ಸರೋವರದ ಮಧ್ಯೆಯಿರುವ ಕ್ಷೇತ್ರ ಕೇರಳದ ಅನಂತಪುರ ದೇವಸ್ಥಾನ

ಭಾರತದಲ್ಲೇ ಕೇರಳ ರಾಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚು ಹೆಸರು ಪಡೆದುಕೊಂಡಿದೆ. ಇಲ್ಲಿನ ಪುರಾತನ ಶೈಲಿಯ ದೇವಾಲಯಗಳು, ಕೋಟೆಗಳು, ವಾಸ್ತುಶಿಲ್ಪಗಳು ಇಂದಿಗೂ ನಿತ್ಯನೂತನವಾಗಿ ಪ್ರಸಿದ್ಧಿ ಪಡೆದುಕೊಂಡಿದೆ. ಕೇರಳದ ತಿರುವನಂತಪುರಂನಲ್ಲಿರೋ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದೇಶಾದ್ಯಂತ ಪ್ರಸಿದ್ಧಿ ಹೊಂದಿದೆ. ಅದರಷ್ಟೇ ಪ್ರಾಮುಖ್ಯತೆ ಹೊಂದಿರೋಪುಟ್ಟ ಸುಂದರ ದೇವಸ್ಥಾನ ಗಡಿನಾಡಾದ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿದೆ. ಇದು ಸರೋವರದ ಮಧ್ಯದಲ್ಲಿರುವ ಸುಂದರ ದೇವಸ್ಥಾನವಾಗಿದೆ.

ananthapura temple

ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ಎನ್ನುವ ವಿಶಾಲವಾದ ಪ್ರದೇಶದಲ್ಲಿ ಕೆರೆ ಮಧ್ಯೆ ಇರುವ ದೇವಸ್ಥಾನ ಅನಂತಪುರ ದೇವಸ್ಥಾನ. ಇದನ್ನು ಸರೋವರ ಕ್ಷೇತ್ರವೆಂದೂ ಕರೆಯುತ್ತಾರೆ. ಅನಂತಪುರ ದೇವಸ್ಥಾನ ತುಳುನಾಡಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನದಲ್ಲಿ5 ಹೆಡೆ ಸರ್ಪದ ಮೇಲೆ ಕುಳಿತ ಅನಂತಪದ್ಮನಾಭ ಸ್ವಾಮಿ ಮೂರ್ತಿ ಇದೆ.

ananthpura templesource and pic credit: times of india

ಅನಂತಪುರ ಕ್ಷೇತ್ರದಲ್ಲಿ ಪದ್ಮನಾಭ ಸ್ವಾಮಿಯ ಆರಾಧನೆಯ ಜತೆಗೆ ಉಪ ದೇವರಾದ ಮಹಾಗಣಪತಿ, ಮಹಿಷಮರ್ದಿನಿ, ವನಶಾಸ್ತರ ಗೋಶಾಲೆಕೃಷ್ಣ ಹಾಗೂ ಉಳ್ಳಾಕುಲು ದೈವಗಳ ಅರಾಧನೆಯೂ ನಡೆಯುತ್ತದೆ.

ಈ ದೇವಸ್ಥಾನದಲ್ಲಿ ಮೊದಲು ಕಾಣುವುದು ದೇವಾಲಯದ ಆವರಣ ಗೋಡೆ, ಸುಮಾರು 3 ಮೀಟರ್ ಎತ್ತರದಲ್ಲಿ ಸರ್ಪಕಟ್ಟುಶೈಲಿಯಲ್ಲಿ ಕೆಂಪು ಕಲ್ಲಿನಿಂದ ಕಟ್ಟಿದ ವಿಶೇಷ ರಚನೆ ಇದೆ. ಕೇರಳದ ಕೆಲವು ದೇವಾಲಯಗಳಲ್ಲಿ ಮಾತ್ರ ಈ ಪುರಾತನ ಸರ್ಪಕಟ್ಟು ಶೈಲಿಯ ಆವರಣ ಗೋಡೆ ಇರುತ್ತದೆ. ಯಾವುದೇ ಕಲ್ಲಿನ ಕಟ್ಟಕ್ಕೆ ಸರ್ಪವು ಏರಬಲ್ಲುದು. ಆದರೆ ಈ ರೀತಿಯ ರಚನೆಗೆ ಸರ್ಪಕ್ಕೂ ಏರಲು ಸಾಧ್ಯವಿಲ್ಲ. ಆದುದರಿಂದಲೇ ಈ ರಚನೆಗೆ ಸರ್ಪಕಟ್ಟುಎಂಬ ಹೆಸರಿದೆ..

ananthpura templesource:https://en.wikipedia.org/

ಕರೆದರೆ ಬರೋ ಬಬಿಯಾ ಮೊಸಳೆ

ಅನಂತಪುರ ಕ್ಷೇತ್ರದ ಇನ್ನೊಂದು ವೈಶಿಷ್ಟ್ಯವೆಂದರೆ ಕೆರೆಯಲ್ಲಿರುವ ಬಬಿಯಾ ಎನ್ನುವ ಮೊಸಳೆ. ಹಿಂದೆ ಬ್ರಿಟಿಷರು ಈ ಜಾಗದಲ್ಲಿ ಟೆಂಟ್ ಹಾಕಿದ್ದಾಗ ಕೆರೆಯಲ್ಲಿ ಮೊಸಳೆಯನ್ನು ಕೊಲ್ಲಲು ಸಂಚು ರೂಪಿಸಿದ್ದರು. ಬಬಿಯಾ ಎಂದುಕರೆದಾಗ ಮೊಸಳೆ ಹೊರ ಬಂದಿತ್ತು. ಆಗ ಬ್ರಿಟಿಷರು ಗುಂಡು ಹಾರಿಸಿ, ಮೊಸಳೆಯನ್ನು ಕೊಂದಿದ್ದರು. ಆ ಮೊಸಳೆ ಕೊಂದ ಬ್ರಿಟಿಷ್ ಅಧಿಕಾರಿ ಸ್ವಲ್ಪ ದಿವಸಗಳಲ್ಲಿಯೇ ವಿಷ ಹಾವು ಕಚ್ಚಿ ಅಸುನೀಗಿದಎಂದು ಇತಿಹಾಸದಲ್ಲಿದೆ.

babiya crocodilesource and pic credit: times of india

ಅಚ್ಚರಿ ಎಂಬಂತೆ ಆ ಕೆರೆಯಲ್ಲಿ ಮತ್ತೊಂದು ಮೊಸಳೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಅಲ್ಲಿಯ ಪೂಜಾರಿ ಬಬಿಯಾ ಎಂಬ ಹೆಸರಿನಿಂದಕರೆಯುತ್ತಾರೆ. ಆ ಮೊಸಳೆಗೆ ಪ್ರತಿದಿನ ಮಧ್ಯಾಹ್ನ ಮಹಾಪೂಜೆ ಆದ ಮೇಲೆ ನೈವೇದ್ಯ ಕೊಡುವ ಸಮಯಕ್ಕೆ ಬಬಿಯಾ ಎಂದು ಕರೆದಾಗ ದೇವಸ್ಥಾನ ಸಮೀಪ ಬರುತ್ತದೆ. ಪ್ರಸಾದ ಸ್ವೀಕರಿಸಿ ಹಿಂತಿರುಗಿ ಹೋಗುತ್ತದೆ.

ಮೊಸಳೆಗೆ ಜನರು ಹರಕೆ ರೂಪದಲ್ಲಿಯೂ ನೈವೇದ್ಯ ಸಮರ್ಪಿಸುವ ಪದ್ಧತಿ ಇಲ್ಲಿದೆ. ಮೊಸಳೆ ಮಾಂಸಹಾರಿಯಾದರೂ, ಈ ಬಬಿಯಾ ಯಾರಿಗೂ ತೊಂದರೆಯೇ ಕೊಡುವುದಿಲ್ಲ. ಕೆರೆಯಲ್ಲಿರುವ ಮೀನುಗಳನ್ನೂ ಈ ಮೊಸಳೆ ತಿಂದಿದ್ದೇ ಇಲ್ಲ. ಇದೆಲ್ಲವೂ ಈ ಕ್ಷೇತ್ರದ ಪವಾಡವೇ ಸರಿಎನ್ನುತ್ತಾರೆ ಭಕ್ತರು.

babiya crocodile
source and pic credit: https://realbharat.org/


ಕೆರೆಯಲ್ಲಿದೆವಿಶೇಷ ಸುರಂಗ

ಅನಂತಪುರ ಕ್ಷೇತ್ರದ ಕೆರೆಯಲ್ಲಿ ವಿಶೇಷ ಸುರಂಗ ಮಾರ್ಗವೊಂದಿದೆ. ಈ ಕೆರೆಯಲ್ಲಿ ಹೋದರೆ ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿಯ ಕ್ಷೇತ್ರಕ್ಕೆ ಸೇರುತ್ತದೆ ಎನ್ನುವುದು ಜನರ ನಂಬಿಕೆ. ಆದರೆ ಈ ಸುರಂಗ ಮಾರ್ಗದ ಇನ್ನೊಂದು ಬಾಗಿಲು ಮೊಗ್ರಾಲ್‌ ಕರಾವಳಿಯ ನಾಂಗುಯಿ ಎಂಬಲ್ಲಿ ಇದೆ ಎನ್ನುವುದನ್ನು ಹಿರಿಯರು ಹೇಳುತ್ತಾರೆ.

ananthpura temple

ಕಾಸರಗೋಡು ಪೇಟೆಯಿಂದ 11 ಕಿ.ಮೀ. ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡಿದಾಗ ಸಿಗುವುದು ಕುಂಬಳೆ ಪೇಟೆ. ಅಲ್ಲಿಂದ ಬದಿಯಡ್ಕ ಮಾರ್ಗದಲ್ಲಿ 4 ಕಿ.ಮೀ. ಪೂರ್ವಕ್ಕೆ ಸಂಚರಿಸಿದರೆ ನಾಯ್ಕಾಪು ಎಂಬ ಸ್ಥಳ ಸಿಗುವುದು. ನಾಯ್ಕಾಪಿನಿಂದ 1 ಕಿ.ಮೀ. ದಕ್ಷಿಣಾಭಿಮುಖವಾಗಿ ಡಾಮರು ಹಾಕಿದ ಮಾರ್ಗವನ್ನು ಉಪ ಕ್ರಮಿಸಿದರೆ ಶ್ರೀ ಅನಂತಪದ್ಮನಾಭ ಸ್ವಾಮಿಯು ಪ್ರತಿಷ್ಠೆಗೊಂಡ ಅನಂತಪುರ ದೇವಳವನ್ನು ತಲುಪಬಹುದು.

ಮಂಗಳೂರಿನಿಂದ ಶ್ರೀ ಸನ್ನಿಧಿಗೆ ಆಗಮಿಸುವವರು 39 ಕಿ.ಮೀ. ದೂರದ ಕುಂಬಳೆಗೆ ಬಂದು ಬರಬೇಕಾಗುತ್ತದೆ. ಪುತ್ತೂರು ಭಾಗದಿಂದ ಬರುವವರು ಬದಿಯಡ್ಕದಿಂದ ಕುಂಬಳೆಗೆ ಬರುವ ಮಾರ್ಗದಲ್ಲಿ 12 ಕಿ.ಮೀ. ಪಶ್ಚಿಮಕ್ಕೆ ಸಂಚರಿಸಿದಾಗ ನಾಯ್ಕಾಪನ್ನು ತಲುಪಬಹುದು.ಇಲ್ಲಿಂದ ಸುಲಭವಾಗಿ ಅನಂತಪುರ ಕ್ಷೇತ್ರಕ್ಕೆ ತಲುಪಬಹುದು.

Enjoyed this article? Stay informed by joining our newsletter!

Comments

You must be logged in to post a comment.

About Author