ವಾಟ್ಸ್ಅಪ್ ನಲ್ಲಿಯೂ ಕೋವಿಡ್-19 ಲಸಿಕಾ ಕೇಂದ್ರದ ಮಾಹಿತಿ ಲಭ್ಯ

ಭಾರತದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಸೋಂಕು ಹರಡುವುದನ್ನು ತಡೆಯಲುಕೋವಿಡ್‍-19 ಲಸಿಕಾ ಅಭಿಯಾನ ಕೂಡಾಜಾರಿಯಲ್ಲಿದೆ. ಈಗಾಗಲೇ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಮೇ 1ರಿಂದ 18ರಿಂದ 44 ವರ್ಷದೊಳಗಿನ ಎಲ್ಲರಿಗೂ ವ್ಯಾಕ್ಸಿನೇಷನ್‌ ನೀಡುವ ಅಭಿಯಾನ ಸಹ ಪ್ರಾರಂಭವಾಗಿದೆ.ಇನ್ಮುಂದೆ, ನಿಮ್ಮ ಸಮೀಪದ ಲಸಿಕಾ ಕೇಂದ್ರವನ್ನು ಹುಡುಕುವುದು ಇನ್ನಷ್ಟು ಸುಲಭ. ವಾಟ್ಸಾಪ್‍ ನಲ್ಲಿ ಸಮೀಪದ ಲಸಿಕಾ ಕೇಂದ್ರದ ಮಾಹಿತಿ ನಿಮಗೆ ಸುಲಭವಾಗಿ ಲಭ್ಯವಾಗಲಿದೆ.

 

 

 

whatsappsource and pic credit:The economic times

 

ಲಸಿಕೆ ಪಡೆದುಕೊಳ್ಳಲು ನಿಮ್ಮ ಹತ್ತಿರದ ಕೋವಿಡ್‌ ಲಸಿಕೆ ಕೇಂದ್ರವನ್ನು ಸರ್ಚ್‌ ಮಾಡಲು ಗೂಗಲ್, ಅಮೆಜಾನ್ ಪೇಜ್‍ ಗಳು ಹಲವು ಕ್ರಮಗಳನ್ನು ಪರಿಚಯಿಸಿವೆ. ಇದೀಗ ಇದೇ ಹಾದಿಯಲ್ಲಿ ವಾಟ್ಸಾಪ್ ಕೂಡ ಹೆಜ್ಜೆಯಿಟ್ಟಿದೆ. ವಾಟ್ಸಾಪ್‌ ಬಳಕೆದಾರರಿಗೆ ಹತ್ತಿರದ ಕೊರೊನಾ ಲಸಿಕೆ ಕೇಂದ್ರವನ್ನು ಕಂಡುಹಿಡಿಯಲು ಉತ್ತಮ ಆಯ್ಕೆಯನ್ನು ಪರಿಚಯಿಸಿದೆ.

whatsappsource and pic credit: https://www.dnaindia.com

ವಾಟ್ಸಾಪ್‍ನಲ್ಲಿ ಲಸಿಕಾ ಕೇಂದ್ರದ ಮಾಹಿತಿ

ಹೌದು, ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ಬಳಕೆದಾರರು ಸಹ ಈಗ ಸುಲಭವಾಗಿ ಕೊರೊನಾ ಲಸಿಕೆ ಕೇಂದ್ರವನ್ನು ಸರ್ಚ್‌ ಮಾಡಬಹುದಾಗಿದೆ. ನಿಮ್ಮ ಸಮೀಪ ಕೋವಿಡ್ ಲಸಿಕಾ ಕೇಂದ್ರ ಎಲ್ಲಿದೆ ಎಂದು ಯಾವ್ಯಾವುದೋ ಸೈಟ್‍ಗೆ ಹೋಗಿ ಹುಡುಕಾಡುವ ಬದಲು ವಾಟ್ಸಾಪ್‍ನಲ್ಲಿ ಲಸಿಕಾ ಕೇಂದ್ರದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ವಾಟ್ಸಾಪ್‍ನಲ್ಲಿಚಾಟ್‌ಬಾಟ್‌ಗಳ ರೂಪದಲ್ಲಿ ಸಹಾಯವಾಣಿಗಳನ್ನು ನಿರ್ವಹಿಸಲಾಗಿದೆ. MyGov ಕೊರೋನಾ ಹೆಲ್ಪ್‌ಡೆಸ್ಕ್ ಚಾಟ್‌ಬಾಟ್‌ಗೆ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರವನ್ನು ಕಂಡುಹಿಡಿಯುವ ಆಯ್ಕೆಯನ್ನು ವಾಟ್ಸಾಪ್ ಸೇರಿಸಿದೆ. ಚಾಟ್‌ಬಾಟ್ ನಿಮ್ಮೆ ಹತ್ತಿರದ ಕೋವಿಡ್‍-19 ವ್ಯಾಕ್ಸಿನೇಷನ್ ಕೇಂದ್ರದ ಮಾಹಿತಿಯನ್ನು ಸುಲಭವಾಗಿ ನಿಮ್ಮ ಮುಂದಿಡುತ್ತದೆ.

whatsappsource and pic credit: https://in.pcmag.com/

 

ಲಸಿಕೆ ಕೇಂದ್ರವನ್ನು ಹುಡುಕುವುದು ಹೇಗೆ?
ವಾಟ್ಸಾಪ್ ಮೂಲಕ ಹತ್ತಿರದ COVID-19 ಲಸಿಕೆ ಕೇಂದ್ರವನ್ನು ಹುಡುಕುವುದು ಹೇಗೆಂದರೆ ಮೊದಲಿಗೆ +91 9013151515 ಸಂಖ್ಯೆಯನ್ನು ನಿಮ್ಮ ಮೊಬೈಲ್‍ನಲ್ಲಿ ಸೇವ್ ಮಾಡಿಕೊಳ್ಳಿ. ಅದು myGov ಕೊರೋನಾ ಹೆಲ್ಪ್‌ಡೆಸ್ಕ್ ಚಾಟ್‌ಬಾಟ್‌ಗೆ ಸೇರಿಕೊಳ್ಳುತ್ತದೆ. ನಂತರ ವಾಟ್ಸಾಪ್‍ ಗೆ ಹೋಗಿ ಕಾಂಟ್ಯಾಕ್ಟ್‍ ಲಿಸ್ಟ್ ನಲ್ಲಿ ಸೇವ್ ಆಗಿರುವ ಈ ನಂಬರ್‍ ನ್ನು ಹುಡುಕಿ. ಈ ನಂಬರ್‍ ಗೆ ನಮಸ್ತೆ ಎಂಬ ಮೆಸೇಜ್‍ನ್ನು ಕಳುಹಿಸಿ.

ನಂತರ ಸ್ವಯಂಚಾಲಿತ ಪ್ರತಿಕ್ರಿಯೆ ನಿಮ್ಮ ಪಿನ್ ಕೋಡ್ ನ್ನು ಕೇಳುತ್ತದೆ. ಅದನ್ನು ನಮೂದಿಸಿ. ಈಗ ಚಾಟ್‌ಬಾಟ್ ನಿರ್ದಿಷ್ಟ ಸ್ಥಳದಲ್ಲಿ ಲಸಿಕೆ ಕೇಂದ್ರದ ಪಟ್ಟಿಯನ್ನು ನಿಮಗೆ ಕಳುಹಿಸುತ್ತದೆ.ಒಂದು ವೇಳೆ ನೀವು myGov ಸಂಪರ್ಕ ಸಂಖ್ಯೆಯನ್ನು ಉಳಿಸಲು ಬಯಸದಿದ್ದರೆ, ನೀವು ಕೇವಲ wa.me/919013151515 ಗೆ ಹೋಗಬಹುದು.

whatsappsource and pic credit: The economic times

 

ಈ ಮೂಲಕ ಇನ್ಮುಂದೆ ಸಮೀಪದ ಕೊರೋನಾ ಲಸಿಕಾ ಕೇಂದ್ರಗಳನ್ನು ಹುಡುಕಿ ವಾಕ್ಸಿನ್ ಹಾಕಿಸಿಕೊಳ್ಳುವುದು ಸುಲಭವಾಗಿದೆ.

ಲಸಿಕೆ ಪಡೆದುಕೊಳ್ಳುವವರಿಗೆ ಅನುಕೂಲವಾಗುವಂತೆ ಗೂಗಲ್ ಅಪ್ಲಿಕೇಶನ್ ಈಗಾಗಲೇ ಮಾಹಿತಿ ನೀಡುತ್ತಿದೆ. ಗೂಗಲ್ ಸರ್ಚ್ ಅಥವಾ ಮ್ಯಾಪ್ ಮೂಲಕ ವ್ಯಾಕ್ಸಿನ್ ಸೆಂಟರ್ ನಿಯರ್ ಮಿ ಎಂದು ಟೈಪ್ ಮಾಡಿದರೆ ಸಮೀಪದಲ್ಲಿರುವ ಲಸಿಕಾ ಕೇಂದ್ರದ ಮಾಹಿತಿಯನ್ನು ಗೂಗಲ್ ತನ್ನ ಬಳಕೆದಾರರಿಗೆ ನೀಡುತ್ತದೆ.

Enjoyed this article? Stay informed by joining our newsletter!

Comments

You must be logged in to post a comment.

About Author