ರಾಜಸ್ಥಾನದ ಶ್ರೀಮಂತ ಸಂಸ್ಕೃತಿ ಬಿಂಬಿಸುವ ‘ಮೇವಾರ್ ಹಬ್ಬದ ಮಹತ್ವ..

ವಸಂತ ಋತುವನ್ನು ಸ್ವಾಗತಿಸುವ ಹಬ್ಬವೇ ರಾಜಸ್ಥಾನದ ‘ಮೇವಾರ್’..

ಮೇವಾರ್ ಹಬ್ಬವು ಮುಖ್ಯವಾಗಿ ರಾಜಸ್ಥಾನದ ಉದಯಪುರದಲ್ಲಿ ವಿಜೃಂಭಣೆಯಿಂದ ಆಚರಿಸುವ ಪ್ರಮುಖ ಹಬ್ಬವಾಗಿದೆ. ಈ ಉತ್ಸವವು ಉದಯಪುರದ ಇತಿಹಾಸವನ್ನು, ರಾಜಸ್ಥಾನದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ.

ಚಳಿಗಾಲ ಮುಗಿದ ನಂತರ ವಸಂತ ಋತುವಿನ ಆಗಮನದ ಕಾಲದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ರಾಜಸ್ಥಾನದಾದ್ಯಂತ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಉದಯಪುರದಲ್ಲಿ ಈ ಹಬ್ಬದ ಆಚರಣೆ ಬೇರೆಡೆಗಿಂತ ಹೆಚ್ಚಾಗಿ ವೈಭವದಿಂದ ಕೂಡಿರುತ್ತದೆ. ಯಾಕೆಂದರೆ ಮೇವಾರ್ ರಾಜ ಮನೆತನದವರು ಉದಯಪುರದಲ್ಲಿ ತಮ್ಮ ಆಳ್ವಿಕೆ ನಡೆಸಿದ ಇತಿಹಾಸವನ್ನು ಈ ಹಬ್ಬ ಬಿಂಬಿಸುತ್ತದೆ.

ಮೂರು ದಿನಗಳ ಕಾಲ ಸಂಭ್ರಮದಿಂದ ನಡೆಯುವ ಈ ಹಬ್ಬದ ಸಂದರ್ಭದಲ್ಲಿ ಉದಯಪುರ ತಳಿರು ತೋರಣಗಳಿಂದ ಕಂಗೊಳಿಸುತ್ತಿರುತ್ತದೆ. ಅಂಗಡಿ ಮುಂಗಟ್ಟುಗಳು ಬಣ್ಣ ಬಣ್ಣದ ಹೂಗಳಿಂದ ಅಲಂಕಾರಗೊಂಡಿರುತ್ತವೆ. ರಸ್ತೆಗಳು ಬೀದಿ ದೀಪಗಳ ಬಣ್ಣದ ಬೆಳಕಿಗೆ ಕಂಗೊಳಿಸುತ್ತಿರುತ್ತವೆ.

ರಾಜಸ್ಥಾನದ ಪ್ರಮುಖ ಗಂಗೌರ್ ಹಬ್ಬದಂತೆಯೇ ಈ ಹಬ್ಬವೂ ಸಹ ರಾಜಸ್ಥಾನಿಗರಿಗೆ ಪ್ರಮುಖವಾಗಿದೆ. ಇನ್ನು ಈ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆ ತೊಟ್ಟು ಶಿವ ಪಾರ್ವತಿಯ ಪ್ರತಿಮೆ ಅಥವಾ ಫೋಟೋಗಳನ್ನು ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಮೆರವಣಿಗೆಯ ಸಮಯದಲ್ಲಿ ಡೋಲು, ವಾದ್ಯಗಳ ತಾಳಕ್ಕೆ ತಕ್ಕಂತೆ ನೃತ್ಯಮಾಡಲಾಗುತ್ತದೆ. ರಾಜಸ್ಥಾನದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯಪ್ರದರ್ಶನಗಳು ಜನರನ್ನು ಹೆಚ್ಚು ಸೆಳೆಯುತ್ತವೆ. ಮೆರವಣಿಗೆಯ ಉದ್ದಕ್ಕೂ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ. 

ನಂತರ ಈ ಮೆರವಣಿಗೆ ಉದಯಪುರದಲ್ಲಿರುವ ಪಿಚೋಲಾ ಸಾರೋವರದ ಬಳಿ ಕೊನಗೊಳ್ಳುತ್ತದೆ. ಹೂಗಳಿಂದ ಅಲಂಕರಿಸಿ ಮೆರವಣಿಗೆ ಮೂಲಕ ತಂದಿದ್ದ ಶಿವ ಪಾರ್ವತಿಯ ಮೂರ್ತಿಗಳನ್ನು ದೋಣಿಗಳ ಮೂಲಕ ಪಿಚೋಲ ಸರೋವರದ ಮಧ್ಯಭಾಗಕ್ಕೆ ಕೊಂಡೊಯ್ದು ನೀರಿನಲ್ಲಿ ಮುಳುಗಿಸಾಗುತ್ತದೆ.

ಅಷ್ಟೇ ಅಲ್ಲದೆ ಈ ಉತ್ಸವವನ್ನು ವೀಕ್ಷಿಸಲು ನಾನಾ ಭಾಗಗಳಿಂದ ಜನು ಆಗಮಿಸುತ್ತಾರೆ. ರಾಜಸ್ಥಾನ ಪ್ರವಾಸೋದ್ಯಮ ಇಲಾಖೆಯೂ ಸಹ ಪ್ರವಾಸಿಗರನ್ನು ಆಕರ್ಶಿಸಲು, ಹಬ್ಬವನ್ನು ಮತ್ತಷ್ಟು ವಿಜೃಂಭಣೆಯಿಂದ ನಡೆಸಲು ಜನರಿಗೆ ಪೂರಕವಾಗಿ ಸಹಕರಿಸುತ್ತದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author