ಶ್ರೀರಾಮ ಪಾಪ ಕಳೆಯಲು ಯಜ್ಞ ಮಾಡಿದ ಸ್ಥಳವಿದು, ಮೊಥೇರಾ ಸುಂದರ ಸೂರ್ಯ ದೇವಾಲಯ

ಶ್ರೀರಾಮ ಪಾಪ ಕಳೆಯಲು ಯಜ್ಞ ಮಾಡಿದ ಸ್ಥಳವಿದು, ಮೊಥೇರಾ ಸುಂದರ ಸೂರ್ಯ ದೇವಾಲಯ

Modhera sun temple in gujuratFeature Image credits : NativePlanet

ಭಾರತದಲ್ಲಿ, ದೇಶದ ಶ್ರೀಮಂತ ಪರಂಪರೆ, ಭವ್ಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ಪ್ರತಿಬಿಂಬಿಸುವ ಅದೆಷ್ಟೋ ದೇವಸ್ಥಾನಗಳಿವೆ. ಉಗಮ, ಪೌರಾಣಿಕ ಹಿನ್ನಲೆ. ವೈಶಿಷ್ಟ್ಯತೆಯಿಂದಲೇ ಎಲ್ಲರ ಗಮನ ಸೆಳೆಯುತ್ತವೆ. ಪರಂಪರಾಗತವಾಗಿ ಹೆಸರುವಾಸಿಯಾಗಿರುವ ಇಂಥಹಾ ದೇವಸ್ಥಾನದ ಭವ್ಯತೆಯನ್ನು ನೋಡಲೆಂದೇ ದಿನವೊಂದಕ್ಕೆ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಅಂಥಹದ್ದೇ ಒಂದು ದೇವಸ್ಥಾನ. ಪ್ರಾಚೀನ ಕಾಲದ ಭವ್ಯತೆಯನ್ನು ಹಿತ್ತಿ ಹಿಡಿಯುವ ಅದ್ಭುತ ದೇವಾಲಯ, ಮೊಥೇರಾದ ಸೂರ್ಯ ದೇವಾಲಯ. ಈ ಸೂರ್ಯ ದೇವಾಲಯವು ಗುಜರಾತ್‌ ಮೆಹಸಾನಾ ಜಿಲ್ಲೆಯ ಪುಷ್ಪಾವತಿ ನದಿಯ ದಡದಲ್ಲಿದ್ದು, ಗುಜರಾತ್‌ನ ಪ್ರಮುಖ ಪ್ರವಾಸಿ ತಾಣದಲ್ಲಿ ಒಂದಾಗಿದೆ.

ಹಿಂದೆ ಸೋಲಂಕಿ ರಾಜರು ಧರ್ಮಾರಣ್ಯದಲ್ಲಿ ಕೆಲವು ಮಂದಿ ಬ್ರಾಹ್ಮಣರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿ ದಾನವನ್ನು ನೀಡುತ್ತಿದ್ದರಂತೆ. ಹೀಗೆ ಬಂದ ಬ್ರಾಹ್ಮಣರನ್ನು ಮೋಥ್ ಅಥವಾ ಯೋಡ್ ಬ್ರಾಹ್ಮಣರು ಎಂದು ಕರೆಯುತ್ತಿದ್ದರು. ಅದ್ದರಿಂದಲೇ ಈ ಪ್ರದೇಶಕ್ಕೆ ಮೊಥೇರಾ ಎಂಬ ಹೆಸರು ಬಂದಿತು ಎಂದು ಹೇಳಲಾಗುತ್ತದೆ. ಗುಜರಾತ್‌ನ ಪ್ರಾಚೀನ ಭವ್ಯತೆಯನ್ನು ಎತ್ತಿ ಹಿಡಿವ ಸೂರ್ಯ ದೇವಾಲಯಕ್ಕೆ ಇನ್ನೂ ಹಲವು ವೈಶಿಷ್ಟ್ಯತೆಗಳಿವೆ. ಅವುಗಳು ಯಾವ್ಯಾವು ತಿಳಿಯೋಣ..

 

ಸುಣ್ಣವನ್ನು ಬಳಸದೆ ನಿರ್ಮಿಸಿದ ದೇವಾಲಯ

 

ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸುವ ಮೊಧೇರಾ ಸೂರ್ಯ ದೇವಾಲಯವು ವಿಶ್ವ ಪ್ರಸಿದ್ಧ ದೇವಾಲಯವಾಗಿದೆ. ಈ ಸುಂದರ ಸೂರ್ಯ ದೇವಾಲಯವು ಮೊಥೇರಾದ ಬೆಟ್ಟದ ತುದಿಯಲ್ಲಿದೆ. ಕ್ರಿ.ಶ 1026ರಲ್ಲಿ ಈ ಮೊಥೇರಾ ಸೂರ್ಯ ದೇವಾಲಯವನ್ನು, ಸೂರ್ಯವಂಶಿ ಸೋಲಂಕಿ ರಾಜ ಮೊದಲನೇ ಭೀಮದೇವ್‌ ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಆಗ ದಕ್ಷಿಣ ಭಾರತ ದೇಶದಲ್ಲಿ ಚೋಳರು ಅಧಿಕಾರದಲ್ಲಿ ಇದ್ದರು. ಈ ದೇವಾಲಯದ ವಿಶೇಷತೆಯೆಂದರೆ, ದೇವಾಲಯವನ್ನು ಅತ್ಯಂತ ಗಟ್ಟಿಯಾದ ಇಟ್ಟಿಗೆಗಳಿಂದ ನಿರ್ಮಾಣ ಮಾಡಿದ್ದರು. ದೇವಾಲಯದ ನಿರ್ಮಾಣದಲ್ಲಿ ಎಲ್ಲಿಯೂ ಒಂದಿಷ್ಟು ಸುಣ್ಣವನ್ನು ಬಳಸಲಾಗಿಲ್ಲ.

ಈ ದೇವಾಲಯವನ್ನು ರಾಜ ಭೀಮದೇವ ಎರಡು ಭಾಗಗಳಲ್ಲಿ ನಿರ್ಮಿಸಿದ್ದಾರೆ. ಮೊದಲ ಭಾಗವು ದೇವಾಲಯದ ಗರ್ಭಗುಡಿಯಾದರೆ ಎರಡನೇ ಭಾಗವು ದೇವಾಲಯದ ಸಭಾ ಮಂಟಪವಾಗಿದೆ. ದೇವಾಲಯದ ಗರ್ಭಗುಡಿಯ ಜೊತೆಗೆ ಗೂಢ ಮಂಟಪ, ಸಭಾ ರಂಗ ಮಂಟಪ, ಸೂರ್ಯ ಕುಂಡ ಎಂಬ ಮೂರು ಪ್ರಧಾನವಾದ ಭಾಗಗಳಾಗಿವೆ. ಗೂಢ ಮಂಟಪದ ಪ್ರವೇಶ ದ್ವಾರವು ಒಂದು ಮಕರ ತೋರಣದಂತೆ ಕೆತ್ತನೆ ಮಾಡಲಾಗಿದ್ದು, ನೋಡಲು ಅತ್ಯಂತ ರಮಣೀಯವಾಗಿದೆ. ಅದ್ಭುತವಾದ ಕೆತ್ತನೆ ಕೆಲಸದಿಂದಲೇ ನೋಡುಗರನ್ನು ಸೆಳೆಯುತ್ತದೆ.

 

ಖಜುರಾಹೊ ಶೈಲಿಯ ಕೆತ್ತನೆ

Modhera sun temple statuesImage Credits : Times Of India

ಮೊಧೇರಾ ಸೂರ್ಯ ದೇವಾಲಯದ ಒಳಗೆ ನಾವು ಅನೇಕ ಸ್ತಂಭಗಳನ್ನು ನೋಡಬಹುದು. ಪ್ರತಿಯೊಂದು ಕಂಭಗಳ ಮೇಲೆ ರಾಮಾಯಣ ಮತ್ತು ಮಹಾಭಾರತದ ಚಿತ್ರವನ್ನು ಚಿತ್ರಿಸಲಾಗಿದೆ. ಈ ಸ್ತಂಭಗಳನ್ನು ಕೆಳಗಿನಿಂದ ನೋಡಿದಾಗ ಅಷ್ಟಭುಜಾಕೃತಿಯಲ್ಲಿ ಕಾಣುತ್ತದೆ ಮತ್ತು ಕಂಭದ ಮೇಲಿಂದ ನೋಡಿದರೆ ದುಂಡಾಗಿ ಕಾಣುತ್ತದೆ. ಮೊಥೇರಾ ಸೂರ್ಯ ದೇವಾಲಯವನ್ನು ಗುಜರಾತ್‌ನ ಖಜುರಾಹೊ ಎಂದು ಕರೆಯಲಾಗುತ್ತದೆ. ಏಕೆಂದರೆ ದೇವಾಲಯದಲ್ಲಿನ ಪ್ರತಿಯೊಂದು ಬಂಡೆಗಳ ಮೇಲೆ ಖಜುರಾಹೊ ಶೈಲಿಯ ಕೆತ್ತನೆಯನ್ನು ನೋಡಬಹುದು.

 

ಸೂರ್ಯಕುಂಡ ಅಥವಾ ರಾಮಕುಂಡ

modhera rama kund sun temple

Image Credits : Outlook India

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸೂರ್ಯನ ಕಿರಣಗಳು ದೇವಾಲಯದ ಮೇಲೆ ಬೀಳುವಂತೆ ಈ ಸೂರ್ಯ ದೇವಾಲಯವನ್ನು ನಿರ್ಮಿಸಲಾಗಿದೆ. ಪ್ರಸಿದ್ಧ ಸೂರ್ಯ ದೇವಾಲಯಗಳಂತೆ ಈ ದೇವಾಲಯವನ್ನು ಕೂಡ 3 ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ದೇವಾಲಯದ 3 ಪ್ರಮುಖ ವಿಭಾಗಗಳೆಂದರೆ ಸೂರ್ಯ ಕುಂಡ, ಸಾಂಬ ಮಂಟಪ ಮತ್ತು ಗುಡಾ ಮಂಟಪಗಳಾಗಿದೆ. ಸೂರ್ಯ ದೇವಾಲಯದಲ್ಲಿನ ಸಭಾ ಮಂಟಪದ ಪಕ್ಕದಲ್ಲಿ ಒಂದು ದೊಡ್ಡ ಕುಂಡವಿದ್ದು, ಈ ಕುಂಡವನ್ನು ಕೆಲವರು ಸೂರ್ಯಕುಂಡವೆಂದು ಇನ್ನು ಕೆಲವರು ರಾಮಕುಂಡವೆಂದು ಕರೆಯುತ್ತಾರೆ. ಸೂರ್ಯ ಕುಂಡದಿಂದ ಕೆಳಗೆ ಸಾಕಷ್ಟು ಮೆಟ್ಟಿಲುಗಳಿವೆ ಮತ್ತು ಅಲ್ಲಲ್ಲಿ ಕೆಲವು ಸಣ್ಣ ದೇವಾಲಯಗಳಿವೆ.

 

ಪೌರಾಣಿಕ ಹಿನ್ನಲೆ

 

ಪೌರಾಣಿಕ ಹಿನ್ನಲೆಯ ಪ್ರಕಾರ ಇದು ಪ್ರಭು ಶ್ರೀರಾಮಚಂದ್ರನು ಪಾಪ ಕಳೆಯಲು ಯಜ್ಞ ಮಾಡಿದ ಸ್ಥಳವಾಗಿದೆ. ಲಂಕಾಧಿಪತಿ ರಾವಣನನ್ನು ವಧಿಸಿದ ನಂತರ ಶ್ರೀರಾಮ, ಗುರು ವಸಿಷ್ಠರ ಬಳಿ ಹೋಗಿ ಆತ್ಮವನ್ನು ಶುದ್ಧೀಕರಿಸಿಕೊಳ್ಳಲು ಒಂದು ಮಾರ್ಗವನ್ನು ಸೂಚಿಸಿ ಎಂದು ಕೇಳುತ್ತಾನೆ. ಆಗ ವಸಿಷ್ಠರು ಶ್ರೀರಾಮನಿಗೆ ಧರ್ಮಾರಣ್ಯಕ್ಕೆ ಹೋಗುವಂತೆ ಹೇಳುತ್ತಾರೆ. ರಾಮ ಅಂದು ಭೇಟಿ ನೀಡಿದ ಧರ್ಮಾರಣ್ಯವನ್ನೇ ಇಂದು ಮೊಧೇರಾ ಎಂದು ಕರೆಯಲಾಗುತ್ತದೆ. ಶ್ರೀರಾಮನು ತನ್ನ ಪಾಪಗಳಿಂದ ಮುಕ್ತಿ ಪಡೆಯಲು ಈ ಸೂರ್ಯ ದೇವಾಲಯದ ಸ್ಥಳದಲ್ಲೇ ಯಜ್ಞವನ್ನೂ ಕೂಡ ಮಾಡಿದನೆಂದು ಹೇಳಲಾಗುತ್ತದೆ.

ಅಲ್ಲಿರುವ ರಾಣ್ ಆಫ್ ಕಚ್‍, ಒಂದು ಕಾಲದಲ್ಲಿ ಸೋಲಂಕಿ ರಾಜರ ಮುಖ್ಯವಾದ ಪಟ್ಟಣವಾಗಿತ್ತು. ಆ ಕಾಲದಲ್ಲಿ ಬಂಗಾರ, ಮುತ್ತು, ರತ್ನಗಳು ಮೊದಲಾದವನ್ನು ರಸ್ತೆಯ ಮೇಲೆ ರಾಶಿ ಹಾಕಿ ಮಾರುತ್ತಿದ್ದರು. ಆ ಬೆಲೆ ಬಾಳುವ ಚಿನ್ನಾಭರಣಗಳು ಮಾರುವ ಸ್ಥಳದ ಸಮೀಪದಲ್ಲಿಯೇ ಒಂದು ಸೂರ್ಯ ದೇವಾಲಯವಿತ್ತು. ಇಂದಿಗೂ ಅಲ್ಲಿ ಆಗಾಗ ವಜ್ರಗಳು, ವೈಢೂರ್ಯ, ರತ್ನಗಳು, ಮುತ್ತುಗಳು ದೊರೆಯುತ್ತಿವೆ ಎಂದು ಹೇಳುತ್ತಾರೆ

ಅಲ್ಲಾವುದ್ದೀನ್‌ ಖಿಲ್ಜಿ ಈ ದೇವಾಲಯವನ್ನು ಹಾಳು ಮಾಡಿರುವುದರ ಕಾರಣ ವಿಶ್ವಪ್ರಸಿದ್ಧ ಸೂರ್ಯ ದೇವಾಲಯದಲ್ಲಿ ಇಂದಿಗೂ ಪೂಜೆಯನ್ನು ನೆರವೇರಿಸಲಾಗುವುದಿಲ್ಲ. ಅಲ್ಲಾವುದ್ಧೀನ್‌ ಖಿಲ್ಜಿ ಈ ದೇವಾಲಯದ ಗರ್ಭಗುಡಿಯಲ್ಲಿನ ಸೂರ್ಯ ಭಗವಾನ್‌ ಪ್ರತಿಮೆಯನ್ನು ಮತ್ತು ನಿಧಿಯನ್ನು ಲೂಟಿ ಮಾಡಿದ್ದ, ಹೀಗಾಗಿ ಇಲ್ಲಿ ಯಾವುದೇ ಪ್ರತಿಮೆಗಳಿಲ್ಲ, ಪೂಜೆ ಸಹ ನಡೆಯುವುದಿಲ್ಲ.

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author