ರೈತರಿಂದ ಸಗಣಿ ಖರೀದಿಗೆ ಮುಂದಾದ ಸರ್ಕಾರ..?

ರೈತರಿಂದ ಸಗಣಿ ಖರೀದಿಗೆ ಮುಂದಾ ಸರ್ಕಾರ..?

ಹಿಂದೂ ಧರ್ಮದಲ್ಲಿ ಗೋವಿಗೆ ದೈವೀ ಸ್ಥಾನವಿದೆ. ಗೋಮೂತ್ರವನ್ನು ಹಲವು ರೀತಿಯ ಔಷಧೀಯ ರೂಪದಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಗೋ ಮೂತ್ರ ಅತೀ ಪವಿತ್ರ ಎಂದು ಪರಿಗಣಿಸಿ, ಪೂಜೆ ಪುನಸ್ಕಾರಗಳಲ್ಲಿ ಬಳಸಲಾಗುತ್ತದೆ. ಆದರೆ ಈಗ ಗೋವಿನ ಸಗಣಿಗೂ ಬೇಡಿಕೆ ಹೆಚ್ಚಾಗಿದೆ. 

ದೈವೀ ಸ್ವರೂಪಿಯಾದ ಗೋವು ಅನ್ನದಾತರಿಗೆ ಮಾತ್ರವಲ್ಲದೆ ಈಗ ಇಡೀ ಮನುಕುಲಕ್ಕೆ ಅನುಕೂಲವಾಗುವಂತಹ ಕೆಲವೊಂದು ಪ್ರಯೋಜನಗಳಿಗೆ ಕಾರಣವಗಿದೆ. ಆದ್ದರಿಂದ ಸರ್ಕಾರದ ಕಣ್ಣು ಈಗ ಗೋವಿನ ಸಗಣಿ ಮೇಲೆ ಬಿದ್ದಿದೆ. ಹಲವು ಉಪಯೋಗಳಿರುವ ಸಗಣಿಯನ್ನು ರೈತರಿಂದ ಖರೀದಿಸಿದರೆ ರೈತರಿಗೂ ಲಾಭವಾಗುತ್ತದೆ ಎಂಬ ಆಲೋಚನೆ ಈಗ ಸರ್ಕಾಕ್ಕೆ ಬಂದಿದೆ.

ಚತ್ತೀಸ್ ಘಡ ದಲ್ಲಿ ಅನುಷ್ಠಾನ:

2020ರಲ್ಲೇ ಚತ್ತೀಸ್ ಘಡ ಸರ್ಕಾರ ಗೋಧನ್ ನಯಾ ಯೋಜನೆ ಎಂಬ ಸ್ಕೀಮ್ ಅನ್ನು ಜಾರಿಗೆ ತಂದಿದ್ದು, ರೈತರಿಂದ ನೇರವಾಗಿ ಸಗಣಿ ಖರೀದಿ ಮಾಡುತ್ತಿದೆ. ಹೌದು ರೈತರು ಮತ್ತು ಪಶು ಸಂಗೋಪನೆ ಮಾಡುತ್ತಿರುವವರಿಂದ ಚತ್ತೀಸ್ಘಡ ಸರ್ಕಾರ ಕೆ.ಜಿ.ಗೆ 2ರೂ. ನಂತೆ ಸಗಣಿ ಖರೀದಿಸುತ್ತಿದೆ. ಹೀಗೆ ಖರೀದಿಸಿದ ಸಗಣಿಯನ್ನು ಕೆಲವು ಸರ್ಕಾರಿ ಸಂಘಟನೆಗಳಿಗೆ ನೀಡುತ್ತದೆ. ನಂತರ ಸಗಣಿಯನ್ನು ವರ್ಮಿಕಾಂಪೋಸ್ಟ್ ಮಾಡಿ ಅಗತ್ಯವಿರುವ ರೈತರಿಗೆ ಮಾರಾಟ ಮಾಡುತ್ತದೆ. ವರ್ಮಿಕಾಂಪೋಸ್ಟ್ ತಯಾರಿಕೆಗಾಗಿ ಸರ್ಕಾರ ಕೆಲವೊಂದು ಸಹಕಾರಿ ಸಂಘಗಳಿಗೆ ಸಾಲವನ್ನೂ ಒದಗಿಸುತ್ತದೆ. 

ಖರೀದಿ ಹೇಗೆ:

ಸಗಣಿಯನ್ನು ರೈತರಿಂದ ಸ್ಥಳೀಯ ಪುರಸಭೆ ಹಾಗೂ ತಾಲೂಕು ಆಡಳಿತಾಧಿಕಾರಿಗಳು ಖರೀಸುತ್ತಾರೆ.. ಹೀಗೆ ಖರೀದಿಸಿದ ಸಗಣಿಯನ್ನು ಸಂಗ್ರಹಿಸಲು ಗೋದಾಮುಗಳನ್ನು ನಿರ್ಮಿಸಲಾಗಿದೆ. ಆದರೆ ಚತ್ತೀಸ್ಘಡದಲ್ಲಿ ಗೋದಾಮಿನಲ್ಲಿ ಸಂಗ್ರಹಿಸಿದ ಸಗಣಿಯ ಕಳ್ಳತನವಾಗುತ್ತಿದೆಯಂತೆ. ಆದ್ದರಿಂದ ಸಗಣಿ ರಕ್ಷಣೆಗಾಗಿ ಇಲ್ಲಿ ರೈತರೂ ಸಹ ಸಿಸಿಟಿವಿ ಬಳಸುತ್ತಾರೆ.

ಗೊಬ್ಬರದಲ್ಲಿ ಕಾಗದ:

ಜನ ಜೀವನದಲ್ಲಿ ಪ್ಲಾಸ್ಟಿಕ್ ಈಗ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಆದರೆ ಇದರಿಂದ ಪರಿಸರಕ್ಕೆ ಅಪಾರ ಹಾನಿ ಅನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಆದ್ದರಿಂದ ಪರಿಸರವನ್ನು ಮಾಲಿನ್ಯದಿಂದ ರಕ್ಷಿಸಲು ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಪ್ಲಾಸ್ಟಿಕ್ ಬ್ಯಾಗ್ ಗಳಿಗೆ ಪರ್ಯಾಯವಾಗಿ ಸಗಣಿಯಿಂದ  ಪೇಪರ್ ಬ್ಯಾಗ್ ಗಳನ್ನು ತಯಾರಿಸಿ ಮಾಲಿನ್ಯದಿಂದ ಪರಿಸರವನ್ನು ರಕ್ಷಿಸಲು ಎಮ್.ಎಸ್.ಎಮ್.ಇ ಸಚಿವಾಲಯ ಮುಂದಾಗಿದೆ. ಈಗಾಗಲೆ ಗೊಬ್ಬರದಿಂದ ಕಾಗದ ತಯಾರಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು, ದೇಶದಾದ್ಯಂತ ಪ್ರತಿ ಮೂಲೆಯಲ್ಲೂ ಗೊಬ್ಬರದ ಕಾಗದ ತಯಾರು ಮಾಡುವ ಪ್ಲಾಂಟ್ ಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ಗೊಬ್ಬರದಿಂದ ಕಾಗದ ತಯಾರಿಸಲು ಸುಮಾರು 7% ಉಪಯುಕ್ತ ಮೆಟೀರಿಯಲ್ ದೊರಕುತ್ತದೆ, ಉಳಿದ 93ರಷ್ಟು ಪ್ರಮಾಣದ ಗೊಬ್ಬರವನ್ನು ವೆಜಿಟೆಬಲ್ ಡೈಗೆ ಬಳಸಬಹುದಾಗಿದೆ. ಇದೂ ಪರಿಸರ ಸ್ನೇಹಿಯಾದ್ದರಿಂದ ಬೇಡಿಕೆಯೂ ಸಹ ಹೆಚ್ಚಿದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada​

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

 

 

Enjoyed this article? Stay informed by joining our newsletter!

Comments

You must be logged in to post a comment.

About Author