ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯ ಜನ್ಮ ರಹಸ್ಯ..!

ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯ ಜನ್ಮ ರಹಸ್ಯ..!

ಶ್ರೀ ಲಕ್ಷ್ಮಿ ಜಯಂತಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯ ಜನ್ಮದಿನಾಚರಣೆಯಾಗಿ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಫಲ್ಗುಣ ಪೂರ್ಣಿಮೆ  ದಿನದಂದು ಲಕ್ಷ್ಮಿ ದೇವಿಯ ಜನನವಾಗುತ್ತದೆ. ಫಲ್ಗುಣ ಪೂರ್ಣಿಮೆ ದಿನವು ಉತ್ತರ ಫಲ್ಗುಣಿ ನಕ್ಷತ್ರದೊಂದಿಗೆ ಸೇರಿಕೊಳ್ಳುತ್ತದೆ. ಆದ್ದರಿಂದ ಉತ್ತರ ಫಲ್ಗುಣಿ ಸಹ ಲಕ್ಷ್ಮಿ ಜಯಂತಿಯೊಂದಿಗೆ ಸಂಬಂಧ ಹೊಂದಿದೆ.

ಲಕ್ಷ್ಮಿ ದೇವಿಯ ಜನನದ ಹಿಂದೆ ಹಲವು ಉಲ್ಲೇಖಗಳಿವೆ: ವಿಷ್ಣು ಪುರಾಣದ ಪ್ರಕಾರ ಲಕ್ಷ್ಮಿಯು ಬೃಗು ಮಹರ್ಷಿ ಹಾಗೂ ಖ್ಯಾತಿ ದಂಪತಿಯ ಪುತ್ರಿ. ಬೃಗು ಮಹರ್ಷಿಯ ಪತ್ನಿ ಖ್ಯಾತಿದಂಪತಿಗೆ ಗಂಡು ಮಕ್ಕಳೇ ಇದ್ದರು. ಖ್ಯಾತಿಗೆ ಹೆಣ್ಣು ಮಕ್ಕಳನ್ನು ಪಡೆಯಬೇಕೆಂಬ ಆಸೆ ಉಂಟಾಯಿತು. ಅವಳು ಗಂಡನ ಅನುಮತಿ ಪಡೆದು ದೇವಿಯನ್ನು ಕುರಿತು ತಪಸ್ಸು ಮಾಡಿದಳು. ತಪಸ್ಸಿಗೆ ಮೆಚ್ಚಿ ಜಗನ್ಮಾತೆಯು ಪುತ್ರಿಯನ್ನು ಕರುಣಿಸಿದಳು. ಆಕೆಗೆ ಲಕ್ಷ್ಮಿ ಎಂದು ಹೆಸರಿಟ್ಟರು. ಕುಮಾರಿಯಾದ ಲಕ್ಷ್ಮಿಯು ವಿಷ್ಣುವನ್ನು ಕುರಿತು ತಪಸ್ಸು ಮಾಡಿದಾಗ, ತಪಸ್ಸಿಗೆ ಮೆಚ್ಚಿದ ವಿಷ್ಣು ನಾರಾಯಣನ ರೂಪದಲ್ಲಿ ಪ್ರತ್ಯಕ್ಷನಾಗಿ ವರವನ್ನು ಬೇಡು ಎನ್ನುತ್ತಾನೆ. ಆದರೆ ಲಕ್ಷ್ಮಿ ದೇವಿಯು ನಿಮ್ಮ ವಿಶ್ವರೂಪವನ್ನು ತೋರಿಸಿದರೆ ನಾನು ನಿಮ್ಮನ್ನು ನಂಬುತ್ತೇನೆ ಎನ್ನುತ್ತಾಳೆ. ನಂತರ ವಿಷ್ಣು ವಿಶ್ವರೂಪವನ್ನು ತೋರಿಸಿದಾಗ, ಲಕ್ಷ್ಮಿ ದೇವಿಯು ನನ್ನನ್ನು ವಿವಾಹ ಮಾಡಿಕೊಳ್ಳಿ ಎಂದು ವರ ಬೇಡುತ್ತಾಳೆ.

ಸಮುದ್ರ ಮಂಥನದ ವೇಳೆ ಲಕ್ಷ್ಮಿ ಜನನ: ಮತ್ತೊಂದು ಉಲ್ಲೇಖದ ಪ್ರಕಾರ ಕ್ಷೀರಸಾಗರದಲ್ಲಿ ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನದ ಸಮಯದಲ್ಲಿ ಮಹಾಲಕ್ಷ್ಮಿ ಜನನವಾಗುತ್ತದೆ. ಸಮುದ್ರ ಮಂಥನದ ಪ್ರಾರಂಭದಲ್ಲಿ ಆಲಾಹಲ ಬರುತ್ತದೆ. ಈ ಆಲಾಹಲವನ್ನು ಮರಮೇಶ್ವರ ಕುಡಿಯುತ್ತಾನೆ. ನಂತರ ಮಂಥನದ ವೇಳೆ ಅತ್ಯಂತ ಶುಭಕರವಾದ ವಸ್ತುಗಳೊಂದಿಗೆ ದಿವ್ಯ ತೇಜಸ್ಸಿನಿಂದ ಸುಂದರ ಕನ್ಯೆಯೊಬ್ಬಳು ಹುಟ್ಟಿಬರುತ್ತಾಳೆ. ಅವಳೇ ಮಹಾಲಕ್ಷ್ಮಿ. ಸಮುದ್ರದಿಂದ ಜನಿಸಿ ಬಂದ ಮಹಾಲಕ್ಷ್ಮಿ ಸಮುದ್ರ ರಾಜನ ಮಗಳು ಎಂದು ಹೇಳಲಾಗುತ್ತದೆ. ಸಮುದ್ರ ರಾಜನ ಮಗಳಾಗಿ ಕಮಲದಲ್ಲಿ ಉದ್ಭವಿಸಿದ ಕೂಡಲೇ ಲೋಕದ ಕತ್ತಲೆ ದೂರಾಗುತ್ತದೆ. ಲಕ್ಷ್ಮಿ ಜನನದಿಂದ ಇಡೀ ಲೋಕವೇ ತೇಜೋಮಯವಾಗುತ್ತದೆ.

ಲಕ್ಷ್ಮೀ ಪೂಜೆಯ ವಿಧಾನ: ಲಕ್ಷ್ಮಿ ದೇವಿಯು ಸ್ವಚ್ಛತೆಯನ್ನು ತುಂಬಾ ಪ್ರೀತಿಸುತ್ತಾಳೆ. ಆದ್ದರಿಂದ, ಅದು ಮನೆ, ಕಚೇರಿ ಅಥವಾ ಯಾವುದೇ ಸ್ಥಳವಾಗಿರಲಿ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಕೊಡುವುದು ಅತ್ಯಗತ್ಯ. ಸ್ವಚ್ಛತೆಯಿಲ್ಲದ ಸ್ಥಳಕ್ಕೆ ಲಕ್ಷ್ಮಿ ದೇವಿಯು ಬರುವುದಿಲ್ಲ. ಶುಕ್ರವಾರ ಸೂರ್ಯ ಮುಳುಗಿದ ನಂತರ, ಮನೆಯ ಮುಖ್ಯ ದ್ವಾರದಲ್ಲಿ ತುಪ್ಪದ ದೀಪವನ್ನು ಬೆಳಗಿಸಬೇಕು. ಇದನ್ನು ಮಾಡುವುದರಿಂದ, ಲಕ್ಷ್ಮಿ ದೇವಿಯು ಸಂತೋಷವಾಗಿರುತ್ತಾಳೆ. ಮತ್ತು ಮನೆಯಲ್ಲಿ ಯಾವಾಗಲೂ ಶಾಂತಿ ಮತ್ತು ಸಂತೋಷದ ವಾತಾವರಣವಿರುತ್ತದೆ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada

https://www.youtube.com/Planet Tv Kannada

 

► Follow us on Facebook

https://www.facebook.com/Planettvkannada

 

► Follow us on Twitter

https://twitter.com/Planettvkannada​

 

► Follow us on Instagram

https://www.instagram.com/planettvkannada

 

► Follow us on Pinterest

https://www.pinterest.com/Planettvkannada

 

► Follow us on Koo app 

https://www.kooapp.com/planettvkannada

► Follow us on share chat 

https://sharechat.com/planettvkannada

 

► Join us on Telegram

https://t.me/planettvkannada

 

► Follow us on Tumblr

https://www.tumblr.com/planet-tv-kannada

 

► Follow us on Reddit

https://www.reddit.com/Planet-tv-kannada

 

 

Enjoyed this article? Stay informed by joining our newsletter!

Comments

You must be logged in to post a comment.

About Author