ಶಿವರಾತ್ರಿಯ ಪೂಜಾ ವಿಧಾನ..

ಶಿವರಾತ್ರಿಯ ಪೂಜಾ ವಿಧಾನ..

ಸಾಮಾನ್ಯವಾಗಿ ಶಿವರಾತ್ರಿ ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದೇ ಉಪವಾಸ ಮತ್ತು ಜಾಗರಣೆಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು ದಿನದಂದು ಎಲ್ಲರೂ ಉಪವಾಸವಿದ್ದುಜಾಗರಣೆ ಮಾಡಿ ಶಿವನ ಆರಾಧನೆ ಮಾಡುತ್ತಾರೆಇದರ ಜೊತೆಗೆ ಶಿವನನ್ನು ಪೂಜಿಸಲು ಅಥವಾ ಆರಾಧಿಸಲು ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಶುಚಿತ್ವ: ಶಿವರಾತ್ರಿಯಂದು ಬೆಳಗ್ಗೆ ಬೇಗ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಪೂಜೆ ಕಾರ್ಯ ಪ್ರಾರಂಭಿಸಬೇಕು. ಇಡೀ ದಿನ ಶಿವ ಮಂತ್ರವನ್ನು ಪಠಿಸಬೇಕು. ಇನ್ನು ಪೂಜೆಗೆ ಕೂರುವಾಗ ದೇವರನ್ನು ಪ್ರತಿಷ್ಟಾಪಿಸುವ ಆಸನ ಹಾಗೂ ನೀವು ಕುಳಿತುಕೊಳ್ಳುವ ಆಸನ ಶುದ್ಧವಾಗಿರಬೇಕು. ನಂತರ ಧೂಪ, ದೀಪಗಳನ್ನು ಬೆಳಗಿಸಬೇಕು.

ಅಭಿಷೇಕ: ಶಿವನು ಅಭಿಷೇಕ ಪ್ರಿಯ. ಪೂಜೆ ಸಲ್ಲಿಸುವಾಗ ಶಿವನಿಗೆ ಇಷ್ಟವಾದ ಹಾಲು, ಮೊಸರು, ಜೇನು ತುಪ್ಪ, ತಪ್ಪ ಮತ್ತು ಸಕ್ಕರೆ ಅಭಿಷೇಕ ಮಾಡಬೇಕು. ನಂತರ ಶುದ್ಧ ನೀರಿನಿಂದ ಅಭಿಷೇಕ ಮಾಡಬೇಕು. ದೀಪ ಕರ್ಪೂರ ಬೆಳಗಿಸಿ ಆರತಿ ಮಾಡಬೇಕು.

ಬಿಲ್ವ ಪತ್ರೆ: ಬಿಲ್ವಪತ್ರೆಯೆಂದರೆ ಶಿವನಿಗೆ ಬಹಳ ಪ್ರೀತಿ. 1 ಬಿಲ್ವಪತ್ರಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪ್ರಾಪ್ತಿಯಾಗುತ್ತದೆ ಎಂಬ ಬಂಬಿಕೆ ಇದೆ. ಪೂಜೆ ಸಮಯದಲ್ಲಿ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದನ್ನು ಮರೆಯಬೇಡಿ. ಶಿವನ ಪೂಜೆ ಮಾಡುವಾಗ ಓಂ ನಮಃ ಶಿವಾಯ ಎಂದು ಹೇಳುತ್ತಲೇ ಇರಿ.

ಉಪವಾಸ: ಮಹಾಶಿವರಾತ್ರಿಯಂದು ಉಪವಾಸವಿದ್ದು ಶಿವನ ಪೂಜಾ ಕೈಂಕರ್ಯಗಳನ್ನ ಮಾಡಬೇಕು. ಅಷ್ಟೇ ಅಲ್ಲದೆ ಇಡೀ ದಿನ ಅಂದರೆ ಬೆಳಗ್ಗೆ ಮತ್ತು ರಾತ್ರಿ ಉಪವಾಸವಿರಬೇಕು. ಕೆಲವರು ಅನ್ನ, ನೀರು, ಹಣ್ಣು ಹಂಪಲನ್ನು ತ್ಯಜಿಸಿ ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಹಾಲು ಹಣ್ಣು ಮಾತ್ರ ಸೇವಿಸಿ ಉಪವಾಸ ಆಚರಿಸುತ್ತಾರೆ. ಆದರೆ ರಾತ್ರಿ ಸಮಯದಲ್ಲಿ ಕಟ್ಟುನಿಟ್ಟಾದ ಉಪವಾಸವನ್ನು ಪಾಲಿಸಬೇಕಾಗುತ್ತದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author