ವಸಂತ ಋತುವಿನ ಆಗಮನದ ಸಂಕೇತ ‘ಲೋಹ್ರಿ’ ಬಗ್ಗೆ ನಿಮಗೆಷ್ಟು ಗೊತ್ತು..?

ಪಂಜಾಬ್ ನ ಪ್ರಮುಖ ಹಬ್ಬ ‘ಲೋಹ್ರಿ’ ಬಗ್ಗೆ ತಿಳಿಯಿರಿ..

ಲೋಹ್ರಿ ಪಂಜಾಬ್ ನ ಜನಪ್ರಿಯ ಹಬ್ಬವಾಗಿದೆ.. ಪಂಜಾಬಿನಲ್ಲಿ ಈ ಹಬ್ಬವನ್ನು ಒಬ್ಬರ ಮನೆಗೆ ಒಬ್ಬರು ಹೋಗಿ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಈ ಹಬ್ಬವನ್ನು ಉತ್ತರ ಭಾರತದ ಇತರೆ ಭಾಗಗಳಲ್ಲೂ ಆಚರಿಸಲಾಗುತ್ತದೆ.  ಪಂಜಾಬಿಗರ ಚಳಿಗಾಲದ ಸುಗ್ಗಿ ಹಬ್ಬವೆಂದರೆ ಅದು ಲೋಹ್ರಿ ಹಬ್ಬ. ಈ ಹಬ್ಬ ಸಂಕ್ರಾಂತಿ ಹಬ್ಬದಷ್ಟೇ ಪ್ರಖ್ಯಾತಿ ಪಡೆದಿದ್ದು. ಈ ಹಬ್ಬವನ್ನು ಮಕರ ಸಂಕ್ರಾಂತಿಯ ಒಂದು ರಾತ್ರಿ ಮೊದಲು (ಚಾಂದ್ರಮಾನ ಕ್ಯಾಲೆಂಡರ್ ನ ಚಳಿಗಾಲದ ತಿಂಗಳುಗಳ ಕೊನೆಯ ದಿನ) ಆಚರಿಸಲಾಗುತ್ತದೆ ಮತ್ತು ಇದನ್ನು ವಸಂತಕಾಲ ಮತ್ತು ದೀರ್ಘ ದಿನಗಳ ಆರಂಭವೆಂದು ಪರಿಗಣಿಸಲಾಗುತ್ತದೆ.

ಈ ಹಬ್ಬದ ಸಂದರ್ಭದಲ್ಲಿ ಜನರು ಸೂರ್ಯನಿಗೆ ಎಳ್ಳು-ಬೆಲ್ಲ, ಕಡಲೆಕಾಯಿ ಮತ್ತು ಇತರ ಸಾಂಪ್ರದಾಯಿಕ ಆಹಾರವನ್ನು ಅರ್ಪಿಸುತ್ತಾರೆ  ಹಾಗೂ ಸಂತೋಷ, ಸಮೃದ್ಧಿ ಮತ್ತು ಉತ್ತಮ ಬೆಳೆಗಾಗಿ ಪ್ರಾರ್ಥಿಸುತ್ತಾರೆ.

ಹಬ್ಬದ ಸಂದರ್ಭದಲ್ಲಿ ಪಂಜಾಬಿಗರ ಸಂಪ್ರದಾಯಿಕ ಉಡುಗೆ ತೊಟ್ಟು, ತಮ್ಮ ಸಂಸ್ಕೃತಿ ಬಿಂಬಿಸುವ ನೃತ್ಯ ಮಾಡುತ್ತಾರೆ. ಅಷ್ಟೇ ಅಲ್ಲ ಈ ಹಬ್ಬದ ಸಂದರ್ಭದಲ್ಲಿ ಅವರ ಸಾಂಪ್ರದಾಯಿಕ ಆಹಾರ ಖಾದ್ಯಗಳಾದ ಆಲೂ ಭರ್ವಾ ಚನಾ ಟಿಕ್ಕಿ, ಖಸ್ತಾ ಪನ್ನೀರ್ ಟಿಕಾ ಸೇರಿದಂತೆ ಬಗೆ ಬಗೆಯ ತಿನಿಸುಗಳನ್ನು ಮಾಡಿ, ಹಂಚಿ ತಿನ್ನುತ್ತಾರೆ. 

 ಪುರಾಣಗಳ ಪ್ರಕಾರ ಲೋಹ್ರಿ ಹಬ್ಬವನ್ನು ತ್ಯಾಗದ ಸಂಕೇತವಾಗಿ ಪ್ರತಿವರ್ಷ ಆಚರಣೆ ಮಾಡಲಾಗುತ್ತದೆ. ಸತಿ(ಪಾರ್ವತಿ ದೇವಿ)ಯ ತಂದೆ ದಕ್ಷ ಮಹದೇವ ಶಿವನನ್ನು ತಿರಸ್ಕರಿಸಿದ್ದನು. ಅಷ್ಟೇ ಅಲ್ಲದೆ ತನ್ನ ಮಗಳನ್ನು ಮಾತ್ರ ತನ್ನ ಯಜ್ಞದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದನು. ಇದರಿಂದ ಕುಪಿತಳಾದ ಸತಿ ತನ್ನನ್ನು ತಾನು ಅಗ್ನಿಗೆ ಸಮರ್ಪಿಸಿಕೊಂಡಿದ್ದಳು. ಇದನ್ನು ಲೋಹ್ರಿ ಎಂದು ಆಚರಣೆ ಮಾಡಲಾಗುತ್ತದೆ. 

ಈ ಹಬ್ಬದ ಸಂದರ್ಭದಲ್ಲಿ ಮನೆಯ ಎದುರು ಬೆಂಕಿ ಹಾಕಿ ಅದರ ಸುತ್ತಲೂ ಮನೆ ಮಂದಿ, ಸಂಬಂಧಿಕರು ಬಂದು ಪೂಜೆ ಮಾಡಿ ಸಂಭ್ರಮಿಸುತ್ತಾರೆ. ಜೊತೆಗೆ ಲೋಹ್ರಿ ಗೀತೆ ಕೂಡ ಹಾಡುತ್ತಾರೆ. ಇಲ್ಲಿ ಬೆಂಕಿಯು ಚಳಿಗಾಲದ ಸಮಯವನ್ನು ಹಾದುಹೋಗುವುದನ್ನು ಸೂಚಿಸುತ್ತದೆ ಮತ್ತು ಬೇಸಿಗೆಯನ್ನು ಸ್ವಾಗತಿಸುತ್ತದೆ. ಅಷ್ಟೇ ಅಲ್ಲ ಹಿಂದೂ ಮತ್ತು ಸಿಖ್ ಸಮುದಾಯಗಳು ಪಂಜಾಬ್ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ಮುಖ್ಯವಾಗಿ ಪೂಜಿಸಲ್ಪಟ್ಟ ಈ ಉತ್ಸವದಲ್ಲಿ ಪವಿತ್ರ ದೀಪೋತ್ಸವವನ್ನು ಆಚರಿಸಲಾಗುತ್ತದೆ..

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author