ವಕೀಲೆಯಾಗಿದ್ದರೂ ಆಕೆ ಟ್ರಕ್ ಓಡಿಸುತ್ತಿದ್ದುದು ಏಕೆ..? ಭಾರತದ ಮೊದಲ ಮಹಿಳಾ ಟ್ರಕ್ ಚಾಲಕಿಯ ಯಶೋಗಾಥೆ

ವಕೀಲೆಯಾಗಿದ್ದರೂ ಆಕೆ ಟ್ರಕ್ ಓಡಿಸುತ್ತಿದ್ದುದು ಏಕೆ..? ಭಾರತದ ಮೊದಲ ಮಹಿಳಾ ಟ್ರಕ್ ಚಾಲಕಿಯ ಯಶೋಗಾಥೆ

 

ಜೀವನದಲ್ಲಿ ಪ್ರತಿಯೊಬ್ಬರಿಗೂ ದೊಡ್ಡವರಾದಾಗ ನಾನು ಹೀಗೆ ಆಗಬೇಕೆಂಬ ಕನಸಿರುತ್ತದೆ. ಆದರೆ ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳಿಂದ ಈ ಎಲ್ಲಾ ಕನಸುಗಳು ನನಸಾಗವುದು ಕಷ್ಟ. ಆಗೆಲ್ಲಾ ವಾಸ್ತವವನ್ನು ಅರ್ಥೈಸಿಕೊಂಡು ಅರಿತು ಜೀವನ ನಡೆಸಬೇಕಾಗುತ್ತದೆ. ಸೋತಾಗ ಕೊರಗದೆ ಇರುವುದರಲ್ಲೇ ಖುಷಿ ಕಂಡುಕೊಂಡು ಬದುಕಿದಾಗಲಷ್ಟೇ ಜೀವನದಲ್ಲಿ ಯಶಸ್ವಿಯಾಗಬಹುದು. ಈ ರೀತಿ ಬದುಕನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿದವರು ಜೀವನದಲ್ಲಿ ಸೋತ ನಿದರ್ಶನವೇ ಇಲ್ಲ.

yogitha raghuvanshisource and pic credit: https://www.thehindu.com

ಭಾರತದ ಮೊದಲ ಮಹಿಳಾ ಟ್ರಕ್ ಚಾಲಕಿ

 

ಅದೇ ರೀತಿ ಬಾಳಿ ಬದುಕಿದವರು ಈಕೆ. ಭಾರತದ ಮೊದಲ ಮಹಿಳಾ ಟ್ರಕ್ ಚಾಲಕಿ, ಹೆಸರು ಯೋಗಿತಾ ರಘುವಂಶಿ. ಮೂಲತಃ ಮಹಾರಾಷ್ಟ್ರದವರು. ವೃತ್ತಿಯಲ್ಲಿ ಟ್ರಕ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಅನಕ್ಷರಸ್ಥರು ಎಂದು ಅಂದುಕೊಳ್ಳಬೇಕಾಗಿಲ್ಲ. ಇವರು ಡಬಲ್ ಡಿಗ್ರಿ ಪದವೀಧರೆ. ಬಿ.ಕಾಂನಲ್ಲಿ ಪದವಿ ಮಾಡಿದ ಬಳಿಕ ಕಾನೂನು ಪದವಿಯನ್ನೂ ಪಡೆದಿದ್ದಾರೆ. ಆದರೆ ಇಷ್ಟೆಲ್ಲಾ ವಿದ್ಯಾಭ್ಯಾಸ ಇದ್ದೂ ಸಹ ಟ್ರಕ್ ಚಾಲಕಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

yogitha raghuvanshisource and pic credit: https://www.team-bhp.com

ಯೋಗಿತಾ 1991ರಲ್ಲಿ ಪದವಿ ಶಿಕ್ಷಣದ ನಂತರ ಕೆಲಕಾಲ ವಕೀಲ ವೃತ್ತಿ ಮಾಡಿಕೊಂಡಿದ್ದರು. ಆ ನಂತರ ಮಧ್ಯಪ್ರದೇಶದ ಭೋಪಾಲ್ ಮೂಲದ ರಘುವಂಶಿ ಎಂಬವರನ್ನು ವಿವಾಹವಾಗಿದ್ದರು. ಆರಂಭದಲ್ಲೇ ಚೆನ್ನಾಗೇ ಇದ್ದ ಯೋಗಿತಾ ಸಂಸಾರ ನಂತರ ಆರ್ಥಿಕ ಮುಗ್ಗಟ್ಟಿನಿಂದಾಗಿ ಸಂಕಷ್ಟದಲ್ಲಿ ಸಿಲುಕಿತು. ಜೀವನ ನಿರ್ವಹಣೆಯೇ ಕಷ್ಟವಾಗಿ ಪರಿಣಮಿಸಿತು. ಇದೇ ಸಂದರ್ಭದಲ್ಲಿ ಯೋಗಿತಾ ಪತಿ ರಘುವಂಶಿ ಮೃತಪಟ್ಟ ಕಾರಣ ಸಂಸಾರದ ಸಂಪೂರ್ಣ ಜವಾಬ್ದಾರಿ ಯೋಗಿತಾ ಹೆಗಲಿಗೆ ಇತ್ತು.

yogitha raghuvanshisource and pic credit: https://www.storypick.com

ಪುಟ್ಟ ಮಕ್ಕಳನ್ನು ಸಾಕಬೇಕಾದರೆ ಕೆಲಸಕ್ಕೆ ಹೋಗಲೇ ಬೇಕಾಗಿತ್ತು. ಹಿರಿಯ ವಕೀಲರ ಬಳಿ ವೃತ್ತಿ ಅಭ್ಯಾಸಕ್ಕೆ ಹೋಗುವಾಗ ಅವರು ನೀಡುವ ಸಂಬಳವು ತನ್ನ ಸಂಸಾರಕ್ಕೆ ಸಾಕಾಗದುಎಂಬುದು ಯೋಗಿತಾ ಅರಿವಿಗೆ ಬಂತು.ಇದಕ್ಕಿಂತಲೂ ಮೊದಲು ಅವರು ಸಲೂನ್, ಡ್ರೆಸ್ ಡಿಸೈನಿಂಗ್ ನಲ್ಲಿಯೂ ಕೆಲಸ ಮಾಡಿದ್ದರು.ಹೀಗಾಗಿ ಯೋಗಿತಾ ಕಷ್ಟದ ನಡುವೆಯೂ ದಿನಂಪ್ರತಿ ಗಳಿಕೆಗಾಗಿ ಟ್ರಕ್ ಚಾಲನೆಯನ್ನು ಆಯ್ಕೆ ಮಾಡಿಕೊಂಡರು. ವಕೀಲ ವೃತ್ತಿಗಿಂತಲೂ ಹೆಚ್ಚಿನ ಗಳಿಕೆ ಮಾಡಬಹುದು ಎನ್ನುವ ಉದ್ದೇಶದಿಂದ ವಕೀಲ ವೃತ್ತಿಗೆ ಯೋಗಿತಾ ಅವರು ಗುಡ್‌ಬೈ ಹೇಳಿದ್ದರಂತೆ.

yogitha raghuvanshisource and pic credit: https://www.storypick.com

ತನ್ನ ಪತಿ ನಡೆಸುತ್ತಿದ್ದ ರಾಜ್ಹನ್ಸ್ ಟ್ರಾನ್ಸೋರ್ಟ್ ಕಂಪನಿ ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಯೋಗಿತಾ ನಿರ್ಧರಿಸಿಕೊಂಡರು.ಆದರೆ ಚಾಲಕರಿಗೆ ಸಂಬಳವನ್ನು ಕೊಟ್ಟು ಲಾಭ ಗಳಿಸುವುದು ಕಷ್ಟವಾಗಿತ್ತು. ಹೀಗಾಗಿ ತಾವೇ ಟ್ರಕ್ ಚಲಾಯಿಸಿದರೆ ಹೇಗೆ ಎಂಬ ಯೋಚನೆ ಯೋಗಿತಾ ಅವರಿಗೆ ಬಂತು. ಅದರಂತೆ ವಕೀಲ ವೃತ್ತಿಗೆ ಗುಡ್‌ಬೈ ಹೇಳಿ ಟ್ರಕ್ ಡ್ರೈವಿಂಗ್‌ ಕಲಿಯಲು ಡ್ರೈವಿಂಗ್ ಸ್ಕೂಲ್‍ ಗೆ ಸೇರಿಕೊಂಡರು. 

yogitha raghuvanshi

ಯೋಗಿತಾ ಮೊದಲ ಬಾರಿಗೆ ಭೋಪಾಲ್ ನಿಂದ ಅಹಮದಾಬಾದ್ ಗೆ ಟ್ರಕ್ ಚಲಾಯಿಸಿದ್ದರು, ಮೊದಲ ಬಾರಿ ಟ್ರಕ್ ಚಲಾಯಿಸುವಾಗ ರಸ್ತೆಯೇ ಸರಿಯಾಗಿ ತಿಳಿದಿರಲ್ಲಿಲ್ಲ. ಹೈವೇಯಲ್ಲಿ ಹೋಗುವಾಗ ರೋಡ್ ಎಲ್ಲಿಗೆ ಕನೆಕ್ಟ್ ಆಗುವುದಾಗಿ ಜನರಲ್ಲಿ ಕೇಳುತ್ತಾ ಸಂಚರಿಸಿದ್ದಾಗಿ ಯೋಗಿತಾ ಹೇಳಿಕೊಂಡಿದ್ದರು. ಆ ಬಳಿಕ ತಾನೂ ಟ್ರಕ್ ಚಲಾಯಿಸಿ ಜೊತೆಗೆ ಬೇರೆಯವರಿಗೂ ತಮ್ಮ ಕಂಪನಿಯಲ್ಲಿ ಕೆಲಸ ಕೊಟ್ಟುಯೋಗಿತಾ ರಘುವಂಶಿ ಮಾದರಿಯಾದರು.

yogitha raghuvanshisource and pic credit: https://www.thehindutimes.in

ದೇಶದ ಏಕೈಕ ಸರ್ಟಿಫೈಡ್ ಟ್ರಕ್ ಚಾಲಕಿ

ಸದ್ಯ ಮಹಾರಾಷ್ಟ್ರದಲ್ಲಿ ನೆಲೆಸಿರುವ ಯೋಗಿತಾ ರಘುವಂಶಿಯವರು ಮುಂಬೈನಿಂದ ದೇಶದ ವಿವಿಧ ಭಾಗಗಳಿಗೆ ಗೂಡ್ಸ್ ಸಾಗಾಣಿಕೆಗಾಗಿ ಟ್ರಕ್ ಚಾಲನೆ ಮಾಡುತ್ತಿದ್ದರು. ದೇಶದ ಏಕೈಕ ಸರ್ಟಿಫೈಡ್ ಟ್ರಕ್ ಚಾಲಕಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.ಯೋಗಿತಾ 2013ರಿಂದ ಇದುವರೆಗೆ ದೇಶದ ವಿವಿಧಡೆ ಬರೋಬ್ಬರಿ 5 ಲಕ್ಷ ಕಿ.ಮೀ ಟ್ರಕ್ ಚಾಲನೆ ಮಾಡಿದ್ದಾರೆ. ಆದರೆ ಇದುವರೆಗೆ ಯಾವುದೇ ಒಂದೇ ಒಂದು ಸಣ್ಣ ಅಪಘಾತವಾಗದಂತೆ ಎಚ್ಚರಿಕೆಯ ವಾಹನ ಚಾಲನೆ ಮಾಡಿರುವುದನ್ನು ಅವರ ಹೆಗ್ಗಳಿಕೆ.

yogitha raghuvanshisource and pic credit: https://www.trendsmap.com

ಸದ್ಯ ಯೋಗಿತಾ ಅವರು ಸ್ವಂತಕ್ಕೊಂದು ಟ್ರಕ್ ಖರೀದಿಸಿ ಬಾಡಿಗೆಗೆ ಬಿಟ್ಟಿದ್ದಾರೆ. 50 ವರ್ಷದ ಯೋಗಿತಾ ಅವರಿಗೆ ಇಬ್ಬರು ಪುತ್ರಿಯರು ಸಹ ಇದ್ದು, ಇಬ್ಬರೂ ಸಹ ಪದವಿ ಶಿಕ್ಷಣ ಓದುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಟ್ರಕ್ ಚಾಲನೆಯನ್ನೇ ನಂಬಿಕೊಂಡಿರುವ ಯೋಗಿತಾ ಅವರ ಜೀವನ ಶೈಲಿಯನ್ನು ನೋಡಿದ್ರೆ ಪ್ರತಿಯೊಬ್ಬರು ಹೆಮ್ಮೆಪಡಬೇಕಾದ ವಿಚಾರ

Enjoyed this article? Stay informed by joining our newsletter!

Comments

You must be logged in to post a comment.

Related Articles
About Author