ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಮೀಸಲಾದ ದಿನವೇ ‘ಸ್ಕಂದ ಷಷ್ಠಿ’..

‘ಸ್ಕಂದ ಷಷ್ಠಿ’ಯ ಮಹತ್ವ ಹಾಗೂ ಆಚರಣೆ ಹೇಗೆ..?

ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಸ್ಕಂದ ದೇವರನ್ನು ಸ್ಕಂದ ಷಷ್ಠಿಯಂದು ಆರಾಧಿಸಲಾಗುತ್ತದೆ. ದಕ್ಷಿಣ ಭಾರತದ ಪ್ರಮುಖ ಆಚರಣೆಗಳಲ್ಲಿ ಸ್ಕಂದ ಷಷ್ಠಿಯೂ ಒಂದಾಗಿದೆ.  ಮುರುಗನ್, ಕಾರ್ತಿಕೇಯನ್ ಮತ್ತು ಸುಬ್ರಹ್ಮಣ್ಯ ಎಂದು ಕರೆಯಲ್ಪಡುವ  ಸ್ಕಂದನನ್ನು ಗಣೇಶನ ಸಹೋದರ ಎನ್ನಲಾಗುತ್ತದೆ..

ಪ್ರಮುಖವಾಗಿ ಎಲ್ಲಾ ತಿಂಗಳುಗಳಲ್ಲಿಯೂ, ವರ್ಷಕ್ಕೆ ಹನ್ನೆರಡು ಸ್ಕಂದ ಷಷ್ಠಿಗಳು ಬರುತ್ತವೆ. ಅಮವಾಸ್ಯೆ ಮುಗಿದು ಚಂದ್ರನ ಕಾಲ ಆರಂಭವಾದ ಆರನೇ ದಿನವನ್ನು ಸ್ಕಂದ ಷಷ್ಠಿ ಎಂದು ಕರೆಯಲಾಗುತ್ತದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಬರುವ ಷಷ್ಠಿಯನ್ನು ಹೆಚ್ಚು ವಿಶೇಷವಾಗಿ ಆಚರಿಸಲಾಗುತ್ತದೆ.

ಸೂರ ಸಂಹಾರವನ್ನು ಸ್ಕಂದ ಷಷ್ಠಿ ಎಂದು ಆಚರಿಸಲಾಗುತ್ತದೆ. ಇದು ದಕ್ಷಿಣ ಭಾರತದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದ್ದು ಶಿವನ ಮಗನಾದ ಸುಬ್ರಹ್ಮಣ್ಯ ದೇವರಿಗೆ ಆರು ದಿನಗಳ ಕಾಲ ನಡೆಯುವ ಹಬ್ಬ ಇದಾಗಿದೆ. ಕಾರ್ತಿಕ ಮಾಸದ ಹುಣ್ಣಿಮೆಯಂದು ಈ ಹಬ್ಬ ಪ್ರಾರಂಭವಾಗುತ್ತದೆ. 

ಸ್ಕಂದ ಪುರಾಣದ ಪ್ರಕಾರ, ಸುರಪದ್ಮ, ಸಿಂಹಮುಖ ಹಾಗು ತಾರಕಾಸುರ ರಾಕ್ಷಸರ ನಾಯಕತ್ವದಲ್ಲಿ ರಾಕ್ಷಸರು ದೇವತೆಗಳನ್ನು ಸೋಲಿಸಿ ಧರೆಯನ್ನು ಆಕ್ರಮಿಸುತ್ತಾರೆ. ದೇವತೆಗಳನ್ನು ಹಾಗು ಮನುಷ್ಯರನ್ನು ಹಿಂಸಿಸಿ, ದೇವತೆಗಳಿಗೆ ಸಂಬಂಧ ಪಟ್ಟದ್ದನ್ನೆಲ್ಲಾ ಧ್ವಂಸ ಮಾಡುತ್ತಾರೆ. 

ಶಿವನು ಗಂಭೀರವಾದ ತಪ್ಪಸ್ಸಿನಲ್ಲಿ ಮುಳುಗಿದ್ದಾನೆಂಬುದನ್ನು ಅರಿತ ಸುರಪದ್ಮನು ತನ್ನ ಸಾವು ಶಿವನ ಮಗನಿಂದಲೇ ಆಗಬೇಕು ಎಂಬ ವರ ಪಡೆಯುತ್ತಾನೆ. ಇದನ್ನರಿತ ದೇವತೆಗಳು  ಬ್ರಹ್ಮ ದೇವನ ಸಲಹೆಯಂತೆ ಮನ್ಮಥನ ಸಹಾಯದದಿಂದ ಶಿವನಲ್ಲಿ ಕಾಮದ ಇಚ್ಚೆಯನ್ನು ಪ್ರಚೋದಿಸಲು ಮುಂದಾಗುತ್ತಾರೆ. ತಪಸ್ಸ ಭಗ್ನವಾದ್ದರಿಂದ ಕೋಪಗೊಂಡ ಶಿವನು ಮನ್ಮಥನನ್ನು ಭಸ್ಮ ಮಾಡುತ್ತಾನೆ.

ಸುಬ್ರಹ್ಮಣ್ಯ ಸ್ವಾಮಿಯ ಜನನ: ಶಿವನಿಂದ ಬಂದ ವೀರ್ಯಗಳು ಆರು ಭಾಗಗಳಾಗಿ ಗಂಗೆಯಲ್ಲಿ ಲೀನವಾಗುತ್ತದೆ. ಗಂಗೆಯು, ಆ ಆರು ಭಾಗಗಳನ್ನು ಒಂದು ಕಾಡಿನಲ್ಲಿ ಸ್ಥಾಪಿಸಿದಾಗ ಅದು ಆರು ಮಕ್ಕಳ ರೂಪ ಪಡೆದುಕೊಳ್ಳುತ್ತದೆ. ಆ ಮಕ್ಕಳನ್ನು ಆರು ಕಾರ್ತಿಕೇಯ ನಕ್ಷತ್ರಗಳ ಹೆಣ್ಣು ಮಕ್ಕಳು ನೋಡಿಕೊಳ್ಳುತ್ತಿದ್ದಾಗ ಪಾರ್ವತಿ ದೇವಿಯು ಆ ಆರು ಮಕ್ಕಳನ್ನು ಒಂದಾಗಿ ಮಾಡಿದಾಗ ಆರು ತಲೆಯುಳ್ಳ ಒಂದು ಮಗುವಾಗುತ್ತದೆ. ಆ ದೇವತೆಯೇ ಸುಬ್ರಹ್ಮಣ್ಯ.

ಸೂರ ಸಂಹಾರ: ಇತ್ತ ರಾಕ್ಷಸರ ಅಟ್ಟಹಾಸ ಮಿತಿಮೀರಿರುತ್ತದೆ. ಸುರಪದ್ಮ ಇಂದ್ರನ ಮಗನನ್ನು, ಋಶಿಗಳನ್ನು ಹಾಗು ದೇವತೆಗಳನ್ನು ಒತ್ತೆಯಾಳುಗಳಾಗಿ ಇಟ್ಟು ಹಿಂಸೆ ನೀಡುತ್ತಾನೆ. ಈ ಸಂದರ್ಭದಲ್ಲಿ ಸುಬ್ರಹಮಣ್ಯ ಸ್ವಾಮಿಯು ದೇವತೆಗಳ ಸೇನಾಪತಿಯಾಗಿ ಯುದ್ಧ ಮಾಡಿ ರಾಕ್ಷಸರನ್ನು ಸೋಲಿಸುತ್ತಾನೆ. ಕೊನೆಯ ಯುದ್ಧದಲ್ಲಿ, ಸುಬ್ರಹ್ಮಣ್ಯ ಸ್ವಾಮಿಯು ಸೂರಪದ್ಮನನ್ನು ತನ್ನ ಆಯುಧದಿಂದ ಕೊಲ್ಲುತ್ತಾನೆ. ಇದಕ್ಕೆ 'ಸೂರಸಂಹಾರ' ಎಂದು ಕರೆಯಲಾಗುತ್ತದೆ. ಈ ದಿನದಂದೇ ಮುಖ್ಯ ಸ್ಕಂದ ಷಷ್ಠಿಯನ್ನು ಆಚರಿಸಲಾಗುತ್ತದೆ. 

ಆರು ದಿನಗಳ ಸ್ಕಂದ ಷಷ್ಠಿ: ಆರು ದಿನಗಳ ಕಾಲ ನಡೆಯುವ ಸ್ಕಂದ ಷಷ್ಠಿ ಸಂದರ್ಭದಲ್ಲಿ ಹಬ್ಬದಲ್ಲಿ ದೇವರಿಗೆ ರಥೋತ್ಸವ ಹಾಗು ವಿಶೇಷ ಪೂಜೆಗಳು ನಡೆಯುತ್ತವೆ. ಈ ಆಚರಣೆಯಲ್ಲಿ ಭಕ್ತರು ಉಪವಾಸವಿದ್ದು ಸುಬ್ರಹಮಣ್ಯನ ಸ್ತೋತ್ರಗಳನ್ನು, ಕಥೆಗಳನ್ನು ಓದುತ್ತಾರೆ, ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author