ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಮಹತ್ವ ತಿಳಿಯಿರಿ..

ಶ್ರೀ  ಕೃಷ್ಣ ಜನ್ಮಾಷ್ಟಮಿ ಆಚರಣೆಯ ಮಹತ್ವ ತಿಳಿಯಿರಿ..

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಭಗವಾನ್ ವಿಷ್ಣು ಕೃಷ್ಣನಾಗಿ ಭೂಮಿಯಲ್ಲಿ ಜನಿಸಿದ ದಿನವನ್ನೇ  ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ಇನ್ನೂ ಕೆಲವುರು ರೇವತಿ ನಕ್ಷತ್ರ ಬರುವವರೆಗು ಕಾದು, ನಕ್ಷತ್ರ ಕಂಡ ನಂತರ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುತ್ತಾರೆ. 

ಚಾಂದ್ರಮಾನ ಪಂಚಾಗ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು ಎಂದು ಹೇಳಲಾಗುತ್ತದೆ. ಸೌರಮಾನ ಪಂಚಾಗ ಪ್ರಕಾರ  ಸಿಂಹಮಾಸದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು ಎನ್ನಲಾಗುತ್ತದೆ. ಇದಲ್ಲದೇ ವರಾಹ ಪುರಾಣದ ಪ್ರಕಾರ ಶ್ರೀ ಕೃಷ್ಣ ಜನ್ಮವು ಆಷಾಢ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಆಯಿತು. ಆ ಸಂದರ್ಭದಲ್ಲಿ ಚಾಂದ್ರಮಾನದ ಶ್ರಾವಣ ಮಾಸವೇ ಸೌರಮಾನದ ಸಿಂಹಮಾಸವಾಗಿತ್ತು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ.

ವಿಷ್ಣುವಿನ 8ನೇ ಅವತಾರ: ವಿಷ್ಣುವಿನ 8ನೇ ಅವತಾರವೇ ಶ್ರೀಕೃಷ್ಣನ ಅವತಾರ. ಅಜೇಯ ದೈವಿಕ ರೂಪನಾದ ಶ್ರೀಕೃಷ್ಣನು ಸೃಷ್ಟಿಯಲ್ಲಿರುವ ದುಷ್ಟರಿಗೆ ಶಿಕ್ಷೆ ಹಾಗೂ ಶಿಷ್ಟರ ಪಾಲನೆಗಾಗಿ ಅವತರಿಸಿ ಬಂದ ಎಂದು ಹೇಳಲಾಗುವುದು. ಭಾದ್ರಪದ ಮಾಸ ಕೃಷ್ಣ ಪಕ್ಷದ 8ನೇ ದಿನ ಕೃಷ್ಣನು ಜನಿಸಿದನು. ಈ ಪವಿತ್ರ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುವ ಪದ್ಧತಿ ಇದೆ.

ಶ್ರೀ ಕೃಷ್ಣನ ಜನನ : ತನ್ನ ತಂಗಿ ದೇವಕಿಯನ್ನು ತುಂಬಾ ಪ್ರೀತಿಸುತ್ತಿದ್ದ ಮಥುರ ರಾಜನಾದ ಕಂಸನು ದಬ್ಬಾಳಿಕೆಯಿಂದ  ಆಳ್ವಿಕೆನಡೆಸುತ್ತಿದ್ದನು. ಕಂಸನು ತನ್ನ ಪ್ರೀತಿಯ ತಂಗಿ ದೇವಕಿಯನ್ನು ವಾಸುದೇವನಿಗೆ ಕೊಟ್ಟು ವಿವಾಹ ಮಾಡಿಸುತ್ತಾನೆ. ಆದರೆ ಕಂಸನಿಗೆ ದೇವಕಿ ಮತ್ತು ವಾಸುದೇವನ 8ನೇ ಮಗುವಿನಿಂದ ತನ್ನ ಮರಣ ಉಂಟಾಗುವುದು ಎಂದು ತಿಳಿಯುತ್ತದೆ.  ಇದರಿಂದ ಕೋಪಗೊಂಡ ಕಂಸನು, ದೇವಕಿಗೆ ಜನಿಸಿದ ಎಲ್ಲಾ ಶಿಶುಗಳನ್ನು ಕೊಲ್ಲಲು ನಿರ್ಧರಿಸಿದನು. ಜೊತೆಗೆ ತನ್ನ ತಂಗಿ ದೇವಕಿಯನ್ನು ಹಾಗೂ ವಾಸುದೇವನನ್ನು  ಸೆರೆಮನೆಗೆ ತಳ್ಳಿದನು.  ಇನ್ನು ಇವರ  ಏಳನೇ ಮಗು ಬಲರಾಮ ದೈವಿಕ ಶಕ್ತಿಯಿಂದ ರೋಹಿಣಿ ಗರ್ಭಕ್ಕೆ ಅತೀಂದ್ರಿಯವಾಗಿ ವರ್ಗಾವಣೆಗೊಳ್ಳುವವರೆಗೂ ಕಂಸನು ದೇವಕಿಯ ಎಲ್ಲಾ ಶಿಶುಗಳನ್ನು ಕೊಂದನು. ಕಂಸನನ್ನು ಕೊಲ್ಲುವ 8ನೇ ಮಗು ಹುಟ್ಟಿದಾಗ, ವಾಸುದೇವನು ಮಗುವನ್ನು ಗೋಕುಲ ಗ್ರಾಮದ ಮುಖ್ಯಸ್ಥ ನಂದನ ಮನೆಗೆ ರಹಸ್ಯವಾಗಿ ಕರೆದೊಯ್ದು, ಅಲ್ಲಿಯ ಮಗು ಮತ್ತು ತನ್ನ ಮಗನನ್ನು ಬದಲಾಯಿಸಿಕೊಂಡು ಬಂದನು.

ನಂದನ ಮನೆಗೆ ಶ್ರಿ ಕೃಷ್ಣನ ಪ್ರವೇಶ: ಕೃಷ್ಣ ಜನಿಸಿದಾಗ ಇದ್ದಕ್ಕಿದ್ದಂತೆ ಜೈಲಿನ ಕಾವಲಿಗರು ನಿದ್ರೆಗೆ ಜಾರುತ್ತಾರೆ. ಅಷ್ಟು ಮಾತ್ರವಲ್ಲ, ಜೈಲಿನ ಬಾಗಿಲು ಇದ್ದಕ್ಕಿದ್ದಂತೆ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತವೆ. ಅದೇ ಸಮಯದಲ್ಲಿ ಭಾರೀ ಮಳೆ ಬರುತ್ತಿತ್ತು. ಕೃಷ್ಣನ ತಂದೆ ವಾಸುದೇವನು ಪುಟ್ಟ ಕೃಷ್ಣನನ್ನು ಬುಟ್ಟಿಯಲ್ಲಿಟ್ಟುಕೊಂಡು ಭಾರೀ ಮಳೆಯಲ್ಲೇ ತನ್ನ ಕಂದನನ್ನು ಕಂಸನಿಂದ ರಕ್ಷಿಸಲು ಜೈಲಿನಿಂದ ಹೊರಬರುತ್ತಾನೆ.

ಶಾಂತವಾದ ಯಮುನಾ ನದಿ: ಶ್ರೀ ಕೃಷ್ಣ ಹುಟ್ಟಿದ ಸಮಯದಲ್ಲಿ ಭಾರೀ ಮಳೆಯಾಗುತ್ತಿತ್ತು. ಮಳೆಯ ಅಬ್ಬರಕ್ಕೆ ಯಮುನಾ ನದಿ ಉಕ್ಕಿ ಯುತ್ತಿದ್ದಳು.  ಇತ್ತ ವಾಸುದೇವ ಬುಟ್ಟಿಯಲ್ಲಿ ಕೃಷ್ಣನನ್ನು ಇಟ್ಟುಕೊಂಡು ಯಮುನಾ ನದಿಯನ್ನು ಪ್ರವೇಶಿಸುತ್ತಲೇ ಯಮುನಾ ನದಿಯ ನೀರು ಬುಟ್ಟಿಯಲ್ಲಿದ್ದ ಕೃಷ್ಣನ ಪಾದಗಳನ್ನು ಮುಟ್ಟಿ, ನಂತರ ವಾಸುದೇವನಿಗೆ ಗೋಕುಲದತ್ತ ಹೋಗಲು ದಾರಿ ಮಾಡಿ ಕೊಟ್ಟಿತು.

ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಯಶೋಧೆ: ಇದೇ ಸಮಯದಲ್ಲಿ ನಂದ ಹಾಗೂ ಯಶೋಧೆಗೆ ಹೆಣ್ಣು ಮಗುವಿನ ಜನನವಾಗಿತ್ತು. ಈ ಸಂದರ್ಭದಲ್ಲಿ ಬುಟ್ಟಿಯಲ್ಲಿ ಶ್ರೀ ಕೃಷ್ಣನನ್ನು ನಂದನ ಮನೆಗೆ ತಂದ ವಾಸುದೇವ ಕೃಷ್ಣನನ್ನು ಯಶೋಧೆಯ ಮಡಿಲಿಗೆ ಹಾಕಿ ಅವರ ಹೆಣ್ಣು ಮಗುವನ್ನು ತನ್ನೊಂದಿಗೆ ಕರೆದೊಯ್ಯುತ್ತಾನೆ. 

 ಇನ್ನು ಕೃಷ್ಣ ಜನಿಸಿದ ದಿನವನ್ನು ಗೋಕುಲಾಷ್ಟಮಿಯೆಂದೂ, ಶ್ರೀ ಕೃಷ್ಣ ಜಯಂತಿಯೆಂದೂ, ಕೃಷ್ಣ ಜನ್ಮಾಷ್ಟಮಿಯೆಂದೂ ದೇಶದ ವಿವಿಧ ಪ್ರದೇಶಗಳಲ್ಲಿ ತಮ್ಮದೇ ವೈಖರಿಯಲ್ಲಿ ಆರಾಧಿಸಿತ್ತಾರೆ.

ಕೃಷ್ಣ ಜನ್ಮಾಷ್ಟಮಿ ಮಹತ್ವ: ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀಕೃಷ್ಣ ವ್ರತವನ್ನು 'ವ್ರತರಾಜ' ಎಂದೂ ಕರೆಯಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ವ್ರತವನ್ನು ಕೈಗೊಳ್ಳುವುದರಿಂದ ಉಳಿದೆಲ್ಲಾ ಉಪವಾಸ ವ್ರತದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಜನ್ಮಾಷ್ಟಮಿ ದಿನದಂದು ಉಪವಾಸ ವ್ರತ ಮಾಡುವುದರಿಂದ ಜೀವನದಲ್ಲಿ ಸಂತೋಷ,  ಸಮೃದ್ಧಿಯನ್ನು, ಸಂತತಿಯ ಬೆಳವಣಿಗೆಯನ್ನು, ದೀರ್ಘಾಯುಷ್ಯವನ್ನು ಮತ್ತು ಪಿತೃದೋಷದಿಂದ ಪರಿಹಾರವನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. 

ಪತಿಯೊಡನೆ ಉಪವಾಸ: ವರಾಹ ಪುರಾಣದಲ್ಲಿ ಉಲ್ಲೇಖಿಸಿದಂತೆ, ಅಂದು ರಾತ್ರಿ ಸ್ತ್ರೀಯು ಪತಿಯೊಡನೆ ಉಪವಾಸವಿದ್ದು ವ್ರತವನ್ನಾಚರಿಸಿದರೆ ಅವಳ ಹೃದಯದಲ್ಲಿ ಭಗವಂತನು ಕಾಣಿಸಿಕೊಳ್ಳುವನು. ಅಂತಹವರಿಗೆ ಒಳ್ಳೆಯ ಸಂತಾನ ಮತ್ತು ಸಂಪತ್ತು ದೊರೆಯುತ್ತದೆ ಎಂದು ಹೇಳಿದೆ. 'ತಿಥಿತತ್ವ' ಎಂಬ ಗ್ರಂಥದಲ್ಲಿ ಜಯಂತಿಯ ಆಚರಣೆಯ ಬಗ್ಗೆ ಹೀಗೆ ಹೇಳಿದೆ - 'ಜಯಂತಿ ಯೋಗವು ಒಂದು ದಿವಸ ಮಾತ್ರವಿದ್ದರೆ ಅಂದೇ ಉಪವಾಸ ಪೂಜೆಯನ್ನು ಮಾಡಬೇಕು. ಆ ಯೋಗವು ಎರಡು ದಿವಸ ಇದ್ದರೆ, ಎರಡನೆಯ ದಿನದಲ್ಲಿ ವ್ರತದ ಆಚರಣೆ ಮಾಡಬೇಕು.

ಜನ್ಮಾಷ್ಟಮಿಯಂದು ಮನರಂಜನೆ:  ಹಬ್ಬದ ದಿನದಂದು ಜನರು ಹಣ್ಣು ಮತ್ತು ನೀರನ್ನು ಕುಡಿಯುವುದರ ಮೂಲಕ ಉಪವಾಸವನ್ನು ಕೈಗೊಳ್ಳುತ್ತಾರೆ. ಕೃಷ್ಣ ಪರಮಾತ್ಮನಿಗೆ ಹಾಲು, ತುಪ್ಪ, ಜೇನುತುಪ್ಪ ಮತ್ತು ನೀರಿನಿಂದ ಅಭಿಷೇಕ ಮಾಡುತ್ತಾರೆ. ಜನ್ಮಾಷ್ಟಮಿಯ ನಂತರದ ಅಥವಾ  ಮರುದಿನ ದಹಿ ಹಂಡಿ ಧಾರ್ಮಿಕ ಕ್ರಿಯೆಯನ್ನು ಕೈಗೊಳ್ಳುತ್ತಾರೆ. ಮೊಸರು ತುಂಬಿದ ಮಡಿಕೆಯಯನ್ನು ಎತ್ತರದಲ್ಲಿ ತೂಗಿ ಬಿಟ್ಟಿರುತ್ತಾರೆ. ಇದನ್ನು ಒಡೆಯಲು ಜನರು ಒಬ್ಬರಮೇಲೊಬ್ಬರು ನಿಂತು  ಪಿರಾಮಿಡ್ ನಿರ್ಮಿಸುತ್ತಾರೆ. ಪಿರಾಮಿಡ್ ತುದಿಯಲ್ಲಿ ನಿಲ್ಲುವ ವ್ಯಕ್ತಿ ಮಡಿಕೆಯನ್ನು ಒಡೆಯುತ್ತಾನೆ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

 

► Subscribe to Planet Tv Kannada

https://www.youtube.com/Planet Tv Kannada

 

► Follow us on Facebook

https://www.facebook.com/Planettvkannada

 

► Follow us on Twitter

https://twitter.com/Planettvkannada​

 

► Follow us on Instagram

https://www.instagram.com/planettvkannada

 

► Follow us on Pinterest

https://www.pinterest.com/Planettvkannada

 

► Follow us on Koo app 

https://www.kooapp.com/planettvkannada

► Follow us on share chat 

https://sharechat.com/planettvkannada

 

► Join us on Telegram

https://t.me/planettvkannada

 

► Follow us on Tumblr

https://www.tumblr.com/planet-tv-kannada

 

► Follow us on Reddit

https://www.reddit.com/Planet-tv-kannada

 

 

Enjoyed this article? Stay informed by joining our newsletter!

Comments

You must be logged in to post a comment.

About Author