ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಬೃಹತ್ ಹಡಗು..!

ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಬೃಹತ್ ಹಡಗು..!

ಕೈರೋ: ಯುರೋಪ್ ಮತ್ತು ಏಷ್ಯಾ ಖಂಡದ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಜಲಮಾರ್ಗವಾದ ಈಜಿಪ್ಟಿನ ಸುಯೆಜ್ ಕಾಲುವೆಯಲ್ಲಿ ಬೃಹತ್ ಗಾತ್ರದ ಹಡಗು ಸಿಲುಕಿದ್ದು ಸಂಚಾರ ಬಿಕ್ಕಟ್ಟು ಎದುರಾಗಿದೆ. ಇದರಿಂದ ಪ್ರತಿ ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ (2900 ಕೋಟಿ ರೂ.) ನಷ್ಟವುಂಟಾಗುತ್ತಿದೆ ಎಂದು ಹೇಳಲಾಗುತ್ತದೆ. ಹಡಗನ್ನು ತೆರವುಗೊಳಿಸಲು ಈಜಿಪ್ಟ್ ನ ಟಗ್ ಬೋಟ್ ಗಳು ಹರಸಾಹಸಪಡುತ್ತಿವೆ. 

ತೈವಾನ್ ನಿರ್ವಹಣೆಯಲ್ಲಿರುವ ಪನಾಮಾ ಮೂಲದ, ಸುಮಾರು 400 ಮೀಟರ್ ಉದ್ದ ಮತ್ತು 2 ಲಕ್ಷ ಮೆಟ್ರಿಕ್ ಟನ್ ಇರುವ ‘ಎಂ.ವಿ. ಎವರ್ ಗ್ರೀನ್’ ಎಂಬ ಕಂಟೇನರ್ ಹಡಗು ಮಂಗಳವಾರ ಬೆಳಗ್ಗೆ ಸೂಯೆಜ್ ಕಾಲುವೆಯಲ್ಲಿ ಸಾಗುತ್ತಿದ್ದಾಗ ಕಾಲುವೆಗೆ ಅಡ್ಡಲಾಗಿ ತಿರುಗಿದ್ದು, ಕಾಲುವೆಯ ಎರಡೂ ತುದಿಯ ದಂಡೆಗೆ ಸಿಲುಕಿಕೊಂಡು ನಿಂತಿದೆ. ಇನ್ನು ಚಿತ್ರಗಳಲ್ಲಿ ಗಮಿನಿಸುವುದಾದರೆ 59 ಮೀಟರ್ ಅಗಲದ ಕಂಟೇನರ್ ಹಡಗು, ಮಾನವ ನಿರ್ಮಿತ ಸುಯೇಜ್ ಕಾಲುವೆ ಉದ್ದಕ್ಕೂ ವಾಲಿದೆ. ಎವರ್ ಗ್ರೀನ್ ಹಡಗು ಕಾಲುವೆಯ ಮಧ್ಯೆ ಸಿಲುಕಿರುವುದರಿಂದ ಕಾಲುವೆಯ ಎರಡೂ ಬದಿಯಲ್ಲಿ ಸುಮಾರು 185 ಹಡಗುಗಳು ನಿಂತಿದ್ದು, ಇದರಿಂದಾಗಿ ಪ್ರತಿ ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ ನಷ್ಟವುಂಟಾಗುತ್ತಿದೆ ಎನ್ನಲಾಗಿದೆ.  ಸಂಚಾರ ಬಿಕ್ಕಟ್ಟನ್ನು ಪರಿಹರಿಸಲು ಹಲವು ವಾರಗಳೇ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮಾನವ ನಿರ್ಮಿತ ಸುಯೇಜ್ ಕಾಲುವೆ: 1869 ರಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರವನ್ನು ಸಂಪರ್ಕಿಸಲು ಈಜಿಪ್ಟಿನಲ್ಲಿ 120 ಮೈಲಿ ಉದ್ದದ ಕಾಲುವೆಯನ್ನು ನಿರ್ಮಿಸಲಾಗಿತ್ತು. ಇದು  ಯುರೋಪ್ ಮತ್ತು ಏಷ್ಯಾ ಖಂಡವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವುದರಿಂದ ಈ ಕಾಲುವೆಯ ಮೂಲಕ ಜಗತ್ತಿನ ಒಟ್ಟು ಸಮುದ್ರ ಮಾರ್ಗದ ವ್ಯಾಪಾರದ ಶೇ. 12 ರಷ್ಟು ವಹಿವಾಟು ನಡೆಯುತ್ತದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

 
► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

► Follow us on Reddit
https://www.reddit.com/Planet-tv-kannada
 

Enjoyed this article? Stay informed by joining our newsletter!

Comments

You must be logged in to post a comment.

About Author