೆಯರು ರಾಖಿ ಕಟ್ಟಿ, ಅವರ ದೀರ್ಘಾಯುಷ್ಯಕ್ಕೆ ಪ್ರಾರ್ಥಿಸುವ ಪ್ರತೀತಿಯೂ ಇದೆ. ಹಿಂದಿನ ಕಾಲದಲ್ಲಿಯೂ ಯುದ್ಧಕ್ಕೆ ಹೋಗುವಾಗ ನಾರಿಯರು ಸೈನಿಕರಿಗೆ ಕಂಕಣ ಕಟ್ಟುವ ಪದ್ಧತಿ ಇತ್ತು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

► Follow us on Reddit
https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author