12 ಜ್ಯೋತಿರ್ಲಿಂಗಗಳ ಸಂಪೂರ್ಣ ಮಾಹಿತಿ

12 ಜ್ಯೋತಿರ್ಲಿಂಗಗಳ ಸಂಪೂರ್ಣ ಮಾಹಿತಿ

ನೀಲಕಂಠ, ಶಂಕರ, ಪರಮಾತ್ಮ, ಕರುಣಾಸಾಗರ, ಭೋಲೆನಾಥನಾಗಿ ಸರ್ವರ ಮನದಲ್ಲೂ ನೆಲೆಸಿರುವ ಶಿವ ಅತಿ ಭಕ್ತಿ ಹಾಗು ಶ್ರದ್ಧೆಗಳಿಂದ ಪೂಜಿಸಲ್ಪಡುವ ಮಹಾದೇವನಿಗೆ. ಕೋಟ್ಯಂತರ ಶಿವ ಭಕ್ತರಿದ್ದಾರೆ. 

ಶಿವ ಭಕ್ತರು ಜ್ಯೋರ್ತಿಲಿಂಗಗಳನ್ನು ಅತಿಭಕ್ತರಿಂದ ಪೂಜಿಸ್ತಾರೆ. 

ಶಿವ ಮಹಾಪುರಾಣದ ಪ್ರಕಾರ, ಒಮ್ಮೆ ವಿಷ್ಣು ಹಾಗು ಬ್ರಹ್ಮರ ಮಧ್ಯೆ ತಮ್ಮಲ್ಲಿ ಯಾರು ಶ್ರೇಷ್ಠರೆಂಬುದರ ಕುರಿತು ಪೈಪೋಟಿ  ಏರ್ಪಟ್ಟಿತು. ಈ ಪೈಪೋಟಿ  ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮಹಾದೇವನು ಮಧ್ಯೆ ಪ್ರವೇಶಿಸಿ ಮೂರು ಲೋಕಗಳನ್ನು ಸೀಳಿದ ಪ್ರಖರವಾದ ಜ್ಯೋತಿಯ ರೇಖೆಯೊಂದನ್ನು ಸೃಷ್ಟಿಸಿ ಅವುಗಳ ತುದಿಗಳನ್ನು ಕಂಡುಹಿಡಿಯಿರಿ ಎಂದು ಇಬ್ಬರಿಗೂ ಆದೇಶಿಸಿದ.

ಇದರಂತೆ ಬ್ರಹ್ಮನು ಮೇಲ್ಮುಖವಾಗಿಯೂ, ವಿಷ್ಣು ರೇಖೆಯ ಕೆಳಮುಖವಾಗಿಯೂ ತುದಿಯನ್ನು ಮುಟ್ಟಲು ಕ್ರಮಿಸ ತೊಡಗಿದರು. ಎ ಎಷ್ಟೇ ಕ್ರಮಿಸಿದರೂ ಅವರಿಗೆ ತುದಿಯನ್ನು ಮುಟ್ಟಲಾಗಲಿಲ್ಲ. ಕೊನೆಗೆ ವಿಷ್ಣುವಿಗೆ ತನಗುಂಟಾದ ಅಹಂಕಾರದಿಂದ ಮಾಡಿದ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟನು.

ಆದರೆ ಇತ್ತ ಬ್ರಹ್ಮನು ಚಲಿಸುತ್ತಿರುವಾಗ ಮೇಲಿನಿಂದ ಕೇದಿಗೆಯ ಹೂವೊಂದು ಬಿಳುವುದನ್ನು ಗಮನಿಸಿ ಅದನ್ನು ಕುರಿತು ವಿಚಾರಿಸಿದನು.

ಅದಕ್ಕೆ ಆ ಹೂ ತುದಿಯಿಂದ ಬಿದ್ದಿರುವುದಾಗಿ ಹೇಳಿತು. ಇದರಿಂದ ಸಂತಸಗೊಂಡ ಬ್ರಹ್ಮನು ತಾನು ತುದಿಯನ್ನು ತಲುಪಿದೆನೆಂದು ಅದರ ಕುರುಹಾಗಿ ಈ ಕೇದಿಗೆಯ ಹೂವನ್ನು ತಂದಿರುವೆನೆಂದು ಸುಳ್ಳು ಹೇಳಿದನು.

ಇದರಿಂದ ಕೋಪಗೊಂಡ ಶಿವನು ಬ್ರಹ್ಮನನ್ನು ಕುರಿತು ಈ ಲೋಕದಲ್ಲಿ ನಿನ್ನ ಪೂಜೆಯನ್ನು ಯಾರು ಮಾಡಬಾರದು ಎಂತಲೂ, ಕೇದಿಗೆಯನ್ನು ಕುರಿತು ನೀನು ಯಾವ ದೇವರಿಗೂ ಸಲ್ಲದೆಂತಲೂ ಶಪಿಸಿದನು. ಈ ಪವಿತ್ರ ಪ್ರಕಾಶ ಜ್ಯೋತಿಯ ರೇಖೆಯನ್ನೆ ಇಂದು ಜ್ಯೋತಿಲಿರ್ಂಗಗಳಾಗಿ ಪೂಜಿಸಲಾಗುತ್ತದೆ.

ಮೂಲತಃ 64 ಜ್ಯೋರ್ತಿಲಿಂಗಗಳಿವೆಯೆಂದು ನಂಬಲಾಗಿದ್ದು ಅವುಗಳಲ್ಲಿ 12 ಜ್ಯೋರ್ತಿಲಿಂಗಗಳು ಅತಿ ಪವಿತ್ರವಾದವುಗಳೆಂದು ಪರಿಗಣಿಸಲಾಗಿದೆ.

ಸೋಮನಾಥ: ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ವೇರಾವಳ್ ಪ್ರದೇಶದ ಪ್ರಭಾಸ ಕ್ಷೇತ್ರದಲ್ಲಿ ಸೋಮನಾಥ ಜ್ಯೋತಿಲಿರ್ಂಗವಿದೆ. ಇದನ್ನು ಅನಂತಮಯ ದೇಗುಲವೆಂದು ಬಣ್ಣಿಸಲಾಗಿದೆ.

ಮಹಾಕಾಳೇಶ್ವರ: ಮಧ್ಯ ಪ್ರದೇಶದ ಪುರಾತನ ಹಾಗು ಪವಿತ್ರ ನಗರವಾದ ಉಜ್ಜಯಿನಿಯಲ್ಲಿ ಮಹಾಕಾಳೇಶ್ವರ ಜ್ಯೋತಿಲಿರ್ಂಗವಿದೆ. ಸ್ವಯಂಭೂ ಲಿಂಗ ರೂಪದ ಮಹಾಕಾಲೇಶ್ವರ ದೇವಸ್ಥಾನವು ರುದ್ರ ಸಾಗರ ಕೆರೆಯ ತಟದಲ್ಲಿದೆ.

https://www.youtube.com/embed/vcTk-hMLoEQ?loop=1&autoplay=1

ಓಂಕಾರೇಶ್ವರ: ಓಂಕಾರೇಶ್ವರ ಶಿವನ ದೇವಸ್ಥಾನವು ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಹರಿದಿರುವ ನರ್ಮದಾ ನದಿಯ ಮೇಲಿರುವ ಶಿವಪುರಿ ಅಥವಾ ಮಂಡತ ಎಂಬ ದ್ವೀಪದಲ್ಲಿ ಸ್ಥಿತವಿದೆ. ಈ ದ್ವೀಪವು ಹಿಂದುಗಳ ಪವಿತ್ರ ಸಂಕೇತವಾದ ॐ ಆಕಾರದಲ್ಲಿರುವುದರಿಂದ ಓಂಕಾರೇಶ್ವರ ಎಂಬ ಹೆಸರು ಬಂದಿದೆ. ಈ ದ್ವೀಪದಲ್ಲಿ ಎರಡು ದೇವಸ್ಥಾನಗಳಿದ್ದು ಅವುಗಳು ಪ್ರಣವನಾದ ಓಂಕಾರೇಶ್ವರ ದೇವಸ್ಥಾನ ಹಾಗು ಚಿರಾಯು ಅಥವಾ ಅಮರನಾದ ಅಮರೇಶ್ವರ ದೇವಸ್ಥಾನ. ದಂತಕಥೆಯ ಪ್ರಕಾರ ಶಿವ ಲಿಂಗವನ್ನು ಎರಡು ಭಾಗಗಳನ್ನಾಗಿ ಮಾಡಿ ಒಂದು ಓಂಕಾರೇಶ್ವರವಾಗಿಯೂ ಇನ್ನೊಂದು ಮಾಮಲೇಶ್ವರ ಅಥವಾ ಅಮರೇಶ್ವರವಾಗಿಯೂ ಪ್ರಸಿದ್ಧವಾಗಿವೆ.

ಕೇದಾರನಾಥ: ಉತ್ತರಾಖಂಡ್ ರಾಜ್ಯದ ಹಿಮಾಲಯ ಶ್ರೇಣಿಯ ಗಡ್ವಾಲ್ ಪ್ರದೇಶದ ಮಂದಾಕಿನಿ ನದಿ ಬಳಿಯಿರುವ ಕೇದಾರನಾಥ ಒಂದು ಪ್ರಸಿದ್ಧವಾದ ಹಿಂದು ಧಾರ್ಮಿಕ ಕೇಂದ್ರವಾಗಿದೆ. ಪ್ರದೇಶದ ವಾತಾವರಣದಲ್ಲಿ ಏರು ಪೇರು ಹೆಚ್ಚಾಗುವುದರಿಂದ ಈ ಜ್ಯೋರ್ತಿಲಿಂಗವು ವರ್ಷದ ಏಪ್ರಿಲ್ ಕೊನೆಯಿಂದ ನವಂಬರ್ ತಿಂಗಳಿನವರೆಗೆ ಮಾತ್ರ ತೆರೆದಿರುತ್ತದೆ.

ಭೀಮಾಶಂಕರ: ಜ್ಯೋತಿಲಿರ್ಂಗ ತಾಣವಾದ ಭೀಮಾಶಂಕರ ದೇವಸ್ಥಾನವು ಮಹಾರಾಷ್ಟ್ರ ರಾಜ್ಯದ ಪುಣೆ ಬಳಿಯಿರುವ ಖೇದ್ ತಾಲೂಕಿನಲ್ಲಿದೆ. ಭೀಮಾ ನದಿ ತಟದಲ್ಲಿ ಶಿವನು ಭೀಮಾಶಂಕರನಾಗಿ ನೆಲೆಸಿ ಭಕ್ತರನ್ನು ಅಶಿರ್ವದಿಸುತ್ತಿದ್ದಾನೆ.

ಕಾಶಿ ವಿಶ್ವನಾಥ: ಉತ್ತರ ಪ್ರದೇಶದ ವಾರಣಾಸಿ ಅಥವಾ ಕಾಶಿಯಲ್ಲಿ ಶಿವನು ವಿಶ್ವನಾಥನಾಗಿ ಭಕ್ತರನ್ನು ಹರಸುತ್ತಿದ್ದಾನೆ. ಇದೊಂದು ಬಹು ಪ್ರಖ್ಯಾತ ಹಿಂದು ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.

ತ್ರಯಂಬಕೇಶ್ವರ: ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಯಂಬಕ ಪಟ್ಟಣದಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನವು ಪುರಾತನ ಪ್ರಸಿದ್ಧ ಜ್ಯೋತಿಲಿರ್ಂಗ ದೇವಾಲಯವಾಗಿದೆ. ನಾಶಿಕ್ ಪಟ್ಟಣದಿಂದ 28 ಕಿ.ಮೀ ದೂರದಲ್ಲಿರುವ ತ್ರಯಂಬಕೇಶ್ವರವು ಪೆನಿನ್ಸುಲಾ ಭಾರತದ ಅತಿ ಉದ್ದನೆಯ ನದಿಯಾದ ಗೋದಾವರಿ ನದಿ ಮೂಲದ ಸಮೀಪ ಸ್ಥಿತವಿದೆ.

ವೈದ್ಯನಾಥ: ಇದರ ನಿಖರವಾದ ಸ್ಥಳದ ಕುರಿತು ಇನ್ನೂ ವಿವಾದವಿದ್ದರೂ ಜಾಖರ್ಂಡ್ ರಾಜ್ಯದ ದೇವ್ಗಡ್ ನಲ್ಲಿರುವ ವೈದ್ಯನಾಥ ಜ್ಯೋತಿಲಿರ್ಂಗವನ್ನು 12 ಜ್ಯೋತಿಲಿರ್ಂಗಗಳ ಪೈಕಿ ಒಂದನ್ನಾಗಿ ಪರಿಗಣಿಸಲಾಗಿದೆ.

ನಾಗೇಶ್ವರ: ಉತ್ತರಾಖಂಡ್ ರಾಜ್ಯದ ಜಾಗೇಶ್ವರದಲ್ಲಿರುವ ನಾಗೇಶ್ವರ ಜ್ಯೋತಿಲಿರ್ಂಗ ತಾಣವು ಬಹು ಪ್ರಖ್ಯಾತವಾದ ಜ್ಯೋತಿಲಿರ್ಂಗ ತಾಣವಾಗಿದೆ. ಈ ಜ್ಯೋತಿಲಿರ್ಂಗವನ್ನು ಭೂಮಿಯ ಮೊದಲ ಜ್ಯೋತಿಲಿರ್ಂಗವೆಂದು ಪರಿಗಣಿಸಲಾಗಿದೆ.

ರಾಮೇಶ್ವರ: ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ರಾಮೇಶ್ವರ ಜ್ಯೋತಿಲಿರ್ಂಗ ದೇವಸ್ಥಾನವು ದಕ್ಷಿಣದ ಪ್ರಮುಖ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ.

ಮಲ್ಲಿಕಾರ್ಜುನ: ಆಂಧ್ರದ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ನಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನವು ಪವಿತ್ರ 12 ಜ್ಯೋತಿಲಿರ್ಂಗಗಳ ಪೈಕಿ ಒಂದಾಗಿದೆ. ಕೃಷ್ಣಾ ನದಿ ತಟದಲ್ಲಿ ನೆಲೆಸಿರುವ ಭ್ರಮರಾಂಬಾ ಮಲ್ಲಿಕಾರ್ಜುನ ದೇವಸ್ಥಾನವು ಪ್ರಖ್ಯಾತವಾದ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.

ಘುಶ್ಮೇಶ್ವರ: ಘುಶ್ಮೇಶ್ವರ ಜ್ಯೋರ್ತಿಲಿಂಗವೂ 12 ಹಾಗೂ ಕೊನೆಯ ಜೋತಿಲಿರ್ಂಗವೆಂದು ಪ್ರಸಿದ್ಧಿ ಪಡೆದಿದೆ. ಈ ಜೋರ್ತಿಲಿಂಗ ದೇವಸ್ಥಾನ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಎಲ್ಲೋರಾದಲ್ಲಿದೆ. ಎಲ್ಲೋರಾ ಗುಹೆಗಳಿಂದ ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿದೆ.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

 

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada​

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author