ಸಮುದ್ರ ತೀರದಲ್ಲಿ ವಿಚಿತ್ರ ಪ್ರಾಣಿಯ ಶವ ಪತ್ತೆ.

ಸಮುದ್ರ ತೀರದಲ್ಲಿ ವಿಚಿತ್ರ ಪ್ರಾಣಿಯ ಶವ ಪತ್ತೆ.

ಮುಖವಿಲ್ಲದ ಸುಮಾರು 23 ಅಡಿಗಳಿಗಿಂತಲೂ ಉದ್ದವಾದ ನಿಗೂಢ ಸಮುದ್ರ ಪ್ರಾಣಿಯೊಂದು ವೇಲ್ ದೇಶದ ಪೆಂಬ್ರೊಕೆಶೈರ್ ಸಮುದ್ರ ತೀರದಲ್ಲಿ ಸುತ್ತುಬಿದ್ದಿರುವುದು ಪತ್ತೆಯಾಗಿದೆ. ಇನ್ನು ಬಗ್ಗೆ ಯುಕೆ ಸೆಟಾಸಿಯನ್ ಸ್ಟ್ರಾಂಡಿಂಗ್ಸ್ ಇನ್ವೆಸ್ಟಿಗೇಷನ್ ಪ್ರೋಗ್ರಾಮ್(ಸಿ.ಎಸ್..ಪಿ)ಗೆ ವರದಿ ಮಾಡಲಾಗಿದೆ

ಪ್ರಾಣಿಯ ಬಗ್ಗೆ ಮಾಹಿತಿ ಇಲ್ಲ: ಪ್ರಾಣಿಯ ಶವದ ಫೋಟೋಗಳನ್ನು ತೆಗೆಯಲಾಗಿದ್ದ ಇವುಗಳನ್ನು ಗಮನಿಸಿದಲ್ಲಿ ಮೇಲ್ನೋಟಕ್ಕೆ ಬೂದು ಬಣ್ಣದ ಹೊಟ್ಟಿನಿಂತೆ ಕಂಡುಬರುತ್ತಿದ್ದು ಮೂಳೆಯಂತಹ ಭಾಗಗಳು ಕಂಡುಬರುತ್ತಿವೆ. ಜೀವ ವಿಜ್ಞಾನದಲ್ಲಿ ಗುರುತಿಸಬಹುದಾದ ಯಾವ ಪ್ರಾಣಿಯಂತೆಯೋ ಅಥವಾ ಯಾವ ತರದ ಜೀವಿ ಎಂಬ ಬಗ್ಗೆ ಇನ್ನು ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಇದರ ತಲೆ ಹಾಗೂ ಕೈ ಕಾಲುಗಳನ್ನು ವಿಜ್ಞಾನಿಗಳಿಗೂ ಗುರುತಿಸಲು ಕಷ್ಟದಾಯಕವಾಗಿದೆ.

ತಕ್ಷಣದ ಅಧ್ಯಯನದ ಪ್ರಕಾರ ನಿಗೂಢ ಪ್ರಾಣಿಯಲ್ಲಿ ಸುಮಾರು 23 ಅಡಿ ಉದ್ದದ ಬೆನ್ನು ಮೂಳೆಯನ್ನು ಗುರುತಿಸಲಾಗಿದೆ ಎಂದು ವೇಲ್ಸ್ ಸಿ.ಎಸ್..ಪಿ ಸ್ಟ್ರಾಂಡಿಂಗ್ ಕೋಆರ್ಡಿನೇಟರ್ ಆಗಿರುವ ಮ್ಯಾಥ್ಯೂ ವೆಸ್ಟ್ ಫೀಲ್ಸ್ ಅವರು ಮಾಹಿತಿ ನೀಡಿದ್ದಾರೆ.

ಸಂಶೋಧನೆ ನಡೆಯುತ್ತಿದೆ: ಪ್ರಾಣಿ ಹೆಚ್ಚಾಗಿ ಕೊಳೆಯಲು ಪ್ರಾರಂಭಿಸಿದ್ದು, ತೀರಕ್ಕೆ ಬಂದು ಸೇರುವ ಮುನ್ನವೇ ತಲೆ ಬೇರ್ಪಟ್ಟಿರಬಹುದು ಅಥವಾ ತಲೆ ಸಂಪೂರ್ಣ ಕೊಳೆತುಹೋಗಿರಬಹುದು. ಇದು ಇದರ ವಸ್ಸಿನಿಂದ ಅಥವಾ ಇತರೆ ಯಾವುದೇ ಕಾರಣದಿಂದಲೂ ಸವನ್ನಪ್ಪಿರಬಹುದು ಇದರಬಗ್ಗೆ ಸ್ಪಷ್ಟ ಮಾಹಿತಿ ಇಲ್ಲಆದ್ದರಿಂದ ಇದು ಯಾವ ರೀತಿಯ ಪ್ರಾಣಿ ಎಂಬದನ್ನು ಗುರುತಿಸಲು ಕಷ್ಟಕರವಾಗಿದೆ. ಹಾಗಯೇ ಪ್ರಾಣಿಯ ಕೆಲವು ಮಾದರಿಗಳನ್ನು ತಜ್ಞರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮ್ಯಾಥ್ಯೂ ವೆಸ್ಟ್ ಫೀಲ್ಸ್ ಅವರು ತಿಳಿಸಿದ್ದಾರೆ.

ಇನ್ನು ಜೀವಿ ಇಲ್ಲಿರುವ ಬಗ್ಗೆ ನಮಗೆ ಮಾಹಿತಿ ನೀಡಿದ ಮಹಿಳೆ ಬಹುಶಃ ಇಲ್ಲಿ ಸತ್ತು ಬಿದ್ದಿರುವುದು ಬಾಸ್ಕಿಂಗ್ ಶಾರ್ಕ್ ಇರಬಹುದು ಎಂದು ಹೇಳಿದ್ದರು. ನಾವು ಇದನ್ನು ಗಮನಿಸಿದಾಗ ಇದು ಬಾಸ್ಕಿಂಗ್ ಶಾರ್ಕ್ ಅಲ್ಲ ಎಂಬುದು ಖಚಿತವಾಯಿತು. ಪ್ರಾರಂಭದಲ್ಲಿ ತಿಮಿಂಗಿಲ ಎಂದುಕೊಂಡೆವು ಮಾದರಿಗಳನ್ನು ಪರೀಕ್ಷಿಸಿದ ನಂತರ ತಿಮಿಂಗಿಲ ಅಲ್ಲ ಎಂಬುದು ಖಚಿತವಾಯಿತು. ಕೊಳೆತ ಮೀನಿನ ವಾಸನೆ ಹಾಗೂ ಕೊಳೆತ ತಿಮಿಂಗಿಲದ ವಾಸನೆ ಭಿನ್ನವಾಗಿರುತ್ತದೆ ಇದರಿಂದಲೂ ಇದು ಯಾವುದೋ ಬೇರೆ ಜೀವಿ ಇರಬೇಕು ಎಂಬ ಅನುಮಾನ ನಮಗೆ ಗಟ್ಟಿಯಾದಾಗ ಇದರ ಮೂಳೆಗಳ ರಚನೆಯಿಂದಾಗಿ ಯಾವುದೇ ಕಾರಣಕ್ಕೂ ತಿಮಿಂಗಿಲವಲ್ಲ ಎಂಬುದು ಮನವರಿಕೆಯಾಯಿತು.

ಯಾವುದೋ ಒಂದು ರೀತಿಯ ಮೀನು ಇರಬಹುದು ಎಂಬ ಅಭಿಪ್ರಾಯವಿದೆ. ಪ್ರಾಣಿಯ ಹಲವು ಮಾದರಿಗಳನ್ನು ಸಂಗ್ರಹಿಸಿ ನೇಚರ್ ಹಿಸ್ಟರಿ ಮ್ಯೂಸಿಯಮ್ ಹಾಗೂ ಲಂಡನ್ ಝೂ ಸೇರಿದಂತೆ  ಇದತರ ಪ್ರಮುಖ ಪ್ರಯೋಗಾಲಯಗಳಿಗೆ ಕಳುಹಿಸಿಕೊಟ್ಟೆದ್ದೇವೆ ಅಂತಿಮ ವರದಿಗಾಗಿ ಕಾದು ನೋಡಬೇಕಿದೆ ಎಂದಿದ್ದಾರೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

 

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author