ಹೋಳಿ ಹಬ್ಬ ಆಚರಣೆಯ ಹಿಂದಿವೆ ಹಲವು ಪೌರಾಣಿಕ ಕಥೆಗಳು..!

ಹೋಳಿ ಹಬ್ಬ ಆಚರಣೆಯ ಹಿಂದಿವೆ ಹಲವು ಪೌರಾಣಿಕ ಕಥೆಗಳು..!

ಏಕತೆಯನ್ನು ಪ್ರತಿಬಿಂಬಿಸುವ ಹೋಳಿ ಹಬ್ಬ ಎಂದರೆ ಎಲ್ಲರಿಗೂ ಬಹಳ ಖುಷಿ. ಹಿರಿಯರಿಂದ ಕಿರಿಯರವರೆಗು ಎಲ್ಲರೂ ಒಟ್ಟಾಗಿ ಸಂತೋಷದಿಂದ ಬಣ್ಣ ಎರಚಿಕೊಂಡು ಸಂಭ್ರಮಿಸುವ ಹಬ್ಬವೇ ಹೋಳಿ. ಹೋಳಿಯನ್ನು ಯಾಕೆ ಆಚರಿಸುತ್ತಾರೆ..? ಇದರ ಹಿಂದಿನ ಕಥೆ ಏನು ಎಂಬ ಬಗ್ಗೆ ಹಲವರಿಗೆ ತಿಳಿದಿಲ್ಲ. ಆದರೆ ಈ ಹೋಳಿ ಹಬ್ಬ ಆಚರಣೆಯ ಹಿಂದೆ ಹಲವು ಪೌರಾಣಿಕ  ಕಥೆಗಳಿವೆ.

ಹಿಂದೂಗಳು ಆಚರಿಸುವ ಪ್ರತಿಯೊಂದು ಹಬ್ಬವೂ ಒಂದೊಂದು ವಿಶೇಷತೆಯನ್ನು ಹೊಂದಿರುತ್ತವೆ. ಈ ಹಬ್ಬಗಳ ಹಿಂದ ಧಾರ್ಮಿಕ ಕಾರಣಗಳು ಹಾಗೂ ವೈಜ್ಞಾನಿಕ ಕಾರಣಗಳೂ ಇರುತ್ತವೆ. ಇವುಗಳಲ್ಲಿ ಹೋಳಿ ಹಬ್ಬವೂ ಒಂದು. ಹೋಳಿ ಎಂಬ ಪದ ಹೋಲಿಕಾ ಎಂಬ ಶಬ್ಧದಿಂದ ಬಂದಿದೆ. ಈ ಹೋಳಿ ಹಬ್ಬವನ್ನು ಧುರಿಯಾ, ಹೋಲಿಕಾ ದಹನ, ಓಕಳಿ, ಕಾಮಣ್ಣನ ಹಬ್ಬ, ರಂಗಪಂಚಮಿ ಸೇರಿದಂತೆ ವಿವಿಧ ಹೆಸರಿನಲ್ಲಿ ದೇಶದಾದ್ಯಂತ  ಆಚರಿಸಲಾಗುತ್ತದೆ. 

ಹೋಲಿಕಾ ದಹನ: ತಾನೇ ಶ್ರೇಷ್ಠ ಎಂದು ಮೆರೆಯುತ್ತಿದ್ದ ಹಿರಣ್ಯಕಶಿಪು ವಿಷ್ಣುವಿನ ಪರಮ ಭಕ್ತನಾದ ತನ್ನ ಮಗ  ಪ್ರಹ್ಲಾದನನ್ನು ಒಲಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸದಾ ವಿಷ್ಣುವನ್ನು ಆರಾಧಿಸುತ್ತಿದ್ದ ಪ್ರಹ್ಲಾದನನ್ನು ಕೊಲ್ಲಲು ಹಿರಣ್ಯಕಶಿಪು ನಿರ್ಧರಿಸುತ್ತಾನೆ ಆದರೂ ಪ್ರಯೋಜನವಾಗುವುದಿಲ್ಲ. ಆಗ ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದನನ್ನು ಕೊಲ್ಲಲು ತನ್ನ ತಂಗಿ ಹೋಲಿಕಾಳನ್ನು ಕರೆಸುತ್ತಾನೆ.  

ಹೋಲಿಕಾ ಬೆಂಕಿಯಲ್ಲಿ ಸುಡದೇ ಇರುವಂತಹ ವರವನ್ನು ಪಡೆದಿರುತ್ತಾಳೆ. ಆದ್ದರಿoದ ಹಿರಣ್ಯಕಶಿಪು ಹೋಲಿಕಾಳನ್ನು ಕರೆಸಿ, ಪ್ರಹ್ಲಾದನನ್ನು ಸುಟ್ಟು ಹತ್ಯೆಮಾಡುವ ಉಪಾಯ ಮಾಡುತ್ತಾನೆ. ಅಣ್ಣನ ಮಾತಿನಂತೆ ಹೋಲಿಕಾ ಚಿತೆಯ ಮೇಲೆ ಕುಳಿತು ಪ್ರಹ್ಲಾದನನ್ನು ಕರೆಯುತ್ತಾಳೆ. ಪ್ರಹ್ಲಾದನಿಗೆ ಈ ಸಂಚು ತಿಳಿದಿದ್ದರೂ ಸ್ವಲ್ಪವೂ ಅಂಜದೆ, ಹರಿಯನ್ನು ಧ್ಯಾನಿಸುತ್ತಲೇ ಚಿತೆಯ ಮೇಲೆ ಕೂರುತ್ತಾನೆ. ಆಗ ಹೋಲಿಕಾ ಸ್ವತಃ ಬೆಂಕಿಯಲ್ಲಿ ದಹನವಾಗುತ್ತಾಳೆ. ಪ್ರಹ್ಲಾದನು ಹರಿಯ ಆಶಿರ್ವಾದದಿಂದ ಸುರಕ್ಷಿತವಾಗಿ ಹೊರಬರುತ್ತಾನೆ. ದುಷ್ಟರ ವಿರುದ್ಧ ಸತ್ಯದ ಜಯ ಎಂಬ ಕಾರಣಕ್ಕೆ ಹೋಲಿಯನ್ನು ಆಚರಿಸಲಾಗುತ್ತದೆ.

'ಕಾಮದೇವ'ನ ದಹನ: ಹೋಳಿ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಕಾಮನ ಹಬ್ಬ ಎಂಬ ಹೆಸರಿನಿoದಲೂ ಆಚರಿಸುತ್ತಾರೆ. ಕಾಮನ ಹಬ್ಬ ಆಚರಣೆಯ ಹಿಂದೆಯೂ ಒಂದು ಕಥೆಯಿದೆ. ತಾರಕಾಸುರ ಎಂಬ ರಾಕ್ಷಸನು ದೇವತೆಗಳಿಗೆ ಉಪಟಳ ನೀಡುತ್ತಿರುತ್ತಾನೆ. ಶಿವ ಪಾರ್ವತಿಯ ಪುತ್ರನಲ್ಲದೆ ಬೇರೆ ಯಾರಿಂದಲೂ ಸಹ ರಾಕ್ಷಸನನ್ನು ಸಂಹರಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ದೇವಾನು ದೇವತೆಗಳು ಶಿವ ಪಾರ್ವತಿಗೆ ವಿವಾಹ ಮಾಡಲು ನಿಶ್ಚಯಿಸುತ್ತಾರೆ. ಶಿವನು ಪಾರ್ವತಿಯನ್ನು ವಿವಾಹವಾಗುವಂತೆ ಮನವೊಲಿಸಲು ಕಾಮದೇವನ ಸಹಾಯ ಪಡೆಯುತ್ತಾರೆ.

ಶಿವನ ತಪೋಭೂಮಿಯಾದ ಹೇಮಕೂಟ ಪರ್ವತಕ್ಕೆ ಬಂದ ರತಿ ಮನ್ಮಥರು, ತಪಸ್ಸಿನಲ್ಲಿದ್ದ ಶಿವನ ಮುಂದೆ ನೃತ್ಯ ಮಾಡುತ್ತಾ ಹೂವಿನ ಬಾಣಗಳನ್ನು ಬಿಡುತ್ತಾರೆ. ಇದರಿಂದ ಕುಪಿತಗೊಂಡ ಶಿವನು ಕಾಮದೇವನನ್ನು ತನ್ನ ಮೂರನೇ ಕಣ್ಣಿನಿಂದ ಸುಟ್ಟುಬಿಡುತ್ತಾನೆ. ಇದರಿಂದ ರತಿಯು ದುಃಖದಿಂದ ರೋದಿಸಿದಾಗ, ಪಾರ್ವತಿಯು ಕಠೋರ ತಪಸ್ಸು ಮಾಡುತ್ತಾಳೆ. ಶಿವನು ಪಾರ್ವತಿಯ ತಪಸ್ಸಿಗೆ ಒಲಿಯುತ್ತಾನೆ. ರತಿಯ ಪತಿ ಮನ್ಮಥನು ಪುನರ್ಜನ್ಮ ಪಡೆಯುತ್ತಾನೆ. ಈ ದಿನವನ್ನು ದಕ್ಷಿಣ ಭಾರತದಲ್ಲಿ ಕಾಮನ ಹಬ್ಬ ಎಂದು ಆಚರಿಸಲಾಗುತ್ತದೆ. 

ರಾವಣನ ದಹನ: ಹೋಳಿ ಹಬ್ಬದಂದು ದೆಹಲಿಯಲ್ಲಿ ಹತ್ತು ತಲೆಯ ರಾವಣನ ಬೃಹತ್ ಮೂರ್ತಿ ನಿರ್ಮಿಸಿ, ಇದಕ್ಕೆ ಹಳೆ ಬಟ್ಟೆಗಳನ್ನೆಲ್ಲಾ ಹಾಕಿ ಲಂಕೇಶ ಅಂದರೆ ರಾವಣನನ್ನು ದಹಿಸಲಾಗುತ್ತದೆ. ಅಷ್ಟೇ ಅಲ್ಲದೆ ದಕ್ಷಿಣ ಭಾರತದ ಕೆಲವು ಗ್ರಾಮಗಳಲ್ಲಿ ಬೇಡದ ವಸ್ತುಗಳನ್ನೆಲ್ಲಾ ಒಂದೆಡೆ ಸೇರಿಸಿ ಬಾಲಕನೊಬ್ಬನಿಗೆ ಶಿಖಂಡಿಯ ವೇಷ ಹಾಕಿ ಆ ಬಾಲಕನಿಂದ ಬೇಡದ ವಸ್ತುಗಳ ಗುಡ್ಡೆಗೆ ಬೆಂಕಿ ಇಡಿಸುತ್ತಾರೆ.

ವೈಜ್ಞಾನಿಕ ಕಾರಣ: ಈ ಮಾಸದಲ್ಲಿ ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುತ್ತದೆ. ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದಿಂದ ದೇಹದ ತಾಪ ಹೆಚ್ಚಾಗಿ ಕೆಲವೊಮ್ಮೆ ಕೋಪವೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ತಾಪವನ್ನು ಸಹಿಸಿಕೊಳ್ಳುವ ಶಕ್ತಿ ಹೆಚ್ಚಿಸಕೊಳ್ಳಲು ನೈಸರ್ಗಿಕವಾಗಿ ಬಣ್ಣ ತಯಾರಿಸುತ್ತಿದ್ದರು. ಈ ಹೋಳಿ ಹಬ್ಬದ ಸಂದರ್ಭದಲ್ಲಿ ಮುತ್ತುಗದ ಹೋಗಳಿಂದ ನೈಸರ್ಗಿಕವಾಗಿ ಬಣ್ಣ ತಯಾರಿಸಿ ಹಬ್ಬ ಆಚರಿಸುತ್ತಿದ್ದರು. ಈ ಮುತ್ತುಗದ ಹೂ ಕಫಾ ನಿವಾರಕ ಆಂಶವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಹೂಗಳನ್ನು ನೆನೆಸಿ ಬಣ್ಣ ತಯಾರಿಸಿ ಬಣ್ಣ ಎರಚುತ್ತಿದ್ದರು. ಇದರಿಂದ ರೋಗನಿರೋಧ ಶಕ್ತಿ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ. ಇನ್ನು ಮುತ್ತುಗದ ಎಲೆಗಳಿಂದ ತಯಾರಿಸಿದ ತಟ್ಟೆಯಲ್ಲಿ ಊಟಮಾಡಲಾಗುತ್ತದೆ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author