ಸಾಯೋಕೆ ಟ್ರಾನ್ಸ್‌ ಫಾರ್ಮ್ ಏರಿದ..! ಆದರೆ ಮುಂದೆ ಕಾದಿತ್ತು ಅಚ್ಚರಿ..!

ಸಾಯೋಕೆ ಟ್ರಾನ್ಸ್‌ ಫಾರ್ಮ್ ಏರಿದ..!  ಆದರೆ ಮುಂದೆ ಕಾದಿತ್ತು ಅಚ್ಚರಿ..!

ಈ ಜಗತ್ತಿನಲ್ಲಿ ಎಂಥೆಂತಾ ಪವರ್ ಫುಲ್ ಮೆನ್‍ಗಳಿದ್ದಾರೆ ಅಂತ ಹುಡುಕೋಕೆ ಹೊರಟರೆ ನಮಗೆ ಅಚ್ಚರಿ ತರುವಂತ ಕೆಲವು ಕ್ಯಾರೆಕ್ಟರ್ ಗಳು ಸಿಕ್ತಾರೆ. ಅಂತ ವಿಚಿತ್ರ ವಿಭಿನ್ನ ವ್ಯಕ್ತಿಗಳಲ್ಲಿ ಕೇರಳದ ರಾಜ್ ಮೋಹನ್ ಕೂಡ ಒಬ್ರು

image source-nairaland.com

ನಮ್ಮಂತೆ ಇವರೂ ಕೂಡ ಸಾಮಾನ್ಯ ಮನುಷ್ಯ ಅಂತ ಅನಿಸಿದ್ರೆ ನಿಮ್ಮ ಊಹೆ ಸುಳ್ಳು. ಇವರು ಹೈ ವೋಲ್ಟೇಜ್ ಮ್ಯಾನ್ ಅಂತಾನೇ ಫೇಮಸ್ ಆಗಿದ್ದಾರೆ. ನಾವೆಲ್ಲಾ ವಿದ್ಯುತ್ ವೈರ್ ನೋಡಿದ್ರೆ ಮಾರುದ್ದ ಜಿಗಿತೇವೆ.. ಎಷ್ಟೋ ಜನ ವಿದ್ಯುತ್ ಶಾಕ್‍ನಿಂದ ಜೀವವನ್ನೂ ಕಳೆದುಕೊಂಡಿದ್ದಾರೆ. ಆದ್ರೆ ಇವರಿಗೆ ಯಾವ ಪವರ್ ಕೂಡ ಏನೂ ಮಾಡಲ್ಲ. ವೈರ್ ಗಳನ್ನ ಮೈಗೆ ಸುತ್ತಿಕೊಂಡು ವಿದ್ಯುತ್ ಹರಿಸಿಕೊಳ್ತಾರೆ. 

ಮನೆಯಲ್ಲಿರೋ ಎಲೆಕ್ಟ್ರಿಕಲ್ ಪ್ಲಗಿನಿಂದ ವೈರ್ ಎಳೆದು ತನ್ನ ಬಾಡಿಗೆ ಕನೆಕ್ಷನ್ ಕೊಡ್ಕೋತಾರೆ. ಅಷ್ಟೆ ಅಲ್ಲ ಬಲ್ಬ್ ಕೂಡ ಉರಿಸ್ತಾರೆ. ನೋಡೋರಿಗೆ ಪರಮಾಶ್ಚರ್ಯದ ವ್ಯಕ್ತಿ ಇವರು. 

image source-dialyhunt 

ವಿಚಿತ್ರ ಸನ್ನಿವೇಶದಲ್ಲಿ ತನ್ನೊಳಗಿನ ಶಕ್ತಿಯ ಅನಾವರಣ.!

ಇವರ ಈ ಶಕ್ತಿ ಅರಿವಿಗೆ ಬಂದಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ರಾಜ್‍ಮೋಹನ್ ಚಿಕ್ಕವರಿದ್ದಾಗ ತನ್ನ ತಾಯಿಯನ್ನ ಕಳೆದುಕೊಂಡರು. ಅದೇ ದುಃಖದಲ್ಲಿ ತಾನೂ ಆತ್ಮಹತ್ಯೆ ಮಾಡಿಕೊಳ್ಳೋಕೆ ಟ್ರೈ ಮಾಡಿದರು. ಹಾಗೆ ಆತ್ಮಹತ್ಯೆ ಮಾಡಿಕೊಳ್ಳೊಕೆ ಅವರು ಆರಿಸಿಕೊಂಡಿದದ್ದು ಮನೆಯ ಪಕ್ಕದಲ್ಲಿರೋ ಹೈ ವೋಲ್ಟೇಜ್ ಟ್ರಾನ್ಸ್ ಫಾರ್ಮ್ ಪೆಟ್ಟಗೆಯನ್ನ. ಆದ್ರೆ ವಿಧಿಯ ಬರಹವೇ ಬೇರೆಯಾಗಿತ್ತು. ಅವರಿಗೆ ಯಾವುದೇ ಶಾಕ್ ಹೊಡೆಯಲಿಲ್ಲ. ಅಲ್ಲಿಂದ ರಾಜ್‍ಮೋಹನ್‍ಗೆ ತನಗಿರೋ ಶಕ್ತಿಯ ಅರಿವಾಗಿತ್ತು.

ಹೀಗೆ ಇವರಿಗೆ ಕರೆಂಟ್ ಶಾಕ್ ಹೊಡೆಯದಿರೋದಕ್ಕೆ ಕಾರಣ ಏನು ಅನ್ನೋದನ್ನ ಕಂಡುಹಿಡಿಯೋಕೆ ಡಿಜಿಟಲ್ ಮೀಟರ್ ಇಟ್ಟು ಪರೀಕ್ಷಿಸಲಾಯ್ತು. ಒಬ್ಬ ನಾರ್ಮಲ್ ಮನುಷ್ಯನಿಗೆ ಒನ್ ಆರ್ಮ್ ರೆಸಿಟೆನ್ಸ್ ಪವರ್ ಇರುತ್ತೆ. ಆದ್ರೆ ರಾಜ್‍ಮೋಹನ್‍ಗೆ ಆ ಡಿಜಿಟಲ್ ಮೀಟರ್ ಇಟ್ಟು ಪರೀಕ್ಷಿಸಿದ್ರೆ ಅದರಲ್ಲಿ ಅವರ ರೆಸಿಟ್ಸೆನ್ಸ್ ಪವರ್ ನಾರ್ಮಲ್ ಮನುಷ್ಯನಿಗಿಂತ ಹೆಚ್ಚಾಗಿತ್ತು. ಅಂದ್ರೆ ಒಬ್ಬ ನಾರ್ಮಲ್ ಮನುಷ್ಯನಿಗಿಂತ ಹತ್ತು ಪಟ್ಟು ಜಾಸ್ತಿ ರೆಸಿಟೆನ್ಸ್ ಪವರ್ ಇವರಿಗೆ ಇರೋದು ಕಂಡು ಬಂತು

Enjoyed this article? Stay informed by joining our newsletter!

Comments

You must be logged in to post a comment.

Related Articles
About Author