ರಾಜ್ಯದ ಹಳೆಯ ಅಣೆಕಟ್ಟುಗಳಲ್ಲೊಂದು ಮಾರಿಕಣಿವೆ ಡ್ಯಾಮ್

ರಾಜ್ಯದ ಹಳೆಯ ಅಣೆಕಟ್ಟುಗಳಲ್ಲೊಂದು ಮಾರಿಕಣಿವೆ ಡ್ಯಾಮ್

ಚಿತ್ರದುರ್ಗ ಜಿಲ್ಲೆಯಲ್ಲಿರುವ ಏಕೈಕ ಹಾಗೂ ಶತಮಾನವನ್ನು ಕಳೆದಿರುವ ಕರ್ನಾಟದಲ್ಲಿಯೇ ಅತಿ ಹಳೆಯದಾದ ಜಲಾಶಯವೆಂದರೆ ಅದು ಮಾರಿಕಣಿವೆಯ ವಾಣಿವಿಲಾಸ ಅಣೆಕಟ್ಟು. 

ಹಸಿರು ಹೊದ್ದು ಸದಾ ಕಂಗೊಳಿಸುವ ಬೆಟ್ಟಗುಡ್ಡಗಳ ನಡುವೆ ಶಾಂತವಾಗಿ ಹರಿಯದು ಬಂದು ಸೇರುವ ವೇದಾವತಿಯ ಮನಸೋರೆಗೊಳ್ಳುವ ಆ ಸೌಂದರ್ಯವನ್ನು ಆಸ್ವಾಧಿಸಬೇಕೆಂದರೆ ಒಮ್ಮೆ ನೀವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆಗೆ ಭೇಟಿ ನೀಡಲೇ ಬೇಕು. 

ಬಾಬಾ ಬುಡನ್ ಗಿಯಲ್ಲಿ ಜನಿಸುವ ‘ವೇದಾ’ ನದಿ ಕಾಡುಮೇಡುಗಳನ್ನು ಅಲೆದು ಕಡೂರಿನ ಬಳಿ ‘ಆವತಿ’ ಎಂಬ ನದಿ ಸೇರಿ ವೇದಾವತಿಯಾಗಿ ಹರಿಯುತ್ತಾಳೆÉ. ಬರಪೀಡಿತ ಪ್ರದೇಶದ ರೈತರ ನೆರವಿಗಾಗಿ 1899-1907ರ ಅವಧಿಯಲ್ಲಿ ಮೈಸೂರು ಮಹಾರಾಜರು ಇಲ್ಲಿ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಾರೆ. ಎರಡು ಗುಡ್ಡಗಳ ನಡುವೆ ಸುಂದರವಾದ ಅಣೆಕಟ್ಟು ನಿರ್ಮಿಸುವಲ್ಲಿ ಇಂಜೀನಿಯರ್ ಗಳಾದ ಹೆಚ್.ಡಿ ರೈಸ್, ಮೇಕನೀಲ್ ಕ್ಯಾಂಪ್ ರೈಸ್, ಚುನ್ನಿಲಾಲ್ ತಾರಾಚಂದ್ ದಲಾಲ್ ಅವರ ಶ್ರಮವನ್ನೂ ಕಾಣಬಹುದು. 

ಈ ಮಾರಿಕಣಿವೆ ಜಲಾಶಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ‘ವಾಣಿ ವಿಲಾಸ’ ಅವರ ಹೆಸರಿಡಲಾಗಿದೆ. ಈ ಅಣೆಕಟ್ಟು 43.28 ಮೀಟರ್ ಎತ್ತರ (142 ಅಡಿ) ಮತ್ತು 405.50 ಮೀ. ಉದ್ದ ನಾನ್ ಓವರ್ ಫ್ಲೋ ಅಣೆಕಟ್ಟು ಇದಾಗಿದ್ದು 25,000 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. 

ಈ ಜಲಾಶಯದ ಬಳಿಯೇ ಕಣಿವೆ ಮಾರಮ್ಮನ ಸನ್ನಿಧಿ ಇದೆ. ಹಲವು ಪ್ರದೇಶಗಳಿಂದ ಭಕ್ತಾದಿಗಳು ತಾಯಿಯ ದರ್ಶನಕ್ಕೆ ಆಗಮಿಸುತ್ತಾರೆ. ಅಣೆಕಟ್ಟು ನೋಡಲು ಬಂದವರು ತಪ್ಪದೇ ತಾಯಿಗೆ ನಮಸ್ಕರಿಸಿ ಹೋಗುತ್ತಾರೆ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

About Author