ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷ ಭೂಮಿಗೆ ಬರುತ್ತಾರೆ ‘ಸ್ವಾಮಿ ನಾರಾಯಣ’ರು..

‘ಸ್ವಾಮಿ ನಾರಾಯಣ ಜಯಂತಿ’ಯ ಮಹತ್ವವೇನು..? ಆಚರಣೆ ಯಾಕೆ.? ಮತ್ತು ಹೇಗೆ..?

ಭಗವಾನ್ ಸ್ವಾಮಿ ನಾರಾಯಣ ಜಯಂತಿಯ ಆಚರಣೆಯನ್ನು ಹೆಚ್ಚಾಗಿ ಉತ್ತರ ಭಾರತದಲ್ಲಿ ಕಾಣಬಹುದಾಗಿದೆ. ನಾರಾಯಣರ ಜಯಂತಿಯು ಕೆಲವೊಮ್ಮೆ ರಾಮನವಮಿಯೋಂದಿಗೆ ಆಚರಿಸಲ್ಪಡುತ್ತದೆ. ಈ ದಿನದಂದು ಸ್ವಾಮಿ ನಾರಾಯಣರ ಅನುಯಾಯಿಗಳು ಅವರ ಜೀವನದ ಮುಖ್ಯ ಸುಧಾರಣೆಗಳನ್ನು ಭಕ್ತರಿಗೆ ಪ್ರಾರ್ಥನೆ ಮೂಲಕ ತಿಳಿಸುತ್ತಾರೆ. ಲೋಕ ಕಲ್ಯಾಣಕ್ಕಾಗಿ ಭಕ್ತಿಯಿಂದ ವಿಶೇಷ ಪೂಜೆ, ಆಚರಣೆಗಳಲ್ಲಿ ಭಾಗಿಯಾಗುತ್ತಾರೆ.

ಲೋಕ ಕಲ್ಯಾಣಕ್ಕಾಗಿ ಸ್ವಾಮಿ ನಾರಾಯಣರ ಜನನ: ಅಧರ್ಮವನ್ನು ತೊಡೆದು, ಸಮಾಜದಲ್ಲಿ ಶಾಂತಿ ನೆಲೆಸುವುದಕ್ಕಾಗಿ, ಲೋಕ ಕಲ್ಯಾಣಕ್ಕಾಗಿ, ಭಕ್ತಿ ದೇವಿ ಹಾಗೂ ಧರ್ಮದೇವ್ ದಂಪತಿಯ ಮಗನಾಗಿ ಸ್ವಾಮಿ ನಾರಾಯಣರು 1781 ಏಪ್ರಿಲ್ ತಿಂಗಳಲ್ಲಿ, ಅಯೋಧ್ಯೆ ಬಳಿಯ ಕೌಶಲ ದೇಶದಲ್ಲಿ ಜನಿಸುತ್ತಾರೆ. ಸ್ವಾಮಿ ನಾರಾಯಣರಿಗೆ ತಂದೆ ತಾಯಿ ಇಟ್ಟ ಹೆಸರು ಘನಶ್ಯಾಮ್..

ಋಷಿಮುನಿಗಳಾದ ಮಾರ್ಖಂಡೇಯರು ಸ್ವಾಮಿ ನಾರಾಯಣರನ್ನು ನೀಲಕಂಠ, ಹರಿಕೃಷ್ಣ ಎಂದು ಕರೆಯುತ್ತಾರೆ, ರಮಾನಂದ ಸ್ವಾಮಿಗಳು ಸಹಜಾನಂದ ಸ್ವಾಮಿ, ನಾರಾಯಣ ಮುನಿ ಎಂದು ಕರೆಯುತ್ತಾರೆ. ಇನ್ನು ಸ್ವಾಮಿ ನಾರಾಯಣರ ಭಕ್ತರು ಇವರನ್ನು ಶ್ರೀಜೀ ಮಹಾರಾಜ ಎನ್ನುತ್ತಾರೆ. ಆದರೆ ಹೆಚ್ಚು ಜನ ಭಕ್ತರು ಇವರನ್ನು ಸ್ವಾಮಿ ನಾರಾಯಣ ಎಂದೇ ಆರಾಧಿಸುತ್ತಾರೆ.

ಘನಶ್ಯಾಮ್ ಸ್ವಾಮಿ ನಾರಾಯಣನಾಗಿದ್ದು ಹೇಗೆ..?: 7ನೇ ವಯಸ್ಸಿಗೆ ಘನಶ್ಯಾಮ್ ವೇದಗಳನ್ನು, ಹಿಂದೂ ಧರ್ಮಗಳ ಗ್ರಂಥಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ ತಮ್ಮ 10ನೇ ವಯಸ್ಸಿನಲ್ಲಿಯೇ ಘಟಾನುಘಟಿಗಳೊಂದಿಗೆ ವೇದಶಾಸ್ತ್ರದ ಚರ್ಚೆಯಲ್ಲಿ ಸ್ವಾಮಿ ನಾರಾಯಣರು ಜಯಗಳಿಸುತ್ತಾರೆ. 11ನೇ ವಯಸ್ಸಿಗೆ ಲೌಕಿಕ ಆಸೆಗಳಿಂದ ದೂರಾಗಿ, ಭಾರತದಾದ್ಯಂತ ಸುಮಾರು 7000 ಮೈಲುಗಳಷ್ಟು ಸಂಚಾರ ಮಾಡುತ್ತಾರೆ. 14ನೇ ವಯಸ್ಸಿಗೆ ಅಷ್ಟಾಂಗ ಯೋಗದಲ್ಲಿ ಪರಿಣಿತಿ ಹೊಂದುತ್ತಾರೆ. 20ನೇ ವಯಸ್ಸಿಗೆ ಆಧ್ಯಾತ್ಮಿಕ ಗುರುಗಳಾಗಿ ಸಾಮಾಜ ಸುಧಾರಣೆಯಲ್ಲಿ ತಲ್ಲೀನರಾಗುತ್ತಾರೆ. ಲೋಕ ಕಲ್ಯಾಣಕ್ಕಾಗಿ ಭೂಮಿ ಮೇಲೆ ಶಾಶ್ವತವಾಗಿ ನೆಲೆಸುವುದಾಗಿ ಸ್ವಾಮಿ ನಾರಾಯಣರು ತಮ್ಮ ಭಕ್ತರಿಗೆ ಭರವಸೆ ನೀಡುತ್ತಾರೆ.. ಅಷ್ಟೇ ಅಲ್ಲ ಎಲ್ಲ ಒಳ್ಳೆಯ ಕಾರ್ಯಗಳಲ್ಲಿಯೂ ನಾರಾಯಣರು ಇರುವರು ಎಂಬ ನಂಬಿಕೆ ಭಕ್ತರಲ್ಲಿದ್ದು ಅವರನ್ನು ದೇವರಾಗಿ ಪೂಜಿಸುತ್ತಾರೆ.

ಮಹಿಳೆಯರ ಶೋಷಣೆ ವಿರುದ್ಧ, ಬಡವರು, ನಿರ್ಗತಿಕರ ಕಲ್ಯಾಣಕ್ಕಾಗಿ ತಮ್ಮ ಅನುಯಾಯಿಗಳೊಂದಿಗೆ ಸ್ವಾಮಿ ನಾರಾಯಣರು ಅನೇಕ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಅಲ್ಲದೆ ಹಿಂಸೆ ಮತ್ತು ಮೂಢ ನಂಬಿಕೆ ವಿರುದ್ಧ ಧನಿ ಎತ್ತುತ್ತಾರೆ. ಜನರಲ್ಲಿನ ಮೌಢ್ಯತೆಯನ್ನು ದೂರ ಮಾಡಲು ಶ್ರಮಿಸುತ್ತಾರೆ.

ಸ್ವಾಮಿ ನಾರಾಯಣ ಜಯಂತಿ ಆಚರಣೆ ಹೇಗೆ? : ನಾರಾಯಣರ ಅನುಯಾಯಿಗಳು ಈ ದಿನದಂದು ಕಟ್ಟುನಿಟ್ಟಾದ ಉಪವಾಸ ಮಾಡುತ್ತಾರೆ. ನಿರಂತರ ಪ್ರಾರ್ಥನೆ ಸಲ್ಲಿಸುವ ಮೂಲಕ ಸ್ವಾಮಿ ನಾರಾಯಣರನ್ನು ಭೂಮಿಗೆ ಆಹ್ವಾನಿಸುತ್ತಾರೆ. ನಾರಾಯಣರ ಮೂರ್ತಿಯನ್ನು ಉಯ್ಯಾಲೆಯಲ್ಲಿ ಇರಿಸಿ ವಿವಿಧ ಖಾದ್ಯಗಳ ನೈವೇದ್ಯ ಅರ್ಪಿಸಲಾಗುತ್ತದೆ. ನಂತರ ನಾರಾಯಣರಿಗೆ ಆರತಿ ಬೆಳಗುತ್ತಾ, ಪ್ರಾರ್ಥನೆ ಸಲ್ಲಿಸುತ್ತಾ, ನಾರಾಯಣರ ಮೂರ್ತಿ ಇರುವ ಉಯ್ಯಾಲೆಯನ್ನು ತೂಗಲಾಗುತ್ತದೆ. ಅಷ್ಟೇ ಅಲ್ಲ ಸ್ವಾಮಿ ನಾರಾಯಣರು 6 ದಿನಗಳ ಕಾಲ ಭೂಮಿಯ ಮೇಲೆ ಅಂದರೆ ತೊಟ್ಟಿಲಲ್ಲಿ ಇರುತ್ತಾರೆ ಎಂಬ ನಂಬಿಕೆ ಇದ್ದು, ಆರು ದಿನಗಳ ಕಾಲವೂ ವಿಶೇಷ ಪೂಜೆ, ಪುನಸ್ಕಾರ, ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಾದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author