ವರೂಥಿನಿ ಏಕಾದಶಿ ಆಚರಿಸಿದರೆ ಏನೆಲ್ಲಾ ಶುಭಫಲ ಸಿಗುತ್ತದೆ..?

ಅತ್ಯಂತ ಶುಭಕರ ವರೂಥಿನಿ ಏಕಾದಶಿಯಂದು ಏನು ಮಾಡಬೇಕು.. ಏನು ಮಾಡಬಾರದು..?

ವೈಶಾಖ ತಿಂಗಳ ಕೃಷ್ಣ ಪಕ್ಷದಲ್ಲಿ ವರೂಥಿನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳಲ್ಲಿ ವರುಥಿನಿ ಏಕಾದಶಿ ಬಹಳ ಮುಖ್ಯವಾದ ಉಪವಾಸ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಏಕಾದಶಿಯಂದು ಮಾಡುವ ಉಪವಾಸ ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಎರಡು ದಿನಗಳ ಕಾಲ ವರುಥಿನಿ ಏಕಾದಶಿ ಉಪವಾಸವನ್ನು ಸೂಚಿಸಲಾಗುತ್ತದೆ. ಆದರೆ ಒಬ್ಬರೇ ಎರಡೂ ದಿನಗಳ ಕಾಲ ಉಪಾವಸ ಇರುವ ಬದಲು ಕುಟುಂಬದಲ್ಲಿ ಇಬ್ಬರು ಒಂದೊಂದು ದಿನ ಉಪವಾಸ ಆಚರಿಸಬಹುದು.

ಈ ವರೂಥಿನಿ ಏಕಾದಶಿಯನ್ನು ಆಚರಿಸುವುದರಿಂದ ಇತರೆ ಏಕಾದಶಿ ಆಚರಿಸುವ ನೂರು ಪಟ್ಟು ಹೆಚ್ಚು ಶುಭವಾಗುತ್ತದೆ ಎನ್ನಲಾಗುತ್ತದೆ. ಇದು ಪುಣ್ಯ ಹಾಗೂ ಸೌಭಾಗ್ಯ ಪ್ರದಾನ ಮಾಡುವ ಏಕಾದಶಿಯಾಗಿದೆ. ವರೂಥಿನಿ ಏಕಾದಶಿಯ ದಿನ ಉಪವಾಸ, ದಾನ ಮತ್ತು ವಿಧಿವಿಧಾನದ ಮೂಲಕ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದರೆ, ಮೋಕ್ಷ ಪ್ರಾಪ್ತಿಯಾಗುತ್ತದೆ. ಅಷ್ಟೆ ಅಲ್ಲದೆ, ಪಾಪ ಕರ್ಮಗಳು ನಿವಾರಣೆಯಾಗುತ್ತವೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ.

ವರೂಥಿನಿ ಏಕಾದಶಿಯ ಪೂಜೆ ಹೇಗೆ..?: ಇಂದು ಲಕ್ಷ್ಮಿ  ನಾರಾಯಣ ಸ್ವಾಮಿಗೆ ಕುಂಕುಮ, ಕಮಲದ ಹೂ, ತುಳಸಿ ಅರ್ಪಿಸಿ ಪೂಜೆ ಸಲ್ಲಿಸಬೇಕು, ಮನೆಯಲ್ಲಿ ವಾದ ವಿವಾದಂತ ಗೊಂದಲಗಳಿದ್ದಲ್ಲಿ, ಇವುಗಳನ್ನು ಬಗೆಹರಿಸಲು ಬಾಲ ಗೋಪಾಲ ಮೂರ್ತಿಗೆ  ಮೊಸರನ್ನು ಅರ್ಪಿಸಬೇಕು. ನೆಮ್ಮದಿಯ ದಾಂಪತ್ಯ ಜೀವನಕ್ಕಾಗಿ , ಲಕ್ಷ್ಮಿ ನಾರಾಯಣ ವಿಗ್ರಹಕ್ಕೆ ಸ್ವಲ್ಪ ಒಣ ಬಣ್ಣ ಅಂದರೆ ಅರಿಶಿಣ  ಕುಂಕುಮದಂತಹ ಬಣ್ಣವನ್ನು  ಅರ್ಪಿಸಬೇಕು. ವ್ಯವಹಾರ ನಷ್ಟದಲ್ಲಿದ್ದರೆ, ಶ್ರೀಕೃಷ್ಣನ ವಿಗ್ರಹಕ್ಕೆ ಕೆಲವು ನೀಲಿ ಹೂವುಗಳನ್ನು ಅರ್ಪಿಸಿ. ಆರ್ಥಿಕ ಒತ್ತಡವನ್ನು ಎದುರಿಸುತ್ತಿದ್ದರೆ, ವಿಷ್ಣುವಿನ ವಿಗ್ರಹಕ್ಕೆ ಕೆಲವು ಧೂಪದ್ರವ್ಯಗಳನ್ನು ಅರ್ಪಿಸಿ. 

ಇನ್ನು ವರೂಧಿನಿ ಏಕಾದಶಿಯಂದು ಉಪವಾಸವಿದ್ದು ಪೂಜೆ ಸಲ್ಲಿಸುವವರು ಧೂಮಪಾನ, ಮದ್ಯಪಾನ ಮಾಡಬಾರದು. ಬೇರೆಯವರ ಬಗ್ಗೆ ಕೆಟ್ಟ ಯೋಚನೆ ಮಾಡಬಾರದು. ಅಷ್ಟೇ ಅಲ್ಲ ಈ ದಿನ ಮಧ್ಯಾಹ್ನದಂದು ನಿದ್ರಿಸಬಾರದು. ಈ ದಿನದಂದು ಮಧ್ಯಾಹ್ನ ನಿದ್ರಿಸಿದರೆ ದೇವರ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author