ವೈದ್ಯನಾಥ ಜ್ಯೋತಿರ್ಲಿಂಗ ದರ್ಶನಕ್ಕೆ ಜನ ಸಾಗರ..

ವೈದ್ಯನಾಥ ಜ್ಯೋತಿರ್ಲಿಂಗ ದರ್ಶನಕ್ಕೆ ಜನ ಸಾಗರ..

ಶ್ರೀ ವೈದ್ಯನಾಥೇಶ್ವರ ಸ್ವಾಮಿ ಜ್ಯೋತಿರ್ಲಿಲಿಂಗವು ಹಿಂದಿನ ಬಿಹಾರ ರಾಜ್ಯದ, ಈಗಿನ ಜಾರ್ಖಾಂಡ್ನ  ಸಂಥಾಲ್ ಜಿಲ್ಲೆಯಲ್ಲಿದೆ. ವೈದ್ಯನಾಥ ಅಥವಾ ಬೈದ್ಯನಾಥ, ಇದು ಭಾರತದಲ್ಲಿನ ಒಂದು ವಿವಾದಿತ ಜ್ಯೋತಿರ್ಲಿಂಗ ದೇವಸ್ಥಾನವಾಗಿದ್ದು, ದೇಶದ ಪ್ರಮುಖ ಮೂರು ರಾಜ್ಯಗಳು ಈ ಬೈದ್ಯನಾಥ ಜ್ಯೋತಿರ್ಲಿಂಗವು ನಮ್ಮ ರಾಜ್ಯದಲ್ಲಿದೆ ಎಂದು ಹೇಳುತ್ತಾ ಬಂದಿವೆ.

ಜಾರ್ಖಾಂಡ್ನ ದಿಯೊಗರದ ವೈದ್ಯನಾಥ್, ಹಿಮಾಚಲ ಪ್ರದೇಶದ ಬೈದ್ಯನಾಥ್ ಮತ್ತು ಮಹಾರಾಷ್ಟ್ರದ ಪಾರ್ಲಿ ವೈಜ್ನಾಥ್ ದೇವಾಲಯ, ಜ್ಯೋತಿರ್ಲಿಂಗವಿರುವ ಸ್ಥಳವೆಂದು ಹೇಳಲ್ಪಡುವ ಸ್ಥಳಗಳು.

ದಿಯೋಗರದ ವೈದ್ಯನಾಥ್ ಅನ್ನು ಬಾಬಾ ಧಾಮ್ ಎಂದೂ ಕರೆಯಲಾಗುತ್ತದೆ. ಈ ಸ್ಥಳಕ್ಕೆ ಪ್ರತಿವರ್ಷ ಹಿಂದೂಗಳು ಶ್ರಾವಣ ಮಾಸದಲ್ಲಿ ಬಂದು ಶಿವಲಿಂಗಕ್ಕೆ ನೀರು ಎರೆಯುತ್ತಾರೆ.

12 ಜ್ಯೋತಿರ್ಲಿಂಗಗಳ ಸಂಪೂರ್ಣ ಮಾಹಿತಿ

ಚಿತಾಭೂಮಿಯಲ್ಲಿದೆಯೇ ವೈದ್ಯನಾಥ ಜ್ಯೋತಿರ್ಲಿಂಗ?

ಭಸ್ಮಧಾರಿ ಪರಶಿವ ಸಾಮಾನ್ಯವಾಗಿ ರುದ್ರಭೂಮಿಯಲ್ಲಿ ಇರುವುದಾಗಿ ಪುರಾಣಗಳು ಹೇಳುತ್ತವೆ. ಇಲ್ಲಿ ಅದನ್ನು ಕಾಣಬಹುದು .ಶ್ರೀ ವೈದ್ಯನಾಥೇಶ್ವರ ಸ್ವಾಮಿ ಕ್ಷೇತ್ರದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಜ್ಯೋತಿರ್ಲಿಲಿಂಗ ಚಿತಾ ಭೂಮಿಯಲ್ಲಿದೆ ಎಂದು ಹೇಳುತ್ತಾರೆ.

ರಾವಣ ಕೈಲಾಸದಿಂದ ತಂದ ಜ್ಯೋತಿರ್ಲಿಂಗವಿದು!

ಈ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಜ್ಯೋತಿರ್ಲಿಲಿಂಗವನ್ನು ರಾವಣ ಕೈಲಾಸದಿಂದ ತಂದನೆಂದು ಪ್ರತೀತಿ ಇದೆ. ಕರ್ನಾಟಕದ ಶ್ರೀ ಗೋಕರ್ಣ ಕ್ಷೇತ್ರದ ಸ್ಥಳ ಪುರಾಣದಂತೆ ಈ ಕಥೆ ತೋರುತ್ತದೆ. ಗರ್ಭಗುಡಿಯ ಒಳಗಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಜ್ಯೋತಿರ್ಲಿಲಿಂಗ ತುಂಬಾ ಚಿಕ್ಕದಾಗಿದೆ. ಪಾಣೀಪೀಠದ ಮದ್ಯೆ ಕಪ್ಪದಾದ ಚಿಕ್ಕ ಲಿಂಗವನ್ನು ಕಾಣಬಹುದು. ಹಾಲು, ನೀರು, ಹೂ, ಪತ್ರೆಗಳನ್ನು ತಂದು ಭಕ್ತರೇ ಸ್ವತಃ ಅಭಿಷೇಕ, ಪೂಜೆ ಮಾಡಿ ಸಂತೋಷ ಪಡಬಹುದು.

ದೇವಾಲಯದ ಸುತ್ತಲೂ ಅನೇಕ ಚಿಕ್ಕ ಚಿಕ್ಕ ಮಂದಿರಗಳಿವೆ. ಶ್ರೀ ಗೌರೀ ಮಾತಾ ಮಂದಿರ ಮುಖ್ಯವಾದುದು. ಒಂದೇ ಪೀಠದ ಮೇಲೆ ಶ್ರೀದುರ್ಗಾ ಮತ್ತು ತ್ರಿಪುರಸುಂದರಿ ಎಂದು ಕರೆಯಲ್ಪಡುವ ಎರಡು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ.

ಈ ದುರ್ಗಾ ತ್ರಿಪುರಸುಂದರಿ ಮೂರ್ತಿಗಳು ಬಹಳ ಸುಂದರವಾಗಿವೆ. ಶ್ರೀ ವೈದ್ಯನಾಥ ಜ್ಯೋತಿರ್ಲಿಲಿಂಗ ದರ್ಶನದಿಂದ ಸಂಸಾರಿಕ ಕಷ್ಟ, ಸಮಸ್ಯೆಗಳೆಲ್ಲಾ ತಪ್ಪಿ, ಮಾನಸಿಕ ಶಾಂತಿ ದೊರೆಯುವುದೆಂದು ಭಕ್ತರ ನಂಬುಗೆ.

ಮಹಾ ಶಿವರಾತ್ರಿ, ಶ್ರಾವಣ ಮಾಸ ಹಾಗೂ ಅಮವಾಸ್ಯೆಗಳಲ್ಲಿ ವಿಶೇಷ ಪೂಜೆ ಇರುತ್ತದೆ. ಆಗ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಂದ ಪ್ರಸಿದ್ಧ ಕುಜರಾಹೋ ಮಂದಿರಗಳನ್ನು ನೋಡಲು ಹೋಗಬಹುದು. ಇದಕ್ಕೆ ಹತ್ತಿರದ ಇನ್ನೊಂದು ಮಹಾಕಾಳೇಶ್ವರ ಜ್ಯೋತಿಲಿರ್ಂಗ ಮಧ್ಯ ಪ್ರದೇಶದಲ್ಲಿದೆ.

ಹೌರಾ- ಪಾಟ್ನಾ ರೈಲು ಮಾರ್ಗದಿಂದ ಬಂದರೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯದ ಹತ್ತಿರವಿರುವ ಜೈಸೀಡೀಹ ಎಂಬ ಸಣ್ಣ ಸ್ಟೇಶನ್ ಸಿಗುತ್ತದೆ. ಇಲ್ಲಿಂದ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಸ್ಸು, ರೈಲು ಹಾಗೂ ಇತರೆ ವಾಹನಗಳ ಸೌಕರ್ಯವಿದೆ. ದೇವಾಲಯಕ್ಕೆ ಅಲ್ಲಿಂದ ಸುಮಾರು 8 ಕಿಲೋ ಮೀಟರ್ ದೂರ ಹೋಗಬೇಕು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author