ತಿಳಿಯಿರಿ ನಾಗೇಶ್ವರ ಜ್ಯೋತಿರ್ಲಿಂಗದ ಮಹಿಮೆ

ತಿಳಿಯಿರಿ ನಾಗೇಶ್ವರ ಜ್ಯೋತಿರ್ಲಿಂಗದ ಮಹಿಮೆ 

ಶ್ರೀ ನಾಗೇಶ್ವರ ಜ್ಯೋತಿರ್ಲಿಂಗವು ನಾಗೇಶ್ವರ ಎಂಬ ಊರಿನಲ್ಲಿದೆ. ಇದು ಗುಜರಾತ್ ರಾಜ್ಯದ ಜಮನಗರ ಜಿಲ್ಲೆಯಲ್ಲಿ ದ್ವಾರಕಾ ನಗರದ ಹತ್ತಿರವಿದೆ. ಇಲ್ಲಿನ ಶಿವಲಿಂಗವು ಸಣ್ಣ ಆಕಾರದಲ್ಲಿದ್ದು, ಬಹಳ ತೇಜಸ್ಸಿನಿಂದ ಕೂಡಿದೆ.. ಇಲ್ಲಿಗೆ ಆಗಮಿಸುವ ಭಕ್ತರು, ಬಹಳ ಶ್ರದ್ಧೆ, ಭಕ್ತಿಯಿಂದ ನಾಗೇಶ್ವರನಲ್ಲಿ ತಮ್ಮ ಕಷ್ಟ, ಕಾರ್ಪಣ್ಯಗಳು ಕಳೆಯಲಿ ಎಂದು ಬೇಡಿಕೊಳ್ಳುತ್ತಾರೆ.

ನಾಗೇಶ್ವರ ಮತ್ತೆರಡು ದೇವಾಲಯಗಳು ಎಲ್ಲಿಗೆ ಗೊತ್ತಾ?: ವೈದ್ಯನಾಥ ಜ್ಯೋತಿರ್ಲಿಂಗದ ರೀತಿಯಲ್ಲೇ ನಾಗೇಶ್ವರ ಜ್ಯೋತಿರ್ಲಿಂಗದ ಬಗ್ಗೆಯೂ ಬಗೆಹರಿಯದ ಗೊಂದಲಗಳು ಇವತ್ತಿಗೂ ಇವೆನಾಗೇಶ್ವರ ಹೆಸರಿನ ಜ್ಯೋತಿರ್ಲಿಂಗವೆಂದು ಹೇಳುವ ಇನ್ನೆರಡು ಸ್ಥಳಗಳು ಭಾರತದಲ್ಲಿವೆ.

ಉತ್ತರಾಖಂಡದ ಆಲಮೋರಾ ಹತ್ತಿರ ಜಾಗೇಶ್ವರ ಎಂದು ಕರೆಯಲ್ಪಡುವ ಒಂದು ಮತ್ತು ಮಹಾರಾಷ್ತ್ರದ ಅವುನ್ಧದಲ್ಲಿರುವ ನಾಗನಾಥ ದೇವಾಲಯಗಳನ್ನು ಜ್ಯೋತಿರ್ಲಿಂಗ ಕ್ಷೇತ್ರವೆಂದು ಭಕ್ತರು ನಂಬಿದ್ದಾರೆ.. ಆಯಾ ಪ್ರದೇಶದ ಜನರು ಕ್ಷೇತ್ರಗಳೇ ಜ್ಯೋತಿರ್ಲಿಂಗ ಕ್ಷೇತ್ರವೆಂದು ಪೂಜಿಸುತ್ತಿದ್ದಾರೆ...

ಗುಜರಾತ್ನಲ್ಲಿರುವ ಶ್ರೀ ನಾಗೇಶ್ವರ ಜ್ಯೋತಿರ್ಲಿಂಗ ಮಂದಿರವು ನೋಡಲು ತುಂಬಾ ಸುಂದರವಾಗಿದೆ. ವಿವಿಧ ರೀತಿಯ ಕೆತ್ತನೆಯಿಂದ ಕೂಡಿದ್ದು ಕಲಾಪೂರ್ಣವಾಗಿದೆ ಹಾಗೂ ವಿಶಾಲವಾಗಿದೆ.

ಶ್ರೀ ನಾಗೇಶ್ವರ ಜ್ಯೋತಿರ್ಲಿಂಗದ ಪೂಜೆ ಮುಗಿಸಿ ಹತ್ತಿರ ಇರುವ ಪಾರ್ವತಿ ಮಂದಿರಕ್ಕೆ ಹೋಗಬೇಕು. ಇಲ್ಲಿ ಪಾರ್ವತಿಗೆ ನಾಗೇಶ್ವರಿ ಎಂದು ಕರೆಯುತ್ತಾರೆ. ಶ್ರಾವಣಮಾಸದಲ್ಲಿ ಹಾಗೂ ಹುಣ್ಣಿಮೆಯಂದು ವಿಶೇಷ ಪೂಜೆ ಇರುತ್ತದೆ. ಶಿವರಾತ್ರಿಯಂದು ಜಾತ್ರೆ ನಡೆಯುತ್ತದೆ. ಶ್ರೀ ನಾಗೇಶ್ವರ ಜ್ಯೋತಿರ್ಲಿಂಗದ ದರ್ಶನದಿಂದ ಎಲ್ಲಾ ಅಭೀಷ್ಟಗಳೂ ಪೂರ್ಣಗೊಳ್ಳುತ್ತವೆ ಎಂದು ಭಕ್ತರು ನಂಬಿದ್ದಾರೆ.

ನಾಗಧರನಾಗಿ ಆಗಮಿಸಿದ್ದ ಶಿವ: ಶಿವ ಪುರಾಣದ ಕಥೆಯಂತೆ ಇಲ್ಲಿ ದಾರುಕಾವನವಿತ್ತು. ದಾರುಕಾ ಇಲ್ಲವೇ ದಾರಕಾ ಎಂದರೆ ದೇವದಾರು ಮರ ಎಂದರ್ಥ. ಚಿಕ್ಕ ಶರೀರದವರಾದ ವಾಲಿಖಿಲ್ಯ ಮುನಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಒಮ್ಮೆ ಶಿವನು ಸರ್ಪಗಳನ್ನು ಧರಿಸಿ ದಿಗಂಬರನಾಗಿ ವನದಲ್ಲಿ ಸಂಚರಿಸಿದನು. ಅವನನ್ನು ನೋಡಿದ ಮುನಿ ಪತ್ನಿಯರು ಮೋಹಗೊಂಡು ಅವನ ಹಿಂದೆಯೇ ಹೋದರು.

ಇದರಿಂದ ಕೋಪಗೊಂಡ ಮುನಿಗಳು ಶಿವನಿಗೆ ಅವನ ಲಿಂಗ ಉದುರಿ ಹೋಗಲಿ ಎಂದು ಶಾಪವಿತ್ತರು. ಹಾಗೆ ಆದಾಗ, ಜಗತ್ತೇ ನಡುಗಿ ಹೋಯಿತು. ಬ್ರಹ್ಮ ಮತ್ತು ವಿಷ್ಣು ಬಂದು ಶಿವನನ್ನು ಜಗತ್ತನ್ನು ಉಳಿಸಲು ಕೋರಿದರು. ಶಿವನು ಪುನಹ ಲಿಂಗವನ್ನು ಧರಿಸಿದನು. ನಾಗಧರನಾಗಿ ಬಂದ ಶಿವನು ನಾಗೇಶ್ವರನಾಗಿಯೂ ಪಾವರ್ತಿಯು ನಾಗೇಶ್ವರಿಯಾಗಿಯೂ ಅಲ್ಲಿ ನೆಲೆಸಿದರು.

 

ಶಿವ ಪುರಾಣದ ಮತ್ತೊಂದು ಕಥೆಯಂತೆ ಶಿವ ಭಕ್ತಳಾದ ಸುಪ್ರಿಯಾಳನ್ನು, ದಾರಕಾವನದ ರಾಜಶಿವ ಭಕ್ತನೂ ಆದ ದಾರುಕನೆಂಬ ನಾಗ ರಾಕ್ಷಸನು ಅನ್ಯ ಸ್ತ್ರೀಯರ ಜೊತೆ ಬಂಧಿಸಿಟ್ಟನು. ಸ್ತ್ರೀಯರೆಲ್ಲರೂ ಸುಪ್ರಿಯಾಳ ಆದೇಶದಂತೆ ಶಿವ ಮಂತ್ರವನ್ನು ಭಕ್ತಿಯಿಂದ ಜಪಿಸಿದರು. ಶಿವನು ಪ್ರತ್ಯಕ್ಷನಾಗಿ ದಾರುಕನನ್ನು ವಧಿಸಿ ಅವರನ್ನು ಬಿಡುಗಡೆಗೊಳಿಸಿ ಅಲ್ಲಿಯೇ ಜ್ಯೋತಿಲಿರ್ಂಗ ರೂಪದಲ್ಲಿ ನೆಲಸಿದನು ಎಂದು ಹೇಳಲಾಗುತ್ತದೆ.

ರಾಕ್ಷಸ ದಾರುಕನ ಪತ್ನಿ ದಾರುಕಾಳು ಪಾರ್ವತಿಯನ್ನು ಕುರಿತು ತಪಸ್ಸು ಮಾಡಿ ಅವಳಿಂದ ವರ ಪಡೆದು ದಾರುಕವನದ ರಾಣಿಯಾದಳು. ಅವಳು ತನ್ನ ತಪಃಶಕ್ತಿಯಿಂದ ದಾರಕ ವನವನ್ನು ಸಮುದ್ರದಲ್ಲಿ ಇರಿಸಿಕೊಂಡು ತನ್ನ ಅನುಚರರಾದ ರಾಕ್ಷಸರ ಮೂಲಕ ತಪಸ್ವಿಗಳನ್ನು ಅಪಹರಿಸಿ ಬಂಧಿಸಿಡುತ್ತಿದ್ದಳು.

ಒಮ್ಮೆ ಶಿವ ಭಕ್ತೆ ಸುಪ್ರಿಯಾಳನ್ನು ಅಪಹರಿಸಿ ಅವರೊಡನೆ ಇವಳನ್ನೂ ಕೂಡಿಹಾಕಿದಳು. ಸುಪ್ರಿಯಾಳು ಎಲ್ಲರೊಡನೆ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿದಳು. ದಾನವರು ಸುಪ್ರಿಯಾಳನ್ನು ವಧಿಸಲು ಮುಂದಾದರು. ಆಗ ಶಿವನು ಪ್ರತ್ಯಕ್ಷನಾಗಿ ಅವಳನ್ನು ಕಾಪಾಡಿದನು ದಾನವರು ತಮ್ಮ ತಪ್ಪನ್ನು ಅರಿತುಕೊಂಡರು. ಶಿವನು ನಂತರ ನಾಗೇಶ್ವರನಾಗಿ ಜ್ಯೋತಿಲಿರ್ಂಗರೂಪದಲ್ಲಿ ಅಲ್ಲಿಯೆ ನೆಲಸಿದನು. ಪಾರ್ವತಿಯೂ ನಾಗೇಶ್ವರಿಯಾಗಿ ಅಲ್ಲಿ ನೆಲಸಿದಳು ಎನ್ನುವ ಕಥೆ ಪುರಾಣಗಳಲ್ಲಿವೆ.

ಜ್ಯೋತಿರ್ಲಿಂಗ ಕ್ಷೇತ್ರದ ಬಗ್ಗೆ ಇರುವ ಗೊಂದಲವೇನು?: ದಾರುಕಾ ವನವು ಉತ್ತರಾಖಂಡದ ಆಲಮೋರಾದಲ್ಲಿರುವ ಜಾಗೇಶ್ವರವೇ. ಹಾಗೂ ಅಲ್ಲಿಯ ನಾಗೇಶ್ವರ ದೇವಾಲಯವೇ ಜ್ಯೋತಿರ್ಲಿಂಗವೆಂದು ಅಲ್ಲಿನವರು ವಾದಿಸುತ್ತಾರೆ. ಮಹಾರಾಷ್ಟ್ರದ ಅವುನ್ಧದಲ್ಲಿರುವ ನಾಗನಾಥ ದೇವಾಲಯವೇ ಜ್ಯೋತಿರ್ಲಿಂಗ ದೇವಾಲಯವೆಂದೂ ಅಲ್ಲಿನ ಪ್ರಾಂತದವರು ಹೇಳುತ್ತಾರೆ.

ದ್ವಾರಕಾವನವನ್ನು ತಪ್ಪಾಗಿ ದಾರುಕಾವನವೆಂದು ಭಾವಿಸಲಾಯಿತೇ ಎಂಬ ಅನುಮಾನವಿದೆ. ದಾರುಕ ಮರಗಳು ಅಂದರೆ ದೇವದಾರು ಮರಗಳು ಹಿಮಾಲಯದ ಪಶ್ಚಿಮದಲ್ಲಿ ಮಾತ್ರ ಕಂಡುಬರುತ್ತವೆ. ಹೀಗಿರುವಾಗ ಗುಜರಾತ್ನಲ್ಲಿರುವ ಕ್ಷೇತ್ರಕ್ಕೆ ದಾರಕಾವನವೆಂದು ಹೇಗೆ ಹೆಸರು ಬಂದಿತೆಂಬುದು ಬಗೆಹರಿಯದ ಸಮಸ್ಯೆಯಾಗಿದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ.

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author