ಸಂಜೀವಿನಿ ಅಮೃತಬಳ್ಳಿಗೆ ಆಯುರ್ವೇದದಲ್ಲಿ ಯಾಕೆ ಅಷ್ಟು ಮಹತ್ವ..?

ಆಯುರ್ವೇದದಲ್ಲಿ ಅಮೃತಬಳ್ಳಿಯ ಮಹತ್ವವೇನು.?

ಅಮೃತ ಬಳ್ಳಿ.. ಹೆಸರಲ್ಲೇ ಇರುವಂತೆ ಅಮೃತಕ್ಕೇ ಸಮಾನ ಈ ಅಮೃತಬಳ್ಳಿ. ಇದಕ್ಕೆ ಸಂಸ್ಕೃತದಲ್ಲಿ ಛಿನ್ನರುಹಾ, ಆಮ್ರಾತಕ, ವತ್ಸದಾನಿ ಎನ್ನುತ್ತಾರೆ. ಅಂದರೆ ಇದು ರೋಗಗಳನ್ನು ಪೂರ್ತಿಯಾಗಿ ಹೋಗಲಾಡಿಸುತ್ತದೆ. ಇನ್ನು ಇದಕ್ಕೆ ಹಿಂದಿಯಲ್ಲಿ ಗಿಲೋಯ್ ಎಂದು ಕರೆಯುತ್ತಾರೆ. ಅಮೃತ ಬಳ್ಳಿಗೆ ಆಯುರ್ವೇದಲ್ಲಿ ಮಹತ್ವದ ಸ್ಥಾನವಿದೆ. ಅಷ್ಟೇ ಅಲ್ಲ ಆಯುರ್ವೇದದಲ್ಲಿ ಹಲವಾರು ಔಷಧಿಗಳ ತಯಾರಿಕೆಗೆ ಅಮೃತಬಳ್ಳಿಯನ್ನು ಬಳಸಲಾಗುತ್ತದೆ. 

ಅಮೃತಬಳ್ಳಿಯ ಎಲೆ, ಖಾಂಡ, ಬೇರು ಹೆಚ್ಚು ಉಪಯುಕ್ತಭಾಗಗಳು. ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಹೊಂದಿರುವ ಈ ಬಳ್ಳಿಯಲ್ಲಿ ಕ್ಯಾಲ್ಸಿಯಂ, ಪಾಸ್ಪರಸ್, ಕಬ್ಬಿಣ, ಸತು, ಮ್ಯಾಂಗನಿಸ್ ಸೇರಿದಂತೆ  ಹಲವು ಪೋಷಕಾಂಶಗಳಿವೆ. ಇದನ್ನು ಸುಮಾರು 75 ಕಾಯಿಲೆಗಳಿಗೆ  ಔಷಧಿಯಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ವಯಸ್ಸಿನ ಅಂತರವಿಲ್ಲದೆ ಎಲ್ಲಾ ವಯಸ್ಸಿನವರೂ ಇದನ್ನು ಔಷಧಿಯಾಗಿ ಬಳಸಬಹುದು.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಆಂಟಿವೈರಲ್ ಆಗಿ ಕೆಲಸಮಾಡುವ ಅಮೃತಬಳ್ಳಿಯನ್ನು ನಿಯಮಿತವಾಗಿ ಬಳಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಮೃತ ಬಳ್ಳಿಯು ಪೌಡರ್ ಹಾಗೂ ಮಾತ್ರೆ ರೂಪದಲ್ಲೂ ಈಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರ ಬೇರು ಮತ್ತು ಖಾಂಡಗಳೂ ಸಿಗುತ್ತವೆ.

ಯಾವ ಸಮಸ್ಯೆಗೆ ಅಮೃತಬಳ್ಳಿಯನ್ನು ಉಪಯೋಗಿಸಬಹುದು..?: ಎಲ್ಲಾತರದಹ ಜ್ವರಗಳಿಗೂ ಅಮೃತ ಬಳ್ಳಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಮಲಬದ್ಧತೆ, ಪಿತ್ತದ ಸಮಸ್ಯೆ, ಚರ್ಮದ ತೊಂದರೆ, ಶೀತ, ಮೂತ್ರಕೋಶ ಸಂಬಂಧಿ ತೊಂದರೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಅಮೃತಬಳ್ಳಿಯನ್ನು ದಿವ್ಯೌಷಧವವಾಗಿ ಬಳಸಲಾಗುತ್ತದೆ..

ಅಮೃತಬಳ್ಳಿಯ ಬಳಕೆ ಹೇಗೆ..?: ಅಮೃತಬಳ್ಳಿಯ ಖಾಂಡದ ಕಷಾಯವನ್ನು ಇಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡ, ಡಯಾಬಿಟೀಸ್ ಅನ್ನು ನಿಯಂತ್ರಣದಲ್ಲಿಡಬಹುದು. ಪಾರ್ಶ್ವವಾಯು, ಹೃದಯ ಸಮಸ್ಯೆಗಳಿಂದ ದೂರವಿರಬಹುದು. ಅಷ್ಟೇ ಅಲ್ಲ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ.

ವೈರಲ್ ಜ್ವರವಿದ್ದಲ್ಲಿ ಅಮೃತಬಳ್ಳಿಯ ಖಾಂಡವನ್ನು ನೀರಿನಲ್ಲಿ ಕುದಸಿ ಕಷಾಯ ತಯಾರಿಸಿ ಸೇವಿಸಬಹುದು. ಅರ್ಧ ಗ್ರಾಂ ಅಮೃತಬಳ್ಳಿಯ ಪುಡಿಯನ್ನು ನೆಲ್ಲಿಕಾಯಿಯ ಜೊತೆ ಮಿಶ್ರಣ ಮಾಡಿ ಸೇವಿಸಿದರೆ ಹೊಟ್ಟೆ ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಕೆಮ್ಮು ನೆಗಡಿ ಕಾಡುತ್ತಿದ್ದಲ್ಲಿ ಅಮೃತಬಳ್ಳಿಯ ರಸ ಹಾಗೂ ಜೆನುತುಪ್ಪವನ್ನು ಸೇರಿಸಿ ಸೇವಿಸಬೇಕು. ಅಮೃತಬಳ್ಳಿ, ಅರ್ಧ ಚಮಚದಷ್ಟು ಮೆಣಸಿನ ಕಾಳಿನ ಪುಡಿಯನ್ನು ನೀರಿನಲ್ಲಿ ಕುದಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಎದೆ ನೋವು ಕಡಿಮೆಯಾಗುತ್ತದೆ.

ಅಮೃತಬಳ್ಳಿಯನ್ನು ದಿನನಿತ್ಯದ ಜೀವವನದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. ಕಷಾಯ ಹಾಗೂ ಹರ್ಬಲ್ ಟೀ ರೂಪದಲ್ಲಿ, ಗಾಹೂ ಇತರೆ ಗಿಡ ಮೂಲಿಕೆಗಳೊಂದಿ ಅಮೃತಬಳ್ಳಿ ಸೇರಿಸಿ ಕಷಾಯ ತಯಾರಿಸಿ ಸೇವಿಸಬಹುದು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author