ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು..?

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ..? ಈ ಆಹಾರ ಕ್ರಮ ರೂಡಿಸಿಕೊಳ್ಳಿ..

ಇಮ್ಯುನಿಟಿ ಪವರ್.. ಅಂದ್ರೆ ರೋಗ ನಿರೋಧಕ ಶಕ್ತಿ ಪ್ರತಿಯೊಬ್ಬರಿಗೂ ಅತ್ಯಗತ್ಯ.. ಇನ್ನು ಕೊರೊನಾ ರೋಗ ಜಗತ್ತಿನ ಎಲ್ಲೆಡೆ ತನ್ನ ಕರಾಳ ಮುಖವನ್ನು ತೋರಿಸುತ್ತಿದೆ. ಈ ಸಂದರ್ಭದಲ್ಲಿ ಕೊರೊನ ಮಹಾಮಾರಿಯಿಂದ ಪಾರಾಗಲು ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ. ಹಾಗಾದ್ರೆ ದೇಹದಲ್ಲಿ ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳಬೇಕಾದರೆ ಸೇವಿಸಬೇಕಾದ ಆಹಾರಗಳು ಯಾವುವು ಅನ್ನೋ ಬಗ್ಗೆ ತಿಳಿಸುತ್ತೇವೆ ನೋಡಿ..

ಜೇನು: ಜೇನುತುಪ್ಪದಲ್ಲಿ ವಿಟಮಿನ್ ಸಿ, ನಿಯಾಸಿನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳಿವೆ, ಇವೆಲ್ಲವೂ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಜೇನುತುಪ್ಪವು ನೈಸರ್ಗಿಕ ಕಫ-ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಜೇನುತುಪ್ಪ ಉರಿಯೂತವನ್ನು ಕಡಿಮೆ ಮಾಡುತ್ತದೆ, ನೋವನ್ನು ಶಮನಗೊಳಿಸುತ್ತದೆ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿರುತ್ತದೆ.

ಶುಂಠಿ: ಶುಂಠಿಯ ಬಳಕೆ ದೇಹದ ಉಷ್ಣತೆ ಹೆಚ್ಚಿಸುವುದು ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ. ಕೆಮ್ಮು, ಗಂಟಲು ಕೆರೆತ ಉಂಟಾದಾಗ, ಅರ್ಧ ಚಮಚ ಶುಂಠಿ ರಸಕ್ಕೆ, ಸ್ವಲ್ಪ ಕಾಳು ಮೆಣಸಿನ ಪುಡಿ ಮಿಶ್ರ ಮಾಡಿ ಆಗಾಗ ಸೇವಿಸುತ್ತಿದ್ದರೆ ಗಂಟಲು ಕೆರೆತ ಕಡಿಮೆಯಾಗುವುದು.

ಸೊಪ್ಪು, ತರಕಾರಿ: ಬಸಲೆ ಸೊಪ್ಪು, ಪಾಲಕ್, ಹರಿವೆ ಸೊಪ್ಪು ಕೇಲ್ ಮೊದಲಾದ ಸೊಪ್ಪುಗಳು ಹಾಗೂ ಹಸಿರು ತರಕಾರಿಗಳಲ್ಲಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಹೆಚ್ಚಿರುತ್ತವೆ. ವಿಟಮಿನ್ ಕೆ ನಿರ್ಧಿಷ್ಟವಾಗಿ ರಕ್ತದ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ ಮತ್ತು ರಕ್ತ ನಷ್ಟವಾಗುವಿಕೆಯನ್ನು ತಡೆಯುತ್ತದೆ. ಪಾಲಾಕ್  ನಲ್ಲಿ ವಿಟಮಿನ್ ಸಿ ಮಾತ್ರವಲ್ಲ ಅನೇಕ ಆ್ಯಂಟಿಆಕ್ಸಿಡೆಂಟ್ ಅಂಶಗಳು, ಬೀಟಾ ಕೆರೋಟಿನ್ ಇದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ದೇಹ ಸೋಂಕಿನ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ ಕಣ್ಣಿಗೆ ಒಳ್ಳೆಯದು. 

ಹಣ್ಣುಗಳು: ರೋಗ ನಿರೋಧಕ ಶಕ್ತಿಯ ಉತ್ತೇಜಕ ಎಂದೇ ಹೆಸರು ಪಡೆದುಕೊಂಡ ವಿಟಮಿನ್ ' ಸಿ ' ಅಂಶ ಹೊಂದಿದ ಆಹಾರಗಳ ಸೇವನೆಯನ್ನು ರೂಡಿಸಿಕೊಳ್ಳಿ. ನಿಂಬೆ ಹಣ್ಣು, ದ್ರಾಕ್ಷಿ ಹಣ್ಣು, ಕಿತ್ತಳೆ ಹಣ್ಣು, ಮೋಸಂಬಿ ಹಣ್ಣುಗಳನ್ನು ಸೇವಿಸುತ್ತಿರಿ. ಶೀತ, ಕೆಮ್ಮು, ಜ್ವರ ಬಂದಾಗ ವಿಟಮಿನ್ ಸಿ ಇರುವ ಆಹಾರಗಳನ್ನು ತಿಂದಾಗ ದೇಹದಲ್ಲಿ ಬೇಗನೆ ಚೇತರಿಕೆ ಉಂಟಾಗುತ್ತದೆ. ಈ ಆಹಾರಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಕರಗುವ ಮತ್ತು ಕರಗದ ನಾರಿನಂಶ ಸಮೃದ್ಧವಾಗಿರುವ ಸೇಬಿನ ಸೇವನೆ, ಮಲಬದ್ಧತೆಯನ್ನು ತಡೆಗಟ್ಟಲು ಮತ್ತು ಅತಿಸಾರವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಸಿಪ್ಪೆಯೊಂದಿಗೆ ಸೇಬು ಸೇವಿಸುವುದು ಉತ್ತಮ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author