ಸಾಕ್ಷಾತ್ ತ್ರಿಮೂರ್ತಿಗಳಿಂದ ಪ್ರತಿಷ್ಠಾಪಿತವಾದ ಕುರುಡುಮಲೆ ಗಣೇಶ..!

ಸಾಕ್ಷಾತ್ ತ್ರಿಮೂರ್ತಿಗಳಿಂದ ಪ್ರತಿಷ್ಠಾಪಿತವಾದ ಕುರುಡುಮಲೆ ಗಣೇಶ..!

https://www.youtube.com/watch?v=8DRkTT1_Nwc

ಮುಕ್ಕೋಟಿ ದೇವತೆಗಳಲ್ಲಿ ವಿಘ್ನವಿನಾಶಕ, ವಿಘ್ನ ನಿವಾರಕ ಗಣೇಶನಿಗೆ ಮೊದಲ ಪೂಜೆ. ಜ್ಞಾನ, ವಿದ್ಯೆ, ಬುದ್ಧಿ ಸಂಪನ್ನನಾದ ಗಣೇಶನಿಗೆ ಪ್ರತಿಯೊಂದು ಮಂಗಳ ಕಾರ್ಯದ ಆರಂಭದಲ್ಲಿ ಪೂಜೆ ಸಲ್ಲಿಸಿ ನಂತರ ಕೆಲಸಗಳನ್ನ ಪ್ರಾರಂಭಿಸಲಾಗುತ್ತದೆ.

ವಿಶೇಷತೆಗಳ ತವರೂರು ಕುರುಡುಮಲೆ: ಆದಿಪೂಜೆಯ ಅಧಿಪತಿಯಾದ ಗಣಪತಿಗೆ ಇಡೀ ಪ್ರಪಂಚದಲ್ಲಿ ಹಲವು ದೇವಾಲಯಗಳನ್ನ ನಿರ್ಮಿಸಿ ನಮಿಸಲಾಗುತ್ತಿದೆ.. ವಿಘ್ನಗಳ ಪರಿಹಾರಕನಾದ ಮಂಗಳಮೂರ್ತಿ ವಿನಾಯಕನು ನೆಲೆಸಿರುವ ಗ್ರಾಮವೇ ಕುರುಡುಮಲೆ. ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ಸುಮಾರು ಹನ್ನೊಂದು ಕಿ.ಮೀ. ದೂರದಲ್ಲಿರುವ ಗ್ರಾಮವು ಐತಿಹಾಸಿಕ ಸ್ಥಳವೂ ಆಗಿದೆ. ಇಲ್ಲಿರುವ ಬೆಟ್ಟವನ್ನು ಕೌಂಡಿಣ್ಯಗಿರಿ ಎಂದು ಕರೆಯಲಾಗುತ್ತದೆ. 4 ಯುಗಗಳಿಂದ ಇದೆ ಕುರುಡುಮಲೆ ಗಣೇಶನ ದೇವಾಲಯ. ಇಲ್ಲಿ ಇನ್ನು ಅನೇಕ ಸುಂದರವಾದ ದೇವಾಲಯಗಳೂ ಇವೆ. ಕುರುಡುಮಲೆಯಲ್ಲಿ ಶಿವನಿಗೆ ಮುಡಿಪಾದ ಪುರಾತನ ಸೋಮೇಶ್ವರ ದೇವಾಲಯವಿದ್ದು, ಅದು ಇಲ್ಲಿನ ಗಣಪತಿ ದೇವಾಲಯಕ್ಕಿಂತ ಹಳೆಯದಾಗಿದೆ

ದಕ್ಷಿಣದ ಗಯಾ ಎಂದೇ ಪ್ರಸಿದ್ಧವಾಗಿದೆ ಊರುಸ್ನೇಹಿತರೇ ದಕ್ಷಿಣ ಗಯಾ ಎಂದೇ ಪ್ರಸಿದ್ಧವಾಗಿರುವ ಕುರುಡುಮಲೆ ಗಣೇಶನ ಬಗ್ಗೆ ಅನೇಕ ದಂತಕತೆಗಳಿವೆ. ದೇವಾಲಯದಲ್ಲಿ ಸಾಕ್ಷಾತ್ ದೇವತೆಗಳೆ ಬಂದು ವಿಶ್ರಮಿಸತ್ತಾರೆ ಎಂಬ ನಂಬಿಕೆ ಇದೆ. ಈಗಾಗಲೇ ಅನೇಕ ಯುಗಗಳೇ ಉರುಳಿ ಹೋಗಿವೆ. ಪ್ರತಿಯೊಂದು ಯುಗ ಕಳೆದು ನವಯುಗ ಪ್ರಾರಂಬವಾಗುವ ಸಂದರ್ಭದಲ್ಲಿಯೂ ಸಕಲ ದೇವತೆಗಳು ಇಲ್ಲಿ ಸೇರಿ ಚರ್ಚೆ ನಡೆಸುತ್ತಾರೆ ಎಂಬ ಪ್ರತೀತಿ ಇದೆ.

ಸಾಕ್ಷಾತ್ ತ್ರಿಮೂರ್ತಿಗಳೇ ಪ್ರತಿಷ್ಠಾಪಿಸಿರುವ ವಿಗ್ರಹವಿದು: ಕುರುಡುಮಲೆಯಲ್ಲಿರುವ ಗಣೇಶ ಮೂರ್ತಿಯನ್ನ ಸಾಕ್ಷಾತ್ ತ್ರಿಮೂರ್ತಿಗಳೇ ಪ್ರತಿಷ್ಠಾಪಿಸಿದಾರೆ ಎಂಬ ನಂಬಿಕೆಯೂ ಇದೆ. ಸತ್ಯಯುಗದಲ್ಲಿ ತ್ರಿಪುರಾಸುರನೆಂಬ ರಾಕ್ಷಸನಿದ್ದನಂತೆ. ಅವನ ಶಕ್ತಿ ಹೆಚ್ಚುತ್ತಲೇ ಇತ್ತು ಮತ್ತು ಆತ ತೊಂದರೆಗಳನ್ನು ಉಂಟು ಮಾಡುತ್ತಲೇ ಇದ್ದನಂತೆಆಗ ಸನ್ಯಾನಿಯೊಬ್ಬರು ತ್ರಿಮೂರ್ತಿಗಳಿಗೆ ಹೇಳಿದರಂತೆ, ವಿವಾಹವಾದ ಮೇಲೂ ಬ್ರಹ್ಮಚರ್ಯವನ್ನು ಪಾಲಿಸುವಂಥ ಬ್ರಹಚಾರಿಯಿಂದ ಮಾತ್ರ ತ್ರಿಪುರಾಸುರನನ್ನು ಸಂಹರಸಿಲು ಸಾಧ್ಯ ಅಂತ.

ಆಗ ದೇವತೆಗಳು ಸಿದ್ಧಿ ಹಾಗೂ ಬುದ್ಧಿಯನ್ನು ಸೃಷ್ಟಿಸಿ ಗಣೇಶನಿಗೆ ಮದುವೆ ಮಾಡಿಸಿದರು. ಆಶ್ಚರ್ಯವೆಂದರೆ ತ್ರಿಪುರಾಸುರ ಎನ್ನುವ ರಾಕ್ಷಸ ಈಗಲೂ ಅಂದ್ರೆ ಕಲಿಯುಗದಲ್ಲೂ ಇದ್ದು, ಗಣೇಶನು ಯುಗದ ಅಂತ್ಯದಲ್ಲಿ ಆತನನ್ನು ಸಂಹರಿಸುತ್ತಾನೆ ಎಂದು ನಂಬಲಾಗಿದೆ.

ಕೂಡು ಮಲೆ ಕುರುಡುಮಲೆ ಆಯ್ತು!: ಕುರುಡು ಮಲೆ ಎಂಬ ಹೆಸರು ಕೂಡು ಮತ್ತು ಮಲೆ ಎಂಬ ಪದಗಳಿಂದ ಬಂದಿದೆ. ಇದರರ್ಥ ಸೇರುವ, ಭೇಟಿಯಾಗುವ ಸ್ಥಳವೆಂದು ಅರ್ಥ. ಇಲ್ಲಿನ ಗಣೇಶ ದೇವಾಲಯವು 13.5 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಹೊಂದಿದೆ ಮತ್ತು ದೇವಾಲಯದ ವಿನ್ಯಾಸವನ್ನು ಎರಡು ವಿಭಿನ್ನ ಶೈಲಿಗಳಲ್ಲಿ ನಿರ್ಮಿಸಲಾಗಿದೆ.

ಜಕಣಾಚಾರಿ ಮತ್ತು ಅವರ ಮಗ ಕಟ್ಟಿದ ದೇವಾಸ್ಥಾನವಿದು: ಇದರ ಕುರಿತು ಹಲವು ದಂತಕಥೆಗಳಿದ್ದು ಅದರ ಪ್ರಕಾರ ದೇವಾಲಯವನ್ನು ಇತಿಹಾಸ ಪ್ರಸಿದ್ಧ ಶಿಲ್ಪಿಗಳಾದ ಜಕಣಾಚಾರಿ ಮತ್ತು ಅವನ ಮಗ ಡಕಣಾಚಾರಿ ಇಬ್ಬರು ವಿನ್ಯಾಸಗೊಳಿಸಿದರು ಎಂದು ಹೇಳಲಾಗುತ್ತದೆ.

ವಿನಾಯಕನ ವಿಶಾಲವಾದ ಪೂಜಾಮಂದಿರವನ್ನು ಎರಡು ಕಾಲಘಟ್ಟಗಳಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಗರ್ಭಗೃಹ ಮತ್ತು ಶುಕನಾಸಿಗಳನ್ನು ಬಹುಶಃ ಹೊಯ್ಸಳ ಅರಸರ ಆಳ್ವಿಕೆಗೆ ಸೇರಿಸಬಹುದಾದರೆ ಮುಂದಿನ ನವರಂಗವು ವಿಜಯನಗರದ ಅರಸರ ಕಾಲದ ಕೊಡುಗೆಯೆಂಬುದು ಸ್ಪಷ್ಟವಾಗಿದೆ.

ಇಲ್ಲಿನ ನವರಂಗದ ಕಂಬಗಳ ಮೇಲಿನ ಉಬ್ಬುಶಿಲ್ಪಗಳನ್ನು ಇತಿಹಾಸ ಬರಹಗಾರರು ತಮ್ಮ ಕೃತಿಗಳಲ್ಲಿ ವಿವರಣಾತ್ಮಕವಾಗಿ ದಾಖಲಿಸಿರುವುದು, ಆಲಯದ ಚಾರಿತ್ರಿಕ ಹಿರಿಮೆಗೆ ನಿದರ್ಶನವಾಗಿದೆ.

ತ್ರಿಮೂರ್ತಿಗಳು ಸ್ಥಾಪಿಸಿದ ಗಣೇಶ ಇದಾಗಿದೆ. ಇಲ್ಲಿ ಕೌಂಡಿಲ್ಯ ಮಹರ್ಷಿ ತಪಸ್ಸು ಮಾಡುತ್ತಿದ್ದರಿಂದ ಕೌಂಡಿಲ್ಯ ಎಂದೂ ಕರೆಯುತ್ತಾರೆ. ಮೊದಲು ಗಣೇಶನಿಗೆ ದೇವಸ್ಥಾನವಿರಲಿಲ್ಲ. ಶ್ರೀಕೃಷ್ಣ ದೇವರಾಯರು ಇಲ್ಲಿನ ಗಣಪನಿಗೆ ದೇವಸ್ಥಾನ ಕಟ್ಟಿದರು ಎನ್ನಲಾಗುತ್ತದೆ.

ಅನೇಕ ವಿಶೇಷತೆಗಳನ್ನು ಹೊಂದಿರುವ ವಿನಾಯಕ ದೇವಾಲಯವು ಪೂರ್ವಾಭಿಮುಖವಾಗಿದ್ದು ಮುಂಭಾಗದಲ್ಲಿ ವಿಶಾಲವಾದ ಮಂಟಪವಿದೆ. ದಕ್ಷಿಣ ದಿಕ್ಕಿಗೆ ಮತ್ತೊಂದು ದ್ವಾರವನ್ನು ಆಲಯಕ್ಕೆ ಅಳವಡಿಸಲಾಗಿದೆ.

ದಕ್ಷಿಣ ದಿಕ್ಕಿನ ಬಾಗಿಲು ಸಹಾ ಪೂರ್ವದ ಬಾಗಿಲಿನಂತೆಯೇ ಕಲಾತ್ಮಕವಾದ ಬಾಗಿಲವಾಡವನ್ನು ಹೊಂದಿದೆ. ಇಲ್ಲಿಂದ ಹೊರಗೆ ಹೋಗಲು ಪುಟ್ಟ ಮೆಟ್ಟಿಲುಗಳಿವೆ. ದಕ್ಷಿಣ ದಿಕ್ಕಿನ ದ್ವಾರದಲ್ಲಿರುವ ಪ್ರಸ್ತುತ ಶಾಸನವು ಹಲವಾರು ಮಹತ್ವದ ಸಂಗತಿಗಳನ್ನು ತಿಳಿಸಿಕೊಡುತ್ತದೆ.

ಆಲಯದ ದಕ್ಷಿಣ ದಿಕ್ಕಿನ ದ್ವಾರದ ಹೊರಗಡೆ ಗೋಡೆಯ ಬಲಭಾಗದಲ್ಲಿರುವ ಕನ್ನಡ ಶಾಸನವು ವಿಜಯನಗರದ ಅರಸರ ಕಾಲದ ಲಿಪಿ-ಬರಹಗಳಿಂದ ಕೂಡಿದೆ.

ಗಣೇಶ ವಿಗ್ರಹ ಬೆಳೆಯುತ್ತಲೇ ಇರುತ್ತಂತೆ! : ವೈಜ್ಞಾನಿಕ ಲೋಕ ಎಷ್ಟೇ ಮುಂದುವರಿದ್ರೂ ನಮ್ಮ ಪುರಾಣಗಳಲ್ಲಿನ ಅನೇಕ ವಿಚಾರಗಳ ಬಗ್ಗೆ, ಈಗಿನ ಎಷ್ಟೋ ಸಂಗತಿಗಳ ಬಗ್ಗೆ ವಿವರಿಸಲು ವಿಜ್ಞಾನದಿಂದ ಸಾಧ್ಯವಾಗಿಲ್ಲ.

ಅದೇ ರೀತಿ ಇಲ್ಲಿನ ಗಣೇಶನ ವಿಗ್ರಹವು ನಿರಂತರವಾಗಿ ಬೆಳೆಯುತ್ತಿದೆ ಎಂದು ನಂಬಲಾಗಿದೆ. ಒಂದು ಲೆಕ್ಕದ ಪ್ರಕಾರ, ಇದೊಂದು ಭ್ರಮೆಯಷ್ಟೇ. ಏಕೆಂದರೆ ಇಲ್ಲಿನ ವಿಗ್ರಹವನ್ನು ಒಂದೊಂದು ಕಡೆಯಿಂದ ನೋಡಿದಾಗ ಒಂದೊಂದು ರೀತಿಯಲ್ಲಿ ಕಾಣಿಸುತ್ತೆ ಅಂತ ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ದಿನ ರಾತ್ರಿ ಇಲ್ಲಿ ಓಂ ಜಪ ಕೇಳಿಸುತ್ತಂತೆ!: ಸ್ನೇಹಿತರೆ, ಕುರುಡುಮಲೆ ಗಣೇಶನ ಮಹಿಮೆ ಅಪಾರವದ್ದದ್ದು. ಇಲ್ಲಿನ ದೇವಾಲಯದಲ್ಲಿ ಪ್ರತಿ ದಿನ ರಾತ್ರಿ ಓಂ ಜಪ ಕೇಳಿಸುತ್ತಂತೆ. ಅನೇಕ ಸ್ಥಳೀಯರು ತಾವು ಓಂ ಜಪವನ್ನು ಕೇಳಿಸಿಕೊಂಡಿದ್ದಾಗಿ ಹೇಳಿದ್ದಾರೆ. ಕೌಂಡಿನ್ಯ ಮಹಾಮುನಿಯು ಈಗಲೂ ಇಲ್ಲಿ ಜಪ ಮಾಡುತ್ತಾರೆ, ಓಂ ಶಬ್ಧವು ಪ್ರತಿಧ್ವನಿಸುತ್ತದೆ ಎಂದು ನಂಬಲಾಗಿದೆ.

ಅಷ್ಟೇ ಅಲ್ಲ, ರಥಸಪ್ತಮಿಯಂದು ಸಣ್ಣ ಬೆಳಕಿನ ಚೆಂಡುಗಳು ದೇವಸ್ಥಾನದ ಸುತ್ತ ಜಾರಿ ಬಂದು ದೇವಾಲಯ ಪ್ರವೇಶಿಸುತ್ತವೆ ಎಂದು ಸಹ ಹೇಳಲಾಗುತ್ತೆದೆ. ದೇವತೆಗಳು ಗಣೇಶನನ್ನು ಪೂಜಿಸಲು ರೀತಿಯಾಗಿ ದೀಪಗಳನ್ನು ಹಿಡಿದು ಬರುತ್ತಾರೆ ಎಂದು ಜನ ನಂಬಿದ್ದಾರೆ.

ಪವರ್ ಸೆಂಟರ್ಗೆ ಬರ್ತಾರೆ ರಾಜಕಾರಣಿಗಳು!: ಅತ್ಯಂತ ಪ್ರಭಾವಶಾಲಿಯಾದ ಕುರುಡುಮಲೆ ಗಣೇಶನಿಗೆ ಅನೇಕ ರಾಜಕೀಯ ನಾಯಕರು ಭೇಟಿ ಕೊಡ್ತಲೇ ಇರ್ತಾರೆ. ಚುನಾವಣೆಗೆ ನಿಲ್ಲುವ ಮೊದಲು ಇಲ್ಲಿಗೆ ಬಂದು ಗಣೇಶನಿಗೆ ಕೈಮುಗಿದು ಬೇಡಿಕೊಂಡರೆ ಗೆಲ್ಲುತ್ತೇವೆ ಎಂಬ ನಂಬಿಕೆ ರಾಜಕಾರಣಿಗಳಲ್ಲಿದೆ... ರಾಜ್ಯದ, ರಾಷ್ಟ್ರದ ನಾಯಕರು ಇಲ್ಲಿಗೆ ಬಂದು ಗಣೇಶನಿಗೆ ಹರಕೆ ಮಾಡಿಕೊಂಡ ಅದೆಷ್ಟೋ ಉದಾಹರಣೆಗಳಿವೆ.

ರಾಜಕಾರಣಿಗಳು ಮಾತ್ರವೇ ಅಲ್ಲ, ಉದ್ಯಮಿಗಳು ಬರ್ತಿರ್ತಾರೆ. ಸಾವಿರಾರು ಭಕ್ತರು ಸಹ ತಮ್ಮ ಇಷ್ಟಾರ್ಥ ಸಿದ್ಧಿಗೆ ಕುರುಡುಮಲೆ ಗಣೇಶನಲ್ಲಿ ಬೇಡಿಕೊಳ್ಳಿತ್ತಾರೆ. ತನ್ನನ್ನು ನಂಬಿ ಬರುವ ಭಕ್ತರನ್ನು ಗಣಪತಿಯು ಸದಾ ಕಾಯುತ್ತಾನೆ ಅಂತ ಜನ ಗಾಢವಾಗಿ ನಂಬಿದ್ದಾರೆ.

ಸ್ನೇಹಿತರೆ ಗಣೇಶ ಚತುರ್ಥಿಯಂದು ಇಲ್ಲಿ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯುತ್ವೆಅದನ್ನು ನೋಡಿ ಕಣ್ತುಂಬಿಕೊಳ್ಳುವ ಪುಣ್ಯ ಎಲ್ಲರಿಗೂ ಸಿಗಲಿ ಅಂತ ನಾವು ಆಶಿಸುತ್ತೇವೆ.

ಕುರುಡುಮಲೆ ಪುಣ್ಯಕ್ಷೇತ್ರಕ್ಕೆ ನೀವು ಹೋಗ್ಬೇಕು ಅಂದ್ರೆ ಬಹಳ ಸುಲಭ. ಬೆಂಗಳೂರಿಂದ ಮುಳಬಾಗಿಲು ವರೆಗೂ ನೂರಾರು ಬಸ್ಗಳು ಹೋಗುತ್ವೆ. ಅಲ್ಲಿಂದ ಕುರುಡುಮಲೆಗೆ ತಲುಪಲು ಆಟೋ, ಟ್ಯಾಕ್ಸಿ ಹೀಗೆ ವಿವಿಧ ಆಯ್ಕೆಗಳು ಇವೆ.

ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 100 ಕಿ.ಮೀ ದೂರದಲ್ಲಿದೆ. ಇಷ್ಟೆಲ್ಲಾ ವಿಶೇಷತೆಗಳಿರುವ ವಿನಾಯಕನ ದರ್ಶನ ಪಡೆಯಬೇಕಾದಲ್ಲಿ ನೀವೂ ಸಹ ಭೇಟಿ ನೀಡಿ ವಿಘ್ನನಿವಾರಕ ಗಣೇಶನ ಕೃಪೆಗೆ ಪಾತ್ರರಾಗಿ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author