1918ರ ಸ್ಪ್ಯಾನಿಶ್ ಫ್ಲೂ ರೋಗಕ್ಕೂ ಕೊರೋನಾಕ್ಕೂ ಸಂಬಂಧವಿದ್ಯಾ..?

ದಶಕದ ಹಿಂದೆ ಕಾಡಿದ್ದಾ ಸ್ಪ್ಯಾನಿಶ್ ಫ್ಲೂ  ಈಗಿನ ಕೊರೊನಾವೇ.?

ಕರೋನಾ.. ಪ್ರಸ್ತುತ ವಿಶ್ವವನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗ.. ದಿನದಿಂದ ದಿನಕ್ಕೆ ಸೋಕು ಹೆಚ್ಚಾಗಿ ಲಕ್ಷಾಂತರ ಮಂದಿಯನ್ನು ಬಲಿಪಡೆದ ಈ ಮಹಾಮಾರಿಯ ನಿಯಂತ್ರಣಕ್ಕೆ ಇಡೀ ವಿಶ್ವವೇ ಒಟ್ಟಾಗಿ ನಿಂತಿದೆ.

ಈಗ ಒಬ್ಬರಿಂದ ಒಬ್ಬರಿಗೆ ಹರಡಿ ಹಿಂಸಿಸುತ್ತಿರುವ ಈ ರೋಗ ದಶಕದ ಹಿಂದೆಯೇ ಕಾಣಿಸಿಕೊಂಡಿತ್ತಾ..? 1918ರ ಸ್ಪ್ಯಾನಿಶ್ ಫ್ಲೂ ರೋಗಕ್ಕೂ ಕೊರೋನಾಕ್ಕೂ ಸಂಬಂಧವಿದ್ಯಾ..? ದಶಕದ ಹಿಂದೆ ಕಾಡಿದ್ದಾ ಸ್ಪ್ಯಾನಿಶ್ ಫ್ಲೂ ಈಗಿನ ಕೊರೊನಾವೇ.? ಈ ಎಲ್ಲಾ ಪ್ರಶ್ನೆಗಳಿಗು ಇಲ್ಲಿದೆ ಉತ್ತರ.  

ಕಳೆದ ವರ್ಷದಿಂದ ಇಡೀ ವಿಶ್ವವನ್ನೇ ಅಣ್ಣುಗಾಯಿ ನೀರುಉಗಾಯಿ ಮಾಡುತ್ತಿರುವ ಕೊರೋನಾ ಸಾಂಕ್ರಾಮಲಿಕವನ್ನೇ ಹೋಲುವ ಆರೋಗ್ಯ ಸಮಸ್ಯೆ 1918ರಲ್ಲಿಯೇ ಜಗತ್ತಿನ ನಿದ್ದೆಗೆಡಿಸಿತ್ತು. ಹೌದು ಕೊರೊನ ಮಾದರಿಯಲ್ಲೇ 1918ರಲ್ಲಿ ಸ್ಪ್ಯಾನಿಶ್ ಫ್ಲೂ ಎಂಬ  ಮಹಾಮಾರಿ ಹಲವರನ್ನು ಸಾವಿನ ದವಡೆಗೆ ನೂಕಿತ್ತು. 1918 ಜನವರಿಯಿಂದ ಕಾಣಿಸಿಕೊಂಡ ಈ ಕಾಯಿಲೆ ಸುಮಾರು ಎರಡು ವರ್ಷ 1920ರ ಡಿಸೆಂಬರ್ ವರೆಗೆ ಜಗತ್ತನ್ನು ಕಾಡಿತ್ತು.

ಅಂದೂ ಸಹ ಕೊರೊನಾ ರೀತಿಯ ರೋಗ ಲಕ್ಷಣಗಳೇ ಕಾಣಿಸಿಕೊಂಡಿದ್ದವು, ಕೆಮ್ಮು-ನೆಗಡಿ, ಜ್ವರ, ಉಸಿರಾಟ ತೊಂದರೆಗಳು ಸ್ಪ್ಯಾನಿಶ್ ಫ್ಲೂ ಲಕ್ಷಣಗಳಾಗಿದ್ದವು. ಈ ಸೋಂಕು ನಿಯಂತ್ರಣಕ್ಕೆ ಬಾರದಂತೆ ಹರಡಿದಾಗ, ಸ್ಥಳೀಯ ಸರ್ಕಾರಗಳು ರೋಗವನ್ನು ನಿಯಂತ್ರಿಸಲು ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಿದ್ದವು. ಅಷ್ಟೇ ಅಲ್ಲ ಥಿಯೇಟರ್ ಗಳು, ಹೋಟೆಲ್, ಸ್ವಿಮ್ಮಿಂಗ್ ಪೂಲ್, ಚರ್ಚ್ ಗಳನ್ನು ಮುಚ್ಚಿಸಿ, ಸಾರ್ವಜನಿಕರು ಗುಂಪಾಗಿ ಸೇರದಂತೆ ಕಟ್ಟೆಚ್ಚರವಹಿಸಲಾಗಿತ್ತು.

ಯಾರಿಗಾದರೂ ಜ್ವರದಿಂದ ಕೂಡಿದ ನೆಗಡಿ, ಕೆಮ್ಮು ಕಾಣಿಸಿಕೊಂಡಲ್ಲಿ ಕೂಡಲೇ ಮನೆಯಲ್ಲೇ ಐಸೋಲೇಟ್ ಆಗುವಂತೆ ಸೂಚಿಸಲಾಗಿತ್ತು. ಈ ಲಕ್ಷಣಗಳಿದ್ದವರಿಗೆ ಶುದ್ಧಗಾಳಿಯ ಅಗತ್ಯವಿದ್ದು, ಒಂದು ಕೋಣೆಯಲ್ಲಿ ಇದ್ದುಕೊಂಡು, ಕಿಟಕಿಬಾಗಿಲನ್ನು ತೆರೆದುಕೊಂಡಿರಬೇಕು ಎಂದು ಸೂಚಿಸಲಾಗಿತ್ತು. ಆ ಸಂದರ್ಭದಲ್ಲಿ ಈಗಿನಂತೆ ಸಾಮಾಜಿಕಜಾಲತಾಣಗಳು ಇಲ್ಲದ ಕಾರಣ, ಮನೆಯಲ್ಲಿ ಕ್ವಾರಂಟೇನ್ ಆಗಿದ್ದ ರೋಗಿಗಳಿಗೆ ಆತ್ಮಸ್ಥೈರ್ಯ  ತುಂಬಲು ಟೆಲಿಫೋನ್ ಮೂಲಕ ಕರೆ ಮಾಡಿ ರೋಗ ನಿಯಂತ್ರಣದ ಬಗ್ಗೆ ಮಾಹಹಿತಿ ನೀಡಿ ಧೈರ್ಯ ತುಂಬಲಾಗುತ್ತಿತ್ತು. 

ಆ ದಿನಗಳಲ್ಲಿಯೂ ಸಹ ಸಾರ್ವಜನಿಕರು ಅಗತ್ಯವಿದ್ದು, ಹೊರ ಬಂದಾಗ ಕಡ್ಡಾಯವಾಗಿ ಮಾಸ್ಕ್ ದರಿಸಬೇಕಾಗಿತ್ತು. ಪತ್ರಿಕೆಗಳಲ್ಲಿ ಯಾರೂ ಸಹ ಯಾರನ್ನು ತೀರಾ ಹತ್ತಿರದಿಂದ ಮಾತನಾಡಿಸಬೇಡಿ, ಹಲ್ಲು ಮತ್ತು ಬಾಯಿಯನ್ನು ಸ್ವಚ್ಛವಾಗಿಡಿ, ಯಾರಿಗೆ ಕೆಮ್ಮು ನೆಗಡಿಯ ಲಕ್ಷಣಗಳಿಇರುತ್ತವೆಯೋ ಅವರೊಂದಿಗಿನ ಸಂಪರ್ಕವನ್ನು ನಿಯಂತ್ರಿಸಿ, ಆದಷ್ಟು ಶುದ್ಧ ಗಾಳಿಯನ್ನು ಸೇವಿಸಿ, ಬೇರೊಬ್ಬರು ಬಳಸಿದ ಕಪ್ ಗಳು, ಟವೆಲ್ ಗಳನ್ನು ಬಳಸಬೇಡಿ, ಕೆಮ್ಮು, ಸೀನು ಕಾಣಿಸಿಕೊಂಡಲ್ಲಿ ಬಟ್ಟೆಯಿಂದ ಬಾಯಿಯನ್ನು ಮುಚ್ಚಿಕೊಳ್ಳಿ, ಯಾವಕಾರಣಕ್ಕೂ ರೋಗ ಲಕ್ಷಣಗಳು ಕಂಡು ಬಂದಲ್ಲಿ ಭಯ ಪಡದೆ ಮನೆಯಲ್ಲೇ ಇದ್ದು, ಚಿಕಿತ್ಸೆ ಪಡೆಯುವವಂತೆ ಅರಿವು ಮೂಡಿಸಲಾಗಿತ್ತು. 

ಈ ಎಲ್ಲಾ ವಿಷಯಗಳನ್ನು ಗಮನಿಸಿದರೆ ಕೊರೊನಾ 1918 ಸ್ಪ್ಯಾನಿಶ್ ಫ್ಲೂ ರೋಗದ ರೂಪಾಂತರವಿರಬಹುದೇ ಎಂಬ ಅನುಮಾನ ಕಾಡದೇ ಇರದು. ಎರಡೂ ರೋಗದ ಲಕ್ಷಣಗಳು ಒಂದೇ ಆಗಿದ್ದು, ಆಗಲೂ ಸಹಾ ಈಗಿನ ರೀತಿಯಲ್ಲೇ ಎಚ್ಚರಿಕೆಗಳನ್ನು ಕೈಗೊಳ್ಳಲಾಗಿತ್ತು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author