ಶಾಪಗ್ರಸ್ಥ ದೈತ್ಯ ಹಾವುಗಳು ಕಲ್ಲಾಗಿರುವ ಥಾಯ್ಲೆಂಡಿನ ನಾಗಾ ಲೋಕ..!

ಶಾಪಗ್ರಸ್ಥ ದೈತ್ಯ ಹಾವುಗಳು ಕಲ್ಲಾಗಿರುವ ಥಾಯ್ಲೆಂಡಿನ ನಾಗಾ ಲೋಕ..!

ಎಲ್ಲೆಡೆ ನೋಡಿದರೂ ಕಣ್ಣಿಗೂ ನಿಲುಕದಷ್ಟು ದೊಡ್ಡ ದೊಡ್ಡ ದೈತ್ಯ ಕಲ್ಲುಗಳು. ಅದೆಷ್ಟು ಎತ್ತರವೋ, ಅದೆಷ್ಟು ಅಗಲವೋ ಕಣ್ಣಿಗಂತೂ ನಿಲುಕದು. ಯಾವ್ಯಾವುದೋ ಆಕಾರ, ಗಾತ್ರ. ಆದರೆ ಆಶ್ಚರ್ಯ ಅಂದರೆ ಎಲ್ಲವೂ ಇರುವುದು ಹಾವಿನಾಕಾರದಲ್ಲಿ. ಹಾವಿನ ಮೈ, ಬಾಯಿ, ಸುರುಳಿ ನಿಂತ ಹಾವು ಹೀಗೆ ಹಾವಿನ ರೂಪದ ಕಲ್ಲುಗಳೇ ಇರುವ ಇದು ಥಾಯ್ಲೆಂಡಿನ ನಾಗಾ ಲೋಕ. ಥಾಯ್‍ ಭಾಷೆಯಲ್ಲಿ ನಾಕಾ ಎಂದರೆ ಹಾವು ಎಂದರ್ಥ. ಹಾವಿನ ರೂಪದಲ್ಲಿರುವ ಬೃಹತ್ ಹಾವುಗಳು ಇಲ್ಲಿರುವ ಕಾರಣ ಈ ಪ್ರದೇಶವನ್ನು ನಾಗಾ ಗುಹೆಗಳೆಂದೇ ಕರೆಯುತ್ತಾರೆ.

naga cave thailandsource and pic credit:https://www.journeyingtheglobe.com

ನಾಗಾ ಗುಹೆಗಳೆಂದೇ ಕರೆಯಲ್ಪಡುವ ಈ ಪ್ರದೇಶ ಥಾಯ್ಲೆಂಡಿನ ವಾಟ್ ಥಾಮ್ ಜಾಯ್‍ ನಲ್ಲಿದೆ. ಸುಮಾರು 1 ಲಕ್ಷದಷ್ಟು ಹಳೆಯದಾಗಿರುವ ಈ ನಾಗಾ ಗುಹೆಗಳು ಕಳೆದ ವರ್ಷವಷ್ಟೇ ಕಂಡುಹುಡುಕಲ್ಪಟ್ಟಿವೆ. ಬೃಹತ್ ಹಾವುಗಳಂತಿರುವ ಈ ಕಲ್ಲುಗಳು ಎಲ್ಲೆಡೆ ಅಚ್ಚರಿಮೂಡಿಸಿವೆ. ಪುಹು ಲಗಾಂಕ ನ್ಯಾಷನಲ್ ಪಾರ್ಕ್‍ನ ಅಧಿಕಾರಿಗಳು ಹಾವಿನ ಈ ಬೃಹತ್ ಕುರುಹುಗಳು ಸುಮಾರು 1 ಲಕ್ಷ ವರುಷದಷ್ಟು ಹಳೆಯದವು ಎಂಬುದನ್ನು ಖಚಿತಪಡಿಸಿದ್ದಾರೆ.

naka caves thailandsource and pic credit:https://www.journeyingtheglobe.com

ದೈತ್ಯ ಹಾವಿನ ಕಲ್ಲಿನ ಹಿನ್ನಲೆ

ನಾಗಾ ಲೋಕದಲ್ಲಿರುವ ಪತ್ತೆಯಾಗಿರುವ ಬೃಹತ್ ಹಾವು ಕಲ್ಲುಗಳಿಗೆ ಅದರದ್ದೇ ಆದ ಹಿನ್ನಲೆಯಿದೆ. ಕೋಂಗ್ ಲಾಂಗ್ ನದಿಯ ದಡದಲ್ಲಿದ್ದ ರಪ್ಪಾಟ್ ನಖೋನ್‍ ನಲ್ಲಿದ್ದ ರಾಜಾಡಳಿತಕ್ಕೂ ಈ ನಾಗಾಲೋಕಕ್ಕೂ ಅನೂಹ್ಯ ಸಂಬಂಧವಿದೆ ಎಂದು ತಿಳಿದುಬಂದಿದೆ. ಬಲಿಷ್ಠ ಮತ್ತು ಸ್ಪುರದ್ರೂಪಿಯಾಗಿದ್ದ ರಾಜಕುಮಾರ ಫಹೂಂಗ್‍ ಆಡಳಿತದಲ್ಲಿ ಪ್ರಜೆಗಳು ತಮ್ಮ ರಾಜಕುಮಾರನನ್ನು ತುಂಬಾ ಇಷ್ಟಪಡುತ್ತಿದ್ದರು. ಹುಡುಗಿಯರು, ಹೆಂಗಸರು ರಾಜಕುಮಾರನ ಅಂದಕ್ಕೆ, ಸುಂದರ ನಗುವಿಗೆ, ನೀಲಿ ಕಣ್ಣಿಗೆ ಮನಸೋತಿದ್ದರು.

naka caves thailandsource and pic credit:https://www.journeyingtheglobe.com

ಆದರೆ, ರಾಜ್ಯದಲ್ಲಿ ಅದೆಷ್ಟೋ ಮಂದಿ ರಾಜಕುಮಾರನನ್ನು ಇಷ್ಟಪಡುತ್ತಿದ್ದರೂ, ಮನದೊಳಗೆ ಪ್ರಿನ್ಸ್‍ ಫಹೂಂಗ್‍ ಒಬ್ಬಂಟಿಯಾಗಿದ್ದನು. ಪ್ರಪಂಚದ ಎಲ್ಲಾ ಐಷಾರಾಮಿತನ ಕಾಲಬುಡದಲ್ಲಿದ್ದರೂ, ರಾಜಕುಮಾರನ ಜೀವನದಲ್ಲಿ ಪ್ರೀತಿಯ ಕೊರತೆಯಿತ್ತು. ನಿಷ್ಕಲ್ಮಶವಾಗಿ ರಾಜಕುಮಾರನನ್ನು ಪ್ರೀತಿಸುವವರು ಯಾರೂ ಇರಲ್ಲಿಲ್ಲ. ಹೀಗೆ ಮನನೊಂದ ರಾಜಕುಮಾರ ಒಮ್ಮೆ ಕೋಂಗ್ ಲಾಂಗ್ ನದಿಯ ದಡದಲ್ಲಿ ವಿಹರಿಸುತ್ತಿದ್ದರು.

ಆ ಸಂದರ್ಭದಲ್ಲಿ ಹುಡುಗಿಯೊಬ್ಬಳು ಇಂಪಾದ ದನಿಯಲ್ಲಿ ಹಾಡುವ ದನಿ ರಾಜಕುಮಾರನಿಗೆ ಕೇಳಿಸುತ್ತದೆ. ರಾಜಕುಮಾರ ಹಿಂದೆಂದೂ ಕೇಳದಷ್ಟೂ ಮಧುರ ಕಂಠದಲ್ಲಿ ಆಕೆ ಹಾಡುತ್ತಿರುತ್ತಾಳೆ. ಆದರೆ ಆಕೆಯ ದನಿಯಲ್ಲಿ ಅತೀ ಬೇಸರ ಹಾಗೂ ವಿಷಾದವಿರುವುದು ಪ್ರಿನ್ಸ್ ಗಮನಕ್ಕೆ ಬರುತ್ತದೆ. ಆಕೆಯನ್ನು ನೋಡದೆ ಕೇವಲ ದನಿಯನ್ನಷ್ಟೇ ಕೇಳಿ ರಾಜಕುಮಾರ ಆಕೆಗೆ ಮನಸೋಲುತ್ತಾನೆ. ಆಕೆಯನ್ನು ಮನಸಾರೆ ಪ್ರೀತಿಸಲು ತೊಡಗುತ್ತಾನೆ. ಇಂಪಾದ ಸ್ವರ ಬಂದ ಕಡೆಗೆ ಓಡಿ ಎಲ್ಲೆಡೆ ಆಕೆಗಾಗಿ ಹುಡುಕಾಡುತ್ತಾನೆ. ಆದರೆ ಥಟ್ಟನೆ ಹಾಡು ಕೇಳುವುದು ನಿಲ್ಲುತ್ತದೆ, ಆಕೆ ಸಹ ಅಲ್ಲೆಲ್ಲಿಯೂ ಕಾಣುವುದಿಲ್ಲ. 

thailand cavessource and pic credit: google.com

ಬೇಸರದಿಂದಲೇ ರಾಜಕುಮಾರ ಅರಮನೆಗೆ ಮರಳಿ ಹೋಗಲು ಹೊರಟಾಗ ಹುಡುಗಿಯೊಬ್ಬಳು ಅಳುವ ಸದ್ದು ಕೇಳಿಸುತ್ತದೆ. ಆದರೆ ಮತ್ತೊಮ್ಮೆ ಹೋಗಿ ನೋಡಿದರೂ ಅಲ್ಲಿ ಹುಡುಗಿ ಕಾಣಸಿಗುವುದಿಲ್ಲ. ಬದಲಾಗಿ ಹಾಡು ಕೇಳಿದ ದೊಡ್ಡ ಮರದ ಬಳಿ ಕಳಚಿದ ಹಾವಿನ ಪೊರೆಯೊಂದು ಕಾಣಿಸುತ್ತದೆ. ಹಾವಿನ ಪೊರೆಯನ್ನು ಕೈಗೆ ತೆಗೆದುಕೊಂಡ ರಾಜಕುಮಾರನಿಗೆ ವಿಶಿಷ್ಠವಾಗಿ ಕಡುಗೆಂಪು ಹಾಗೂ ಹಸಿರು ಬಣ್ಣದಲ್ಲಿರುವ ಆ ಪೊರೆ ಆ ಇಂಪಾದ ದನಿಯ ಹುಡುಗಿಯದ್ದೆಂದು ಮನವರಿಕೆಯಾಗುತ್ತದೆ.

templesource and pic credit:https://www.journeyingtheglobe.com

 

ಅದು ನಾಗಲೋಕದ ನಾಗಿಣಿ ನಕ್ಕರಿಂತ್ರಾಣಿಯ ದನಿಯಾಗಿರುತ್ತದೆ. ಹಾವಿನ ರೂಪದಿಂದ ಮಾನವ ರೂಪಕ್ಕೆ ಬಂದ ನಾಗಿಣಿಗೆ ರಾಜಕುಮಾರ ಮನಸೋಲುತ್ತಾನೆ, ನಾಗಿಣಿ ಸಹ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾಳೆ. ರಪ್ಪಾಟ್ ನಖೋನ್‍ ರಾಜಾಡಳಿತಕ್ಕೆ ಸೇರಿದ ರಾಜಕುಮಾರ ನಾಗಾಲೋಕಕ್ಕೆ ಸೇರಿದ ನಾಗಿಣೆಯನ್ನು ಮದುವೆಯಾಗಲು ಬಯಸುತ್ತಾನೆ. ಈ ಬಗ್ಗೆ ಪ್ರಿನ್ಸ್ ಫಹೂಂಗ್‍ ತನ್ನ ಮುತ್ತಜ್ಜನ ಜತೆ ಮಾತುಕತೆ ನಡೆಸುತ್ತಾನೆ. ಅದರಂತೆ ನಕ್ಕರಿಂತ್ರಾಣಿಯನ್ನು ಮದುವೆಯಾಗಲು ನಾಗಾಲೋಕದ ಅಧಿಪತಿಯ ಜತೆ ಮಾತುಕತೆ ನಡೆಸಲಾಗುತ್ತದೆ.   

 

naka cave thailandsource and pic credit: https://www.journeyingtheglobe.com

ರಾಜಕುಮಾರನ ಜತೆ ನಾಗಿಣಿಯ ಮದುವೆ

 

ನಾಗಲೋಕದ ಅಧಿಪತಿ ಮೊದಲು ಮಾನವನೊಬ್ಬ ನಾಗಿಣಿಯನ್ನು ಮದುವೆಯಾಗುವುದನಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಬಳಿಕ ನಾಗಿಣಿ, ರಾಜಕುಮಾರನನ್ನು ತುಂಬಾ ಇಷ್ಟಪಡುತ್ತಿರುವುದರಿಂದ ಭೂಮಿಯಲ್ಲಿ ನನ್ನ ಮಗಳ ಮನಸ್ಸಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಷರತ್ತಿನೊಂದಿಗೆ ವಿವಾಹ ಮಾಡಿಕೊಡುತ್ತಾರೆ. ರಾಜಕುಮಾರ ಫಹೂಂಗ್‍ ಮತ್ತು  ನಾಗಿಣಿ ನಕ್ಕರಿಂತ್ರಾಣಿ ಅರಮನೆಯಲ್ಲಿ ಖುಷಿಯಿಂದ ಜೀವನ ನಡೆಸುತ್ತಿರುತ್ತಾರೆ. ಆದರೆ, ಅದೆಷ್ಟೇ ಮಕ್ಕಳಾದರೂ  ನಕ್ಕರಿಂತ್ರಾಣಿಗೆ ಮಕ್ಕಳಾಗುವುದಿಲ್ಲ. ರಾಜ್ಯದ ಜನತೆಗೆ ಆಕೆ ನಾಗಿಣಿಯೆಂದು ಗೊತ್ತಿರುವುದಿಲ್ಲ. ರಾಣಿ ಬಂಜೆಯೆಂದು ಅರಮನೆ ಮಂದಿ, ರಾಜ್ಯದ ಜನತೆ ಹೀಯಾಳಿಸತೊಡಗುತ್ತಾರೆ. ಇದರಿಂದ ಮನನೊಂದ ರಾಣಿ ನಕ್ಕರಿಂತ್ರಾಣಿ ಒಬ್ಬಂಟಿಯಾಗಿರಲು ಆರಂಭಿಸುತ್ತಾಳೆ.

naga cave thailandsource and pic credit: https://www.journeyingtheglobe.com

ಹೀಗಿರುವಾಗಲೇ ಅಂತಃಪುರಕ್ಕೆ ಒಮ್ಮೆ ಪರಿಚಾರಿಕೆ ಆಹಾರ ತೆಗೆದುಕೊಂಡು ಬರುತ್ತಾಳೆ. ಆದರೆ ರಾಣಿಯ ಕೋಣೆಯ ಮಂಚದಲ್ಲಿ ಬೃಹತ್‍ ಹಾವೊಂದು ಕಾಣಿಸುತ್ತದೆ. ಗಾಬರಿಗೊಂಡ ಪರಿಚಾರಿಕೆಗೆ ಹಾವು, ಹೆದರಬೇಡ ನಾನು ರಾಣಿ ನಕ್ಕರಿಂತ್ರಾಣಿ ಎಂದು ತಿಳಿಸುತ್ತದೆ. ಹೆದರಿದ ದಾಸಿ, ನಮ್ಮ ರಾಣಿ ಹಾವು ಎಂದು ಕಿರುಚುತ್ತಾ ಓಡಾಡುತ್ತಾಳೆ. ರಾಜ್ಯವಿಡೀ ರಪ್ಪಾಟ್ ನಖೋನ್‍ ಅರಮನೆಯ ರಾಣಿ ಹಾವು ಎಂಬ ಮಾತು ಹರಿದಾಡುತ್ತದೆ. ಜನರು ಹೀಯಾಳಿಸತೊಡಗುತ್ತಾರೆ. ಇದರಿಂದ ಮನನೊಂದ ರಾಜ ಫಹೂಂಗ್ ಹಾಗೂ ನಾಗಿಣಿ ನಕ್ಕರಿಂತ್ರಾಣಿ ಅರಮನೆ ಬಿಟ್ಟು ಜನರಿಲ್ಲದ ದೂರದ ಗುಹೆಯೊಂದನ್ನು ಸೇರಿಕೊಳ್ಳುತ್ತಾರೆ. ತಾವು ಮೊದಲು ಭೇಟಿಯಾಗಿದ್ದಾದ ಇದ್ದ ಅದೇ ಪ್ರೀತಿಯನ್ನು ವ್ಯಕ್ತಪಡಿಸುವ ಇಬ್ಬರೂ ಅದೆಷ್ಟೋ ದಿನಗಳು ಆಹಾರವಿಲ್ಲದೆ, ಬಳಲಿ ಅಲ್ಲೇ ಸಾವನ್ನಪ್ಪುತ್ತಾರೆ.                                     

naga caves thailandsource and pic credit: https://www.journeyingtheglobe.com

ಶಾಪಗ್ರಸ್ಥ ಹಾವೋ..ಕೊಳೆತ ಹಾವಿನ ಶರೀರವೋ..?

 

ಗುಹೆಯಲ್ಲಿ ಹಾವಿನ ಬಾಯಿ, ಹಲ್ಲುಗಳು, ಮೈಯನ್ನು ಹೋಲುವ ಬೃಹತ್ ಕಲ್ಲಿನ ರೂಪವಿದೆ. ಅನಾದಿಕಾಲದಲ್ಲಿ ಶಾಪ ದೊರೆತ ಹಾವುಗಳು ಶಾಪಗ್ರಸ್ಥವಾಗಿ ಈ ರೂಪದಲ್ಲಿವೆ ಎಂಬ ಪ್ರತೀತಿಯಿದೆ. ಅಲ್ಲದೆ, ಲಕ್ಷಾಂತರ ವರ್ಷಗಳ ಹಿಂದೆ ಜೀವಿಸಿದ್ದ ದೈತ್ಯ ಹಾವೊಂದು ಸತ್ತ ಬಳಿಕ ಕೊಳೆಯದೆ ನೈಸರ್ಗಿಕವಾಗಿ ಕಲ್ಲಾಗಿರಬಹುದೆಂಬುದು ವೈಜ್ಞಾನಿಕ ವಾದ.

naka caves thailandsource and pic credit: https://www.journeyingtheglobe.com

ನಾಗಾ ಗುಹೆ ಎಲ್ಲಿದೆ..?

ನಾಕಾ ಕೇವ್ ಅಥವಾ ನಾಗಾ ಗುಹೆ ಎಂದು ಕರೆಯಲ್ಪಡುವ ಈ ಪ್ರದೇಶ ಥಾಯ್ಲೆಂಡ್‍ ನ ಬುಯಿಂಗ್ ಕಾನ್ ರಾಜ್ಯದ ಬುಯಿಂಗ್ ಕಾಂಗ್ ಲಾಂಗ್ ಜಿಲ್ಲೆಯಲ್ಲಿದೆ. ಇಲ್ಲಿನ ಪುಹು ಲಗಾಂಕದ ನ್ಯಾಷನಲ್ ಪಾರ್ಕ್‍ನಲ್ಲಿ ಈ ನಾಗಾ ಗುಹೆಯಿದೆ. ಈ ನ್ಯಾಷನಲ್ ಪಾರ್ಕ್‍ ನಲ್ಲಿ ಮೂರು ಬೆಟ್ಟಗಳಿದ್ದು, ಇದು ಮೆಕೊಂಗ್ ನದಿಯ ತೀರದಲ್ಲಿದೆ. ನಾಗಾ ಗುಹೆಯೊಳಗೆ ಪ್ರವೇಶಿಸುವ ಮೊದಲು ಚಾಯ್ ಮೊಂಗ್ ಕೊನ್ ದೇವಾಲಯ ಸಿಗುತ್ತದೆ.

naka caves thailandsource and pic credit: https://www.journeyingtheglobe.com

ಪ್ರವಾಸಿಗರಿಗೆ ಪ್ರವೇಶವಿಲ್ಲ

 

ಅದ್ಭುತವೆನಿಸುವ ಈ ನಾಗಾಲೋಕ ಪತ್ತೆಯಾದ ನಂತರ ಇಲ್ಲಿಗೆ ಈ ಬೃಹತ್ ಕಲ್ಲುಗಳನ್ನು ನೋಡಲು ಸಾವಿರಾರು ಮಂದಿ ಆಗಮಿಸಿದ್ದರು. ಆದರೆ ಪ್ರವಾಸಿಗರು ಆಗಮಿಸಿ ನಾಗಾ ಕಲ್ಲುಗಳನ್ನು ಹಾನಿ ಮಾಡಿದ ನಂತರ ಇಲ್ಲಿಗೆ ಟೂರಿಸ್ಟ್ ವಿಸಿಟರ್ಸ್‍ ಆಗಮಿಸುವುದಕ್ಕೆ ನಿರ್ಬಂಧ ಹೇರಲಾಗಿದೆ.

naga cavesource and pic credit: https://www.journeyingtheglobe.com

ಪುರಾತನ ಕುರುಹುಗಳನ್ನು ಜೋಪಾನವಾಗಿ ಕಾಪಾಡಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡು ಬಳಿಕವಷ್ಟೇ ಪ್ರವಾಸಿಗರಿಗೆ ಅನುಮತಿ ನೀಡುವುದಾಗಿ ಬುಕ್ ಕೊಂಗ್ ಲೊಂಗ್ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

 

 

► Subscribe to Planet Tv Kannada

https://www.youtube.com/Planet Tv Kannada 

 

► Follow us on Facebook

https://www.facebook.com/Planettvkannada 

 

► Follow us on Twitter

https://twitter.com/Planettvkannada 

 

► Follow us on Instagram

https://www.instagram.com/planettvkannada

 

► Follow us on Pinterest

https://www.pinterest.com/Planettvkannada 

 

► Follow us on Koo app

https://www.kooapp.com/planettvkannada

 

► Follow us on share chat

https://sharechat.com/planettvkannada 

 

► Join us on Telegram

https://t.me/planettvkannada

 

► Follow us on Tumblr

https://www.tumblr.com/planet-tv-kannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author